Environmental Budget By CM Basavaraj Bommayi | ಪರಿಸರ ನಷ್ಟವನ್ನು ತುಂಬಲು ಪ್ರತಿ ವರ್ಷ ಪರಿಸರ ಆಯವ್ಯಯ

ಪರಿಸರ ನಷ್ಟವನ್ನು ತುಂಬಲು ಪ್ರತಿ ವರ್ಷ ಪರಿಸರ ಆಯವ್ಯಯ : ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸುವ ಪರಿಸರ ಹಾನಿಯ ವೆಚ್ಚವನ್ನು ಭರಿಸಲು ಪರಿಸರ ಆಯವ್ಯಯವನ್ನು (Environmental Budget By CM Basavaraj Bommayi) ಪ್ರಾರಂಭಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರು ಶನಿವಾರ ಘೋಷಿಸಿದ್ದಾರೆ.

 

‘ಅರಣ್ಯ ಹುತಾತ್ಮರ ದಿನಾಚರಣೆಯ’ ಅಂಗವಾಗಿ ಹುತಾತ್ಮರಿಗೆ ನಮನ

ಶನಿವಾರ ‘ಅರಣ್ಯ ಹುತಾತ್ಮರ ದಿನಾಚರಣೆಯ(Forest Martyrdom Day)’ ಅಂಗವಾಗಿ ಹುತಾತ್ಮರಿಗೆ ನಮನ ಸಲ್ಲಿಸಿ ಮಾತನಾಡಿದ ಮಾನ್ಯ ಮುಖ್ಯಮಂತ್ರಿಯವರು, ಪ್ರತಿ ವರ್ಷವು ರಾಜ್ಯದಲ್ಲಿ ವಿವಿಧ ಕಾರಣಗಳಿಂದ ನಾಶವಾಗಿರುವ ಒಟ್ಟು ಹಸಿರು ಪ್ರದೇಶಗಳು ಎಷ್ಟು ಎಂಬುದನ್ನು ಅಂದಾಜು ಮಾಡುವ ಕಾರ್ಯ ವಿಧಾನ ಪ್ರಾರಂಭಿಸಬೇಕು. ಇದರಿಂದ ಹಸಿರಿನ ಕೊರತೆ ಎಷ್ಟಿದೆ ಎಂಬುದರ ಅಂದಾಜು ಸರಕಾರಕ್ಕೆ ಸಿಗುತ್ತದೆ. ಪರಿಸರ ಆಯವ್ಯಯವನ್ನು ಪ್ರಾರಂಭಿಸಿದಾಗ ಮಾತ್ರ ಪರಿಸರದ ಈ ನಷ್ಟವನ್ನು ತುಂಬಿಸಿಕೊಳ್ಳಬಹುದು ಎಂದು ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಹೇಳಿದರು.

 

ಅರಣ್ಯ ಸಂಪತ್ತು ಎಂಬುದು ನಮಗಿಂತ ಮೊದಲು ಅಸ್ತಿತ್ವದಲ್ಲಿದ್ದಂತಹ ನೈಸರ್ಗಿಕ ಸಂಪತ್ತು

ಅರಣ್ಯ ಸಂಪತ್ತು ಎಂಬುದು ನಮಗಿಂತ ಮೊದಲು ಅಸ್ತಿತ್ವದಲ್ಲಿದ್ದಂತಹ ನೈಸರ್ಗಿಕ ಸಂಪತ್ತು. ಅರಣ್ಯವು ನಮ್ಮ ಪೂರ್ವಿಕರು ಎಂಬ ಅಭಿಪ್ರಾಯ ನಮ್ಮಲ್ಲಿದೆ. ನಮ್ಮ ಪೂರ್ವಿಕರಿಗೆ ಭಕ್ತಿ ಭಾವದಿಂದ ನಮನ ಸಲ್ಲಿಸಿ ಗಿಡ ಮರಗಳನ್ನು ಪೂಜ್ಯ ಭಾವನೆಯಿಂದ ನಾವು ಕಾಣಬೇಕು. ಅರಣ್ಯವಿಲ್ಲದಿದ್ದರೆ ಮನುಷ್ಯನ ಅಸ್ತಿತ್ವವೇ ಇರುತ್ತಿರಲಿಲ್ಲ. ಅರಣ್ಯ ಸಂಪತ್ತಿಗೆ ನಾವು ಸದಾ ಋಣಿಯಾಗಿರಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳು ಹೇಳಿದರು.

 

Environmental Budget By CM Basavaraj Bommayi

Environmental Budget By CM Basavaraj Bommayi

 

2000 ವರ್ಷಗಳಲ್ಲಿ ನಾಶವಾಗುವಷ್ಟು ಅರಣ್ಯ ಸಂಪತ್ತನ್ನು ನಾವು ಇಂದು ಕೇವಲ 20 ವರ್ಷಗಳಲ್ಲಿ ನಾಶ ಮಾಡಿದ್ದೇವೆ

ಮನುಷ್ಯನ ಮೂಲ ಆರಂಭವಾಗಿದ್ದು ಅರಣ್ಯದ ಜೊತೆ. ಆದರೆ ಈಗ ನಾಗರಿಕತೆಯನ್ನು ಬೆಳೆಸಿಕೊಂಡಿದ್ದೇವೆ. ದುರದೃಷ್ಟವಶಾತ್ ಅರಣ್ಯ ನಾಶಕ್ಕೆ ಈಗ ನಾವುಗಳೇ ಎಡೆ ಮಾಡಿಕೊಟ್ಟಿದ್ದೇವೆ. ನೈಸರ್ಗಿಕ ಸಂಪತ್ತಿನ ಬಗ್ಗೆ ಕಾಡಿನ ಬಗ್ಗೆ ನಮಗೆ ಇರುವಂತಹ ಮನಸ್ಥಿತಿಯನ್ನು ನಾವುಗಳು ಬದಲಾಯಿಸಿಕೊಳ್ಳಬೇಕಿದೆ. ಅರಣ್ಯವಿಲ್ಲದೆ ಮಳೆ ಬೆಳೆ ಇಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮನುಷ್ಯನ ಅತಿಯಾಸೆಯಿಂದ ನಿಸರ್ಗ ಸಂಪತ್ತು ನಾಶವಾಗುತ್ತಿದೆ. ಸುಮಾರು 2000 ವರ್ಷಗಳಲ್ಲಿ ನಾಶವಾಗುವಷ್ಟು ಅರಣ್ಯ ಸಂಪತ್ತನ್ನು ನಾವು ಇಂದು ಕೇವಲ 20 ವರ್ಷಗಳಲ್ಲಿ ನಾಶ ಮಾಡಿದ್ದೇವೆ. ಪರಿಸರ ಹಾನಿಯ ವೇಗ ಅಷ್ಟರ ಮಟ್ಟಿಗೆ ತೀವ್ರಗೊಂಡಿದೆ. ಇದು ನಿಜಕ್ಕೂ ಭಯಾನಕವಾದ ಸಂಗತಿ ಎಂದು ವಿವರಿಸಿದರು.

 

ನಮ್ಮ ಮುಂದಿನ ಜನಾಂಗದ ಪಾಲನ್ನು ಸಹ ನಾವೇ ಬಳಸಿ ತೇಗಬಾರದು

ಮುಂದಿನ ಜನಾಂಗಕ್ಕಾಗಿ ಅರಣ್ಯ ಸಂರಕ್ಷಿಸುವ ಅಗತ್ಯತೆ ಮತ್ತು ಅನಿವಾರ್ಯತೆ ಇದೆ. ಅವಶ್ಯಕತೆಗಿಂತ ಹೆಚ್ಚು ನಿಸರ್ಗವನ್ನು ನಾಶಪಡಿಸಿದರೆ, ಭವಿಷ್ಯವನ್ನು ನಾವೇ ಕೊಳ್ಳೆ ಹೊಡೆದಂತೆ. ನಮ್ಮ ಹಿರಿಯರು ಇದನ್ನು ಇಂದಿಗೂ ಉಳಿಸಿದ್ದರಿಂದ ಈ ಅಮೂಲ್ಯ ಸಂಪತ್ತನ್ನು ನಾವು ಅನುಭವಿಸುತ್ತಿದ್ದೇವೆ. ಆದರೆ ನಮ್ಮ ಮುಂದಿನ ಜನಾಂಗದ ಪಾಲನ್ನು ಸಹ ನಾವೇ ಬಳಸಿ ತೇಗಬಾರದು ಎಂಬ ಅರಿವಿನಿಂದ ನಮ್ಮ ಇಲಾಖೆ ಕೆಲಸ ಮಾಡಬೇಕು. ಆಗ ಮಾತ್ರ ಈ ಅರಣ್ಯ ಹುತಾತ್ಮರ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದು ಬಸವರಾಜ ಬೊಮ್ಮಾಯಿಯವರು ಅಭಿಪ್ರಾಯಪಟ್ಟರು.

 

Read Also: El Salvador buys 400 Bitcoins worth $20 million|Cryptocrrency

Read Also: ಭಾರತ ಕ್ರಿಕೆಟ್ ತಂಡದ ದಕ್ಷಿಣಾ ಆಫ್ರಿಕಾ ಪ್ರವಾಸ

 

ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ನಿಯಂತ್ರಣ ಮಾಡಬೇಕು

ಅರಣ್ಯ ಸಂಪತ್ತಿನ ಸಂರಕ್ಷಣೆಯ ಸಲುವಾಗಿ ಅನೇಕರು ಹುತಾತ್ಮರಾಗಿದ್ದಾರೆ. ಸದ್ಯ ಕರ್ನಾಟಕ ರಾಜ್ಯದಲ್ಲಿ ಸುಮಾರು 43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯವು ಇದೆ. ಪ್ರಸ್ತುತ ಶೇ 21.5% ರಷ್ಟು ಅರಣ್ಯ ಕೊರತೆ ಇದೆ. ಅರಣ್ಯದಲ್ಲಿ ಹೆಚ್ಚುತ್ತಿರುವ ಕಾಡುಗಳ್ಳರನ್ನು ನಿಯಂತ್ರಿಸಿ, ಕಾಡು ಉಳಿಸಿ ಬೆಳೆಸುವ ಕ್ರಮಗಳನ್ನು ಇಂದು ಕೈಗೊಳ್ಳಬೇಕಾಗಿದೆ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ನಿಯಂತ್ರಣ ಮಾಡಬೇಕು. ಹಲವಾರು ಕಡೆ ಅರಣ್ಯ ಗಡಿಗಳಲ್ಲಿ ನಾಗರಿಕರೂ ಸಹ ಪ್ರಾಣ ತೆತ್ತ ಉದಾಹರಣೆಗಳಿವೆ. ಅವರ ಪ್ರಾಣವನ್ನು ಸಹ ಉಳಿಸುವುದೂ ಮುಖ್ಯವಾಗಿದೆ. ಈ ಸವಾಲುಗಳನ್ನು ಸಮರ್ಥವಾಗಿ ನಾವು ಈಗ ಎದುರಿಸಬೇಕು. ಇಲಾಖೆಯ ಕಾರ್ಯಚಟುವಟಿಕೆಗಳು ಆದಷ್ಟು ವಿಸ್ತರಿಸಲಿ. ದಕ್ಷತೆಯಿಂದ ಅರಣ್ಯವನ್ನು ಉಳಿಸುವ ಕೆಲಸವಾಗಲಿ. ಕರ್ತವ್ಯದಲ್ಲಿರುವ ಅರಣ್ಯ ರಕ್ಷಕರ ಪ್ರಾಣ ಸಂರಕ್ಷಣೆಗೆ ಅಗತ್ಯ ಪರಿಕರಗಳನ್ನು ಒದಗಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

 

Source link

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio