ದಕ ಜಿಲ್ಲೆಯ ಮುಂದಿನ ಎಂ.ಪಿ ಅಭ್ಯರ್ಥಿಗೆ ನಿಮ್ಮ ಆಯ್ಕೆ ಯಾರು? 

 

Loading poll ...
Coming Soon
ಮುಂದಿನ MP ಅಭ್ಯರ್ಥಿಗೆ ನಿಮ್ಮ ಆಯ್ಕೆ ಯಾರು?

 

 

ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ಎಲ್ಲರ ಕಣ್ಣು ಈಗ ಸಂಸದರ ಚುನಾವಣೆಯ ಮೇಲೆ ನೆಟ್ಟಿದೆ. ಈಗಾಗಲೇ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಬಿರುಗಾಳಿ ಎಬ್ಬಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಹೆಸರು ಈಗ ಲೋಕಸಭಾ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೊಸದಾಗಿ ನೇಮಕವಾಗಿರುವ ಕರ್ನಾಟಕ ರಾಜ್ಯ ಬಿಜೆಪಿಯಾ ರಾಜ್ಯಾಧ್ಯಕ್ಷರಾಗಿರುವ ಬಿ ವೈ ವಿಜಯೇಂದ್ರರವರ ಇತ್ತೀಚಿಗಿನ ಹೇಳಿಕೆ ದಕ್ಷಿಣ ಕನ್ನಡ ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. Know More About ಅರುಣ್ ಕುಮಾರ್ ಪುತ್ತಿಲ.

Click to Join Whatsapp Group

ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಬಗ್ಗೆ ಇರುವ ಜನವಿರೋಧಿ ಅಲೆಯ ನಡುವೆಯೂ ರಾಜ್ಯಾಧ್ಯಕ್ಷರು ನಳಿನ್ ಕುಮಾರ್ ಕಟೀಲ್ ಮುಂದಿನ ಲೋಕ ಸಭಾ ಚುನಾವಣೆಯ ಬಿಜೆಪಿಯ ಅಭ್ಯರ್ಥಿ ಎಂದು ತಮ್ಮ ಭಾಷಣದಲ್ಲಿ ಸೂಕ್ಷ್ಮವಾಗಿ ಹೇಳಿದ್ದು ಚುನಾವಣಾ ದಿನಾಂಕ ಘೋಷಣೆಗೆ   ಮುಂಚೆಯೇ ಚುನಾವಣಾ ಕಣ ರಂಗೇರುವಂತೆ ಮಾಡಿದ್ದಾರೆ.  

ದಕ್ಷಿಣ ಕನ್ನಡ ಜಿಲ್ಲೆಗೆ, ಕರಾವಳಿಗೆ ಸಾಕಷ್ಟು ಅಭಿವೃದ್ಧಿ ಅನುದಾನಗಳನ್ನು ತರುವಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ರವರು ಯಶಸ್ವಿಯಾಗಿದ್ದರೂ ಸಹ ಕೆಲವು ಜನ ವಿರೋಧಿ ಅಭಿಪ್ರಾಯ ಇರುವುದರಿಂದ ೨೦೨೪ ರ ಚುನಾವಣೆಯಲ್ಲಿ ಬೇರೆ ಹೊಸ ಮುಖ ಗಳಿಗೆ ದಕ ಜಿಲ್ಲೆಯ ಎಂ ಪಿ ಟಿಕೆಟ್ ನೀಡಬೇಕು ಎಂಬುದು ಕೆಲವರ ಅಭಿಪ್ರಾಯ. ಹಾಗಾಗಿ ಮುಂದಿನ ದಕ ಜಿಲ್ಲೆಯ ಬಿಜೆಪಿ ಸಂಸದರ ಟಿಕೆಟ್ ಗೆ ಕ್ಯಾ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ್ ಪೂಜಾರಿ, ಹೀಗೆ ಕೆಲವು ಹೆಸರುಗಳು ಮುನ್ನೆಲೆಯಲ್ಲಿದೆ. 

Click Here to Check Price in Amazon

ವಿಧಾನಸಭಾ ಚುನಾವಣೆಯಲ್ಲಿ ರೆಬೆಲ್ ಆಗಿ ಸ್ಪರ್ದಿಸಿದ್ದ ಅರುಣ್ ಕುಮಾರ್ ಪುತ್ತಿಲ ಲೋಕಸಭಾ ಚುನಾವಣೆಯಲ್ಲೂ ಸಂಸದರ ಚುನಾವಣೆಗೆ ಸ್ವತಂತ್ರವಾಗಿ ನಿಲ್ಲುವ ಸರ್ವ ಸಿದ್ಧತೆಗಳೂ ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ನಳಿನ್ ಕುಮಾರ್ ಕಟೀಲ್ ಗೆ ಬಿಜೆಪಿ ಟಿಕೆಟ್ ಕೊಟ್ಟರೆ ಪುತ್ತಿಲ ಸಂಸದರ ಚುನಾವಣೆಯಲ್ಲಿ ಸ್ಪರ್ದಿಸಬೇಕಾಗುತ್ತದೆ ಎಂದು ಪುತ್ತಿಲ ಪರಿವಾರ  ”ಕರಾವಳಿಗೆ ಪುತ್ತಿಲ” ಎಂಬ ಘೋಷಣೆಯೊಂದಿಗೆ ಬಿಜೆಪಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. 

43 thoughts on “ದಕ ಜಿಲ್ಲೆಯ ಮುಂದಿನ ಎಂ.ಪಿ ಅಭ್ಯರ್ಥಿಗೆ ನಿಮ್ಮ ಆಯ್ಕೆ ಯಾರು? ”

  1. Puttilarannu BJP ge ಕರೆತಂದು ಅವರಿಗೆ ticket ಕೊಟ್ರೆ BJP win or NalinKumar ge ticket ಕೊಡದೆ ಬೇರೆ ಯಾರಿಗಾದರೂ ಕೊಟ್ರೆ 50–50. Nalin ge ಕೊಟ್ರೆ ಸೋಲು guarantee 🙏

    Reply

Leave a Comment