ತನ್ನ ಮೊಬೈಲ್ ನಲ್ಲಿ 13,000 ಹುಡುಗಿಯರ ಬೆತ್ತಲೆ ಫೋಟೋ ಇಟ್ಟುಕೊಂಡ ಬೆಂಗಳೂರಿನ ಕಾಮುಕ ಹುಡುಗ

 

ಹೌದು, ಈ ಸುದ್ದಿ ಕೇಳಿದರೆ ನೀವು ಅಚ್ಚರಿ ಪಡುತ್ತೀರಿ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಈ ಹುಡುಗನ ಮೊಬೈಲ್ ನಲ್ಲಿ ಬರೋಬ್ಬರಿ 13,000 ಹುಡುಗಿಯರ ಬೆತ್ತಲೆ ಫೋಟೋಗಳು ಇದ್ದವು. ಈ ಪ್ರಕರಣ ಬೆಳಕಿಗೆ ಬರಲು ಕಾರಣ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬಳು ಹುಡುಗಿ ಮತ್ತು ಈ ಹುಡುಗನ ಲವ್ವಿ ಡವ್ವಿ.

Click to Join Whatsapp Group

ಬೆಂಗಳೂರಿನ ಬಿಪಿಓ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಒಬ್ಬಳು ಹುಡುಗಿ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗನ ಜೊತೆ ಸಂಭಂದ ಹೊಂದಿದ್ದಳು. ಈ ಸಲುಗೆ ಅವರಿಬ್ಬರ ದೈಹಿಕ ಸಂಪರ್ಕದವರೆಗೂ ಬೆಳೆದಿತ್ತು. ಕೆಲವು ತಿಂಗಳುಗಳ ಕಾಲ ಪರಸ್ಪರ ಖುಷಿಯಾಗಿಯೇ ಸುಖ ಹಂಚಿಕೊಳ್ಳುತ್ತಾರೆ. ಅತಿಯಾದ ಸಲುಗೆ ಅನಾಹುತಕ್ಕೆ ಎಡೆ ಮಾಡಿಕೊಡಬಲ್ಲದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ದೈಹಿಕ ಸಂಪರ್ಕದದ ವೇಳೆ ಹುಡುಗ ಈ ಹುಡುಗಿಯ ಕೆಲವು ಬೆತ್ತಲೆ ಫೋಟೋಗಳನ್ನು ತನ್ನ ಮೊಬೈಲ್ ನಲ್ಲಿ ತೆಗೆದುಕೊಳ್ಳುತ್ತಾನೆ. ನಂತರ ಡಿಲೀಟ್ ಮಾಡುವುದಾಗಿ ಹೇಳಿದರೂ ಆತ ಡಿಲೀಟ್ ಮಾಡದೇ ತನ್ನಲ್ಲೇ ಇರಿಸಿಕೊಂಡಿದ್ದ.

 

ಒಂದು ದಿನ ಆಕೆ ಅಚಾನಕ್ಕಾಗಿ ಆತ ಇಲ್ಲದ ಸಮಯದಲ್ಲಿ ಆತನ ಮೊಬೈಲ್ ಚೆಕ್ ಮಾಡುತ್ತಾಳೆ. ಅವಳಿಗೆ ಅಚ್ಚರಿ ಜೊತೆ ಶಾಕ್ ಕಾದಿತ್ತು. ಆತನ ಮೊಬೈಲ್ ನಲ್ಲಿ ಬರೋಬ್ಬರಿ 13,000 ಬೆತ್ತಲೆ ಫೋಟೋಗಳು ಇದ್ದವು. ಇದನ್ನು ಕಂಡು ಹುಡುಗಿ ಬೆಚ್ಚಿ ಬೀಳುತ್ತಾಳೆ. ಆತನಲ್ಲಿ ಇದನ್ನು ವಿಚಾರಿಸಿದಾಗ ಸೂಕ್ತ ಉತ್ತರ ಸಿಗುವುದಿಲ್ಲ. ಈಕೆ ನಂತರ ತನ್ನ ಕಂಪನಿಯ ಕಾನೂನು ಅಧಿಕಾರಿಯ ಸಂಪರ್ಕಿಸಿ ಅವರ ಮುಖಾಂತರ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುತ್ತಾಳೆ. ದೂರಿನ ಮೇರೆಗೆ ಪೊಲೀಸರು ಆರೋಪಿ ಆದಿತ್ಯ ಸಂತೋಷ್‌ ನ ಮೇಲೆ ದೂರು ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ.

 

3 thoughts on “ತನ್ನ ಮೊಬೈಲ್ ನಲ್ಲಿ 13,000 ಹುಡುಗಿಯರ ಬೆತ್ತಲೆ ಫೋಟೋ ಇಟ್ಟುಕೊಂಡ ಬೆಂಗಳೂರಿನ ಕಾಮುಕ ಹುಡುಗ”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ