ನಿಮಗೊತ್ತಾ ”ಪುತ್ತೂರು” ಎಂಬ ಹೆಸರು ಹೇಗೆ ಬಂತು ಎಂದು? ಇಲ್ಲಿದೆ ಅಸಲಿ ಸತ್ಯ

ನೀವು ಪುತ್ತೂರಿನವರಾ? ಹಾಗಿದ್ದರೆ ನಿಮಗಿದು ತಿಳಿದಿರಲೇಬೇಕು. ಪುತ್ತೂರು ಎಂಬ ಪದ ಬರಲು ಹಲವು ಕಥೆಗಳನ್ನು ನಾವು ಕೇಳಿರಬಹುದು. ಆದರೆ ನಿಜವಾದ ಕಥೆ ಬಲ್ಲವರು ಕಡಿಮೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಬಿಟ್ಟರೆ ಎರಡನೇ ಅತೀ ದೊಡ್ಡ ಪಟ್ಟಣ ಎಂದರೆ ಅದು Puttur. ಅಲ್ಲದೆ ಪುತ್ತೂರು ಒಂದು ಪ್ರಮುಖ ತಾಲೂಕು ಕೇಂದ್ರವೂ ಹೌದು. ಪುತ್ತೂರು ತಾಲೂಕು ಪ್ರಮುಖವಾಗಿ ವ್ಯಾಪಾರ ಕೇಂದ್ರವಾಗಿಯೂ ಪ್ರಸಿದ್ದಿ ಪಡೆದಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜಗತ್ತಿನಲ್ಲೇ ಪ್ರತಿಷ್ಠಿತವಾಗಿರುವ ಚಾಕಲೇಟ್ ಕಂಪನಿ Campco Chocolate Factory, ಶುದ್ಧ ನೀರಿನ ಕಂಪನಿ ಬಿಸ್ಲೇರಿ ಸಹ ಪುತ್ತೂರಿನಲ್ಲೇ ಇರುವುದು. 

Click to Join Whatsapp Group

ಈ ಪಟ್ಟಣಕ್ಕೆ ಪುತ್ತೂರು ಎಂಬ  ಹೆಸರು ಬರಲು ಸಾಕಷ್ಟು ಐತಿಹಾಸಿಕ ಕಾರಣಗಳಿರಬಹುದು. ಆದರೆ ನಾವು ಇಲ್ಲಿ ಜನನಿತವಾದ ಒಂದು ಕಾರಣವನ್ನು ವಿಶ್ಲೇಷಣೆ ಮಾಡೋಣ. ಪುತ್ತೂರಿನ  ಪ್ರಮುಖ ದೇವಾಲಯವಾದ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೂ Putturu ಎಂಬ ಹೆಸರಿಗೂ ಒಂದು ನಂಟಿದೆ. Puttur ಶತಮಾನಗಳ ಹಿಂದೆ ”ಬಂಗ” ವಂಶದ ಅರಸರ ರಾಜಧಾನಿಯಾಗಿತ್ತು. ಹಿಂದಿನ ಕಾಲದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಹಿಂಬಾಗದಲ್ಲಿ ಜನರಿಗೋಸ್ಕರ ಬಹಳ ದೊಡ್ಡ ಕೆರೆಯೊಂದನ್ನು ಮಾಡಲಾಯಿತು ಎಷ್ಟು ಅಗೆದರು ನೀರು ದೊರಕುವುದಿಲ್ಲ.  ನೀರು ಸಿಗದಿದ್ದ ಕಾರಣ ಜನರಿಗೆ ಆತಂಕ ಉಂಟಾಗುತ್ತದೆ. ದೇವಾಲಯದ ಆಡಳಿತ ವರ್ಗ ಮತ್ತು ಸಂಬಂಧಪಟ್ಟವರು ಕೆರೆಯಲ್ಲಿ ನೀರು ಬರುವುದಕ್ಕೋಷ್ಕರ ಒಂದು ಸಂಕಲ್ಪವನ್ನು ಕೈಗೊಳ್ಳುತ್ತಾರೆ. ಆ ಕೆರೆಯ ತಳದಲ್ಲಿ ಮತ್ತು ಕೆರೆಯ ಸುತ್ತಮುತ್ತ ಊರಿನ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. 

Puttur
Puttur

 

ಕೆರೆಯ ತಳದಲ್ಲಿ ಕುಳಿತು ಜನರು ಊಟ ಮಾಡಲು ಪ್ರಾರಂಭಿಸಿದರು. ಒಬ್ಬೊಬ್ಬರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರು ಕಾಣಿಸಿಕೊಳ್ಳಲು ಶುರುವಾಯಿತ್ತಂತೆ. ಹೊತ್ತು ಕಳೆದಂತೆ ನೀರು ಕೆರೆ ತುಂಬುತ್ತಾ ಹೋಯಿತು. ಕೆಲವರು ಊಟವನ್ನು ಎಲೆಗಳಲ್ಲಿ ಅರ್ಧಕ್ಕೆ ಬಿಟ್ಟು ಕೆರೆಯಿಂದ ಹೊರ ಓಡಿ ಬರುತ್ತಾರೆ. ಇದರಿಂದ ಕೆರೆಯಲ್ಲಿ ಉಳಿದ ಅನ್ನದ ಅಗುಳುಗಳು ನೀರಿನಲ್ಲಿ ತೇಲತೊಡಗಿತು. ಮತ್ತು ಅದೇ ಅನ್ನದ ಅಗುಳುಗಳು ಮುತ್ತುಗಳಾಗಿ ಬೆಳೆದವು ಎಂಬ ಪ್ರತೀತಿ ಇದೆ. ಹೀಗೆ ಮುತ್ತುಗಳು ಬೆಳೆದ ಕೆರೆಯ ಊರನ್ನು ನಂತರ ಮುತ್ತೂರು ಎಂಬುದಾಗಿ ಜನಗಳು ಕರೆಯಲಾರಂಭಿಸಿದರು. ಕ್ರಮೇಣ ಮುತ್ತೂರು ಪುತ್ತೂರಾಗಿ ಪರಿವರ್ತನೆಗೊಂಡು ಪ್ರಚಲಿತಕ್ಕೆ ಬಂತೆಂದು ಹೇಳಲಾಗುತ್ತದೆ.

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ