ಎರಡು ದಿನಗಳ ಹಿಂದೆ ಪುಟ್ಬಾಲ್ ಜಗತ್ತಿನ ದೈತ್ಯ ಕ್ರಿಸ್ಟಿಯಾನೊ ರೊನಾಲ್ಡೊ ತನ್ನ ಹಂಗೇರಿ-ಪೋರ್ಚುಗಲ್ ಇ ಗುಂಪಿನ ಪಂದ್ಯದ ಕುರಿತಾದ ಒಂದು ಪತ್ರಿಕಾಗೋಷ್ಠಿಯಲ್ಲಿ ತನಗೆ ನೀಡಲಾಗಿದ್ದ ಕೋಕಾ ಕೋಲಾ ಸಂಸ್ಥೆಯ ತಂಪು ಪಾನೀಯವನ್ನು ದೂರ ಸರಿಸಿ ಕೇವಲ ನೀರಿನ ಬಾಟಲ್ ನ್ನು ಹತ್ತಿರ ಎಳೆದುಕೊಳ್ಳುತ್ತಾರೆ. ಈ ಬೆಳವಣಿಗೆಯಿಂದ ಕೋಕಾ ಕೋಲಾ ಸಂಸ್ಥೆಯ ಷೇರು ದರ ಸಾಕಷ್ಟು ಇಳಿಕೆ ಕಂಡು ಕೋಕಾ ಕೋಲಾ ಮಾರುಕಟ್ಟೆಯಲ್ಲಿ ಬಹಳಷ್ಟು ಕುಸಿತಕಂಡು ನಷ್ಟವನ್ನು ಅನುಭವಿಸಿತ್ತು ಎಂದು ನಮಗೆಲ್ಲರೂ ಗೊತ್ತು. ಇದರಿಂದ ಕೋಕಾ ಕೋಲಾ ಅಂದಾಜು ಎಷ್ಟು ನಷ್ಟ ಅನುಭವಿಸಿತ್ತು ಮತ್ತು ಈ ಎಲ್ಲ ವಿಚಾರಕ್ಕೆ ಕರಣ ಏನು ಮತ್ತು ಇದಕ್ಕೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ರತಿಕ್ರಿಯೆ ಏನು ಎಂಬುದನ್ನು ತಿಳಿಯಲು ಮುಂದೆ ಓದಿ.
ಅಂದಾಜು 29,000 ಕೋಟಿ ರೂ ನಷ್ಟ ಅನುಭವಿದ ಕೋಕಾ ಕೋಲಾ ಸಂಸ್ಥೆ.
ಕ್ರಿಸ್ಟಿಯಾನೊ ರೊನಾಲ್ಡೊ ತನ್ನ ಮುಂದಿನ ಫುಟ್ಬಾಲ್ ಆಟದ ಕುರಿತಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ತನಗೆ ಇಟ್ಟಿದ್ದಂತಹ ಕೋಕಾ ಕೋಲಾ ಸಂಸ್ಥೆಯ ತಂಪು ಪಾನೀಯವನ್ನು ಕುಡಿಯದೆ ಅದನ್ನು ಬದಿಗೆ ಸರಿಸಿ ನೀರನ್ನು ಕೈಗೆತ್ತಿಕೊಂಡು ”ನೀರನ್ನು ಕುಡಿಯಿರಿ” ಎಂದು ಹೇಳುತ್ತಾ ನೀರಿನ ಬಾಟಲಿಯನ್ನು ಕೈಗೆತ್ತಿಕೊಳ್ಳುತ್ತಾರೆ. ಇದರಿಂದ ಕೋಕಾ ಕೋಲಾ ಸಂಸ್ಥೆಯ ಷೇರು ಮಾರುಕಟ್ಟೆಯ ಪ್ರತಿ ಷೇರಿನ ದರ 1.6% ರಷ್ಟು ಕುಸಿತ ಕಾಣುತ್ತದೆ. 56.10 ಅಮೇರಿಕನ್ ಡಾಲರ್ ಇದ್ದಂತಹ ಷೇರು ದರ 55.22 ಅಮೇರಿಕನ್ ಡಾಲರ್ ಗೆ ಕುಸಿಯುತ್ತದೆ. ಇದರಿಂದ ಸಂಸ್ಥೆಯ ಮಾರುಕಟ್ಟೆ ಮೌಲ್ಯ 242 ಬಿಲಿಯನ್ ಡಾಲರ್ ನಿಂದ 238 ಬಿಲಿಯನ್ ಡಾಲರ್ ಗೆ ಕುಸಿಯುತ್ತದೆ. ಅಂದರೆ ಸರಿ ಸುಮಾರು 29,65,76,400 ರೂ ಗಳಷ್ಟು ನಷ್ಟವನ್ನು ಕೋಕಾ ಕೋಲಾ ಸಂಸ್ಥೆ ಅನುಭಸುತ್ತದೆ ಎಂದು ಗೂಗಲ್ ಮೂಲಗಳ ಪ್ರಕಾರ ತಿಳಿದು ಬರುತ್ತದೆ.
ಕೋಕಾ ಕೋಲಾ ಸಂಸ್ಥೆಯ ಮೌಲ್ಯ ಕುಸಿಯಲು ನಿಜವಾದ ಕಾರಣ ಏನು?
ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿ ಬಳಗ ಮತ್ತು ಬೆಂಬಲಿಗರನ್ನು ಹೊಂದಿರುವ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಈ ರೀತಿ ಸೂಚ್ಯವಾಗಿ ಸಂದೇಶ ಸಾರಿರುವುದರಿಂದ ಅವರ ಅಭಿಮಾನಿ ಬಳಗವು ಸಹ ಕಲರ್ ನೀರು ಸೇವಿಸುವ ಬದಲು ನೀವು ಬಳಸಿ ಬಾಯಾರಿಕೆಗೆ ಎಂದು ಟ್ವೀಟ್ ಮಾಡಲು ಪ್ರಾರಂಭಿಸುತ್ತಾರೆ ಮತ್ತು ಟ್ವೀಟ್ಗಳ ಮಹಾ ಪೂರವೇ ಹರಿಯುತ್ತದೆ. ಈ ಎಲ್ಲ ಬೆಳವಣಿಗೆಯಿಂದ ಕೋಕಾ ಕೋಲಾ ದ ಷೇರು ದರ ಇಳಿಮುಖ ಕಾಣುತ್ತದೆ. ಇದರಿಂದ ಸಂಸ್ಥೆಗೆ ಬಹಳಷ್ಟು ನಷ್ಟವಾಗುತ್ತದೆ.
ಕ್ರಿಸ್ಟಿಯಾನೊ ರೊನಾಲ್ಡೊ ಕೋಕಾ ಕೋಲಾ ಬಾಟಲ್ ನ್ನು ಬದಿಗೆ ಸರಿಸಲು ಕಾರಣ ಏನು ?
ಕ್ರಿಸ್ಟಿಯಾನೊ ರೊನಾಲ್ಡೊ ಕೋಕಾ ಕೋಲಾ ಬಾಟಲನ್ನು ಬದಿಗೆ ಸರಿಸಿ ನೀರಿನ ಬಾಟಲಿಯನ್ನು ಕೈಗೆತ್ತಿಕೊಂಡು ”ನೀರನ್ನು ಕುಡಿಯಿರಿ” ಎಂದು ಪೋರ್ಚುಗಲ್ ಭಾಷೆಯಲ್ಲಿ ಹೇಳುತ್ತಾ ಬಾಯಾರಿಕೆಯಾದಾಗ ಯಾವುದೇ ಕಾರ್ಬೊಹೈಡ್ರಟೆಡ್ ಕಲರ್ ನೀರನ್ನು ಸೇವಿಯಾದ ಶುದ್ಧವಾದ ನೀರನ್ನು ಸೇವಿಸಿದೆ ಸೂಚ್ಯವಾಗಿ ಸಂದೇಶ ಕೊಡುತ್ತಾರೆ ತನ್ನ ಅಭಿಮಾನಿಗಳಿಗೆ. ಕೋಕಾ ಕೋಲಾ ಬಾಟಲನ್ನು ಬಾಡಿಗೆ ಸರಿಸಿದ ನಿರ್ಧಿಷ್ಟ ಕಾರಣ ಎಲ್ಲಿಯೂ ಉಲ್ಲೇಖವಾಗಿರುವುದಿಲ್ಲ. ಹಾಗೇನೇ ಕ್ರಿಸ್ಟಿಯಾನೊ ರೊನಾಲ್ಡೊ ಸಹ ಇದರ ಬಗ್ಗೆ ಯಾವುದೇ ಹೇಳಿಕೆ ಕೊಟ್ಟಿಲ್ಲ.
ಈ ಘಟನೆಗೆ ಕೋಕಾ ಕೋಲಾ ಸಂಸ್ಥೆಯ ಪ್ರತಿಕ್ರಿಯೆ ಏನು ?
ಕೋಕಾ ಕೋಲಾ ಸಂಸ್ಥೆಯು ಪುರಾತನವಾದ ಮತ್ತು ಜಗತ್ತಿನ ದೊಡ್ಡ ಪಾನೀಯ ಸಂಸ್ಥೆಗಳಲ್ಲಿ ಒಂದು. ಯುರೋ ಕಪ್ ಫುಟ್ಬಾಲ್ ಪಂದ್ಯದ ಪ್ರಯೋಜಕತ್ವದಲ್ಲಿ ಕೋಕಾ ಕೋಲಾ ಸಂಸ್ಥೆಯು ಒಂದಾಗಿದೆ. ಕ್ರಿಶ್ಚಿಯಾನೋ ರೊನಾಲ್ಡೊ ರ ಈ ಪಾನೀಯ ಘಟನೆಯಿಂದ ಕೋಲಾ ಸಂಸ್ಥೆ ತುಂಬಾ ನಷ್ಟ ಅನುಭವಿಸಿದ್ದು ಇದಕ್ಕೆ ಕೋಲಾ ಸಂಸ್ಥೆ ತನ್ನ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದು, “ಪ್ರತಿಯೊಬ್ಬರೂ ತಮ್ಮ ಪಾನೀಯದ ಆದ್ಯತೆಗಳಿಗೆ ಅರ್ಹರಾಗಿದ್ದಾರೆ. ಪ್ರತಿಯೊಬ್ಬರೂ ತನ್ನದೇ ಆದ ಬೇರೆ ಬೇರೆ ರೀತಿಯ ಅಭಿರುಚಿಗಳನ್ನು ಮತ್ತು ಅಗತ್ಯಗಳನ್ನು ಹೊಂದಿರುತ್ತಾರೆ ” ಎಂದು ಟ್ವಿಟ್ ಮಾಡುತ್ತದೆ.
1 thought on “ಕ್ರಿಸ್ಟಿಯಾನೊ ರೊನಾಲ್ಡೊರ ಈ ಒಂದು ಘಟನೆಯಿಂದ ಕೋಕಾ ಕೋಲಾ ಸಂಸ್ಥೆ ನಷ್ಟ ಅನುಭವಿಸಿದ್ದು ಎಷ್ಟು ಗೊತ್ತಾ ?”