ಹರೀಶ್ ಪೂಂಜಾರವರನ್ನು ಬಂಧಿಸುವ ನಿರ್ಧಾರ ಸರಿಯೇ? ತಪ್ಪೇ? ನಿಮ್ಮ ಅನಿಸಿಕೆ ಏನು?
ಬಿಜೆಪಿ ಮುಖಂಡ ಶಶಿರಾಜ್ ಶೆಟ್ಟಿ ಯವರನ್ನು ಅಕ್ರಮ ಕಲ್ಲು ಗಣಿಗಾರಿಕೆಯ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಇದನ್ನು ವಿರೋಧಿಸಿ ಶಾಶಕ ಹರೀಶ್ ಪೂಂಜಾರವರು ಠಾಣೆಗೆ ಬಂದು ಪೋಲೀಸರ ಜೊತೆ ಯದ್ವಾ ತದ್ವಾ ಮಾತಿನ ಚಕಮಕಿಗಿಳಿದು ಕೊನೆಗೆ ಪೋಲೀಸರ ಕಾಲರ್ ಹಿಡಿಯಲು ಹೇಸಲ್ಲ, ಠಾಣೆ ಏನು ನಿಮ್ಮಪ್ಪಂದ ಎಂದೆಲ್ಲಾ ಮಾತನಾಡಿದರು. ಇದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಇದರಿಂದ ಹರೀಶ್ ಪೂಂಜಾರ ಮೇಲೆ ಕೇಸು ದಾಖಲಾಗಿತ್ತು. ಇವತ್ತು ಶಾಶಕ ಹರೀಶ್ ಪೂಂಜಾರನ್ನು ಭಂದಿಸಬೇಕೆಂದು ಪೊಲೀಸ್ ಇಲಾಖೆ ಸೂಚಿಸಿದ ಹಿನ್ನೆಲೆಯಲ್ಲಿ ಇವತ್ತು ಬಿಜೆಪಿ ಕಾರ್ಯಕರ್ತರ ದಂಡೇ ಹರೀಶ್ ಪೂಂಜಾರವರ ಮನೆಗೆ ಬಂದು ನಿಂತಿದೆ. ಜೊತೆಗೆ ವಕೀಲರು ಸಹ ಶಾಶಕರ ಮನೆಯಲ್ಲಿರುವುದು ಕಂಡು ಬಂದಿದೆ.
ಈಗ ಶಾಶಕ Harish Poonajರವರು ಬಿಜೆಪಿ ಕಾರ್ಯಕರ್ತನ ಬೆಂಬಲಕ್ಕೆ ನಿಂತದ್ದು ಸರಿಯೇ ತಪ್ಪೇ? ಅಥವಾ ಸರಕಾರ ತುಘಲಕ್ ಧೋರಣೆ ಅನುಸರಿಸುತ್ತಿದೆಯೇ ಅಥವಾ ಹರೀಶ್ ಪೂಂಜಾರವರು ಕ್ರಿಮಿನಲ್ ನನ್ನ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆಯೇ? ಅಥವಾ ಹಿಂದೂಗಳ ಮೇಲೆ ಸರಕಾರ ದಮನ ನೀತಿ ಅನುಸರಿಸುತ್ತಿದೆಯೇ ಎಂಬೆಲ್ಲಾ ಪ್ರಶ್ನೆಗಳು ಈಗ ಏಳುತ್ತಿವೆ. ವಿಶೇಷ ಎಂದರೆ ನಿನ್ನೆ ಮಾನ್ಯ ಮುಖ್ಯಮಂತ್ರಿಯವರು ಬೆಳ್ತಂಗಡಿಗೆ ಬಂದು ಹೋದ ಬೆನ್ನಲ್ಲೇ ಹರೀಶ್ ಪೂಂಜಾರನ್ನು ಬಂಧಿಸುವ ವಾರಂಟ್ ಬಂದಿರುವುದು ಸರಕಾರದ ಮೇಲೆ ಅನುಮಾನ ಇನ್ನಷ್ಟು ಹೆಚ್ಚಿಸಿದೆ.
ಸದ್ಯಕ್ಕೆ ಶಾಸಕರನ್ನು ಬಂಧಿಸುವ ನಿರ್ಧಾರದಿಂದ ಹಿಂದೆ ಸರಿದು ಪೊಲೀಸರು ಹಿಂದುರಿಗರು ಇನ್ನು ಮಾಹಿತಿ ಲಭಿಸಿದೆ.
ನಿಮ್ಮ ಅನಿಸಿಕೆಯನ್ನು ಸಹ ನೀವು ಇಲ್ಲಿ ವ್ಯಕ್ತಪಡಿಸಬಹುದು. ಹೆಚ್ಚಿನ ಅನಿಸಿಕೆಯನ್ನು ನೀವು ಕಾಮೆಂಟ್ ನಲ್ಲಿ ತಿಳಿಸಬಹುದು.