ಮಂಗಳೂರು : ಸರಕಾರ ಪ್ರಸ್ತುತ ಪಡಿತರದಲ್ಲಿ ಸರಬರಾಜು ಮಾಡುತ್ತಿರುವ ಕುಚ್ಚಲಕ್ಕಿಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಜನರು ಅದರಲ್ಲಿ ಗ್ರಾಮೀಣ ಭಾಗದ ಜನರು ಬಳಸುವುದು ಬಹಳ ಕಡಿಮೆ ಮತ್ತು ಇಲ್ಲಿ ಬಳಸುವಂತಹ ಸಾಂಪ್ರದಾಯಿಕ ಅಕ್ಕಿ ಕೆಂಪು ಕುಚ್ಚಲಕ್ಕಿ ಯಾಗಿದ್ದರಿಂದ ಪಡಿತರದಲ್ಲಿ ದೊರೆಯುವ ಅಕ್ಕಿಯನ್ನು ಪಡೆಯುತ್ತಿಲ್ಲ ಮತ್ತು ಕೆಲವರು ಕಡಿಮೆ ದರಕ್ಕೆ ಮಾರಾಟ ಮಾಡುವ ಬಗ್ಗೆ ಕೇಳಿ ಬರುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವಂಥಹ ಕೋಟ ಶ್ರೀನಿವಾಸ ಪೂಜಾರಿಯವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಅವರು ಬಳಸುವಂತಹ ಕೆಂಪು ಕುಚ್ಚಲಕ್ಕಿಯು ಪಡಿತರದ್ಲಲಿ ದೊರೆಯುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದರಿಂದ ಸರಕಾರದಿಂದ ದೊರೆಯುವ ಪಡಿತರದ ಅಕ್ಕಿ ಸಮರ್ಪಕ ರೀತಿಯಲ್ಲಿ ಬಳಕೆಯಾಗಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ.
Super