ಭಾರತಕ್ಕೆ ಇನ್ನೊಂದು ಪದಕ ಖಚಿತ ಪಡಿಸಿದ ಪಿವಿ ಸಿಂಧೂ: ಸೆಮಿಫೈನಲ್ ಗೆ ಪ್ರವೇಶ ಮಾಡಿದ ಭಾರತದ ಬ್ಯಾಡ್ಮಿಂಟನ್‌ ತಾರೆ: Tokyo Olympics : PV Sindhu: Badminton

ಟೋಕಿಯೋ: ತನ್ನ ಗೆಲುವಿನ ಲಯವನ್ನು ಮುಂದುವರಿಸಿರುವಂತಹ ಭಾರತದ ಬ್ಯಾಡ್ಮಿಂಟನ್‌ ತಾರೆ ಸ್ಟಾರ್‌ ಆಟಗಾರ್ತಿ ಪಿವಿ ಸಿಂಧೂ ಟೋಕಿಯೋ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ನಲ್ಲಿ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್ಸ್‌ಗೆ ಪ್ರವೇಶ ಮಾಡುವ ಮೂಲಕ ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ. ಇದರಿಂದ ಭಾರತದ ನಾರೀಮಣಿಗಳು ಒಲಿಂಪಿಕ್ಸ್ ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿವಲ್ಲಿ ಮಹತ್ತರದ ಪಾತ್ರವನ್ನು ವಹಿಸಿದ್ದಾರೆ.

Tokyo Olympics: PV Sindhu beats Japanese Akane Yamaguchi in straight sets to qualify for the semi finale.

 

ನಿನ್ನೆ (ಶುಕ್ರವಾರ) ನಡೆದಿದ್ದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಕಳೆದ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧೂ, 21 – 13 ಹಾಗೂ 22-20 ಅಂತರದ ನೇರ ಗೇಮ್‌ಗಳಲ್ಲಿ ಜಪಾನ್‌ನ ಅಕಾನೆ ಯಾಮಗೂಚಿಯಾ ವಿರುದ್ಧ ಗೆದ್ದು ಅಂತಿಮ ನಾಲ್ಕರ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

 

ಮಹತ್ತರ 56 ನಿಮಿಷಗಳ ಕಾಲ ನಡೆದಿದ್ದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ೬ನೇ ಶ್ರೇಯಾಂಕಿತೆ ಸಿಂಧೂ ಹಾಗೂ ನಾಲ್ಕನೇ ಶ್ರೇಯಾಂಕಿತೆ ಅಕಾನೆ ಕಠಿಣ ಪೈಪೋಟಿ ನಡೆಸುವ ಮೂಲಕ ನೆರೆದಿದ್ದ ವೀಕ್ಷಕರಿಗೆ ಭರ್ಜರಿ ರಸದೌತಣ ಉಣ ಬಡಿಸಿದ್ದರು. ಆದರೆ, ಮೊದಲನೇ ಗೇಮ್‌ ಆರಂಭದಲ್ಲಿ ಸ್ವಲ್ಪ ಎಡವಿದ್ದು 26ರ ಪ್ರಾಯದ ಸಿಂಧೂ, ಬಹುಬೇಗ ಕಮ್‌ಬ್ಯಾಕ್‌ ಮಾಡಿಕೊಂಡರು. ಆ ಮೂಲಕ ತನ್ನ ಆರಂಭಿಕ ಗೇಮ್‌ ಮೇಲೆ ನಿಯಂತ್ರಣ ಸಾಧಿಸಿ, 21-13ರ ಅಂತರದಲ್ಲಿ ರೋಚಕ ಜಯ ಗಳಿಸಿದರು.

 

 

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio