Where is Ashraf Ghani now? ನೆಲೆ ಕಾಣದೆ ಪರದಾಡಿದ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ!

ತಾಲಿಬಾನ್ ಉಗ್ರರು ಆಫ್ಗಾನ್ ನ ರಾಜಧಾನಿ ಕಾಬುಲ್ ನಲ್ಲಿರುವ ಅಧ್ಯಕ್ಷನ ಅರಮನೆಯನ್ನು ವಶಪಡಿಸಿದ ತಕ್ಷಣ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈಗ ಅಫ್ಘಾನ್ ನಾಗರಿಕರ ಮತ್ತು ಎಲ್ಲರಲ್ಲೂ ಒಂದೇ ಪ್ರಶ್ನೆ ಉಧ್ಬವವಾಗಿದೆ. ಏನೆಂದರೆ ಅಶ್ರಫ್ ಘನಿ ಈಗ ಎಲ್ಲಿದ್ದಾರೆ ? ( Where is Ashraf Ghani now ) ಎಂಬುದು.

Where is Ashraf Ghani now

ನಂತರ ಇಡೀ ಅಫ್ಘಾನ್ ದೇಶವನ್ನೇ ತಮ್ಮ ಹತೋಟಿಗೆ ತೆಗೆದುಕೊಂಡ ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ಅಧ್ಯಕ್ಷ ಅಶ್ರಫ್ ಘನಿ ನೇರವಾಗಿ ತಮ್ಮ ನೆರೆ ರಾಷ್ಟ್ರವಾದ ತಜಕಿಸ್ತಾನಕ್ಕೆ ತಮ್ಮ ಪ್ರೈವೇಟ್ ಜೆಟ್ ನಲ್ಲಿ ಹಾರಿದ್ದಾರೆ. ಆದರೆ ತಜಕಿಸ್ತಾನದ ಆಡಳಿತವು ಅಶ್ರಫ್ ಘನಿಯನ್ನು ದೇಶದೊಳಗೆ ಬರಲು ಮತ್ತು ಆಶ್ರಯ ನೀಡಲು ಒಪ್ಪಲಿಲ್ಲ. ಅವರನ್ನು ಹಿಂದಕ್ಕೆ ಕಳುಹಿಸಲಾಗಿದೆ.

World News now in just one Click 

ತಜಕಿಸ್ತಾನಕ್ಕೆ ಪ್ರವೇಶ ಸಿಗದಿದ್ದುದರಿಂದ ಅಶ್ರಫ್ ಘನಿ ಈಗ ಎಲ್ಲಿದ್ದಾರೆ (Where is Ashraf Ghani now). ತಜಕಿಸ್ತಾನಕ್ಕೆ ಪ್ರವೇಶ ನಿಷೇಧಿಸಿದ ನಂತರ ಅಶ್ರಫ್ ಘನಿ ಓಮನ್ ಗೆ ಹಾರಿದ್ದಾರೆ. ಆದರೆ ಓಮನಲ್ಲಿ ಇರದೆ ನೇರ ಅಮೆರಿಕಾಕ್ಕೆ ಹೋಗುವ ಆಲೋಚನೆಯಲ್ಲಿ ಅಫಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಇದ್ದಾರೆ ಎಂದು ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.

ಅಫ್ಘಾನಿಸ್ತಾನದ ನಾಗರಿಕರು ಸಹ ದೇಶ ತೊರೆಯಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದು, ಹೆಚ್ಚಿನ ಪ್ರಜೆಗಳನ್ನು ಈಗಾಗಲೇ ಅಮೆರಿಕಕ್ಕೆ ಶಿಫ್ಟ್ ಮಾಡಲಾಗಿದೆ. ಭಾರತಕ್ಕೆ ಬರಲು ಇಚ್ಚಿಸುವವರಿಗೆ ವೀಸಾ ವಿಚಾರದಲ್ಲಿ ಸಡಿಲಿಕೆ ಮಾಡುವ ಬಗ್ಗೆ ಭಾರತ ಈಗಾಗಲೇ ಮಾತುಕತೆ ನಡೆಸುತ್ತಿದೆ.

 

ಅಫ್ಘಾನಿಸ್ತಾನದ ಈ ಅತಂತ್ರತೆಗೆ ನಿಜವಾದ ಕಾರಣ ದೇಶದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಆಂತರಿಕ ಜಗಳ ಭ್ರಷ್ಟಾಚಾರ ಮತ್ತು ಸರಕಾರೀ ಅಧಿಕಾರಿಗಳ ಕುತಂತ್ರಗಳೇ ಕಾರಣ ಎನ್ನಲಾಗಿದೆ. ಕಾಬೂಲಿನ ಸುಮಾರು ತೊಂಬತ್ತು ಸಾವಿರ ಪ್ರಜೆಗಳು ಅದಾಗಲೇ ತಾಲಿಬಾನಿಗಳ ಉಗ್ರ ಸಂಘಟನೆಗೆ ಸೇರಿಕೊಂಡಿದ್ದರು ಮತ್ತು ಹಲವಾರು ಅವರಿಗೆ ಸಮರ್ಥನೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಹಾಗಾಗಿ ದೇಶದ ಒಳಗೆ ಏರ್ಪಟ್ಟ ಅರಾಜಕತೆಯಿಂದ ತಾಲಿಬಾನಿನ ಉಗ್ರರಿಗೆ ಅಫ್ಘಾನ್ ಸುಲಭ ತುತ್ತಾಗಿ ಸೇರಿಕೊಂಡಿದೆ. ಅಫ್ಘಾನ್ ಸೇನೆ ಸಹಿತ ತನ್ನ ಶಸ್ತ್ರಗಳನ್ನು ತ್ಯಜಿಸಿ ತಾಲಿಬಾನ್ ನ ಉಗ್ರರ ಪಡೆಗೆ ಶರಣಾಗ ಬೇಕಾಯಿತು.

ನಿನ್ನೆ ಕಾಬುಲ್ ನ ವಿಮಾನ ನಿಲ್ದಾಣದಿಂದ ಅಮೆರಿಕಾದ ಸೇನಾ ವಿಮಾನ ಅಫ್ಘಾನಿಸ್ತಾನದ ಪ್ರಜೆಗಳನ್ನು ರಕ್ಷಿಸಿ ಸ್ಥಳಾಂತರ ಮಾಡುವಾಗ ನಾಗರೀಕರ ನೂಕುನುಗ್ಗಲು ಏರ್ಪಟ್ಟಿತ್ತು. ವಿಮಾನ ಟೇಕ್ ಆಫ್ ಆಗುವ ವೇಳೆ ಹಲವು ಮಂದಿ ಅಲ್ಲಿಂದ ಹೇಗಾದರೂ ಮಾಡಿ ಹೋಗಬೇಕು ಎಂಬ ಬರದಲ್ಲಿ ವಿಮಾನದ ಚಕ್ರದಲ್ಲಿ ಕಿಟಕಿ ಭಾಗದಲ್ಲಿ ನೇತಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

ಆದರೆ ವಿಮಾನ ಮೇಲೆ ಹಾರುತ್ತಲೇ ಚಕ್ರದಲ್ಲಿ ನೇತಾಡುತ್ತಿದ್ದ ಮೂವರು ಎತ್ತರದಿಂದ ಕೆಳಗೆ ಬೀಳುತ್ತಾರೆ. ಮತ್ತು ಬಿದ್ದ ಮೃತ ದೇಹಗಳು ಗುರುತು ಸಿಗದಷ್ಟು ಛಿದ್ರ ಛಿದ್ರ ವಾಗಿದೆ ಎಂದು ತಿಳಿದು ಬಂದಿದೆ. ಈ ದೃಶ್ಯವು ಇಡೀ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಇಂತಹ ಪರಿಸ್ಥಿತಿ ಎದುರಿಸುತ್ತಿರುವ ಅಫ್ಘಾನ್ ಪ್ರಜೆಗಳಿಗೆ ಕಂಬನಿ ಮಿಡಿದಿದ್ದಾರೆ.

 

 

2 thoughts on “Where is Ashraf Ghani now? ನೆಲೆ ಕಾಣದೆ ಪರದಾಡಿದ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ!”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ