ಸೆಪ್ಟೆಂಬರ್ 19 ರಿಂದ 21 ರವರೆಗೆ ಶ್ರೀ ಕ್ಷೇತ್ರ ಕೆಯ್ಯೂರಿನಲ್ಲಿ ಗಣೇಶೋತ್ಸವ ಕಾರ್ಯಕ್ರಮ
Table of Contents
ಕೆಯ್ಯೂರು: ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರು ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಇದರ ಆಶ್ರಯದಲ್ಲಿ ಸೆಪ್ಟೆಂಬರ್ 19 ರಿಂದ 21 ರವರೆಗೆ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಗಣೇಶೋತ್ಸವ ಮತ್ತು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆಯಲಿರುವುದು.
ಕಾರ್ಯಕ್ರಮಗಳ ವಿವರ:
ದಿನಾಂಕ 19 ನೇ ಮಂಗಳವಾರದಂದು ಬೆಳಗ್ಗೆ ಪ್ರಾರ್ಥನೆಯ ನಂತರ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿರುವುದು. ನಂತರ ಪೂಜಾ ಕೈಂಕರ್ಯಗಳು ನಡೆಯಲಿರುವುದು. ದಿನಾಂಕ 20 ನೇ ಬುಧವಾರದಂದು ಗಣಪತಿ ಹವನ ಮತ್ತು ನಿತ್ಯ ಪೂಜೆಗಳು ನಡೆಯಲಿರುವುದು. ದಿನಾಂಕ 21ನೇ ಗುರುವಾರದಂದು ಗಣಪತಿ ಹವನ ಮತ್ತು ಎಂದಿನಂತೆ ಪೂಜಾ ಕಂಕರ್ಯ ನಡೆಯುವುದು. ಸಂಜೆ 4.30 ಕ್ಕೆ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆಯು ದೇವಳದಿಂದ ಹೊರಟು ಮಾಡಾವಿನ ಗೌರಿ ಹೊಳೆ ಸಂಗಮದಲ್ಲಿ ವಿಸರ್ಜನೆ ನಡೆಯಲಿರುವುದು. ಗಣೇಶೋತ್ಸವದ ಮೂರೂ ದಿನವೂ ದೇವಳದಲ್ಲಿ ಅನ್ನಸಂತರ್ಪಣೆ ಮತ್ತು ಸಂಜೆ ಭಜನಾ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು:
ದಿನಾಂಕ 19 ನೇ ಮಂಗಳವಾರದಂದು ಮಧ್ಯಾಹ್ನ ಗಂಟೆ 2.30 ರಿಂದ 3.30 ರ ವರೆಗೆ ಮಕ್ಕಳಿಗೆ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ ಮತ್ತು ಅದೇ ದಿನ ಸಂಜೆ 7 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ವಿಭಾಗಗಳಲ್ಲಿ ಭಕ್ತಿ ಗೀತೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯ ಹೆಚ್ಚಿನ ವಿವರಗಳಿಗೆ ಆಯೋಜಕರನ್ನು ಸಂಪರ್ಕಿಸಲು ಕೋರಲಾಗಿದೆ.
ನಡೆಯಲಿರುವ ಸೇವೆಗಳು:
ಶ್ರೀ ಗಣೇಶೋತ್ಸವ ಪ್ರಯುಕ್ತ ದೇವಳದಲ್ಲಿ ಎಂದಿನಂತೆ ನಿತ್ಯ ಸೇವೆಯ ಜೊತೆಗೆ ಗಣಪತಿ ಹೋಮ, ಕರ್ಪೂರಾರತಿ, ಮಂಗಳಾರತಿ, ಪಂಚಕಜ್ಜಾಯ, ಅಪ್ಪಕಜ್ಜಾಯ ಮತ್ತು ಮಹಾಪೂಜೆ ನಡೆಯಲಿರುವುದು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶಶಿಧರ ರಾವ್ ಬೊಳಿಕ್ಕಳ, ಸರ್ವ ಸದಸ್ಯರು, ದೇವಳದ ಅರ್ಚಕರು, ಸಿಬ್ಬಂದಿ ವರ್ಗ ಹಾಗೂ ಶ್ರೀ ದುರ್ಗಾ ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಈ ಮೂಲಕ ಸಮಸ್ತ ಭಗವದ್ಭಕ್ತರೆಲ್ಲರೂ ಈ ದೇವತಾ ಕಾರ್ಯದಲ್ಲಿ ಭಾಗಿಗಳಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.