ಇತ್ತೀಚಿಗೆ ಕಿಡಿಗೇಡಿಯೊಬ್ಬ ತುಳುನಾಡಿನ ಧ್ವಜದ ಚಿಹ್ನೆಯನ್ನು ಒಂದು ಚಪ್ಪಲಿಗೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ತುಳು ಸಂಸ್ಕ್ರುತಿ ಮತ್ತು ತುಳುನಾಡಿನ ಜನರ ಭಾವನೆಗಳಿಗೆ ಧಕ್ಕೆ ಬರುವಂತೆ ಮಾಡಿದ್ದ. ಇದರಿಂದ ಇಡೀ ತುಳುನಾಡಿನ ಜನತೆ ತೀವ್ರ ಆಕ್ರೋಶಗೊಂಡಿದ್ದರು. ಅಲ್ಲದೆ ಪರವೂರಿನಲ್ಲಿರುವ ತುಳುನಾಡಿನ ಜನರು ಇದಕ್ಕೆ ಬೇಸರ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದರು ಮತ್ತು ಈ ವಿಕೃತವೆಸಗಿದವನನ್ನು ಆದಷ್ಟು ಬೇಗ ಬಂಧಿಸಲು ಒತ್ತಾಯಿಸಲಾಗಿತ್ತು.
ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶಶಿಧರ ಹೆಗ್ಡೆಯವರು ಇದರ ಬಗ್ಗೆ ಬರ್ಕೆ ಠಾಣೆಯಲ್ಲಿ ಕೇಸು ದಾಖಲಿಸಿದ್ದು ತಕ್ಷಣ ಎಚ್ಛೆತ್ತ ಪೊಲೀಸರು ಈ ಕಿಡಿಗೇಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಯ ಹೆಸರು ಸೂರ್ಯ ಏನ್ ಕೆ ಎಂಬುದಾಗಿದ್ದು ಬೆಂಗಳೂರಿನ ಕಾಲೇಜಿನಲ್ಲಿ ಇಂಜೆನಿಯರ್ ಪದವಿ ಓದುತಿದ್ದ. ಈತ ಈ ತಾರಾ ಪೋಸ್ಟ್ ಮಾಡಿದಲ್ಲದೆ ವಿಕೃತವಾಗಿ ಕಾಮೆಂಟ್ ಸಹ ಮಾಡಿದ್ದ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ತುಳು ಭಾಷೆಯನ್ನು ಸಂವಿಧಾನದ ೮ ನೇ ಪರಿಚ್ಛೇಧಕ್ಕೆ ಸೇರಿಸುವ ನಿಟ್ಟಿನಲ್ಲಿ #TuluofficiealinKA_KL ಎಂದು ಟ್ವಿಟರ್ ನಲ್ಲಿ ಹ್ಯಾಷ್ ಟ್ಯಾಗ್ ಅಭಿಯಾನವು ನಡೆದಿತ್ತು. ಈ ಅಭಿಯಾನಕ್ಕೆ ಭಾರಿ ಸ್ಪಂದನೆ ದೊರಕಿದ್ದು ನಾಡಿನ ಗಣ್ಯಾತಿ ಗಣ್ಯರೂ ಟ್ವೀಟ್ ಮಾಡುವ ಮೂಲಕ ತಮ್ಮ ಬೆಂಬಲ ಸೂಚಿಸಿದ್ದರು. ಸುಮಾರು ೩ ಲಕ್ಷಕ್ಕೂ ಅಧಿಕ ಟ್ವೀಟ್ ಗಳು ಹರಿದು ಬಂದವು. ಇದರ ನಡುವೆ ನಮ್ಮ ತುಳುನಾಡಿನ ಜನರ ಭಾವನೆಗಳಿಗೆ ಘಾಸಿಗೊಳಿಸುವ ಉದ್ದೇಶದಿಂದ ಈ ವಿಕೃತ ಮನೋಭಾವದ ಸೂರ್ಯ ಈ ರೀತಿ ದುಷ್ಕೃತ್ಯ ಮೆರೆದಿದ್ದಾನೆ.