James Movie Release | ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಹುಟ್ಟಿಕೊಂಡ ಎಲ್ಲಿಲ್ಲದ ಕ್ರೇಜ್ 

James Movie Release ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಹುಟ್ಟಿಕೊಂಡ ಎಲ್ಲಿಲ್ಲದ ಕ್ರೇಜ್ 

James Movie Release : ಕರ್ನಾಟಕದಾದ್ಯಂತ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಎಲ್ಲಿಲ್ಲದ ಕ್ರೇಜ್ ಹುಟ್ಟಿಕೊಂಡಿದ್ದು, ಪುನೀತ್ ರಾಜ್ ಕುಮಾರ್ ಅವರ ಮೇಲಿರುವ ಅತೀವ ಅಭಿಮಾನ ದಿಂದಾಗಿ ಜೇಮ್ಸ್ ಚಿತ್ರವೂ ಚಂದನವನದ ಎಲ್ಲಾ ದಾಖಲೆಗಳನ್ನು ಪುಡಿ ಗಟ್ಟುವ ಹುಮ್ಮಸ್ಸಿನಲ್ಲಿದೆ. ಚಿತ್ರದ ಬಿಡುಗಡೆಗೆ ಮುನ್ನ ದಿನವೇ ಎಲ್ಲಾ ಟಿಕೆಟ್ ಗಳೂ ಮಾರಾಟವಾಗಿದೆ. ಅದೆಷ್ಟೋ ಸಹಸ್ರಾರು ಜನ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ರವರನ್ನು ದೇವರೆಂದು ಪೂಜಿಸುತ್ತಿದ್ದು ಅವರು ಅಭಿನಯಿಸಿದ ಕೊನೆಯ ಚಿತ್ರಕ್ಕೆ ಹೃದಯ ತುಂಬಿ ಹರಸುತ್ತಿದ್ದಾರೆ. ಅದಲ್ಲದೆ ಇವತ್ತು ಎಲ್ಲಾ ಮಾಧ್ಯಮ ಗಳಲ್ಲೂ, ಜಾಲತಾಣದಲ್ಲೂ ಜೇಮ್ಸ್ ಚಿತ್ರದ್ದೇ ಹವಾ. 

 

ಕಳೆದ ವರ್ಷ ನಮ್ಮನ್ನಗಲಿದ ಕರ್ನಾಟಕದ ರತ್ನ, ಕರ್ನಾಟಕದ ಅಭಿಮಾನಿಗಳ ಕಣ್ಮಣಿ ಪುನೀತ್ ರಾಜ್ ಕುಮಾರ್ ಕೊನೆಯ ಚಿತ್ರ ಜೇಮ್ಸ್ ನ ಗ್ರ್ಯಾಂಡ್ ಪ್ರಿ-ರಿಲೀಸ್ ಈವೆಂಟ್‌ಗಳಿಂದ ಹಿಡಿದು ಕರ್ನಾಟಕದಾದ್ಯಂತ ವ್ಯಾಪಕವಾಗಿ ಬಿಡುಗಡೆಯಾಗುವವರೆಗೆ, ‘ಜೇಮ್ಸ್’ ಚಿತ್ರವು ಎಲ್ಲಾ ಅಭಿಮಾನಿಗಳಿಗೆ ಸಂಭ್ರಮಾಚರಣೆಯಾಗಿದೆ. ಪ್ರತಿ ಅಭಿಮಾನಿಗಳ ಮನೆ ಮನಗಳಲ್ಲೂ ಅಪ್ಪು ಅಗಲಿದ ನೋವಿನ ಜೊತೆ ಅವರ ಕೊನೆಯ ಚಿತ್ರದಲ್ಲಿ ಅವರನ್ನು ನೋಡುವ ಸಂಭ್ರಮ ಮನೆ ಮಾಡಿದೆ. ಇದೆಲ್ಲದರ ಫಲವಾಗಿ ‘ಜೇಮ್ಸ್’, ಚಿತ್ರವು ಕರ್ನಾಟಕದಲ್ಲಿ ಅತಿ ದೊಡ್ಡ ಥಿಯೇಟರ್ ಬಿಡುಗಡೆಯಾದ ಕನ್ನಡ ಚಿತ್ರವಾಗಿ ಹೊರ ಹೊಮ್ಮಲಿದೆ. 

 

Puneeth Rajkumar ಅಭಿನಯದ ‘ಜೇಮ್ಸ್’ ಚಿತ್ರವು ಮೊದಲ ದಿನ ಅಂದರೆ ಮಾರ್ಚ್ 17(James Movie Release) ರಂದು ಐದು ವಿಭಿನ್ನ ಭಾಷೆಗಳಲ್ಲಿ 4000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದ ಜೊತೆಗೆ ತಮಿಳು, ಮಲಯಾಳಂ, ತೆಲುಗು ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಗುತ್ತಿರುವ ‘ಜೇಮ್ಸ್’ ಕರ್ನಾಟಕವೊಂದರಲ್ಲೇ 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

 

James Movie Release

 

ನಾಯಕ ನಟನಾಗಿ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರವಾಗಿ ಮೂಡಿ ಬಂದಿರುವ ಬರುವ ‘ಜೇಮ್ಸ್’ ಚಲನ ಚಿತ್ರವನ್ನು ‘ಬಹದ್ದೂರ್’ ಸಿನಿಮಾ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ. ‘ಜೇಮ್ಸ್’ (James Movie Release) ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೊತೆ ಪ್ರಿಯಾ ಆನಂದ್, ಅನು ಪ್ರಭಾಕರ್ ಮುಖರ್ಜಿ, ಶ್ರೀಕಾಂತ್ ಮೇಕಾ, ಶರತ್ ಕುಮಾರ್ ಮತ್ತು ಇತರರು ನಟಿಸಿದ್ದಾರೆ. ಕಿಶೋರ್ ಪತ್ತಿಕೊಂಡ ಜೇಮ್ಸ್ ಚಿತ್ರದ ನಿರ್ಮಾಪಕರಾಗಿದ್ದು, ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.

 

ಚಿತ್ರದ ಮತ್ತೊಂದು ವಿಶೇಷವೆಂದರೆ ಚಿತ್ರದಲ್ಲಿ ಪುನೀತ್ ರಾಜ್‌ ಕುಮಾರ್ ಪಾತ್ರಕ್ಕೆ ಶಿವ ರಾಜ್‌ ಕುಮಾರ್ ಧ್ವನಿ ನೀಡಿದ್ದಾರೆ. 2021 ರ ಅಕ್ಟೋಬರ್‌ನಲ್ಲಿ ಅಪ್ಪು ಅವರ ದುರಂತ ಮತ್ತು ದುರದೃಷ್ಟಕರ ನಿಧನದ ನಂತರ ಪುನೀತ್ ರಾಜ್‌ ಕುಮಾರ್ ಅವರ ಪಾತ್ರಕ್ಕೆ ಡಬ್ಬಿಂಗ್ ಹಿರಿಯ ನಟ ಶಿವ ರಾಜ್ ಕುಮಾರ್ ಅವರು ಮಾಡಬೇಕಾಯಿತು.

 

ಚಿತ್ರ ತಂಡವು ಇತ್ತೀಚೆಗೆ ಮಾರ್ಚ್ 13ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ಕಾರ್ಯಕ್ರಮದಲ್ಲಿ ಇಂಡಸ್ಟ್ರಿಯ ಅನೇಕ ಗಣ್ಯ ವ್ಯಕ್ತಿಗಳು ಹಾಜರಿದ್ದರು. ‘ಜೇಮ್ಸ್’ ಚಿತ್ರದ ಪ್ರಮುಖ ಪಾತ್ರವರ್ಗ ಮತ್ತು ಸಿಬ್ಬಂದಿಗಳ ಜೊತೆಗೆ, ಶ್ರೀ ಮುರಳಿ ಮತ್ತು ಪುನೀತ್ ರಾಜ್‌ಕುಮಾರ್ ಅವರ ಕುಟುಂಬದ ಅನೇಕ ಸದಸ್ಯರು ಸಹ ಕಾರ್ಯಕ್ರಮಕ್ಕೆ ಆಗಮಿಸಿದರು ಅತ್ಯಂತ ಭಾವನಾತ್ಮಕ ರೀತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

 

Recommended for you:

Best Insurance Policies that everyone to have in 2022

Best Insurance Policies in 2022: While there are numerous types of life insurance, they fall into one of two categories: annuity and universal. An annuity is a fixed-term investment, with the possibility of receiving periodic payments for your life. An annuity can be purchased on a fixed-term basis or at a fixed rate Read More…

 

Read Also: Puneeth Rajkumar Life Story. Things to know about Puneeth Rajkumar

Read Also: Kaccha Badam Original Lyrics In different Language

Read Also: Vladimir Putin Biography, Age, Family, Income, Networth, Facts, Wiki

Read Also: Meera Jasmine Hot Photos and Photoshoot

 

 

 

2 thoughts on “James Movie Release | ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಹುಟ್ಟಿಕೊಂಡ ಎಲ್ಲಿಲ್ಲದ ಕ್ರೇಜ್ ”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ