ಬಿಜೆಪಿಯಲ್ಲಿ ಅಚ್ಚರಿಯ ಬದಲಾವಣೆ: ಚುನಾವಣೆಗೂ ಮುನ್ನವೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ.
ಕರ್ನಾಟಕ ವಿಧಾನಸಭೆಯಲ್ಲಿ ಮಾಡಿದ ಹೊಸ ಪ್ರಯೋಗದಿಂದ ಸೋತ ಬಿಜೆಪಿ ಪಾಠ ಕಲಿತಂತಿದೆ. ಬಿಜೆಪಿ ಸದ್ಯ ಪಕ್ಷದಲ್ಲಿ ಅಚ್ಚರಿಯ ಬದಲಾವಣೆಯನ್ನು ತಂದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಪ್ರತೀ ಸಲವೂ ಬಹಳ ಎಚ್ಚರಿಕೆಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದ ಬಿಜೆಪಿಯ ನಡೆ ಭಾರಿ ಕುತೂಹಲ ಕೆರಳಿಸಿದೆ.
ಹೌದು ಇದೀಗ ಛತ್ತೀಸಗಡ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ ವಿಧಾನಸಭಾ ಚುನಾವಣೆ ಎದುರಾಗಿದ್ದು, ಚುನಾವಣೆಗೆ ದಿನಾಂಕ ಘೋಷಣೆ ಮಾಡುವ ಮುನ್ನವೇ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿಯ ಈ ನಡೆ ಸದ್ಯ ರಾಜಕೀಯದಲ್ಲಿ ಅಚ್ಚರಿ ಮೂಡಿಸಿದ್ದು, ಕರ್ನಾಟಕದಲ್ಲಿ ಆದ ಅವಾಂತರದಿಂದ ಎಚ್ಛೆತ್ತುಕೊಂಡಂತಿದೆ. ಛತ್ತೀಸಗಡ ಮತ್ತು ಮಧ್ಯಪ್ರದೇಶ ರಾಜ್ಯ ವಿಧಾನಸಭಾ ಚುನಾವಣೆಗೆ ನವೆಂಬರ್ ನಲ್ಲಿ ಚುನಾವಣೆ ಘೋಷಣೆಯಾಗುವ ಸಂಭವ ಇದೆ. ಸದ್ಯ ಅವಧಿ ಪೂರ್ಣವಾಗಲು ಜನವರಿವರೆಗೂ ಇದ್ದು, ಬಿಜೆಪಿ ಚುನಾವಣೆ ಪೂರ್ಣ ಪ್ರಮಾಣದಲ್ಲಿ ಪೂರ್ವ ತಯಾರಿ ಮಾಡಲು ಸಿದ್ಧವಾಗುತ್ತಿದೆ.
ಒಟ್ಟು 230 ಸದಸ್ಯರಿರುವ ಮಧ್ಯಪ್ರದೇಶದ ವಿಧಾನಸಭೆಗೆ 39 ಅಭ್ಯರ್ಥಿಗಳ ಹೆಸರನ್ನು ಮತ್ತು ಒಟ್ಟು 90 ಸದಸ್ಯರಿರುವ ಛತ್ತೀಸಗಡದ ವಿಧಾನಸಭೆಗೆ 21 ಅಭ್ಯರ್ಥಿಗಳ ಹೆಸರನ್ನು ತನ್ನ ಮೊದಲ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅಧ್ಯಕ್ಷತೆಯಲ್ಲಿ ಬುಧವಾರ ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲಾಯಿತು.