ಲಕ್ನೌ: Lucknow Girl : ಇತ್ತೀಚಿಗೆ ಉತ್ತರ ಪ್ರದೇಶದ ಒಬ್ಬಳು ಮಹಿಳೆ (priyadarshini narayan yadav) ಕ್ಯಾಬ್ ಡ್ರೈವರ್ Sadahat Ali ಗೆ ಮನ ಬಂದಂತಂತೆ 20 ಕ್ಕೂ ಹೆಚ್ಚು ಪೆಟ್ಟುಗಳನ್ನು ನಡು ರಸ್ತೆಯಲ್ಲಿ ಬಾರಿಸುವ ವಿಡಿಯೋ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ನಂತರ ಅದೇ ಪ್ರಕರಣ ಠಾಣೆ ಮೆಟ್ಟಿಲೇರಿ ಸಹಾದತ್ ಅಲಿ ವಿರುದ್ಧವೇ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಾರೆಂದು ಕೇಸು ದಾಖಲಾಗಿತ್ತು. ನಂತರ ಸಿಸಿ ಟಿವಿ ವಿಡಿಯೋ ಬಯಲಾಗುತ್ತಿದ್ದಂತೆ ola cab driver ನ ತಪ್ಪಿಲ್ಲ ಎಂದು ಅರಿವಾಗುತ್ತಿದ್ದಂತೆ ಆಕೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಆದರೂ ಪೊಲೀಸರು ಮಾತ್ರ ಈಕೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಸಹ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

ಕೆಲವೇ ದಿನದಲ್ಲಿ Lucknow girl priyadarshini narayan ತನ್ನ ನೆರೆಮನೆಯವರೊಂದಿಗೆ ವಾಗ್ವಾದ ಮಾಡುವ ಇನ್ನೊಂದು ವಿಡಿಯೋ ಸಹ ವೈರಲ್ ಆಯಿತು. ಇದರಿಂದ ಈಕೆಯ ಮನಸ್ಥಿತಿ ಬಗ್ಗೆ ವ್ಯಾಪಕ ಚರ್ಚೆ ಶುರುವಾಯಿತು. ಜನರು ಈಕೆಯ ಚರಿತ್ರೆಯ ಬಗ್ಗೆ ಜಾಲಾಡಲು ಶುರುಮಾಡಿದರು. ಈತ್ತಿಚೆಗೆ ಹಲವು ಹಿಂದಿ ನ್ಯೂಸ್ ಚಾನಲ್ ಗಳು ಈಕೆಯನ್ನು ಇಂಟರ್ವ್ಯೂ ಮಾಡುತ್ತಾರೆ ಮತ್ತು ಘಟನೆಯ ಸತ್ಯಂಶವನ್ನು ಹೊರ ಹಾಕಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಒಂದೊಂದು ವಿಡಿಯೋ ದಲ್ಲಿ ಒಂದೊಂದು ಹೇಳಿಕೆಯನ್ನು ಈಕೆ ಕೊಡುತ್ತಿದ್ದಾಳೆ. ಇನ್ನೊಂದು ವಿಡಿಯೋ ದಲ್ಲಿ ಆಕೆ ಹೇಳುವಂತೆ ಆಕೆಗೆ ಈ ಮೊದಲು ಸಾಕಷ್ಟು ಬಾರಿ ಇಂತಹ ದಾಳಿ ಆಗಿದೆಯಂತೆ. ಉತ್ತರಪ್ರದೇಶದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ನೋಡುತ್ತಾ ನಿಲ್ಲುತ್ತಾರಂತೆ.
ಇಂಟರ್ವ್ಯೂ ನಲ್ಲಿ ಈಕೆಗೆ ಕೇಳುವ ಯಾವುದೇ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರವನ್ನು ನೀಡಲು ಈಕೆ ತಯಾರಿರುವುದಿಲ್ಲ ಮತ್ತು ಈಕೆಯ ಮುಂಗೋಪವೇ ಈಕೆಯ ಈ ದುರ್ವರ್ತನೆಗೆ ಕಾರಣ ಎಂದು ಅರಿವಾಗುತ್ತದೆ. ಬಿಪಿ ಇದೆಯಾ ನಿಮಗೆ ಎಂದು ಕೇಳಿದರೆ ನನಗೆ ಲೊ ಬಿಪಿ ಇದೆ ನನಗೆ ಕೋಪವೇ ಬರುವುದಿಲ್ಲ. ನಾನು ನ್ಯಾಯದ ಪರವಾಗಿ ವಾದ ಮಾಡಿದ್ದೇನೆ ಎಂದು ಆಕ್ರೋಶ ಭರಿತಳಾಗಿಯೇ ಉತ್ತರಿಸುತ್ತಾಳೆ.
ಕ್ಯಾಬ್ ಚಾಲಕನಿಗೆ ಥಳಿಸಿದ ಹುಡುಗಿಯ ಇನ್ನೊಂದು ವಿಡಿಯೋ ವೈರಲ್
ಅಷ್ಟು ವಾಹನದಟ್ಟಣೆಯಿದ್ದರೂ ರಸ್ತೆ ದಾಟುವ ಪ್ರಯತ್ನ ಮಾಡಿದರೂ ಚಾಲಕನ ಸಮಯ ಪ್ರಜ್ಞೆಯಿಂದ ಈಕೆಗೆ ಡಿಕ್ಕಿ ಹೊಡೆಯುವುದರಿಂದ ತಪ್ಪಿಸಲಾಗುತ್ತದೆ. ಪ್ರಿಯದರ್ಶಿನಿ ನಾರಾಯಣ್ ನಿಜವಾಗಿ ನ್ಯಾಯಯುತವಾಗಿ ಮಾತಾಡುವುದಾದರೆ, ಕ್ಯಾಬ್ ಚಾಲಕ ನಿಜವಾಗಿ ಸಿಗ್ನಲ್ ಜಂಪ್ ಮಾಡಿದ್ದರೆ ನೇರವಾಗಿ ಟ್ರಾಫಿಕ್ ಪೊಲೀಸರಿಗೆ ವಿಷಯ ತಿಳಿಸಬಹುದಿತ್ತು. ಅದನ್ನು ಬಿಟ್ಟು ಕಾರಿಗೆ ಕಲ್ಲಿನಿಂದ ಹೊಡೆದುದು ಮಾತ್ರವಲ್ಲದೆ ಚಾಲಕನ ಮೊಬೈಲ್ ನ್ನು ಕಸಿದು ರಸ್ತೆಗೆ ಎಸೆದು ಡ್ಯಾಶ್ ಬೋರ್ಡ್ ನಲ್ಲಿದ್ದ ದುಡ್ಡನ್ನು ಕಸಿದುಕೊಳ್ಳುವ ಕೀಳು ಮಟ್ಟದ ವರ್ತನೆ ಯಾವ ನ್ಯಾಯ ಸಮ್ಮತ. ಇವಳೇನು ಸರ್ವಾಧಿಕಾರಿಯಾ ? ಕಾನೂನು ಕೈಗೆ ತೆಗೆದುಕೊಳ್ಳುವ ಹಕ್ಕು ಯಾರು ಕೊಟ್ಟದ್ದು ಎಂಬುದೆಲ್ಲ ವಾದಗಳು ಹುಟ್ಟಿಕೊಂಡು ಈಗ ಇವಳಿಗೆ ತಿರುಗು ಬಾಣವಾಗಿ ನಿಂತಿವೆ. ಇಂದಲ್ಲ ನಾಳೆ ನನಗೆ ನ್ಯಾಯ ಸಿಗುತ್ತದೆ ಎಂದು ಕ್ಯಾಬ್ ಡ್ರೊವರ್ ಸಹಾದತ್ ಅಲಿ ಹೇಳುತ್ತಾನೆ.
1 thought on “Lucknow Girl Viral video : ನಿಜವಾದ ಮುಖ ಬಯಲು !”