Kiccha Sudeep : ಸರ್ಕಾರಿ ಶಾಲೆಯನ್ನು ದತ್ತು ಪಡೆದ ಕಿಚ್ಚ ಸುದೀಪ್

ಬೆಂಗಳೂರು : ಸಿನಿಮಾದಲ್ಲಿ ಸದಾ ರೋರಿಸುತ್ತ ನೆರೆದ ಚಿತ್ರರಸಿಕರಿಗೆ ಮನರಂಜನೆಯ ರಸದೌತಣವನ್ನೇ ಉಣ ಬಡಿಸುವ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ನಟನೆಯಲ್ಲಿ ಮಾತ್ರವಲ್ಲದೆ ಸಮಾಜಸೇವೆಯಲ್ಲೂ ಸದಾ ಮುಂದು. ಸದಾ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ತೆರೆಮರೆಯಲ್ಲಿ ಅನೇಕ ಸಮಾಜಮುಖಿ ಕಾರ್ಯದಲ್ಲೂ ಸದಾ  ತೊಡಗಿಸಿಕೊಂಡಿರುತ್ತಾರೆ.  ತಮ್ಮ ಚಾರಿಟೇಬಲ್ ಸೊಸೈಟಿ ಯ ಮೂಲಕ ಹಲವು ಬಡಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಕೆಲವು ಸರಕಾರಿ ಶಾಲೆಗಳನ್ನು ಈಗಾಗಲೇ ಇವರು ದತ್ತು ಪಡೆದಿದ್ದಾರೆ.

 

Kiccha Sudeep

ಇತ್ತೀಚಿಗೆ ಶಿವಮೊಗ್ಗದಲ್ಲಿರುವ ಸರ್ಕಾರಿ ಶಾಲೆಯೊಂದನ್ನು ಕಿಚ್ಚ ಸುದೀಪ್ ಅವರು ದತ್ತು ಪಡೆದಿದ್ದಾರೆ. ಶಿವಮೊಗ್ಗದ ಬಿ.ಎಚ್ ರಸ್ತೆಯಲ್ಲಿರುವ ಸರ್ಕಾರಿ ಕನ್ನಡ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆಯನ್ನು ಸುದೀಪ್ ರವರ ನೇತೃತ್ವದ Kiccha Sudeep Charitable society ದತ್ತು ಪಡೆದುಕೊಂಡಿದೆ. ಈ ಶಾಲೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ಈ ಶಾಲೆಯನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವುದಾಗಿ ಮನವಿಯನ್ನು ಸಲ್ಲಿಸಿದೆ. 

 

KGF King ರಾಕಿಂಗ್ ಸ್ಟಾರ್ ಯಶ್ ನಿಜವಾಗಲೂ ಕಿಂಗಾ? ನಿಮಗೆ ಗೊತ್ತಿರದ ಒಂದು ಸತ್ಯ ಸಂಗತಿ

ಸದಾ ಸದ್ದಿಲ್ಲದೇ ಸಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಲೊಕ್ಡೌನ್ ಆದ ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿನ ನಾಲ್ಕು ಸರ್ಕಾರಿ ಶಾಲೆಗಳನ್ನು ಚಾರಿಟೇಬಲ್ ಸೊಸೈಟಿ ದತ್ತು ಪಡೆದುಕೊಂಡಿತ್ತು. ಶಾಲೆಯ ಕಟ್ಟಡದ ನಿರ್ಮಾಣ ಕಾರ್ಯ ಮತ್ತು ಶೌಚಾಲಯದ ನಿರ್ಮಾಣವನ್ನೂ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮಾಡಿತ್ತು. ಇನ್ನೂ ಹಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಯೋಜನೆಯಿದೆ ಎಂದು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಹೇಳಿದೆ.

Just for 99 Rs Earbuds 

ಸದ್ಯ ಕಿಚ್ಚ ಸುದೀಪ್ ರವರು ವಿಕ್ರಾಂತ್ ರೋಣ, ಕೋಟಿಗೊಬ್ಬ 3 ಮತ್ತು ಬಿಗ್ ಬಾಸ್ ಫಿನಾಲೆಯಲ್ಲಿ ಬ್ಯುಸಿಯಾಗಿದ್ದು ಕೋಟಿಗೊಬ್ಬ 3 ಬಿಡುಗಡೆಗೆ ಸಿದ್ಧವಾಗಿದೆ. ಅನೂಪ್ ಭಂಡಾರಿ ರ ನಿರ್ದೇಶನದ ವಿಕ್ರಾಂತ್ ರೋಣ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

 

1 thought on “Kiccha Sudeep : ಸರ್ಕಾರಿ ಶಾಲೆಯನ್ನು ದತ್ತು ಪಡೆದ ಕಿಚ್ಚ ಸುದೀಪ್”

Leave a Comment