ಪುತ್ತೂರಿಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಭೇಟಿಯನ್ನು ಒಂದು ಮೆಗಾ ಕಾರ್ಯಕ್ರಮವನ್ನಾಗಿ ಮಾಡಲು ಬಿಜೆಪಿ ಭರದ ಸಿದ್ಧತೆ ಮಾಡಿದೆ

Amit shah to puttur: ಪುತ್ತೂರಿಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಭೇಟಿಯನ್ನು ಒಂದು ಮೆಗಾ ಕಾರ್ಯಕ್ರಮವನ್ನಾಗಿ ಮಾಡಲು ಬಿಜೆಪಿ ಭರದ ಸಿದ್ಧತೆ ಮಾಡಿದೆ

 

Amit shah to puttur: ಇನ್ನೇನು ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಲೇ, ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳು ರಂಗೇರುತ್ತಿವೆ. ಇತ್ತೀಚಿಗೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ ನೀಡಿದ ಬೆನ್ನಲ್ಲೇ ಫೆಬ್ರವರಿ 11 ರಂದು ಕರ್ನಾಟಕದ ದಕ್ಷಿಣ ಕನ್ನಡ ಕರಾವಳಿಯ ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೊದಲ ಭೇಟಿಯನ್ನು ಸ್ವಾಗತಿಸಲು ಆಡಳಿತಾರೂಢ ಬಿಜೆಪಿ ಪಾಳಯದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

 

ಅಮಿತ್ ಶಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಭೇಟಿ (Amit shah to puttur) ನೀಡುತ್ತಿದ್ದು ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪುತ್ತೂರು ಸಿಟಿಯಲ್ಲಿ ಆಯೋಜಿಸಿರುವ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಆ್ಯಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೊ) 50 ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭ ಮತ್ತು ಈಶ್ವರಮಂಗಲದ ಹನುಮಗಿರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಮರಗಿರಿಯ  ಭಾರತ ಮಾತಾ ಮಂದಿರ ಉದ್ಘಾಟಿಸಲಿದ್ದಾರೆ.  

Amit shah to puttur

ಹನುಮಗಿರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಮರಿಗಿರಿಯಲ್ಲಿ ಧರ್ಮಶ್ರೀ ಪ್ರತಿಷ್ಠಾನ ನಿರ್ಮಿಸಿರುವ ಭಾರತ ಮಾತಾ ಮಂದಿರವನ್ನು ಮಾನ್ಯ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ  ಉದ್ಘಾಟಿಸಲಿದ್ದಾರೆ. ದೇಶಭಕ್ತಿಯ ಭಾವವನ್ನು ಮೂಡಿಸಲು ಮತ್ತು ಭಾರತ ಸೇನೆಯ ಸಂಪೂರ್ಣ ಚಿತ್ರಣವನ್ನು ಈ ಮಂದಿರದಲ್ಲಿ ನಿರ್ಮಿಸಲಾಗಿದೆ. ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಒಂದಾದ ನಂತರ ಭಾರತ ಮಾತೆಯ ಮಂದಿರ ಇದಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

 

ಅಮರಗಿರಿಯಲ್ಲಿ ಅಮಿತ್ ಶಾ ಅವರು ಭಾರತ ಮಾತೆಯ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ ಮತ್ತು ಅಮರ್ ಜವಾನ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಜೊತೆಗೆ ಹನುಮಗಿರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಲು ಪಕ್ಷದ ಮುಖಂಡರು ವ್ಯವಸ್ಥೆ ಮಾಡಿದ್ದು ಎಲ್ಲಾ ತಯಾರಿಗಳನ್ನು ಮಾಡಲಾಗಿದೆ. ನಗರದ ತುಂಬೆಲ್ಲಾ ಅಮಿತ್ ಶಾ ಆಗಮನವನ್ನು ಸ್ವಾಗತ ಕೋರಿ ಅನೇಕ ಫ್ಲೆಕ್ಸ್ ಗಳು ಅಲ್ಲಲ್ಲಿ ರಾರಾಜಿಸುತ್ತಿವೆ. 

 

ಕರಾವಳಿ ಕರ್ನಾಟಕ ಪ್ರದೇಶವು ಬಿಜೆಪಿಯ ಭದ್ರಕೋಟೆಯಾಗಿದೆ ಮತ್ತು ರಾಜ್ಯದಲ್ಲಿ ಹಿಂದುತ್ವದ ಪ್ರಯೋಗಶಾಲೆ ಎಂದು ಪರಿಗಣಿಸಲಾಗಿದೆ. ಈ ಪ್ರದೇಶವು ನೈತಿಕ ಪೋಲೀಸಿಗಿರಿ ಮತ್ತು ಕೋಮು ಕಲಹಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದು ನಮಗೆಲ್ಲಾ ಗೊತ್ತೇ ಇಗೆ. ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೈತಿಕ ಪೊಲೀಸ್‌ಗಿರಿ ಕುರಿತು ಪ್ರತಿಕ್ರಿಯಿಸಿ, ಪ್ರತಿಕ್ರಿಯೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿ ಭಾರೀ ವಿವಾದ ಸೃಷ್ಟಿಸಿದ್ದರು. ಈ ಹೇಳಿಕೆಯನ್ನು ವಿರೋಧ ಪಕ್ಷಗಳು ತುಂಬಾ  ತರಾಟೆಗೆ ತೆಗೆದುಕೊಂಡಿತ್ತು.

Loading poll ...
Coming Soon
ಬರುವ ವಿಧಾನಸಭಾ ಚುನಾವಣೆಗೆ ಪುತ್ತೂರಿನಲ್ಲಿ ನಿಮ್ಮ ಆಯ್ಕೆ ಯಾರು ?
{{ row.Answer_Title }} {{row.tsp_result_percent}} % {{row.Answer_Votes}} {{row.Answer_Votes}} ( {{row.tsp_result_percent}} % ) {{ tsp_result_no }}

ಅಮಿತ್ ಶಾ ಅವರ ಭೇಟಿಯನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯ ಕಾಂಗ್ರೆಸ್ ಮುಖಂಡ ಎಂ.ಬಿ. ವಿಶ್ವನಾಥ ರೈ ಇನ್ನು ‘ಕ್ಯಾಂಪ್ಕೊ’ವನ್ನು ಗುಜರಾತಿನ ಬಂಡವಾಳಶಾಹಿಗಳೊಂದಿಗೆ ವಿಲೀನಗೊಳಿಸದಿದ್ದರೆ ಸಾಕು ಎಂದು ಹೇಳಿದ್ದಾರೆ. ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಅಲಿ ಮಾತನಾಡಿ, ಪುತ್ತೂರು ಆರ್.ಎಸ್.ಎಸ್. ಅಮಿತ್ ಶಾ ಭದ್ರತೆಗೆ ಪೊಲೀಸರು 3,500 ಪೊಲೀಸರನ್ನು ನಿಯೋಜಿಸುತ್ತಿದ್ದಾರೆ, ಇಲ್ಲಿ ಸಂಘಪರಿವಾರದ ಭದ್ರತೆ ಸಾಕು, ಯಾವುದೇ ಭಯೋತ್ಪಾದಕರು ಬರುವುದಿಲ್ಲ, ಭಾರೀ ಪೊಲೀಸ್ ಬಂದೋಬಸ್ತ್ ಮಾಡಿರುವುದು ಸಂಘಪರಿವಾರಕ್ಕೆ ಮಾಡಿದ ಅವಮಾನ,’’ ಎಂದು ವ್ಯಂಗ್ಯವಾಡಿದರು.

 

ಇದರ ನಡುವೆ ಪುತ್ತೂರು ಶಾಸಕರಾದ ಸಂಜೀವ ಮಠ೦ದೂರುರವರು ‘ಮಳೆ ಬರುವಾಗ ಅಲ್ಲಲ್ಲಿ ಅಣಬೆಗಳು ಮೂಡುವುದು ಸಹಜ’ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಅರುಣ್ ಕುಮಾರ್ ಪುತ್ತಿಲ ಅವರ ಬಗ್ಗೆ ಪರೋಕ್ಷವಾಗಿ ನೀಡಿದ ಹೇಳಿಕೆ ಸ್ಥಳೀಯ ಬಿಜೆಪಿ ಕಾರ್ಯಕರ್ತರಲ್ಲಿ ಮತ್ತು ಬಿಜೆಪಿ ವಲಯದಲ್ಲಿ ಸಂಚಲನ ಮತ್ತು ಅಸಮಾಧಾನ ಮೂಡಿಸಿರುವುದು ಕಂಡು ಬಂದಿದೆ. ಅದಕ್ಕಾಗಿ ಬಿಜೆಪಿ ಕಾರ್ಯಕರ್ತರು ಶಾಸಕರನ್ನು ತಾರಾಟೆಗೂ ತೆಗೆದುಕೊಂಡಿರುವ ಪ್ರಸಂಗ ಉಂಟಾಗಿದೆ.   

 

Click to Join Whatsapp Group

 

Read Also

 

Leave a Comment