ಕರಾವಳಿಯ ಕೆಂಪು ಹರಳಿನ ಮಾಫಿಯಾದ ಸುತ್ತ ಮೇಲೊಬ್ಬ ಮಾಯಾವಿ ಯ ಟ್ರೈಲರ್ ಬಿಡುಗಡೆ.
Melobba Mayavi Trailer Release: ನಮ್ಮ ಕರಾವಳಿಯ ಇತಿಹಾಸವನ್ನು ಬಗೆದಷ್ಟು ಸಾಕಷ್ಟು ಕುತೂಹಲಕಾರಿ ವಿಷಯಗಳು ಕಥೆಗಳು ಅಡಗಿವೆ ಎಂಬುದಕ್ಕೆ ಇಲ್ಲಿತನಕ ಬಂದಂತಹ ಸಿನಿಮಾಗಳೇ ಸಾಕ್ಷಿ. ಅದರ ಸಾಲಿಗೆ Melobba Mayavi ಎಂಬ ಅದ್ಭುತ ಚಿತ್ರವು ಸೇರುತ್ತಿದೆ. ಸಾಮಾನ್ಯವಾಗಿ ಕೋಮು ಗಲಭೆ ಮತ್ತು ರೌಡಿಸಂ ವಿಷಧಾರಿತ ಚಿತ್ರಗಳಿಗೆ ಸಾಕ್ಷಿಯಾಗುತ್ತಿದ್ದ ಕರಾವಳಿಯ ಇತಿಹಾಸ ಇಂದು ವಿಭಿನ್ನ ಮತ್ತು ಕಂಡು ಕೇಳರಿಯದ ಕಥೆ ಮೇಲೊಬ್ಬ ಮಾಯಾವಿ ಚಿತ್ರದ ಎಳೆಯಾಗಿದೆ. ಹೌದು ಕೆಜಿಎಫ್ ನಲ್ಲಿ ಬಂಗಾರದ ಗಣಿಯ ಕಥೆ ಇದ್ದರೆ ಕರಾವಳಿಯಲ್ಲಿ ಕೆಂಪು ಹರಳಿನ ಗಣಿಯ ಕಥೆ ಅಡಗಿದೆ. ಕೆಂಪು ಹರಳಿನ ಮಾಫಿಯಾದ ಸುತ್ತ ತಿರುಗುವ Melobba Mayaviಯ ಕಥೆಯ ಜೊತೆ ಕರಾವಳಿಯ ಸ್ವರ್ಗ ಎಂಬಲ್ಲಿ ನಡೆದ ಕೆಲವೊಂದು ಘಟನೆಗಳ ಸುತ್ತ ಈ ಚಿತ್ರ ಸಾಗುತ್ತದೆ. ಹೆಸರಿಗೆ ಸ್ವರ್ಗ ಅಂತ ಇದ್ದರೂ ಈ ಮಾಫಿಯಾ ಗ್ಯಾಂಗ್ ಗೆ ಮತ್ತು ರಾಜಕೀಯದ ದಾಳದಾಟಕ್ಕೆ ಬಲಿಯಾಗಿ ಅಲ್ಲಿ ಹಸಿವು ಮತ್ತು ಬಡತನ ತಾಂಡವವಾಡುತ್ತಿತ್ತು ಎಂದು ನಿರ್ದೇಶಕರು ಹೇಳಿದ್ದಾರೆ.

Melobba Mayavi ಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ಕರಾವಳಿಯವರೇ ಆದ ನವೀನ ಕೃಷ್ಣ ಬಿ ಬರೆದು ನಿರ್ದೇಶಿಸಿದ್ದಾರೆ. ಈ ಚಲನಚಿತ್ರವನ್ನು ಪುತ್ತೂರು ಭರತ್ ಮತ್ತು ತಾನ್ವಿ ಅಮಿನ್ ಕೋಲ್ಯ ನಿರ್ಮಿಸಿದ್ದು, ಬಿಗ್ ಬಾಸ್ ಖ್ಯಾತಿಯ Chakravarti Chandrachood ಚಿತ್ರಕ್ಕೆ ಸಂಭಾಷಣೆ ಮತ್ತು ಸಾಹಿತ್ಯ ಬರೆದು ಚಿತ್ರದಲ್ಲಿ ಪ್ರಮುಖ ಖಳನಾಯಕನಾಗಿಯೂ ನಟಿಸಿದ್ದಾರೆ.
ನಾನು ಅವನಲ್ಲ ಅವಳು, ಹರಿವು, ದಾಸವಾಳ, ತಲೆದಂಡ, ಒಗ್ಗರಣೆ ಹೀಗೆ ಅನೇಕ ಕಲಾತ್ಮಕ ಚಿತ್ರಗಳ ಮೂಲಕ ತನ್ನ ಮನೋಜ್ಞ ಅಭಿನಯದಿಂದಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಸಂಚಾರಿ ವಿಜಯ್ ಮೇಲೊಬ್ಬ ಮಾಯಾವಿ ಚಿತ್ರದಲ್ಲಿ ನಾಯಕನಟನಾಗಿ ನಟಿಸಿದ್ದು ಚಿತ್ರಕ್ಕೆ ಒಂದು ಕಿರೀಟವೇ ಸರಿ. ಒಂದು ಮಾತಿನ ಪ್ರಕಾರ Sanchari Vijay ಒಂದು ಸಿನಿಮಾದಲ್ಲಿ ನಟಿಸಿದರೆಂದರೆ ಆ ಸಿನಿಮಾ ಪ್ರಶಸ್ತಿಗಳನ್ನು ಬಾಚುವುದರಲ್ಲಿ ಸಂಶಯವೇ ಇಲ್ಲ. ದುರದೃಷ್ಟವಶಾತ್ ಈ ಅದ್ಭುತ ನಟ ಇಂದು ದೈಹಿಕವಾಗಿ ನಮ್ಮ ಮುಂದೆ ಇಲ್ಲ ಅನ್ನೊದು ಕೊರಗು ಒಂದೆಡೆಯಾದರೆ, ಅವರು ನಟಿಸಿದ ಚಿತ್ರಗಳು ಅವರನ್ನು ಇನ್ನು ನಮ್ಮ ಮುಂದೆ ಜೀವಂತವಾಗಿ ಇರಿಸುವಂತೆ ಮಾಡಿದೆ. Melobba Mayavi Trailer
ಇತ್ತೀಚೆಗೆ ಬಿಡುಗಡೆಯಾದ ಮೇಲೊಬ್ಬ ಮಾಯಾವಿ ಟ್ರೈಲರ್ ನಲ್ಲಿ ಸಂಚಾರಿ ವಿಜಯ್ ಮತ್ತು ತಂಡದ ನಟನೆಯೂ ಚಿತ್ರ ಪ್ರೇಮಿಗಳನ್ನು ಥಿಯೇಟರ್ ಕಡೆ ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಮೇಲೊಬ್ಬ ಮಾಯಾವಿ ಚಿತ್ರವು ಇದೇ ತಿಂಗಳು ಅಂದರೆ ಏಪ್ರಿಲ್ 29 ರಂದು ರಾಜ್ಯಾದ್ಯಂತ ಹಲವು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದ್ದು ಈಗಾಗಲೇ Melobba Mayavi Trailer ಮತ್ತು ಚಿತ್ರದ ಹಾಡುಗಳು ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡು ಸಾಕಷ್ಟು ವೀಕ್ಷಣೆಯನ್ನೂ ಪಡೆದು ಜನಮನ್ನಣೆಗಳಿಸಿದೆ. ಚಿತ್ರದ ಟ್ರೈಲರ್ ವಿಡಿಯೋ ಚಲನಚಿತ್ರವನ್ನು ನೋಡಲು ಜನರನ್ನು ತುದಿಗಾಲಲ್ಲಿ ಕಾಯುವಂತೆ ಮಾಡಿದೆ.
ಚಿತ್ರದಲ್ಲಿ ನಾಯಕ ನಟನಾಗಿ ಸಂಚಾರಿ ವಿಜಯ್ ನಟಿಸಿದ್ದು, ನಾಯಕಿಯಾಗಿ ಕರಾವಳಿಯ ರಂಗ ಪ್ರತಿಭೆ ಅನನ್ಯ ಶೆಟ್ಟಿ ನಟಿಸಿದ್ದಾರೆ. ಚಕ್ರವರ್ತಿ ಚಂದ್ರಚೂಡ ಖಳನಾಯಕ ಪಾತ್ರದಲ್ಲಿ ನಟಿಸಿದ್ದಾರೆ. ಕರಾವಳಿಯ ನವೀನ ಕೃಷ್ಣ ಬಿ ಚಿತ್ರದ ಕಥೆ ಮತ್ತು ಸ್ಕ್ರೀನ್ ಪ್ಲೇ ಬರೆದು ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಎಲ್.ಏನ್ ಶಾಸ್ತ್ರೀ ಸಂಗೀತ ನಿರ್ದೇಶನ ಮಾಡಿದ್ದು, ಈ ಚಿತ್ರ ಅವರ ಕೊನೆಯ ಸಂಗೀತ ನಿರ್ದೇಶನದ ಚಿತ್ರವಾಗಿತ್ತು. ಪೋಷಕ ಪಾತ್ರದಲ್ಲಿ ಕೃಷ್ಣಮೂರ್ತಿ ಕವತಾರ್ ಮತ್ತು ಪವಿತ್ರ ಜಯರಾಂ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕನ್ನಡ ಚಿತ್ರರಂಗದ ಹಿರಿಯ ನಟ ಉಪ್ಪಿನಂಗಡಿಯ ಎಂ.ಕೆ ಮಠ, ತುಳು ರಂಗಭೂಮಿ ಕಲಾವಿದ ರಂಜು ರೈ ಸುಳ್ಯ, ಮತ್ತು ಕರಾವಳಿಯ ಇತರ ಕಲಾವಿದರು ಸಹ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರವು ಯಶಸ್ವೀ ಪ್ರದರ್ಶನ ಕಾಣಲಿ ಮತ್ತು ನೂರು ದಿನಗಳನ್ನು ಪೂರೈಸಲಿ ಎಂದು ಹಾರೈಸೋಣ. Melobba Mayavi Trailer
Recommended For You
ಜೇಮ್ಸ್ ಅಬ್ಬರಕ್ಕೆ ದಂಗಾದ ದೇಶದ ಸಿನಿ ಜಗತ್ತು | ಮೊದಲ ದಿನವೇ ದಾಖಲೆ ಬರೆದ ಅಪ್ಪು ನಟನೆಯ ಜೇಮ್ಸ್ ಚಿತ್ರ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೀವಂತ ಇಲ್ಲದಿದ್ದರೂ ಅವರ ಸಿನಿಮಾದ ಅಬ್ಬರ ಮಾತ್ರ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಪುನೀತ್ ಅವರ ಹುಟ್ಟು ಹಬ್ಬದ ದಿನದಂದು ವಿಶ್ವದಾದ್ಯಂತ ಬಿಡುಗಡೆಯಾದ ಅವರ ನಟನೆಯ ಅದ್ಧೂರಿ ಸಿನಿಮಾ ‘ಜೇಮ್ಸ್’ ಮೊದಲ ದಿನವೇ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆ ಬರೆದಿದೆ. ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಮೊದಲ ದಿನವೇ ಸುಮಾರು 30 ಕೋಟಿ ರೂಪಾಯಿ ಬಾಚುವಲ್ಲಿ ಯಶಸ್ವಿಯಾಗಿದೆ. ಬಿಡುಗಡೆಯಾದ ಕಡೆಯಲ್ಲೆಲ್ಲ ಭರ್ಜರಿ ಪ್ರದರ್ಶನವನ್ನು ಚಿತ್ರ ಕಾಣುತ್ತಿದೆ. ಅಪ್ಪು ಅವರ ಅಭಿಮಾನಿಗಳು, ಸಿನಿ ರಸಿಕರು ತಮ್ಮ ನೆಚ್ಚಿನ ನಟನ ಅಗಲಿಕೆ ನೋವಿನಲ್ಲಿಯೂ ಮುಗಿಬಿದ್ದು ಸಿನಿಮಾ ವೀಕ್ಷಿಸಿ ಪುನೀತ್ ಅವರಿಗೆ ಪ್ರೀತಿ ತೋರಿಸಿದ್ದಾರೆ. ಎಲ್ಲೆಲ್ಲೂ ಜೇಮ್ಸ್ ಜಾತ್ರೆ ಜೋರಾಗಿದೆ. ಎರಡನೇ ದಿನವೂ ಚಿತ್ರ ಮಂದಿರಗಳ ಬಳಿ ಬೆಳಿಗ್ಗೆಯಿಂದಲೇ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿದೆ. Read More…
Best Insurance Policies that everyone to have in 2022
Best Insurance Policies in 2022: While there are numerous types of life insurance, they fall into one of two categories: annuity and universal. An annuity is a fixed-term investment, with the possibility of receiving periodic payments for your life. An annuity can be purchased on a fixed-term basis or at a fixed rate. Read More…

Hello friend, thank you for taking an interest to read about me. I am the founder of coolinglass.com. I am a professional blogger and social media marketer. I love to write articles and suggest the best earning and learning tips to my readers. Feel free to get in touch with me through my social profiles. Love you all. Jai Hindh