ಸ್ನೇಹಿತರೇ ಸನ್ನಿ ಲಿಯೋನ್ ಯಾರಿಗೆ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಹುಡುಗರ ನಿದ್ದೆ ಗೆಡಿಸಿ ಜಾಲತಾಣ ದಲ್ಲಿ ಗಗನಕ್ಕೇರಿದ ಸುಂದರ ಮನಮೋಹಕ ಚೆಲುವೆ. ಇವಳಿಗೆ ಇದ್ದಷ್ಟು ಫ್ಯಾನ್ಸ್ ಗಳು ಜಗತ್ತಿನಲ್ಲಿ ಯಾವ ಪ್ರಸಿದ್ಧ ನಟ ನಟಿಯರಿಗೂ ಇರಲಿಲ್ಲವೇನೋ. ವಿದೇಶದಲ್ಲಿ ಹುಟ್ಟಿದರೂ ಭಾರತೀಯಳಂತೆ ರೂಪಾವತಿಯಾಗಿದ್ದ ಸನ್ನಿ ಲಿಯೋನಳಿಗೆ ಪಡ್ಡೆ ಹುಡುಗರು ಮಾತ್ರವಲ್ಲದೆ ಕೆಲವು ಚಪಲ ಅಜ್ಜಂದಿರು ಸಹ ಮರುಳಾಗುತ್ತಿದ್ದರು.
ಆದರೆ ಕ್ರಮೇಣ ಸನ್ನಿ ತನಗೆ ನೇಮು ಫೇಮು ತಂದು ಕೊಟ್ಟ ಆ ಅಶ್ಲೀಲ ಲೋಕವನ್ನು ಬಿಟ್ಟು ತನ್ನ ಸಾಂಸಾರಿಕ ಜೀವನದ ಕಡೆ ಗಮನಕೊಡುತ್ತಾಳೆ. ಜೊತೆಗೆ ಬಾಲಿವುಡ್ ಸಿನಿಮಾ ದಲ್ಲಿ ಅವಕಾಶ ಗಿಟ್ಟಿಸಿಕೊಂಡು ನಟನೆಯಲ್ಲಿ ಸೈ ಎಣಿಸಿಕೊಳ್ಳುತ್ತಲೇ ಮತ್ತು ಬಹು ಬೇಡಿಕೆಯ ನಟಿಯೂ ಆಗುತ್ತಾಳೆ.
ಒಂದು ಕಾಲದಲ್ಲಿ ಹಲವು ಅಮ್ಮಂದಿರ ಬಾಯಲ್ಲಿ ಬೈಗುಳ ತಿಂದ ಸನ್ನಿ ಇಂದು ಲಾತೂರಿನಿಂದ ಒಬ್ಬಳು ಹೆಣ್ಣು ಮಗುವನ್ನು ದತ್ತು ಪಡೆದುದಲ್ಲದೇ ಸೇರೊಗೆಸಿ ಮುಖಾಂತರ ಎರಡು ಮಕ್ಕಳನ್ನು ಪಡೆದು ಎಲ್ಲರಿಂದಲೂ ಸೈ ಅನಿಸಿಕೊಂಡಿದ್ದಾಳೆ.
ಸನ್ನಿ ಇವಾಗ ಸದಾ ಸುದ್ದಿಯಲ್ಲಿರೋದು ಆಕೆ ಮಾಡುವ ಸಮಾಜ ಮುಖಿ ಕಾರ್ಯಗಳಿಂದ. ತನಗೆ ಹೊಸ ಬದುಕನ್ನು ಕಟ್ಟಿಕೊಟ್ಟ ಭಾರತ ದೇಶದ ಬಗ್ಗೆ ಅತೀವ ಹೆಮ್ಮೆ ಪಡುವ ಸನ್ನಿ ಲಿಯೋನ್ ಈ ದೇಶಕ್ಕಾಗಿ ಏನಾದರೂ ತನ್ನ ಕೈಲಾದ ಸೇವೆ ಮಾಡಬೇಕೆಂಬ ಹಂಬಲದಲ್ಲಿರುತ್ತಾಳೆ. ಅದಕ್ಕೊಸ್ಕರಣೆ ದೇಶಕ್ಕೆ ಯಾವಾಗ ಯಾವಾಗ ಆಪತ್ತು ಬರುತ್ತೋ ಅವಾಗ ಅವಾಗ ಸನ್ನಿ ದೇಶದ ಸಹಾಯಕ್ಕೆ ತುದಿಗಾಲಲ್ಲಿ ನಿಲ್ಲುತ್ತಾಳೆ. ಅದಕ್ಕೆ ಬೇಕಾದಷ್ಟು ನಿದರ್ಶನಗಳು ನಮ್ಮ ಮುಂದಿವೆ.
ಇತ್ತೀಚೆಗೆ ನಮ್ಮ ದೇಶದಲ್ಲಿ ಕೋವಿಡ್ – ೧೯ ಎರಡನೇ ಅಲೆಯು ಬಹಳ ವೇಗವಾಗಿ ಹರಡುತ್ತಿದ್ದು ಮಾರಕವಾಗಿ ಪರಿಣಮಿಸುತ್ತಿದ್ದೆ. ಈ ವೈರಸ್ ನಿಂದ ಕುಗ್ಗುತ್ತಿರುವ ದೇಶಕ್ಕೆ ಸನ್ನಿ ಲಿಯೋನ್ ಸಹಾಯ ಮಾಡಲು ಮುಂದಾಗಿದ್ದಾಳೆ. ಪೇಟಾ ಸಂಸ್ಥೆಯ ಮುಖಾಂತರ ದೆಹಲಿಯಲ್ಲಿರುವ ೧೦೦೦೦ ಕ್ಕೂ ಅಧಿಕ ವಲಸೆ ಕಾರ್ಮಿಕರಿಗೆ ಊಟ ಕೊಡಲು ಮುಂದಾಗಿದ್ದಾಳೆ.
ಕೇವಲ ಹುಡುಗರ ಪಾಲಿಗೆ ಸೌಂದರ್ಯ ದೇವತೆಯಾದ ಸನ್ನಿ ಲಿಯೋನ್ ಇವತ್ತು ಇವಳ ಈ ಹೃದಯ ಶ್ರೀಮಂತಿಕೆಯಿಂದ ಎಷ್ಟೋ ನಿರ್ಗತಿಕರ ಅಸಹಾಯಕರ ವಲಸೆ ಕಾರ್ಮಿಕರ ಪಾಲಿಗೆ ಪ್ರತ್ಯಕ್ಷ ದೇವತೆಯಾಗಿ ನಿಲ್ಲುತ್ತಾಳೆ.
ಪ್ರತೀ ಭಾರತೀಯರ ಆಶೀರ್ವಾದ ನಿನ್ನ ಮೇಲಿರುತ್ತೆ ಸನ್ನಿ ಲಿಯೋನ್.