ಮಂಗಳೂರು : ಕೊರೋನಾ ಮಹಾಮಾರಿಗೆ ಪೊಲೀಸ್ ಇಲಾಖೆಯಾ ಅತೀ ಕಿರಿಯ ಮಹಿಳಾ ಪ್ರೊಬೆಷನರಿ ಪಿಎಸ್ಐ ಬಲಿ.

 

ಮಂಗಳೂರು: ಕೊರೋನಾ ಮಹಾಮಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಕಛೇರಿಯಲ್ಲಿ ಪ್ರೊಬೆಷನರಿ ಪಿ ಎಸ್ ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿಯೇ ಅತೀ ಕಿರಿಯ ಮಹಿಳಾ ಪಿ ಎಸ್ ಐ ಎನಿಸಿಕೊಂಡಿದ್ದ ಶ್ಯಾಮಿಲಿ (೨೪) ಅವರು ಬಲಿಯಾಗಿದ್ದಾರೆ.

 

ಶ್ಯಾಮಿಲಿಯವರು ಏಳು ತಿಂಗಳ ಗರ್ಭಿಣಿಯಾಗಿದ್ದು ಕೋವಿಡ್ ನಿಯಮಾನುಸಾರ ಒಂದು ತಿಂಗಳಿನಿಂದ ರಜೆಯಲ್ಲಿ ತಮ್ಮ ಊರಾದ ಕೋಲಾರದಲ್ಲಿಯೇ ನೆಲೆಸಿದ್ದರು. ಅಲ್ಲಿ ಅವರಿಗೆ ಕೋವಿಡ್ ಪ್ಯಾಸಿಟಿವ್ ಬಂದಿದ್ದು ಹೆಚ್ಚಿನ ಚಿಕಿತ್ಸೆಗೆ ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯಿಸಿರೆಳೆದರು.

ಈ ಕುರಿತಂತೆ ಕರ್ನಾಟಕದ ಡಿ ಜಿ ಪಿ ಯಾಗಿರುವ ಪ್ರವೀಣ್ ಸೂದ್ ಅವರು ಟ್ವೀಟ್ ಖಾತೆಯಲ್ಲಿ ವಿಷಯ ತಿಳಿಸಿದ್ದಾರೆ ಮತ್ತು ಕೋರೋನ ಮಹಾಮಾರಿಯಿಂದ ತಮ್ಮನ್ನು ಮತ್ತು ತಮ್ಮ ಕುಟುಂಬದವರನ್ನು ರಕ್ಷಿಸಿಕೊಳ್ಳಲು ಸರ್ಕಾರದ ನಿಯಮವನ್ನು ಪಾಲಿಸಿ ಮತ್ತು ಪೊಲೀಸರೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ