NATO ಅಂದರೆ ಏನು? NATO ಪಡೆಯ ಸದಸ್ಯ ರಾಷ್ಟ್ರಗಳು ಯಾವುವು?  NATO Full Information in Kannada 2022 

NATO Full Information in Kannada 2022 

NATO Full Information: ಸದ್ಯ ಜಗತ್ತಿನಲ್ಲಿ ಬಿಸಿ ಬಿಸಿ ಸುದ್ದಿ ಮತ್ತು ದುಃಖಕರ ವಿಷಯ ಎಂದರೆ Russia ಮತ್ತು Ukriane ನ ನಡುವಣ ಯುದ್ಧ (Russia-Ukraine War). ಈಗ ತಾನೇ ಇಡೀ ಜಗತ್ತು ಎರಡೆರಡು ಬಾರಿ ಕೋರೋಣ ಹೆಮ್ಮಾರಿಯಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಮೂರನೇ ಮಹಾ ಯುದ್ಧಕ್ಕೆ ನಾಂದಿ ಹಾಡುವಂತೆ ಕಾಣುತ್ತಿರುವ Russia Ukraine War ಇಡೀ ಜಗತ್ತನ್ನೇ ಬೆಕ್ಕಸ ಬೆರಗಾಗಿಸಿದೆ. ಏನು ಎತ್ತ ಎಂದು ತಿಳಿದು ಕೊಳ್ಳುವಷ್ಟರಲ್ಲಿ ಸಾವಿರಾರು ಜೀವಗಳು ಸತ್ತು ಬಿದ್ದಿವೆ, ಲಕ್ಷ ಕೋಟಿಗಟ್ಟಲೆ ಸಾರ್ವಜನಿಕ ಆಸ್ತಿಗಳು ಧ್ವಂಸಗೊಂಡಿವೆ. ಕೋರೋಣ ಸಂಕಷ್ಟ, ಭಯೋತ್ಪಾದನೆಯಿಂದ ಅದಾಗಲೇ ನಲುಗಿದ ಜಗತ್ತು ಇನ್ನಷ್ಟು ಸೊರಗುವಂತಾಗಿದೆ. ಭಯೋತ್ಪಾದನೆಯನ್ನು ಮಟ್ಟ ಹಾಕುವ ಜೊತೆ ಕೊರೊನದಿಂದ ಗೆಲ್ಲುವ ಈ ನಡುವೆ ತನ್ನ ಸ್ವ ಪ್ರತಿಷ್ಠೆಗಾಗಿ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದು ವಿಪರ್ಯಾಸವೇ ಸರಿ. 

ಜಗತ್ತಿನಲ್ಲಿ ನಡೆಯುವ ಭಯೋತ್ಪಾದನಾ ದಾಳಿಗಳಾಗಲಿ, ಬಂಡುಕೋರರ ದಾಳಿಗಳಾಗಲಿ,  ಯುದ್ಧಗಳಾಗಲಿ ಏನೇ ನಡೆದರೂ ಮಧ್ಯ ಪ್ರವೇಶಿಸುವ NATO ಪಡೆ ಇಂದು ಏಕೆ ರಷ್ಯಾವನ್ನು ದಮನಿಸಲು ಬರಲಿಲ್ಲ, ಉಕ್ರೇನ್ ಅನ್ನು ಯಾಕೆ ರಕ್ಷಿಸಲು ಮುಂದಾಗಲಿಲ್ಲ. ಅಷ್ಟಕ್ಕೂ NATO ಅಂದರೆ ಏನು? NATO ನ ಕೆಲಸ ಏನು? ಎಂಬಿತ್ಯಾದಿ ಪ್ರಶ್ನೆಗಳು ಈಗ ಎಲ್ಲೆಡೆ ಸರ್ವೇ ಸಾಮಾನ್ಯ. ಈ ಲೇಖನದಲ್ಲಿ ಈ ಎಲ್ಲಾ ಗೊಂದಲಗಳಿಗೆ ಉತ್ತರ ನೀಡಲಾಗಿದೆ. 

   NATO Full Informations

NATO ಅಂದರೆ ಏನು?

NATO Full Information: NATO ಅಂದರೆ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಒರ್ಗನೈಸೇಷನ್. ಇದು ಯುಎಸ್ಎ, ಕೆನಡಾ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳ ನಡುವಿನ ರಾಷ್ಟ್ರೀಯ ಭದ್ರತಾ ಮೈತ್ರಿಯಾಗಿದೆ. Second World War ದ ಹಿನ್ನೆಲೆಯಲ್ಲಿ ಅಟ್ಲಾಂಟಿಕ್ ಮಹಾಸಾಗರದ ಎರಡೂ ಬದಿಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಹಾಗೂ ರಾಜಕೀಯ ಮತ್ತು ಆರ್ಥಿಕ ಸಹಕಾರವನ್ನು ಉತ್ತೇಜಿಸಲು NATOವನ್ನು ರಚಿಸಲಾಯಿತು.

NATO ಪಡೆಯನ್ನು April 4, 1949 ರಂದು ರಚಿಸಲಾಗಿದ್ದು, ಅದರ ಪ್ರಾರಂಭದಿನಗಳಲ್ಲಿ ಕೆಲವೇ ಕೆಲವು ದೇಶಗಳು ಒಪ್ಪಂದ ಮಾಡಿಕೊಂಡಿದ್ದವು.  NATO ಪ್ರಾಥಾಮಿಕವಾಗಿ ಸುರಕ್ಷತೆಯನ್ನು ಒದಗಿಸುವ ಸಮಿತಿಯಾಗಿದ್ದರೂ ತನ್ನ ಸದಸ್ಯ ರಾಷ್ಟ್ರಗಳ ಆರ್ಥಿಕತೆಯ ಬಗ್ಗೆ ಅವಲೋಕನ ಮಾಡಲು ಮತ್ತು ಆರ್ಥಿಕವಾಗಿ ಹಿಂಜರಿದ ದೇಶಗಳ ಏಳಿಗೆಯ ಬಗ್ಗೆ ಚರ್ಚಿಸಲು ಸಹ ಒಂದು ಆರ್ಥಿಕ ಸುಧಾರಣಾ ಸಮಿತಿಯು ಸಹ ರಚಿಸಲಾಗಿದೆ. 

 

NATO ಪಡೆಯ ಸದಸ್ಯ ರಾಷ್ಟ್ರಗಳು ಯಾವುವು?

NATO Full Information: The North Atlantic Treaty Organization (NATO) ಸಮಿತಿಯಲ್ಲಿ ಒಟ್ಟು ಮೂವತ್ತು ಸದಸ್ಯ ರಾಷ್ಟ್ರಗಳು ಇವೆ. ಅವುಗಳು ಯಾವುವು ಎಂದರೆ, ಬಲ್ಗೇರಿಯಾ, ಕೆನಡಾ, ಉತ್ತರ ಮ್ಯಾಸಿಡೋನಿಯಾ, ಕ್ರೊಯೇಷಿಯಾ,  ಅಲ್ಬೇನಿಯಾ, ಬೆಲ್ಜಿಯಂ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಎಸ್ಟೋನಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಲಾಟ್ವಿಯಾ, ಲಿಥುವೇನಿಯಾ, ಲಕ್ಸೆಂಬರ್ಗ್, ಗ್ರೀಸ್, ಹಂಗೇರಿ, ಐಸ್ಲ್ಯಾಂಡ್, ಮಾಂಟೆನೆಗ್ರೊ, ನೆದರ್ಲ್ಯಾಂಡ್ಸ್,  ನಾರ್ವೆ, ಪೋರ್ಚುಗಲ್, ಪೋರ್ಚುಗಲ್, ಟರ್ಕಿ, ಸ್ಲೋವಾಕಿಯಾ, ಸ್ಲೊವೇನಿಯಾ, ಸ್ಪೇನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್. 

NATO ನ ಪ್ರತಿ ಸದಸ್ಯ ರಾಷ್ಟ್ರಗಳು ಒಬ್ಬ ರಾಯಭಾರಿಯನ್ನು ಹಾಗೂ NATO ಸಮಿತಿಗಳಲ್ಲಿ ಸೇವೆ ಸಲ್ಲಿಸಲು ಮತ್ತು North Atlantic Treaty Organization ನ ವ್ಯವಹಾರವನ್ನು ಚರ್ಚಿಸಲು ಒಬ್ಬ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಈ ಅಧಿಕಾರಿ ಆಯಾ ದೇಶದ ಪ್ರಧಾನಿ ಅಥವಾ ರಕ್ಷಣಾ ಇಲಾಖೆಯ ಮುಖ್ಯಸ್ಥರು ಅಥವಾ ದೇಶದ ಅಧ್ಯಕ್ಷರು ಅಥವಾ ವಿದೇಶಾಂಗ ಸಚಿವರೂ ಆಗಿರಬಹುದು. 

 

NATO ನ ಉದ್ದೇಶ ಏನು ? NATO ನ ಕೆಲಸ ಏನು ?

NATO Full Information: NATO ಸದಸ್ಯ ರಾಷ್ಟ್ರಗಳು ಕೇವಲ ಸದಸ್ಯರಾಗಿಯೇ ಉಳಿಯುವುದಿಲ್ಲ. ಬದಲಾಗಿ ಪರಸ್ಪರ ರಕ್ಷಕರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. NATO ನ ಸದಸ್ಯ ರಾಷ್ಟ್ರಗಳ ನಡುವಿನ ಆರ್ಥಿಕ ಸಂಕಷ್ಟ ಸುಧಾರಣೆಗೆ, ಭಯೋತ್ಪಾದನಾ ನಿರ್ಮೂಲನೆಗೆ, ಮತ್ತು ಸೈಬರ್ ದಾಳಿಯ ತಡೆಗೆ ಈ NATO ಪಡೆ ಕೆಲಸ ಮಾಡಬೇಕಾಗುತ್ತದೆ. ಜೊತೆಗೆ ಈ ರಾಷ್ಟ್ರಗಳ ಸ್ವಾತಂತ್ರ ಮತ್ತು ಮಿಲಿಟರಿ ಕಾರ್ಯವನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಲಾಗುತ್ತದೆ. NATO  ಸದಸ್ಯ ರಾಷ್ಟ್ರಗಳ ಪೈಕಿ ಯಾವುದಾದರೊಂದು ದೇಶಕ್ಕೂ ಮಿಲಿಟರಿ ದಾಳಿ ಆದರೂ ಉಳಿದೆಲ್ಲ NATO  ಸದಸ್ಯ  ಆ ಒಂದು ದೇಶದ ರಕ್ಷಣೆಗೆ ಧಾವಿಸಬೇಕು. ಮತ್ತು ರಕ್ಷಣೆಗೆ ನಿಲ್ಲಬೇಕು. ಇದು NATO  ನ Article 5ನಲ್ಲಿ ಪ್ರತಿಪಾದಿಸಲಾಗಿದೆ. ಆದರೆ NATO  ಪಡೆ ಯಾವತ್ತೂ ಸ್ವತಹ ತಾವೇ ಸೇರಿಕೊಂಡು ಬೇರೆ ದೇಶಕ್ಕೆ ಯುದ್ಧ ಹೋಗುವಂತಿಲ್ಲ. ಒಂದು ಇನ್ನೊಂದು ದೇಶಕ್ಕೆ ರಕ್ಷಣೆಯಾಗಿ ನಿಲ್ಲಬೇಕು ಮತ್ತು ಸದಾ ರಕ್ಷಣೆಗೆ ಸಿದ್ಧವಿರಬೇಕು. NATO ನ ಸದಸ್ಯ ರಾಷ್ಟ್ರವಲ್ಲದ ಯಾವುದೇ ದೇಶ ಅತೀವ ಆರ್ಥಿಕ ಸಂಕಷ್ಟಕೊಳಗಾದರೆ ಅಥವಾ ಭಯೋತ್ಪಾದಕ ದಾಳಿಗೆ ಒಳಗಾದರೆ ಅಂತಹ ದೇಶಕ್ಕೆ ಒಮ್ಮತದ ಮೂಲಕ NATO ಸದಸ್ಯ ರಾಷ್ಟ್ರಗಳು ಸಹಾಯಕ್ಕೆ ಬರಬಹುದು. ಯಾವುದೇ ಸದಸ್ಯ ರಾಷ್ಟ್ರಗಳ ಆಂತರಿಕ ದಂಗೆ ಗೆ  NATO ಸದಸ್ಯ ರಾಷ್ಟ್ರಗಳು ಮಧ್ಯ ಪ್ರವೇಶಿಸುವುದಿಲ್ಲ. ಉದಾಹರಣೆಗೆ 2016 ರಲ್ಲಿ ಟರ್ಕಿಯಲ್ಲಿ ನಡೆದ ಆಂತರಿಕ ಕಲಹವನ್ನು ನೀವು ಗಮನಿಸಬಹುದು. ಟರ್ಕಿ NATO ಪಡೆಯ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿದ್ದರು ಸಹ ಆ ಸಮಯದಲ್ಲಿ NATO ಮಧ್ಯ ಪ್ರವೇಶಿಸಲಿಲ್ಲ. 

 

NATO ಪಡೆ ರಷ್ಯಾ – ಉಕ್ರೇನ್ ಯುದ್ಧದಲ್ಲಿ ಉಕ್ರೇನ್ ಗೆ ಯಾಕೆ ಸುಪೋರ್ಟ್ ಮಾಡಿಲ್ಲ? ಯಾಕೆ ರಕ್ಷಣೆಗೆ ಧಾವಿಸಿಲ್ಲ?

NATO Full Information: NATO ಪಡೆ ಸದಸ್ಯ ರಾಷ್ಟ್ರಗಳ ಪೈಕಿ ಯಾವುದೇ ರಾಷ್ಟ್ರಕ್ಕೂ ಅಪಾಯವಾದರೂ ಅದರ ರಕ್ಷಣೆಗೆ ನಿಲ್ಲಬೇಕು.  ಆದರೆ ದುರದೃಷ್ಟವಶಾತ್ ಉಕ್ರೇನ್ NATO ಪಡೆ ಯ ಸದಸ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಇಲ್ಲ. ಉಕ್ರೇನ್ NATO ಸದಸ್ಯತ್ವಕ್ಕೆ ಒಳ ಪಟ್ಟಿಲ್ಲ. ಹಾಗಾಗಿ ಉಕ್ರೇನ್ ನ ಸಹಾಯಕ್ಕೆ NATO ಪಡೆ ಬರಲು ಹಿಂಜರಿಯುತ್ತದೆ. ಮೇಲಾಗಿ ರಷ್ಯಾ 2018 ಮೀಟಿಂಗ್ ನಲ್ಲಿ  NATO ಪಡೆಯ ಸದಸ್ಯತ್ವಕ್ಕೆ ಬೆಂಬಲ ಸಿಕ್ಕಿದೆ. ನ್ಯಾಟೋ ಮಿಲಿಟರಿ ಮೈತ್ರಿ ಮತ್ತು ರಷ್ಯಾದ ಒಕ್ಕೂಟದ ನಡುವಿನ ಸಂಬಂಧಗಳನ್ನು 1991 ರಲ್ಲಿ ಉತ್ತರ ಅಟ್ಲಾಂಟಿಕ್ ಸಹಕಾರ ಮಂಡಳಿಯ ಚೌಕಟ್ಟಿನೊಳಗೆ ಸ್ಥಾಪಿಸಲಾಯಿತು. 1994 ರಲ್ಲಿ, ರಷ್ಯಾ ಶಾಂತಿ ಕಾರ್ಯಕ್ರಮಕ್ಕೆ ಸೇರಿತು ಮತ್ತು ಆ ಸಮಯದಿಂದ, NATO ಮತ್ತು ರಷ್ಯಾ ಸಹಕಾರದ ಕುರಿತು ಹಲವಾರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದೆ. 



ರಷ್ಯಾವು ಉಕ್ರೇನ್ ಮೇಲೆ ಯುದ್ಧ ಸಾರಿದ್ದಕ್ಕೆ ಮತ್ತು  ರಷ್ಯಾಕ್ಕೆ ಬೆಂಬಲ ನೀಡಿದ ಬೆಲಾರಸ್ ರಾಷ್ಟ್ರಕ್ಕೆ NATO ಪಡೆ ತೀವ್ರವಾಗಿ ಖಂಡನೆ ವ್ಯಕ್ತ ಪಡಿಸಿದೆ. ಮತ್ತು ಯುದ್ಧವನ್ನು ನಿಲ್ಲಿಸಲು ಮತ್ತು ಸೈನ್ಯವನ್ನು ಹಿಂಪಡೆಯಲು NATO ಪಡೆ ಆಗ್ರಹಿಸಿದೆ. ಒಂದು ವೇಳೆ ಯುದ್ಧ ತೀವ್ರ ಗತಿ ತಲುಪಿ ನಾಗರಿಕರ ಸಾವುನೋವು ಅತೀವವಾಗಿ ಸಂಭವಿಸಿದರೆ NATO ಪಡೆ ಜಗತ್ತಿನ ಹಿತ ದೃಷ್ಟಿಯಿಂದ ನೇರವಾಗಿ ರಷ್ಯಾದ ಮೇಲೆ ದಾಳಿ ಮಾಡುವ ಸಂಭವವಿದೆ. ಈಗಾಗಾಲೇ ಉಕ್ರೇನ್ ನ ಅಧ್ಯಕ್ಷ ವೋಲೊಡಿಮಿಯೇರ್ ಝೆಲೆನ್ಸ್ಕಿ NATO ಪಡೆಗೆ ಮತ್ತು ಮಿತ್ರ ರಾಷ್ಟ್ರಗಳಿಗೆ ತನಗೆ ಸಹಾಯ ಮಾಡುವಂತೆ ಕೋರಿದ್ದಾರೆ. ಆದರೆ ರಷ್ಯಾದ ಅಧ್ಯಕ್ಷ ಲಾಡಿಮೀರ್ ಪುಟಿನ್ ಯಾವುದಕ್ಕೂ ಮಣಿಯದೆ ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಶತ ಪ್ರಯತ್ನದಲ್ಲಿದ್ದಾರೆ. ಲಾಡಿಮೀರ್ ಪುಟಿನ್ ವಿರುದ್ಧ ಅಮೇರಿಕ ಅಧ್ಯಕ್ಷ Jo Biden ಸಹ ಹರಿಹಾಯ್ದಿದ್ದಾರೆ. ಪುಟಿನ್ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

 

What is Artice 5? ಆರ್ಟಿಕಲ್ 5 ಅಂದರೆ ಏನು?

ಇದು ಎರಡನೇ ಮಹಾಯುದ್ಧದ ನಂತರ ಶಾಂತಿ ಗಾಗಿ 1959 ರಂದು ಮಾಡಿದ ವಾಷಿಂಗ್ಟನ್ ಒಪ್ಪಂದವಾಗಿದೆ.  ಈ ಒಪ್ಪಂದದ ಭಾಗವಾಗಿ ನ್ಯಾಟೋ ಅಸ್ತಿತ್ವಕ್ಕೆ ಬಂತು. ಪ್ರಾರಂಭದಲ್ಲಿ ನ್ಯಾಟೋ ಮಿಲಿಟರಿ ಪಡೆಯಲ್ಲಿ 12 ಸದಸ್ಯರು ಇದ್ದರು. ಈಗ ಅದು 30 ಸದಸ್ಯ ರಾಷ್ಟ್ರಕ್ಕೆ ವಿಸ್ತರಿಸಿದೆ. ಈ ಆರ್ಟಿಕಲ್ 5 ಶಾಂತಿ ಒಪ್ಪಂದದ ಪ್ರಕಾರ ತನ್ನ ಮಿತ್ರ ರಾಷ್ಟ್ರಗಳ ಪೈಕಿ ಯಾವುದೇ ಒಂದು ದೇಶಕ್ಕೂ ಮಿಲಿಟರಿ ದಾಳಿಗಳಾದರು ಅದು ತನಗೆ ಆದಂತೆ ಭಾವಿಸಿ ರಕ್ಷಣೆಗೆ ಧಾವಿಸಬೇಕು ಎಂದಾಗಿತ್ತು. 

  

Read Also: Who is Volodymyr Zelensky? Full Biography

Read Also: Vladimir Putin Full biography. family, wiki, full information

Read Also: Kaccha Badam Singer Buban Badyakar Full Biography

Read Also: Download Josh App and Earn Money from Josh App



FAQ

Q: Who is the president of Russia?

A: Vladimir Putin

 

Q: Who is the President of Ukraine?

A: Volodymyr Zelinsky

 

Q: What is the full form of NATO?

A: North Atlantic Treaty Organizations

 

Q: How many countries are there in the NATO alliance?

A: A total of 30 countries are there in the NATO alliance

 

Q: Is Russia part of the NATO military Alliance?

A: No. But Russia is part of the NATO peace program since 1994 

 

Q: Is Ukraine part of the NATO Alliance?

A: No

 

Q: Where is NATO headquarters?

A: NATO Headquarters is in Brussels, Belgium

 

Q: When was NATO formed?

A: April 4, 1949

 

Q: Is NATO an army?

A: NATO Is a military and political alliance of 30 countries. 

 

 

1 thought on “NATO ಅಂದರೆ ಏನು? NATO ಪಡೆಯ ಸದಸ್ಯ ರಾಷ್ಟ್ರಗಳು ಯಾವುವು?  NATO Full Information in Kannada 2022 ”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio