ಕನ್ನಡಿ ಬಾಗಿಲನ್ನು ದೂಡಿ ಒಳಹೋಗಿ ಅಲ್ಲಿದ್ದ ನಾಲ್ಕು ಹುಡುಗಿಯರ ಪೈಕಿ ಒಬ್ಬಳಲ್ಲಿ ಹೇಳಿದೆ !!


ಹೊಸ ವಿಷಯ – ಲಘು ಬರಹ 

ಹೊಸ ವಿಷಯ ಏನಾದರೂ ಇದ್ದರೆ ಹಂಚಿಕೊಳ್ಳುವುದು ಮನುಷ್ಯ ಸಹಜ ಗುಣ. ಈಗ ಅಂತಹ ಹೊಸ ವಿಷಯ ಏನೆಂದು ಕೊನೆಗೆ ಹೇಳುತ್ತೇನೆ. ಅದಕ್ಕೆ ಮೊದಲು ಒಂದು ವಿಷಯ. ಒಂದು ದಿನ ನಾನು ಒಂದು ಆಫೀಸಿಗೆ ಹೋದಾಗ ಅಲ್ಲಿ ಹೊರ ಜಗಲಿಯಲ್ಲಿರಿಸಿದ್ದ ಚಪ್ಪಲಿಗಳ ಪೈಕಿ ಒಂದು ಚಪ್ಪಲಿ , ಕೆಳಗೆ ಸ್ವಲ್ಪ ತಗ್ಗಿನಲ್ಲಿದ್ದ ಅಂಗಳಕ್ಕೆ ಬಿದ್ದಿತ್ತು. ಕನ್ನಡಿ ಬಾಗಿಲನ್ನು ದೂಡಿ ನಾನು ಒಳಹೋಗಿ ಅಲ್ಲಿದ್ದ ನಾಲ್ಕು ಹುಡುಗಿಯರ ಪೈಕಿ ಒಬ್ಬಳಲ್ಲಿ ಹೇಳಿದೆ.

ನಿನ್ನ ಚಪ್ಪಲಿ ಕೆಳಕ್ಕೆ ಬಿದ್ದಿದೆ ಅಮ್ಮ.

ಅವಳು ಹೋಗಿ ಅದನ್ನು ಹೆಕ್ಕಿ ಸರಿಯಾಗಿರಿಸಿ ಬಂದಳು.

ಈಗಿನ ಮ್ಯಾಚಿಂಗ್ ಮನೋಭಾವದ ಪರಿಣಾಮ ,  ನನಗೆ ಆಕೆಯದ್ದೇ ಚಪ್ಪಲಿ ಎಂಬುದು ಸುಲಭವಾಗಿ ತಿಳಿದಿತ್ತು , ಉಡುಪಿನ ಬಣ್ಣದಿಂದ.

ಈಗ ಮ್ಯಾಚಿಂಗ್ ಎಲ್ಲಿಯವರೆಗೆ ಎಂದರೆ ಮಾಸ್ಕ್ ಕೂಡ ಮ್ಯಾಚಿಂಗ್ ! ಕುಟುಂಬದವರೆಲ್ಲ ಒಂದೇ ಕಲರ್ ಎಂಬ ಮಾಸ್ ಮ್ಯಾಚಿಂಗ್ ಸಂಗತಿ ಬಂದೂ ತುಂಬಾ ಸಮಯ ಆಯಿತೆಂದು ತೋರುತ್ತದೆ. ಇರಲಿ , ಇದೆಲ್ಲ ನಮ್ಮ ಮನಸ್ಸನ್ನು ಖುಷಿ ಖುಷಿಯಾಗಿರಿಸಲು ಸಹಾಯಕ.  “ಮನ  ಏವ ಮನುಷ್ಯಾಣಾಂ….”  ಮನಸ್ಸಲ್ಲಿ ಖುಷಿಯಿದ್ದರೆ ಎಲ್ಲವೂ ಸರಿ , ಕೆಲಸವೂ ಸರಾಗ , ಒಪ್ಪ ಓರಣ.

ನನ್ನ ಬಂಧುವೊಬ್ಬರು , ಏನಾದರೂ ಮುಖ್ಯ ಕೆಲಸಕ್ಕೆ ಹೊರಡುವಾಗ ಅವರ ಒಂದು ನಿರ್ದಿಷ್ಟ ಅಂಗಿಯನ್ನೇ ಧರಿಸುತ್ತಿದ್ದರು. ಆ ಅಂಗಿ ತೊಟ್ಟುಕೊಂಡು ಹೋದರೆ ಕಾರ್ಯ ಕೆಟ್ಟು ಹೋದದ್ದಿಲ್ಲ ಎಂದು ಅವರು ಯಾವಾಗಲೂ ಹೇಳುತ್ತಿದ್ದರು.

ಈಗ ಹೊಸ ವಿಷಯ :

ಇತ್ತೀಚೆಗೆ ಒಂದು ಚಪ್ಪಲಿ ಕೊಂಡುಕೊಂಡಿದ್ದೆ. ಅದರಲ್ಲಿ ಒಂದು ವಿಶೇಷ ಇದೆ. ಅದೇನೆಂದರೆ ,  ಎರಡರಲ್ಲೂ    ಪಾದ ನಿಲ್ಲುವ ಜಾಗದಲ್ಲಿ   ಪ್ರಧಾನ ದಿಕ್ಕುಗಳನ್ನು ಗುರುತಿಸಿದ್ದಾರೆ. E  W  S  N.

ನಾನು ಮನೆಯವರಲ್ಲಿ ಹೇಳುತ್ತಿರುತ್ತೇನೆ. ಈ ಪಾದರಕ್ಷೆ ಹಾಕಿಕೊಂಡರೆ ದಿಕ್ಕು ತಪ್ಪಿ ಹೋಗುವ ಭಯವಿಲ್ಲ ಎಂದು ! ಏನಂತೀರಿ ?!

 

ಬರಹ – ಎನ್ ಸುಬ್ರಾಯ ಭಟ್  

 

 


Leave a Reply

x
error

Enjoy this blog? Please spread the word :)