47 ವರ್ಷಗಳ ಚಂದ್ರಯಾನದ ಕನಸು ಭಗ್ನ: ಕೊನೆಯ ಕ್ಷಣದಲ್ಲಿ ಚಂದ್ರಯಾನದ ಕನಸು ಛಿದ್ರ ಛಿದ್ರ

47 ವರ್ಷಗಳ ಚಂದ್ರಯಾನದ ಕನಸು ಭಗ್ನ: ಕೊನೆಯ ಕ್ಷಣದಲ್ಲಿ ಚಂದ್ರಯಾನದ ಕನಸು ಛಿದ್ರ ಛಿದ್ರ

Luna-25: ಸುಮಾರು 47 ವರ್ಷಗಳ ನಂತರ ಮಾನವ ರಹಿತ ಚಂದ್ರಯಾನವನ್ನು ಕೈಗೊಂಡ ರಷ್ಯಾದ ಕನಸು ಕೊನೆ ಕ್ಷಣದಲ್ಲಿ ಪತನವಾಗಿದೆ. ಹೌದು ತಾಂತ್ರಿಕ ದೋಷದಿಂದಾಗಿ ರಷ್ಯಾ ಕಳುಹಿಸಿದ ಚಂದ್ರ ಅನ್ವೇಷಣಾ ಯೋಜನೆಯಾದ ಲೂನಾ-25 ಚಂದ್ರ ಮೇಲ್ಮೈಗೆ ತಲುಪುವಾಗ ಪತನಗೊಂಡು 47 ವರ್ಷಗಳ ಚಂದ್ರಯಾನ ಕನಸು ಭಗ್ನಗೊಂಡಿದೆ.

Luna-25

ರಷ್ಯಾದ ರೊಸ್ಕೋಸ್ಮೋಸ್ ಬಾಹ್ಯಾಕಾಶ ಸಂಸ್ಥೆ ಚಂದ್ರನ ದಕ್ಷಿಣ ದ್ರುವದಲ್ಲಿ ಮಾನವನಿಗೆ ಶಾಶ್ವತ ನೆಲೆ ಕಾಣಲು ಸಾಧ್ಯವಿದೆಯೇ ಎಂಬುವುದನ್ನು ಪರೀಕ್ಷಿಸಲು ಲೂನಾ-25 ನೌಕೆಯನ್ನು ಕಳುಹಿಸಿತ್ತು. ಕೇವಲ 10 ದಿನದಲ್ಲಿ ಚಂದ್ರನ ಮೇಲ್ಮೈಯಲ್ಲಿ ಇಳಿಸುವ ಯೋಜನೆಯೊಂದಿಗೆ ಹೋರಟ ನೌಕೆ ನಿರೀಕ್ಷೆಯಂತೆ ಕೇವಲ 8 ದಿನದಲ್ಲಿ ಚಂದ್ರ ಕಕ್ಷೆ ತಲುಪಿ ಇನ್ನೇನು ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಿದ್ಧವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಾಂತ್ರಿಕ ದೋಷದಿಂದ ತನ್ನ ಕಕ್ಷೆ ಬದಲಿಸಿಕೊಂಡು,  ಪತನಗೊಂಡು ರಷ್ಯಾದ ಕನಸನ್ನು ನುಚ್ಚು ನೂರು ಮಾಡಿದೆ. 

 

ರಷ್ಯಾ ತನ್ನ ನೌಕೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಇಳಿದು, ಸುಮಾರು ಒಂದು ವರ್ಷ ಕಾಲ ಸಂಚರಿಸಿ, ಅಲ್ಲಿನ ಕಲ್ಲು, ಧೂಳು, ಮಣ್ಣುಗಳ ಮಾದರಿಗಳನ್ನು ಸಂಗ್ರಹಿಸಲಿದೆ ಎಂದು ಊಹಿಸಲಾಗಿತ್ತು. ಅಂದುಕೊಂಡಂತೆ ಆಗುತ್ತಿದ್ದರೆ, ಲೂನಾ-25 ನೌಕೆ ಆಗಸ್ಟ್ 21ರಂದು ಚಂದ್ರನ ದಕ್ಷಿಣ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಬೇಕಾಗಿತ್ತು.

 

Leave a Comment