ಮನೆಯಲ್ಲಿಯೇ ಕುಳಿತು ಜನರು ಸಕ್ಕರೆ ಕಾಯಿಲೆ ಪ್ರಮಾಣ , ರಕ್ತದೊತ್ತಡ ಪ್ರಮಾಣ, ಗರ್ಭಧಾರಣೆಯ ಪರೀಕ್ಷೆಯ ಇವೆಲ್ಲಾ ಸ್ವತಃ ತಾವೇ ಪರೀಕ್ಷಿಸಿಕೊಳ್ಳುವ ರೀತಿಯಲ್ಲಿ ಕೋವಿಡ್ -19 ವೈರಸನ್ನು ಸಹ ಸ್ವತಃ ತಾವೇ ಪರೀಕ್ಸಿಸಿಕೊಂಡು ಒಂದು ವೇಳೆ ವೈರಸ್ ತಗುಲಿದೆ ಎಂದು ಕಂಡು ಬಂದಲ್ಲಿ ಅದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆಯಬಹುದು ಎಂದು ಎಷ್ಟೋ ಆಸೆಯಾಗಿತ್ತು ಬೇಡಿಕೆಯು ಆಗಿತ್ತು. ಈ ಒಂದು ಬೆಳವಣಿಗೆಯು ಇಂದು ನಮ್ಮ ದೇಶದಲ್ಲಿ ಸಾಕಾರಗೊಂಡಿದೆ.
ಹೌದು ಇನ್ನು ಮುಂದೆ ನಾವೇ ಮನೆಯಲ್ಲಿ ಕುಳಿತು ಕೋವಿಡ್ ಲಕ್ಷಣ ಕಂಡುಬಂದರೆ ಸ್ವತಃ ನಾವೇ ಟೆಸ್ಟ್ ಮಾಡಿಸಿಕೊಳ್ಳುವಂತಹ ಉಪಕರಣವನ್ನು ಪುಣೆ ಮೂಲದ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ಅಭಿವೃದ್ಧಿಪಡಿಸಿದೆ. ಅದರ ಹೆಸರು ಕೋವಿಸ್ಸೆಲ್ಫ್ . ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಈ ಸ್ವ-ಬಳಕೆಯ ಕ್ಷಿಪ್ರ ಆಂಟಿಜೆನ್ ಟೆಸ್ಟ್ (ರಾಟ್) ಕಿಟ್‌ಗೆ ಅನುಮೋದನೆ ನೀಡಿದೆ.
ಕೋವಿಸ್ಸೆಲ್ಫ್ ಮನೆಯಲ್ಲಿ ಪರೀಕ್ಷಿಸಲು ದೇಶದ ಮೊದಲ ಸ್ವ-ಬಳಕೆಯ ಕಿಟ್ ಆಗಿದ್ದು ಇದು 15 ಕೇವಲ ನಿಮಿಷಗಳಲ್ಲಿ ಫಲಿತಾಂಶಗಳನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಈ ಕಿಟ್ ನ ವೆಚ್ಚ ಕೇವಲ 250 ರೂಪಾಯಿಗಳು. ಸದ್ಯದಲ್ಲಿಯೇ ಟೆಸ್ಟಿಂಗ್ ಕಿಟ್ ಮಾರ್ಕೆಟ್ ಗೆ ಬರಲಿದೆ ಎಂದು ಸಂಸ್ಥೆ ತಿಳಿಸಿದೆ.
ತಿಂಗಳಿಗೆ 4 – 6 ಕೋಟಿ ಕಿಟ್‌ಗಳಷ್ಟು ಈ ಸಾಧನವನ್ನು ತಯಾರಿಸುವ ಮತ್ತು ಮುಂದಿನ ಕೆಲವು ವಾರಗಳಲ್ಲಿ ಭಾರತದಾಂದ್ಯಂತ ಔಷಧಾಲಯಗಳ ಮೂಲಕ ತಲುಪಿಸುವ ಗುರಿ ಹೊಂದಿದೆ ಕಿಟ್ ತಯಾರಿಕಾ ಕಂಪನಿಯು ಎಂದು ತಿಳಿಸಿದೆ.
ಮೈಲಾಬ್‌ನ ಕ್ಲಿನಿಕಲ್ ನಿರ್ದೇಶಕ ಗೌತಮ್ ವಾಂಖೆಡೆ ಯವರು, ಸ್ಟ್ರಿಪ್ (ಇದು ಒಂದು ಸಾಮಾನ್ಯ ಮನೆ ಗರ್ಭಧಾರಣೆಯ ಪರೀಕ್ಷೆಯಂತೆ ಕಾಣುತ್ತದೆ) ಸಾರ್ಸ್-ಕೋವಿ-2 ಆಂಟಿಜೆನ್‌ಗೆ ನಿರ್ಧಿಷ್ಟವಾದ ಪ್ರತಿಕಾಯಗಳ ಸಂಯೋಜನೆಯೊಂದಿಗೆ ಲೇಪಿತವಾಗಿದೆ ಮತ್ತು “ಪ್ರತಿಜನಕದ ಉಪಸ್ಥಿತಿ (ಪ್ರೋಟೀನ್) ಸ್ಟ್ರಿಪ್‌ನಲ್ಲಿರುವ ಪ್ರತಿಕಾಯಗಳೊಂದಿಗೆ ಪ್ರತಿಕ್ರಿಯಿಸುತ್ತದೆ ಮತ್ತು ಬಣ್ಣದ ಬದಲಾವಣೆಯಾಗುತ್ತದೆ ಎಂದು ಕಿಟ್ ಕಾರ್ಯನಿರ್ವಹಣೆಯ ಬಗ್ಗೆ ವಿವರಿಸುತ್ತಾರೆ.