ಜಗತ್ತಿನ ಅತ್ಯಂತ ದೊಡ್ಡ ಬಾಳೆಹಣ್ಣು ನೋಡಿದ್ದೀರಾ? ನೋಡಿದ್ರೆ ಬೆಚ್ಚಿ ಬೀಳುತ್ತೀರಾ

ಬಾಳೆ ಹಣ್ಣು ಯಾರಿಗೆ ಇಷ್ಟ ಇಲ್ಲ ಹೇಳಿ ? ಬಾಳೆ ಹಣ್ಣು ಪ್ರತಿಯೊಬ್ಬರಿಗೂ ಬೇಕು. ಮಕ್ಕಳಿಂದ ಹಿಡಿದು ಹಿರಿಯರಿಗೂ ಇದು ಅಚ್ಚು ಮೆಚ್ಚು. ಪೂಜೆ ಪುರಸ್ಕಾರದಲ್ಲೂ ಬಾಳೆ ಹಣ್ಣಿನ ಪಾತ್ರ ಬಹಳ ಮಹತ್ವದ್ದು. ವೈದ್ಯರೂ ಸಹ ಜನರಿಗೆ ಅರೋಗ್ಯ ಕಾಯ್ದುಕೊಳ್ಳಲು ಸಲಹೆ ಮಾಡುವ ಮೊದಲ ಹಣ್ಣು ಎಂದರೆ ಅದು ಬಾಳೆಹಣ್ಣು.   

ಜಿಮ್ ಮಾಡುವವರಂತು  ಸಪ್ಲಿಮೆಂಟರಿ ಪೌಡರ್ ಗೆ ಕೊಡುವಷ್ಟು ಪ್ರಾಮುಖ್ಯತೆ ಬಾಳೆ ಹಣ್ಣಿಗೆ ಕೊಡುತ್ತಾರೆ ಎಂದರೆ ಅತಿಶಯೋಕ್ತಿಗಲಾರದು. ಯಾಕೆಂದರೆ ಬಾಳೆ ಹಣ್ಣು ಬಾಡಿ ಬಿಲ್ಡರ್ ಗೆ ತಮ್ಮ ಮೈಕಟ್ಟನ್ನು ದಷ್ಟ ಪುಷ್ಟವಾಗಿಸಲು ಸಹಕಾರಿಯಾಗುತ್ತದೆ. ಹಾಗೇನೇ ಹೆಂಗೆಳೆಯರು ತಮ್ಮ ಡಯಟ್ ಗೂ ಇದನ್ನು ಉಪಯೋಗಿಸುತ್ತಾರೆ. ಇಷ್ಟೆಲ್ಲಾ ಮಹತ್ವ ಏಕೆ ಗೊತ್ತಾ, ಈ ಬಾಳೆ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ೬, ಮ್ಯಾಗ್ನೇಶಿಯಂ, ಪೊಟ್ಯಾಶಿಯಂ, ಕಬ್ಬಿನಾಂಶ ಹೀಗೆ ಪೋಷಕಾಂಶಗಳ ಭಂಡಾರವೇ ಇದರಲ್ಲಿ ಅಡಗಿದೆ.   

 

ಇಂತಹ ಬಾಳೆಹಣ್ಣಿನ ಬಗ್ಗೆ ನಿಮಗೆ ಗೊತ್ತಿರದ ಸಂಗತಿಯೊಂದನ್ನು ಇಲ್ಲಿ ತಿಳಿಸುತ್ತೇವೆ. ನೀವು ನೋಡಿರುವ ಬಾಳೆಹಣ್ಣು ಸಾಧಾರಣ ಎಷ್ಟು ತೂಕ ಇರಬಹುದು? ಅಬ್ಬಬ್ಬಾ ಅಂದರೆ 300 ಗ್ರಾಮ್ಸ್  ಇರಬಹುದಾ? ಆದರೆ ಇಲ್ಲಿ ನಾವು ಹೇಳುತ್ತಿರುವ ಬಾಳೆಹಣ್ಣು ಬರೋಬ್ಬರಿ 4 ರಿಂದ 5 ಕೆಜಿ ತೂಕ ಭಾರ ಇದೆ. ಆ ಬಾಳೆಹಣ್ಣಿನ ಹೆಸರು ಮೂಸಾ ಇಂಗನ್ಸ್ (Musa ingens). ಈ ಬಾಳೆಹಣ್ಣು ಇಂಡೋನೇಷಿಯಾದ ನ್ಯೂ ಗಿನಿವಾದ ಉಷ್ಣವಲಯದ ಮಲೆನಾಡಿನ ಕಾಡುಪ್ರದೇಶಗಳಲ್ಲಿ ಕಂಡು ಬರುತ್ತದೆ. 

 

 ಈ ದೈತ್ಯಾಕಾರದ ಕಾಡಿನ ಬಾಳೆಹಣ್ಣಿನ ಗಿಡ ಬಾಳೆಹಣ್ಣಿನ ಪ್ರಜಾತಿಯಲ್ಲಿ ಅತ್ಯಂತ ಎತ್ತರದ ಗಿಡವಾಗಿದೆ. ಮತ್ತು ಇದರ ಎಲೆಯು ಸಹ ಬಹಳ ದೊಡ್ಡದಾಗಿ ಬೆಳೆಯುತ್ತದೆ. ಇದರ ಕಾಂಡ ಸಾಮಾನ್ಯವಾಗಿ 15 ಮೀಟರ್ ಗಳಷ್ಟು ಬೆಳೆಯುತ್ತದೆ.  ಇದರ ಎಲೆಗಳ ಜೊತೆಗೂಡಿ ಹೇಳುವುದಾದರೆ ಒಟ್ಟು  20 ಮೀಟರ್ ಗಳಷ್ಟು ಎತ್ತರ ಬೆಳೆಯುತ್ತದೆ. 

 

1954 ರಲ್ಲಿ ಅಧ್ಯಯನಕ್ಕೆ ಸಿಕ್ಕ ಮಾಹಿತಿ ಪ್ರಕಾರ ಒಂದು ಗಿಡ ಸುಮಾರು 30 ಮೀಟರ್ ಗಳಷ್ಟು ಬೆಳೆದಿತ್ತು.  ಆದರೆ ವೈಜ್ಞಾನಿಕವಾಗಿ ಎಲ್ಲಿಯೂ ಉಲ್ಲೇಖವಿಲ್ಲದ ಕಾರಣ ಅದನ್ನು ದೃಢ ಪಡಿಸಲು ಸಾಧ್ಯವಾಗಿಲ್ಲ.  ಮೂಸಾ ಇಂಗೆನ್ಸ್ ಕಾಂಡಗಳು 94 ಸೆಂಟಿಮೀಟರ್ (3 ಅಡಿ) ಅಗಲದಲ್ಲಿ ಎದೆಯ ಮಟ್ಟದಲ್ಲಿ (ಡಿಬಿಹೆಚ್) ಬೆಳವಣಿಗೆ ಹೊಂದಿದ ಪುರಾವೆಗಳಿವೆ. 

ಸಾಮಾನ್ಯವಾಗಿ ಈ ಪ್ರಜಾತಿಯ ಬಾಳೆಹಣ್ಣಿನ ಗಿಡದ ಎಲ್ಲಾ ಬಾಳೆ ಹಣ್ಣುಗಳು ಒಂದೇ ರೀತಿ ತೂಕ ಇರುವುದಿಲ್ಲ. ಸರಾಸರಿಯಾಗಿ ಒಂದೊಂದು ಬಾಳೆಹಣ್ಣು ಸುಮಾರು 1.4 ಕೆಜಿ ಯಷ್ಟು ತೂಕುತ್ತವೆ.    ಅದರಲ್ಲಿ ಕೆಲವೊಂದು ಮಾತ್ರ 4 ರಿಂದ 5 ಕೆಜಿ ಭಾರ ಇರುತ್ತದೆ. ಮತ್ತು ಸಾಮಾನ್ಯವಾಗಿ 18 ಸೆಂಟಿಮೀಟರ್ ಗಳಷ್ಟು  ಉದ್ದವಿರುತ್ತದೆ.

 

ಮೂಸಾ ಇಂಗನ್ಸ್ ಗಿಡದ ಬಾಳೆಗೊನೆ ಸುಮಾರು 300 ಬಾಳೆ ಹಣ್ಣುಗಳನ್ನು ಹಿಡಿದಿಟ್ಟುಕೊಳ್ಳುವಷ್ಟು ಸಾಮರ್ಥ್ಯ ಹೊಂದಿದ್ದು ಅಂದಾಜು 270 ರಿಂದ 300 ಕೆಜಿ ಭಾರ ಹೊಂದಿರುತ್ತದೆ ಎಂದು ತಿಳಿಯಲಾಗಿದೆ. ಒಂದು ಸಾಮನ್ಯ ಬಾಳೆಹಣ್ಣಿನಲ್ಲಿ ಪೌಷ್ಟಿಕಾಂಶ ಹೇರಳವಾಗಿರುವುದು ಈಗಾಗಲೇ ವಿವರಿಸಿದ್ದೇವೆ. ಹಾಗಾದರೆ ಈ ದೈತ್ಯ ಬಾಳೆಹಣ್ಣು ಅದೆಷ್ಟು ಪೌಷ್ಟಿಕಾಂಶ ಹೊಂದಿರಬಹುದು. ಆಲ್ವಾ. 

ನೈಸರ್ಗಿಕವಾಗಿ ಬೆಳೆಯುವ ಮೂಸಾ ಇಂಗನ್ಸ್ ಬಾಳೆಹಣ್ಣಿನಲ್ಲಿ ಹೇರಳವಾಗಿ ಪೌಷ್ಟಿಕಾಂಶ ಇದೆ ಎಂದು ವೈಜ್ಞಾನಿಕ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಈ ಬಾಳೆಹಣ್ಣು ಈಗ ಮಾರುಕಟ್ಟೆಯಲ್ಲೂ ಲಭ್ಯವಿರುತ್ತದೆ. ಆದರೆ ಹೆಚ್ಚಾಗಿ ವಿದೇಶದ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಭಾರತದಲ್ಲಿ ಬಹಳ ಕಡಿಮೆ ಕಾಣುವುದಕ್ಕೆ ಸಿಗುವುದು.  

ಈಗಾಗಲೇ ಗಿನ್ನೆಸ್ ವಿಶ್ವ ದಾಖಲೆಯ ಪುಟಕ್ಕೆ ಮೂಸಾ  ಇಂಗನ್ಸ್ ಬಾಳೆ ಹಣ್ಣು ಎಂದು ಸೇರಿಸಲಾಗಿದ್ದು, ಈ ತನಕ ಇದನ್ನು ಮೀರಿಸಿದ ಬೇರೆ ಬಾಳೆಹಣ್ಣಿನ ಪ್ರಜಾತಿ ಕಂಡು ಬಂದಿಲ್ಲ. ಈ ಬಾಳೆಹಣ್ಣು ತುಲನಾತ್ಮಕ ಪರಿಮಳ ಹೊಂದಿದ್ದು ಇದನ್ನು ಹೆಚ್ಚಾಗಿ ಬೇಯಿಸಿ ತಿಂದರೆ ಬಹಳ ರುಚಿಕರವಾಗಿರುತ್ತದೆ.

 

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ