Gruha Jyothi Yojana: Conditions to get Free Electricity from the Govt

ಗೃಹ ಜ್ಯೋತಿ ಯೋಜನೆ : ಉಚಿತ ವಿದ್ಯುತ್ ಪಡೆಯಲು ಸರಕಾರ ಹೇಳಿರುವ ನಿಬಂಧನೆಗಳು ಇಲ್ಲಿ ತಿಳಿಯಿರಿ

Gruha Jyothi Yojana: ಸೋಮವಾರ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತನ್ನ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ (Gruha Jyothi Yojana) ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 

ಚುನಾವಣೆಯ ಮೊದಲು ಪ್ರತಿಯೊಬ್ಬರಿಗೂ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಎಂದು ಹೇಳಿದ್ದ ಸರಕಾರ ಅಧಿಕಾರ ಬಂದ ನಂತರ ಅದಕ್ಕೆ ಅಳೆದು ತೂಗಿ ಷರತ್ತುಗಳನ್ನು ವಿಧಿಸುತ್ತಿದ್ದಾರೆ.  

ಸದ್ಯ ಗೃಹ ಜ್ಯೋತಿ (Gruha Jyothi Yojana) ಯೋಜನೆಯ ಫಲಾನುಭವಿಯಾಗಲು ಗ್ರಾಹಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದನ್ನು ಸರಕಾರ ಕಡ್ಡಾಯಗೊಳಿಸಿದೆ.

Gruha Jyothi Yojana

ಜೂನ್ 2 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಂಗಳಿಗೆ 200 ಯೂನಿಟ್‌ಗಿಂತ ಕಡಿಮೆ ಬಳಕೆ ಮಾಡುವ ಎಲ್ಲಾ ಬಳಕೆದಾರರು ವಿದ್ಯುತ್ ಬಿಲ್ ಪಾವತಿಸಬೇಕಾಗಿಲ್ಲ ಎಂದು ಘೋಷಿಣೆ ಮಾಡಿದ್ದರು. ಆದರೆ, ಸೋಮವಾರ ಸರ್ಕಾರ ಅರ್ಹತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಗಳ ಕೆಳಗಿನಂತಿವೆ.

  1. ಗೃಹ ಜ್ಯೋತಿ ಯೋಜನೆಯು ವಸತಿ ಬಳಕೆಗೆ ಮಾತ್ರ ಅನ್ವಯಿಸುವುದು. 
  2. ವಾಣಿಜ್ಯ ಬಳಕೆಗೆ ಗೃಹ ಜ್ಯೋತಿ ಯೋಜನೆಯು ಅನ್ವಯಿಸುವುದಿಲ್ಲ
  3. ಬಿಲ್ಲಿಂಗ್ ಸಮಯದಲ್ಲಿ, ಯೋಜನೆಯ ಅಡಿಯಲ್ಲಿ ಉಚಿತ 200  ಯೂನಿಟ್ ಗಳನ್ನು ಹೊರತುಪಡಿಸಿ ಗ್ರಾಹಕರಿಗೆ ಹೆಚ್ಚುವರಿ ಬಳಕೆಯ ಬಿಲ್‌ಗಳನ್ನು ನೀಡಲಾಗುತ್ತದೆ. 
  4. ಗೃಹ ಜ್ಯೋತಿ ಯೋಜನೆಯಡಿ ಅರ್ಹ ಯೂನಿಟ್ಗಳಿಗಿಂತ ಕಡಿಮೆ ಯೂನಿಟ್ಗಳು ಇದ್ದರೆ ಗ್ರಾಹಕರಿಗೆ ಶೂನ್ಯ ಬಿಲ್ ನೀಡಲಾಗುವುದು. 
  5. ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. 
  6. ಗ್ರಾಹಕರು ತಮ್ಮ ಗ್ರಾಹಕ ಐಡಿ/ಖಾತೆ ಐಡಿಯನ್ನು ಆಧಾರ್‌ಗೆ ಲಿಂಕ್ ಮಾಡಬೇಕು. 
  7. ಭಾಗ್ಯ ಜ್ಯೋತಿ ಮತ್ತು ಅಮೃತ ಜ್ಯೋತಿಯ ಪ್ರಯೋಜನಗಳನ್ನು ಈಗಾಗಲೇ ಪಡೆಯುವ ಗ್ರಾಹಕರು ಪ್ರಸ್ತುತ ಗೃಹ ಜ್ಯೋತಿ ಯೋಜನೆಯಡಿ ವರ್ಗಾವಣೆಯಾಗುತ್ತಾರೆ.

ಸರಕಾರ ಜೂನ್ 30 ರವರೆಗೆ ಬಾಕಿ ಉಳಿದಿರುವ ವಿದ್ಯುತ್ ಬಿಲ್ ಗಳನ್ನು ಪಾವತಿಸಲು ಗ್ರಾಹಕರಿಗೆ ಗಡುವು ನೀಡಿದೆ. ಬಾಕಿ ಉಳಿದಿರುವ ಬಿಲ್ ಗಳು ಮೂರು ತಿಂಗಳೊಳಗೆ ಪಾವತಿಸಬೇಕು. ಇದಕ್ಕೆ ವಿಫಲವಾದರೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ ಎಂದು ಸರಕಾರ ಎಚ್ಚರಿಸಿದೆ.

ಗ್ರಾಹಕರ ಮಾಸಿಕ ಸರಾಸರಿ ಬಳಕೆ (2022-23ರ ಮಾಸಿಕ ಸರಾಸರಿ) ಯೋಜನೆಯಡಿಯಲ್ಲಿ ಒಂದು ಮನೆ ಎಷ್ಟು ಯೂನಿಟ್ ಉಚಿತ ವಿದ್ಯುತ್ ಪಡೆಯುತ್ತದೆ ಎಂಬುದನ್ನು ಲೆಕ್ಕಹಾಕಲು ಬಳಸಲಾಗುತ್ತದೆ. 

ಗ್ರಾಹಕರು ತಮ್ಮ ಮಾಸಿಕ ಬಳಕೆಯ ಸರಾಸರಿಯ 10% ಹೆಚ್ಚು ಯೂನಿಟ್ ಗಳಿಗೆ ಮಾತ್ರ ಅರ್ಹರಾಗಿರುತ್ತಾರೆ. ಜುಲೈನಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಜನರು ತಮ್ಮ ಮಾಸಿಕ ಸರಾಸರಿ ಯೂನಿಟ್‌ಗಳ ಸಮಾನ ಅಥವಾ ಕಡಿಮೆ ಯೂನಿಟ್‌ಗಳನ್ನು ಬಳಸಿದರೆ ಅಂತಹ ಗ್ರಾಹಕರು ಆಗಸ್ಟ್‌ನಿಂದ ವಿದ್ಯುತ್ ಬಿಲ್‌ಗಳನ್ನು ಪಾವತಿಸಬೇಕಾಗಿಲ್ಲ.

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio