ಡೊಲೊ 650 ಶಶಿರೇಖಾ ರ ಐಷಾರಾಮಿ ಮನೆ ಹೇಗಿದೆ ಗೊತ್ತಾ ?

ಇತ್ತೀಚೆಗೆ ಬಹಳಷ್ಟು ಟ್ರೋಲಿಗೆ ಗುರಿಯಾದ Shashirekha ತಮ್ಮ ಮನದಾಳದ ಮಾತು ಮೊದಲ ಬಾರಿಗೆ ಮಾಧ್ಯಮದ ಮುಂದೆ ಇಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಮಾಧ್ಯಮದ ಮುಂದೆ ಶಶಿರೇಖಾ ರವರು ಕೊರೊನಕ್ಕೆ Dolo 650 ಮಾತ್ರೆ ಬಿಸಿ ರಾಗಿ ಮುದ್ದೆ ಮತ್ತೇನಿದೆ ಸರ್ ಎಂದು ತಮ್ಮ ಸಂಕಷ್ಟವನ್ನು ತೋಡಿಕೊಂಡ ಹೇಳಿಕೆ ಎಲ್ಲೆಡೆ ಭಾರಿ ವೈರಲ್ ಅಗಿದ್ದು ಎಲ್ಲರಿಗೂ ಗೊತ್ತೇ ಇದೆ. ನಂತರ ಅವರ ಈ ಹೇಳಿಕೆ ಸಾಕಷ್ಟು Trollಗೂ ಆಹಾರವಾಯಿತು. ಇಂದರಿಂದ ರಾತ್ರೋ ರಾತ್ರಿ ಶಶಿರೇಖಾ ಫೇಮಸ್ ಆಗಿದ್ದಂತೂ ನಿಜ.

 

 

ಇವರ ಈ ಹೇಳಿಕೆ ಕೇವಲ ಟ್ರೊಲ್ ಮಾತ್ರವಲ್ಲದೆ DJ Remix ಸಹ ಆದವು. ಹಲವು ಮಂದಿಗೆ ಇವರ ಎಕ್ಸ್ ಪ್ರೆಷನ್ ಕಾಮಿಡಿ ಗೆ ವಿಷಯವಾದರೆ ಇನ್ನು ಹಲವರಿಗೆ ಇವರ ಮಾತಿನಲ್ಲಿದ್ದ ತೂಕ ಅರ್ಥವಾಗಿತ್ತು. ಇವರ ಹೇಳ ಹೋರಟ ಮಾತಿನ ಒಳಾರ್ಥ ಬಡವರ ಸಂಕಷ್ಟ ಯಾರು ಅರಿಯಬಲ್ಲರು ಎಂಬುದೆಂದು ಕೆಲವು ಹೇಳಿದ್ದಾರೆ. ಏನೇ ಆದರೂ ಇವರ ಈ ಮಾತುಗಳಿಂದ ಮತ್ತು ಟ್ರೋಳ್ಳಿಗರಿಂದಾಗಿ ಫೇಮಸ್ ಅಂತೂ ಆಗಿದ್ದು ನಿಜ. ಅದರ ಈ ಪ್ರಸಿದ್ದಿಯಿಂದ ಇವರಿಗೇನು ಸಿಕ್ತು ಎಂಬುದು ಪ್ರಶ್ನೆ.

 

ಟ್ರೋಲಿಗರ ಕಣ್ಣಿಗೆ ಗುರಿಯಾದರೆ ಕೆಲವರಿಗೆ ಸ್ಟಾರ್ ಡಮ್ ಪಟ್ಟ ಸಿಕ್ಕಿದರೆ ಇನ್ನು ಕೆಲವರಿಗೆ ಅಪಖ್ಯಾತಿಯೇ ಸಿಗುವುದು. ಶಶಿರೇಖಾರ ಪಾಡು ಅದೇ ಆಗಿತ್ತು. ಶಶಿರೇಖಾರ ಮಾತು ಮತ್ತು ಮುಖ ಇಂಟರ್ನೆಟಲ್ಲಿ ಹವಾ ಮಾಡಿತಾದರೂ ಅದರಿಂದ ಇವರಿಗೆ ತೊಂದರೆ ಇನ್ನಷ್ಟು ಹೆಚ್ಚಾಯಿತು. ಹೋದಲ್ಲಿ ಬಂದಲ್ಲಿ ಇವರನ್ನು ವ್ಯಂಗ್ಯ ಮಾಡುವವರೇ ಜಾಸ್ತಿಯಾಗಿದ್ದರೆ ಎಂದು ಶಶಿರೇಖಾ ಮನದಾಳದ ಬೇಸರವನ್ನು ಒಂದು ವಿಡಿಯೋದಲ್ಲಿ ಬಿಚ್ಚಿಡುತ್ತಾರೆ. ಇದಕ್ಕೆಲ್ಲ ಕಾರಣ ಟ್ರೋಲಿಗರು ಎಂದು ಟ್ರೋಲಿಗರನ್ನು ಕ್ಲಾಸ್ ತೆಗೆದುಕೊಳ್ಳುತ್ತಾರೆ.

 

 

ಟ್ರೋಲಿಗರಿಂದ ನಾನು ಫೇಮಸ್ ಆಗಿ ನಾನು ದೊಡ್ಡ ಅರಮನೆಯನ್ನೇ ಕಟ್ಟಿಕೊಂಡಿದ್ದೇನೆ. ಐಷಾರಾಮಿ ಜೀವನ ನಡೆಸುತ್ತಿದ್ದೇನೆ. ಎಂದು ತನ್ನ ಮನೆಯನ್ನು ತೋರಿಸುತ್ತಾ ಟ್ರೋಲಿಗರ ಮೇಲೆ ಬೇಸರ ವ್ಯಕ್ತ ಪಡಿಸುತ್ತಾರೆ. ಮತ್ತು ದಯವಿಟ್ಟು ಇನ್ನು ನನ್ನಂತ ಬಡವರನ್ನು ಟ್ರೊಲ್ ಮಾಡಿ ನಮ್ಮನ್ನು ಇನ್ನು ಕಷ್ಟಕ್ಕೆ ದೂಡಬೇಡಿ. ಸಾದ್ಯವಾದರೆ ನೀವು ಟ್ರೊಲ್ ಮಾಡಿ ನಾಲ್ಕು ಜನರಿಗೆ ಸಹಾಯ ಮಾಡುವ ಪ್ರಯತ್ನ ಮಾಡಿ. ಒಳ್ಳೆಯದಾಗುತ್ತದೆ ಎಂದು ಬುದ್ದಿ ಹೇಳುತ್ತಾರೆ.

 

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ