ಗುಡಿಸಿಲಿನಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೊಂದು ಸೂರು ಕಟ್ಟಿಕೊಟ್ಟು ಮಾದರಿಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು

ಕಡಬ: ಕಡಬ ತಾಲೂಕಿನ ಕುಂತೂರಿನ ಗ್ರಾಮದಲ್ಲೊಂದು ಬಡತನದ ಬೇಗೆಯಲ್ಲಿ ಮುರುಕಲು ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದ ಅರುಣ್ ಕುಮಾರ್ ದಂಪತಿಗಳ ಕುಟುಂಬಕ್ಕೊಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಆಸರೆಯಾಗಿ ನಿಂತು ತಮ್ಮ ಸ್ವ ಇಚ್ಛೆಯಿಂದ ಸ್ವ ಖರ್ಚಿನಿಂದ ಒಂದು ಸದೃಢ ಮನೆಯನ್ನು ನಿರ್ಮಾಣ ಮಾಡಿ ಸಾರ್ಥಕ್ಯ ಮೆರೆದಿದ್ದಾರೆ.

ಸಂಘದ ಕೆಲವು ಕಾರ್ಯಕರ್ತರು ಹೀಗೆ ದಾರಿಯಲ್ಲಿ ಒಂದು ದಿನ ಹೋಗುತ್ತಿರಬೇಕಾದರೆ ಬಹಳ ಶೋಚನೀಯ ಪರಿಸ್ಥಿತಿಯಲ್ಲಿ ಮುರಿದು ಬೀಳುವ ಹಂತದಲ್ಲಿದ್ದ ಒಂದು ಗುಡಿಸಲನ್ನು ಕಾಣುತ್ತಾರೆ. ಆ ಗುಡಿಸಲಿನ ಹತ್ತಿರ ಹೋದ ಕಾರ್ಯಕರ್ತರಿಗೆ ಆ ಗುಡಿಸಲಿನಲ್ಲಿ ಒಂದು ಬಡ ಕುಟುಂಬ ವಾಸವಿರುವುದು ಗಮನಕ್ಕೆ ಬರುತ್ತದೆ.

 

ಆ ಗುಡಿಸಲಿನಲ್ಲಿ ತನ್ನ ಇಬ್ಬರು ಸಣ್ಣ ಮಕ್ಕಳ ಜೊತೆ ಅರುಣ್ ಕುಮಾರ್ ಮತ್ತು ಆತನ ಪತ್ನಿ ಕಮಲಾ ವಾಸಿಸುತ್ತಿದ್ದರು. ಜೊತೆಗೆ ನಾಲ್ಕು ನಾಯಿಗಳು ಇತ್ತು. ಇದನ್ನು ಕಂಡ ಕಾರ್ಯಕರ್ತರ ಮನ ಕರಗಿ ಇವರ ಜೊತೆ ಮಾತನಾಡಿ ಇವರಿಗೊಂದು ವಾಸಿಸಲು ಯೋಗ್ಯವಾದ ಮನೆಯನ್ನು ನಿರ್ಮಾಣ ಮಾಡಿಕೊಡಬೇಕೆಂಬ ನಿರ್ಧಾರಕ್ಕೆ ಬರುತ್ತಾರೆ. ಅದರಂತೆ ಸೇವಾಭಾರತಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಡಬ ಇವರ ನೇತೃತ್ವದಲ್ಲಿ ಊರಿನವರ ಸಹಾಯಾರ್ಥದೊಂದಿಗೆ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮನೆ ನಿರ್ಮಾಣ ಕಾರ್ಯ ಅರಂಗವಾಗುತ್ತದೆ. ಮನೆ ಕಟ್ಟುವ ಎಲ್ಲ ಕೆಲಸಗಳನ್ನು ಸಂಘದ ಕಾರ್ಯಕರ್ತರೇ ಸೇರಿಕೊಂಡು ಮಾಡಿ ಪ್ರಸ್ತುತ ಮನೆ ಕೆಲಸ ಸಂಪನ್ನಗೊಂಡಿದ್ದು ಮನೆಯ ಕೀಲಿ ಕೈ ಯನ್ನು ಮನೆಯ ಯಜಮಾನರಿಗೆ ಸಂಘಟನೆಯ ಹಿರಿಯ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್ ರವರು ಹಸ್ತಾಂತರಿಸಿದ್ದರೆ. RSS build a house to a family who were living in hut.

 

 

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ