Free Bus For Women: ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಬೇಕೇ?  ಈ ರೀತಿ ಮಾಡಿ

Free Bus For Women: ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಬೇಕೇ?  ಈ ರೀತಿ ಮಾಡಿ

Free Bus For Women: ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಯಡಿಯಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯ ಪಡೆಯುವುದು ಬಹಳ ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ. 

ಉಚಿತ ಬಸ್ ಪ್ರಯಾಣದ ಯೋಜನೆಯ ಫಲಾನುಭವಿಯಾಗಲು ಮಹಿಳೆಯರು ‘ಶಕ್ತಿ ಸ್ಮಾರ್ಟ್ ಕಾರ್ಡ್’ಗಳನ್ನು ಹೊಂದಿರಬೇಕು ಎಂದು ಸರ್ಕಾರ  ಅಧಿಸೂಚನೆ ಹೊರಡಿಸಿದೆ. ಈ ಶಕ್ತಿ ಸ್ಮಾರ್ಟ್ ಕಾರ್ಡ್ ಇದ್ದರೆ ಮಾತ್ರ ಮಹಿಳೆಯರು  ಈ ಯೋಜನೆಯ ಪಡೆಯಲು ಸಾಧ್ಯ ಮತ್ತು  ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಕರ್ನಾಟಕಾದ್ಯಂತ ಪ್ರಯಾಣ ಮಾಡಬಹುದಾಗಿದೆ. ಇಲ್ಲವಾದಲ್ಲಿ ಮಹಿಳೆಯರು ತಮ್ಮ ಪ್ರಯಾಣಕ್ಕೆ ಹಣ ಪಾವತಿಸಬೇಕಾಗುತ್ತದೆ.

 

ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಸೇವಾ ಸಿಂಧು ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಕೆ

ಸರಕಾರದ ಯೋಜನೆಯಡಿ ಉಚಿತ ಬಸ್ ಪ್ರಯಾಣಕ್ಕೆ ಮಹಿಳೆಯರು ‘ಶಕ್ತಿ ಸ್ಮಾರ್ಟ್ ಕಾರ್ಡ್’ ಗಳನ್ನು ಪಡೆಯಬೇಕಾಗುತ್ತದೆ. ಅದಕ್ಕಾಗಿ ಸರಕಾರದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಿ, ಶಕ್ತಿ ಸ್ಮಾರ್ಟ್ ಕಾರ್ಡ್’ಗಳನ್ನು ಪಡೆಯಬೇಕು. ಮುಂದಿನ ಮೂರು ತಿಂಗಳು ಕಾಲ ಶಕ್ತಿ ಸ್ಮಾರ್ಟ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸರ್ಕಾರ ಹೇಳಿದೆ. ಒಬ್ಬ ಮಹಿಳೆ ಒಂದು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಅವಕಾಶ ಎಂದು ಸರಕಾರ ಹೇಳಿದೆ. 

Free Bus For Women
Free Bus For Women

ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂದು ಈ ಕೆಳಗೆ ಹಂತ ಹಂತವಾಗಿ ವಿವರಿಸಲಾಗಿದೆ. 

ಹಂತ 1 : ಮೊದಲು ನಿಮ್ಮ ಮೊಬೈಲ್ ನ ಬ್ರೌಸರ್ ಅಥವಾ ಕಂಪ್ಯೂಟರ್ ನಲ್ಲಿ ಗೂಗಲ್ ನಲ್ಲಿ  ಸೇವಾ ಸಿಂಧು ವೆಬ್‌ಸೈಟ್‌ಗೆ ತೆರೆಯಿರಿ.

ಹಂತ 2 : ಸೇವಾ ಸಿಂಧು ವೆಬ್ಸೈಟ್ ನಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ನೀವು ಮುಖಪುಟದಿಂದ ನೋಂದಾಯಿಸಿಕೊಳ್ಳಿ. ನಿಮ್ಮ ಖಾತೆ ಈಗಾಗಲೇ ಇದ್ದಲ್ಲಿ ನೀವು ನೇರವಾಗಿ ಖಾತೆಗೆ ಲಾಗ್ ಇನ್ ಮಾಡಿ.  

ಹಂತ 3 : ಮೆನುನಲ್ಲಿ  “ಇಲಾಖೆಗಳು ಮತ್ತು ಸೇವೆಗಳು” ಒಪ್ಶನ್ ಮೇಲೆ ಕ್ಲಿಕ್ ಮಾಡಿ.

ಹಂತ 4 : ಅಲ್ಲಿ “ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(Karnataka State Road Transport Corporation)” ಆಯ್ಕೆಯನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ.

ಹಂತ 5 : ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮತ್ತು “ಈಗ ಅನ್ವಯಿಸು(Apply Now)” ಅನ್ನು ಕ್ಲಿಕ್  ಮಾಡಿ.

ಹಂತ 6 : ನೀವು ದೃಢೀಕರಿಸಬೇಕಾದ ಘೋಷಣೆಯ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು “ಅರ್ಜಿ ಸಲ್ಲಿಸಲು ಮುಂದುವರಿಯಿರಿ(Proceed to Apply)” ಆಯ್ಕೆಗೆ ಕ್ಲಿಕ್ ಮಾಡಿ. 

ಹಂತ 7 : ಕೊಟ್ಟಿರುವ ಅರ್ಜಿ ನಮೂನೆಯಲ್ಲಿ ನಿಮ್ಮ ವಿವರಗಳನ್ನು ಭರ್ತಿ ಮಾಡುವ ಮೊದಲು ಒದಗಿಸಿದ ಸಂಪೂರ್ಣ ಮಾಹಿತಿಯನ್ನು ತಪ್ಪದೆ ಗಮನಿಸಿ.

ಹಂತ 8 : ನಂತರ ಮೌಲ್ಯೀಕರಣಕ್ಕಾಗಿ (validation) ಗೆ ನೀವು ಕೊಟ್ಟಿರುವ ಅಥವಾ ನೋಂದಾವಣೆ ಆಗಿರುವ ಮೊಬೈಲ್ ಸಂಖ್ಯೆಗೆ OTP ಅನ್ನು ಕಳುಹಿಸಲಾಗುತ್ತದೆ.

ಹಂತ 9 : ಕೊಟ್ಟಿರುವ OTP ಇಲ್ಲಿ ತಪ್ಪಿಲ್ಲದೆ ನಮೂದಿಸಿ. 

ಹಂತ 10 :  ಮೌಲ್ಯೀಕರಣ(validation) ದೃಢ ಪಟ್ಟ ನಂತರ ನಿಮ್ಮ ವಿವರಗಳನ್ನು ಸರಿಯಾಗಿ ಪರಿಶೀಲನೆ ಮಾಡಿದ ನಂತರ “ಸಲ್ಲಿಸು(Submit)” ಅನ್ನು ಕ್ಲಿಕ್ ಮಾಡಿ.

ಹಂತ 11 : ನಿಮಗೆ ಯಾವುದಾದರೂ ನೀವು ಕೊಟ್ಟ ಮಾಹಿತಿಯಲ್ಲಿ ತಿದ್ದುಪಡಿಗಳಿದ್ದಲ್ಲಿ ಈಗಾಗಲೇ ಭರ್ತಿ ಮಾಡಿದ ಫಾರ್ಮ್ ಅನ್ನು ಒಮ್ಮೆ ನಿಮಗೆ ತೋರಿಸಲಾಗುತ್ತದೆ. ಒಂದು ವೇಳೆ ಏನಾದರು ಬದಲಾವಣೆಗಳನ್ನು ಮಾಡಲು ಬಯಸಿದ್ದಲ್ಲಿ ನೀವು ಸಂಪಾದನೆ(Edit) ಬಟನ್ ಅನ್ನು ಕ್ಲಿಕ್ ಮಾಡಬಹುದು. ಅಥವಾ ನೀವು “ಅನುಬಂಧವನ್ನು ಲಗತ್ತಿಸಿ(Save Attachments)” ಕ್ಲಿಕ್ ಮಾಡಿ ಮುಂದುವರಿಯಬಹುದು.

ಹಂತ 12 : ನಂತರ ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿ ಮತ್ತು “ಅನುಬಂಧಗಳನ್ನು ಉಳಿಸಿ(Save Attachments)” ಆಯ್ಕೆಮಾಡಿ.

ಹಂತ 13 : ದಾಖಲೆ ಲಗತ್ತಿಸಿದ ನಂತರ “ಇ-ಸೈನ್ ಮತ್ತು ಸಲ್ಲಿಸಿ(e-sign and submit)” ಮೇಲೆ ಕ್ಲಿಕ್ ಮಾಡಿ.

ಹಂತ 14 : ಕೊಟ್ಟಿರುವ ನಿಯಮಗಳು ಮತ್ತು ಷರತ್ತುಗಳಿಗೆ ಸಮ್ಮತಿಸಿ. 

ಹಂತ 15 : ನಂತರ “OTP” ಬಟನ್ ಮೇಲೆ ಕ್ಲಿಕ್ ಮಾಡಿ. 

ಹಂತ 16 : OTP ಸ್ವೀಕರಿಸಲು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ .

ಹಂತ 17 : ಮೇಲಿನ ಎಲ್ಲಾ ಹಂತವನ್ನು ಪೂರ್ಣಗೊಳಿಸಿದ ನಂತರ, ಸ್ವೀಕೃತಿ ಸ್ಲಿಪ್(acknowledgment slip) ಅನ್ನು ರಚಿಸಲಾಗುತ್ತದೆ.

ಹಂತ 18 : ನಿಮಗೆ ಸ್ವೀಕೃತಿ ಸ್ಲಿಪ್ ಬೇಕಾದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. 

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio