Lucknow Girl Viral Video:ಕ್ಯಾಬ್ ಚಾಲಕನಿಗೆ ಥಳಿಸಿದ ಹುಡುಗಿಯ ಇನ್ನೊಂದು ವಿಡಿಯೋ ವೈರಲ್

ಉತ್ತರ ಪ್ರದೇಶ: ರಸ್ತೆ ದಾಟುತ್ತಿದ್ದಾಗ ಸಿಗ್ನಲ್ ಕ್ರಾಸ್ ಮಾಡಿ ಬಂದಿದ್ದಾಗಿ ವಾದ ಮಾಡುತ್ತ ಕ್ಯಾಬ್ ಚಾಲಕನಿಗೆ ಎರ್ರಾ ಬಿರ್ರಿ ಥಳಿಸುವ ವಿಡಿಯೋ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ನೆಟ್ಟಿಗರು ಈಕೆಯ ವರ್ತನೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಬೈದಿದ್ದರು. ಈ ಘಟನೆ ಉತ್ತರ ಪ್ರದೇಶದ ಲಕ್ನೌ ನಲ್ಲಿ ನಡೆದಿತ್ತು. Lucknow Girl Viral Video

Lucknow Girl Viral Video

 

ಮಹಿಳೆಯೊಬ್ಬಳು ನಡುರಸ್ತೆಯಲ್ಲಿ ಯುವಕನಿಗೆ ಎರ್ರಾಬಿರ್ರಿ ಥಳಿಸುವ ವಿಡಿಯೋ ವೈರಲ್

ಆದರೆ ಈಗ ಈಕೆಯದ್ದೆ ಇನ್ನೊಂದು ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಆ ವಿಡಿಯೋದಲ್ಲಿ ಆಕೆ ನೆರೆಮನೆಯವರ ಜೊತೆ ವಾದ ಮಾಡುತ್ತಿದ್ದು ನೈಜ ಸಂಗತಿ ಇನ್ನು ಬಯಲಾಗಬೇಕಿದೆ. ಕಳೆದ ವಿಡಿಯೋ ದಲ್ಲಿ ಸಿಸಿ ಕ್ಯಾಮೆರಾ ದ ಫೂಟೇಜ್ ಬಯಲಾದಾಗ ಆ ಘಟನೆಯ ಸಂತ್ಯಾಶ ಜನರಿಗೆ ಅರಿವಾಗಿತ್ತು. ರಾಷ್ಟ್ರೀಯ ನ್ಯೂಸ್ ಚಾನಲ್ ಗಳಲ್ಲಿ ಬಿತ್ತರವಾಗಿ ಈಕೆಯ ವರ್ತನೆಗೆ ಭಾರಿ ಖಂಡನೆ ವ್ಯಕ್ತವಾಗಿತ್ತು.

 

 ಇಂಡಿಯಾ ಟುಡೇ ಟ್ವಿಟ್ಟರ್ ಖಾತೆಯಲ್ಲಿ ಈಕೆಯ ವಿಡಿಯೋ ಶೇರ್ ಮಾಡಲಾಗಿದ್ದು, ಸಿಕ್ಕ ಸಿಕ್ಕ ಕಡೆ ವಾದ ವಿವಾದ ದುರ್ವರ್ತನೆ ತೋರುವ ಬಗ್ಗೆ ಜನಗಳು ತಮಗೆ ತೋಚಿದಂತೆ ವರ್ಣನೆ ಮಾಡುತ್ತಿದ್ದಾರೆ. ಶಾಂತ ರೂಪಳಾದ ಹೆಣ್ಣು ”ಒಲಿದರೆ ನಾರಿ ಮುನಿದರೆ ಮಾರಿ” ಎಂಬ ಗಾದೆ ಇದೆ. ಈಕೆಯು ವಿಡಿಯೋದಲ್ಲಿ ಮಾತನಾಡುವ ರೀತಿಯನ್ನು ಗಮನಿಸಿದರೆ ಈಕೆ ನೆರೆಮನೆಯವರ ಯಾವುದೊ ಒಂದು ವರ್ತನೆಯನ್ನು ಅಥವಾ ವಿಚಾರವನ್ನು ಖಂಡಿಸುವಂತಿದ್ದು, ಈಕೆಯ ವಾದ ನ್ಯಾಯದ ಪರವಾಗಿದೆಯೋ ಅಥವಾ ವಿನಾಕಾರಣ ವಾದ ಮಾಡುತ್ತಿದ್ದಳೋ ಎಂಬುದು ತನಿಖೆಯಿಂದ ಬಯಲಾಗಬೇಕಷ್ಟೆ. 

 



1 thought on “Lucknow Girl Viral Video:ಕ್ಯಾಬ್ ಚಾಲಕನಿಗೆ ಥಳಿಸಿದ ಹುಡುಗಿಯ ಇನ್ನೊಂದು ವಿಡಿಯೋ ವೈರಲ್”

Leave a Comment