
ಇವತ್ತು ಬೆಳಗ್ಗೆ ನಾನು ಹೀಗೆ ಎಂದಿನಂತೆ ಫೇಸ್ಬುಕ್ ನ್ನು ನೋಡ್ತಾ ಇದ್ದೆ. ಏನಿದ್ದರೂ ಅದು ಒಂದು ನಮ್ಮ ಜೀವನದ ಭಾಗ ಎಂದಂತಾಗಿದೆ ಆಲ್ವಾ. ಕೆಲವರು ಅನ್ನಬಹುದು ಫೇಸ್ಬುಕ್ ನೋಡುವ ಬದಲು ಒಂದು ಪುಸ್ತಕ ತೆಗೆದುಕೊಂಡು ಓದಿದರೆ ಎಷ್ಟೋ ಒಳ್ಳೆಯದು ಅಂತ. ಅವರ ತರ್ಕವೂ ಸರಿಯೇ ಬಿಡಿ. ಆದರೆ ನನ್ನ ಅನಿಸಿಕೆ ಪ್ರಕಾರ ನೀವು ಪುಸ್ತಕವನ್ನಾದರೂ ಓದಿ ಅಥವಾ ಫೇಸ್ಬುಕನ್ನಾದರೂ ನೋಡಿ ಕೇವಲ ಅದರಲ್ಲಿರುವ ಒಳ್ಳೆಯ ವಿಚಾರವನ್ನು ತೆಗೆದುಕೊಂಡರೆ ಎರಡೂ ಒಂದೇ. ಎರಡರಲ್ಲೂ ನೀವು ಕೇವಲ ಋಣಾತ್ಮಕ ವಿಚಾರವನ್ನು ಹೆಚ್ಚು ತೆಗೆದುಕೊಂಡರೆ ಮಾತ್ರ ಯಾವುದೂ ಒಳ್ಳೆಯದಲ್ಲ. ಹಾಗಾಗಿ ಯಾವುದೇ ವಿಚಾರವನ್ನು ತೆಗೆದುಕೊಂಡರೂ ನಾವು ಅದರಿಂದ ನಮ್ಮ ಬದುಕಿಗೆ ಬೇಕಾಗಿರುವ ಮತ್ತು ಜೀವನವನ್ನು ಇನ್ನೂ ಸುಂದರವಾಗಿಸಲು ಇರುವ ವಿಚಾರವನ್ನು ಅರಗಿಸಿಕೊಂಡರೆ ಮಾತ್ರ ಅದು ಉಪಯುಕ್ತ.
ನಾನು ನಿಜವಾಗಿ ಹೇಳ ಹೊರಟಿರುವ ವಿಚಾರದ ಮೂಲವನ್ನು ನಾನು ಸ್ವಲ್ಪ ಅವಲೋಕಿಸಿದೆ ಅಷ್ಟೇ. ವಾಸ್ತವದ ವಿಚಾರಕ್ಕೆ ಈಗ ಬರ್ತಾ ಇದ್ದೇನೆ. ಸರಿ, ಇಲ್ಲಿ ನಾನು ಆಗ ಹೇಳಿದ ಹಾಗೆ ನಾನು ಫೇಸ್ಬುಕ್ ನೋಡುತ್ತಿರಬೇಕಾದರೆ ನನ್ನ ಕಣ್ಣಿಗೊಂದು ವಿಡಿಯೋ ಸಿಕ್ತು. ಸ್ವಲ್ಪ ಕುತೂಹಲ ಭರಿತವಾಗಿ ಇದ್ದಂತ್ತಿತ್ತು. ಯಾಕೆಂದರೆ ವಿಡಿಯೋ ನ ಮುಖಚಿತ್ರದಲ್ಲಿ ಒಂದು ಸಣ್ಣ ಮಗುವಿಗೆ ಬ್ಯಾಂಡೇಜ್ ಹಾಕಿ ಅಪ್ಪ ಅಮ್ಮ ಎತ್ತಿ ಹೋಗುವoತೆ ಇತ್ತು. ಅದೂ ಸಹ ತಲೆಗೆ ಬ್ಯಾಂಡೇಜ್ ಹಾಕಿತ್ತು. ಹೇಗಿದ್ದರೂ ಮಗೂ ತಾನೇ, ಹಾಗಾಗಿ ನನ್ನನ್ನ ಆ ವಿಡಿಯೋ ನೋಡುವುದರಲ್ಲಿ ಯಾವುದೂ ತಡೆಯಲಿಲ್ಲ. ಸೀದಾ ವಿಡಿಯೋವನ್ನು ಪ್ಲೇ ಮಾಡಿಯೇ ಬಿಟ್ಟೆ.
ಒಂದು ಸಣ್ಣ ಮಗು ಮನೆಯ ಒಂದು ಬದಿಯಲ್ಲಿ ತನ್ನಷ್ಟಕ್ಕೆ ತಾನು ಆಟ ಆಡುತ್ತಾ ಇರುತ್ತದೆ. ಮನೆಯೋ ಅರಮನೆ ಥರ ಇತ್ತು. ಎಲ್ಲಿ ನೋಡಿದರೂ ಬಿಳಿ ಪ್ಯಾಟರ್ನ್ ನ ಡಿಸೈನ್ ಗಳು, ನೇರಳೆ ಬಣ್ಣ ದ ಜೊತೆ ಬಿಳಿ ಕಿಟಕಿ ಪರದೆಗಳು, ಬಿಳಿ ಬಣ್ಣದ ನೆಲದ ಹಾಸುಗಳು. ಆ ಸುಂದರ ಫರ್ನಿಚರ್ ಗಳು, ಗೋಡೆಯ ಮೂಳೆಗಳಿಗೆ ಚೌಕ ರೀತಿಯಲ್ಲಿ ಬೇರೆ ಬೇರೆ ವಿನ್ಯಾಸಗಳು, ಯಾರನ್ನೂ ಸಹ ಮೂಕವಿಸ್ಮಿತ ಮಾಡಬಲ್ಲದು. ಈ ಸುಂದರ ಮನೆಗೊಂದು ಒಂದು ಸುಂದರ ಸಂಸಾರ.

ಮಗುವಿನ ತಾಯಿ ಡೈನಿಂಗ್ ಟೇಬಲ್ ನಲ್ಲಿ ತನ್ನ ಗಂಡನಿಗೆ ಊಟ ಬಡಿಸುತ್ತಿರಬೇಕಾದರೆ ಮಗು ಆಟ ಆಡುತ್ತಲೇ ನೇರವಾಗಿ ಅಮ್ಮನ ಬಳಿ ಬರುತ್ತದೆ. ಆದರೆ ಅಮ್ಮ ಏನು ತಾನೇ ಮಾಡಬೇಕು, ಮನೆಯ ಕೆಲಸ ಮಾಡಬೇಕು, ಗಂಡನ ಚಾಕರಿ ಮಾಡಬೇಕು ಆಲ್ವಾ. ಅಂತೆಯೇ ಮಗುವನ್ನು ತಾಯಿ ಅಲ್ಲಿಯೇ ಆಟ ಆಡಲು ಬಿಟ್ಟು ಅಡುಗೆ ರೂಮಿಗೆ ಹೋಗುತ್ತಾಳೆ. ಮಗುವಿನ ಅಪ್ಪ ಆಫೀಸಿಗೆ ಹೊರಡುವ ಬರದಲ್ಲಿರುತ್ತಾನೆ. ತಾಯಿ ಅಡುಗೆ ಮನೆಗೆ ತಲುಪಿ ತನ್ನ ಕೆಲಸದಲ್ಲಿ ಮಗ್ನಳಾಗುತ್ತಾಳೆ . ಮಗು ತನ್ನಲ್ಲಿದ್ದ ಆಟಿಕೆ ವಸ್ತುವನ್ನು ಎಸೆಯಲು ಪ್ರಾರಂಭಿಸುತ್ತದೆ. ಮತ್ತೆ ಹೋಗಿ ಅದನ್ನು ಹೆಕ್ಕಿಕೊಂಡು ಬರುತ್ತದೆ. ಮತ್ತೆ ಎಸೆಯುತ್ತದೆ. ಅವಾಗ ತಾಯಿ ಇನ್ನೇನು ತನ್ನ ಅಡುಗೆ ಕೊಣೆಯ ಕೆಲಸ ಮುಗಿಸಿ ಮಗುವನ್ನು ಹೋಗಿ ಎತ್ತಿಕೊಂಡು ಊಟ ತಿನ್ನಿಸಬೇಕು ಎಂದು ಎನಿಸುವಷ್ಟರಲ್ಲಿ ಮಗುವಿನ ಜೋರಾದ ಚೀರಾಟ ಕೇಳಿ ಬರುತ್ತದೆ.
ತಾಯಿ ಒಂದು ಸೆಕೆಂಡು ಸಹ ಯೋಚನೆ ಮಾಡದೆ ಹೇಗೆ ತಲುಪಿದಲೋ ಗೊತ್ತಿಲ್ಲಾ ಬಂದು ನೋಡುವಷ್ಟರಲ್ಲಿ ಮಗು ಸ್ಮೃತಿ ತಪ್ಪಿ ಬಿದ್ದಿರುತ್ತದೆ. ನೆಲದಲ್ಲಿ ರಕ್ತ ಚೆಲ್ಲಿರುತ್ತದೆ. ಅಮ್ಮ ಬೊಬ್ಬೆ ಹೊಡೆಯುತ್ತಾಳೆ. ಅಷ್ಟೊತ್ತಿಗೆ ಮಗುವಿನ ಅಪ್ಪನೂ ಅಲ್ಲಿ ತಲುಪುತ್ತಾನೆ. ಅಪ್ಪ ಅಮ್ಮ ಇಬ್ಬರು ಕೈ ನಡುಕದಲ್ಲೀಯೇ ಮಗುವನ್ನು ಎತ್ತಿಕೊಳ್ಳುತ್ತಾರೆ. ಮಗುವಿನ ತಂದೆ ಸರಿಯಾಗಿ ನೋಡಿದಾಗ ಮಗುವಿನ ತಲೆಗೆ ಬಲವಾದ ಏಟು ಬಿದ್ದಿರುತ್ತದೆ. ಮತ್ತು ಆಳವಾದ ಗಾಯವಾಗಿರುತ್ತದೆ. ಮಗು ಆಟ ಆಡುತ್ತಾ ಓಡುತ್ತಾ ಬಿದ್ದು, ಮಗುವಿನ ತಲೆಗೆ ಅಲ್ಲೇ ಇದ್ದ ಮೆಟ್ಟಿಲಿನ ಮೂಲೆಯಿಂದ ಬಲವಾದ ಪೆಟ್ಟು ಬಿದ್ದಿದೆ ಎಂದು ಮಗುವಿನ ಅಪ್ಪನಿಗೆ ಮನವರಿಕೆಯಾಗುತ್ತದೆ. ಮತ್ತು ತಮ್ಮ ನಿರ್ಲಕ್ಷ್ಯದಿಂದ ಈ ಎಡವಟ್ಟು ಆಗಿದೆ ಎಂದು ಮನದಲ್ಲಿಯೇ ಪಶ್ಚಾತಾಪ ಪಡುತ್ತಾನೆ.
ಮಗುವನ್ನು ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಮತ್ತು ಮಗುವಿಗೆ ಸೂಕ್ತ ಚಿಕಿತ್ಸೆ ಒದಗಿಸಿ ಮನೆಗೆ ಕರೆದುಕೊಂಡು ಬರುತ್ತಾರೆ ಮಗು ಕೆಲವೇ ದಿನಗಳಲ್ಲಿ ಹುಷಾರಾಗುತ್ತದೆ. ಇಲ್ಲಿ ಈ ವಿಡಿಯೋದಲ್ಲಿದ್ದ ಸಿನಿಮಾದ ಸಾರಾಂಶ ರಸಾಂಶ ಏನು ಇತ್ತೋ ಗೊತ್ತಿಲ್ಲ. ಬಹುಶ ತಂದೆ ತಾಯಿಯ ಬೇಜವಾಬ್ದಾರಿಯಿಂದ ಮಗುವಿಗೆ ಹೀಗೆ ಆಯಿತು ಅನ್ನುವ ವಿಚಾರ ಹೇಳ ಹೊರಟಿದ್ದಾರೋ ಏನೋ ಇರಬಹುದು. ಆದರೆ ನಿಜವಾಗಿ ನನಗೆ ಅರಿವಾದಂತಹ ವಾಸ್ತವಾಂಶ ಏನು ಗೊತ್ತಾ?, ಅದು ನಾವು ಇಂದಿನ ಹೊಸ ಹೊಸ ವಿನ್ಯಾಸಗಳಿಗೆ ಮನಸೋತು ಅದಕ್ಕೆ ಮಾರು ಹೋಗಿ ಅದರಿಂದ ಉಂಟಾಗುವ ನಷ್ಟ, ಅಪಾಯ, ತೊಂದರೆಗಳನ್ನು ಅರಿಯದಿರುವುದು. ಹೌದು ಇಲ್ಲಿ ಬೇರೆ ಯಾವುದೇ ವಿಚಾರದ ಬಗ್ಗೆ ನಾನು ಮಾತಾಡೋದಿಲ್ಲ ಬದಲಾಗಿ ಇಲ್ಲಿ ಮೇಲೆ ಹೇಳಿದ ಆ ಘಟನೆಯಲ್ಲಿ ಸ್ಪಷ್ಟವಾಗಿದ್ದು ಅವರು ಮನೆಯನ್ನು ಅಷ್ಟು ಸುಂದರವಾಗಿ ಡಿಸೈನ್ ಮಾಡಿದ್ದಾರೆ, ಕಟ್ಟಿಸಿದ್ದಾರೆ. ಆದರೆ ಅದರಲ್ಲಿ ಕೆಲವು ಸಣ್ಣ ಸಣ್ಣ ವಿಚಾರಗಳು ಅವರು ಕಡೆಗಣಿಸಿರುವುದು.
ನಾವು ಯಾವಾಗಲು ಅಷ್ಟೇ ಯಾವುದೇ ವಿಚಾರದ ಬಗ್ಗೆಯೂ ಸಹ ಸರಿ ತಪ್ಪು ಎರಡನ್ನೂ ವಿಮರ್ಶಿಸಿ ನಿರ್ಧಾರ ಕೈಗೊಳ್ಳಬೇಕು. ಮನೆಯನ್ನು ಎಷ್ಟೋ ಅಸೆ ಇಟ್ಟುಕೊಂಡು ಕಟ್ಟಿಸುತ್ತೇವೆ ಆದರೆ ಅದೆಷ್ಟೋ ಸಣ್ಣ ಸಣ್ಣ ವಿಚಾರಗಳನ್ನು ನಾವು ಕಡೆಗಣಿಸಿರುತ್ತೇವೆ. ಅದರಲ್ಲಿ ನಾವು ಮನೆ ಕಟ್ಟುವಾಗ ಮನೆಯ ಅಂದ ಚಂದಕ್ಕೆ ಅನುಗುಣವಾಗಿ ಗೋಡೆಗಳ ತಳಬಾಗದ ಮೂಲೆಯನ್ನು ಚೌಕ ರೀತಿಯಲ್ಲಿ ಬಿಟ್ಟು ಬಿಡುತ್ತೇವೆ. ಫರ್ನಿಚರ್ ಗಳ ಮೊಲೆಯು ಚೂಪಾಗಿರುತ್ತದೆ. ಮೆಟ್ಟಿಲುಗಳ ತಲಬದಿಯ ಮೊಲೆಯೂ ಚೂಪಾಗಿರುತ್ತದೆ. ನೀವೇ ಒಂದು ಸಾರಿ ಆಲೋಚಿಸಿ, ಇದು ಎಷ್ಟು ಅಪಾಯ ತರಬಹುದು ಎಂದು. ದಯವಿಟ್ಟು ಆ ರೀತಿ ಯಾರೂ ಮಾಡಬೇಡಿ. ಹೀಗೆ ಮಾಡುವುದರಿಂದ ನಮ್ಮ ಮನೆಯಲ್ಲಿರುವ ಸಣ್ಣ ಸಣ್ಣ ಮಕ್ಕಳಿಗೆ ಖಂಡಿತ ಅಪಾಯ ಒಡ್ಡುತ್ತದೆ. ನೀವು ಮನೆ ಕಟ್ಟುವಾಗಲೇ ಇದರ ಬಗ್ಗೆ ಆಲೋಚನೆ ಮಾಡಿ ಸರಿ ಮಾಡಿಸಿಕೊಳ್ಳಿ.

ನೀವು ಈಗಾಗಲೇ ಮನೆ ಕಟ್ಟುಯಾಗಿದೆ ಎಂದಾದರೆ ಈಗಲೂ ನಿಮಗೆ ಅದನ್ನ ಸರಿ ಮಾಡಲು ಅವಕಾಶ ಇದೆ. ಪುನಃ ಡ್ರಿಲ್ ತಗೊಂಡು ಅದನ್ನ ಸವೆಸುವುದು ಅಷ್ಟೇನೂ ಸುಲಭವಲ್ಲ. ಬದಲಾಗಿ ನಿಮಗೆ ಈ ಕಾಮರ್ಸ್ ವೆಬ್ಸೈಟ್ ನಲ್ಲಿ ಮೂಲೆಗಳಿಗೆ ಫಿಕ್ಸ್ ಮಾಡುವಂತಹ ರೆಡಿ ಮೇಡ್ ಸ್ಪಾಂಜ್ ರೀತಿಯ ಒಂದು ಕಾರ್ನೆರ್ ಪೀಸ್ ಪ್ರೊಟೆಕ್ಟರ್ ಅಂತ ಬರುತ್ತೆ. ನೀವು ಅದನ್ನ ಖರೀದಿಸಿ ಸರಳ ರೀತಿಯಲ್ಲಿ ನೀವೇ ಫಿಕ್ಸ್ ಮಾಡಿಕೊಳ್ಳಬಹುದು. ಕೆಳಗೆ ಅದರ ಲಿಂಕ್ ಕೊಟ್ಟಿರುತ್ತೇನೆ ನೇರವಾಗಿ ಅಲ್ಲಿಂದಲೇ ನೀವು ಆ ವಸ್ತುವನ್ನ ಖರೀದಿಸಬಹುದು. ಈ ಕಾಮರ್ಸ್ ವೆಬ್ಸೈಟ್ ಲ್ಲಿ ಹೋಗಿ ತಡಕಾಡುವ ಪ್ರಮೇಯ ಬರುವುದಿಲ್ಲ.
ನಿಮ್ಮ ಮನೆಯ ಅಥವಾ ಫರ್ನಿಚರ್ ನ ಬಣ್ಣ ಕ್ಕೆ ಅನುಗುಣವಾಗಿ ನೀವು ಕಾರ್ನರ್ ಫಿಕ್ಸ್ ನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರ ಬೆಲೆ ಸಹ ಹೆಚ್ಚೇನೂ ಇಲ್ಲ ಕೇವಲ ಇನ್ನೂರು ಮುನ್ನೂರು ರೂಪಾಯಿಗಳ ಆಸುಪಾಸು ಅಷ್ಟೆ. ಬೆಲೆ ಎಷ್ಟಾದರೇನು ನಮ್ಮ ಮನೆಯ ಕೂಸಿನ ಜೀವಕ್ಕಿಂತ ದೊಡ್ಡದಾ ?
ನೀವು ನಿಮ್ಮ ಮನೆಯಲ್ಲಿ ಒಮ್ಮೆ ಹೋಗಿ ಮೂಲೆಯನ್ನು ಗಮನಿಸಿ ಮತ್ತು ನಾನು ಹೇಳಿದ ರೀತಿಯಲ್ಲಿ ಇದ್ದರೇ ಸಂಭಾವ್ಯ ಅಪಘಾತವನ್ನು ತಪ್ಪಿಸಲು ಹಿಂದೆ ಮುಂದೆ ನೋಡದೆ ಈಗಲೇ ಕಾರ್ನೆರ್ ಫಿಕ್ಸ್ ನ್ನು ಖರೀದಿಸಿ. ಮತ್ತು ಮನೆಯಲ್ಲಿ ಫಿಕ್ಸ್ ಮಾಡಿಕೊಳ್ಳಿ. ಹಾಗೆನೇ ಇಲ್ಲಿ ಕಾಮೆಂಟ್ ಮಾಡಲು ಮರೆಯಬೇಡಿ, ಯಾರಿಗೆ ನನ್ನ ಈ ಲೇಖನ ಎಷ್ಟು ನಿಮಗೆ ಉಪಯೋಗವಾಯಿತು ಮತ್ತು ಯಾರು ಖರೀದಿಸಿ ಫಿಕ್ಸ್ ಮಾಡಿಕೊಂಡಿರಿ ಎಂದು.
👇👇👇👇👇👇👇👇👇
ಲೇಖನ : ಪ್ರಮೀತ್ ರಾಜ್ ಕಟ್ಟತ್ತಾರು
Instagram / Facebook / Twitter
Tags – Save Your Child, New home, New house, save your child by hitting corner, corner protection, baby protection corner guards, amazon best offers, India, Corner Fix

Hello friend, thank you for taking an interest to read about me. I am the founder of coolinglass.com. I am a professional blogger and social media marketer. I love to write articles and suggest the best earning and learning tips to my readers. Feel free to get in touch with me through my social profiles. Love you all. Jai Hindh