ಯಶ್ ಬಗ್ಗೆ ನಿಮಗೆ ಗೊತ್ತಿರದ ಒಂದು ಸತ್ಯ ಸಂಗತಿ – KGF King Rocking Star Yash

ಕಳೆದ ವರ್ಷದ ಕೊವಿಡ್ -19 ಮೊದಲನೇ ಅಲೆಯಿಂದಲೇ ಅದೆಷ್ಟೋ ಬೇರೆ ಬೇರೆ ವರ್ಗದ ಜನರಿಗೆ ಬಹಳಷ್ಟು ತೊಂದರೆಗಿಡಾಗಿದ್ದು ಅದರ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಇದಿಗ ಎರಡನೇ ಅಲೆ ಬಂದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದ್ದು ಅಕ್ಷರಷಃ ಸತ್ಯ. KGF King Rocking Star Yash
ಸಿನಿಮಾ ರಂಗ, ಶೈಕ್ಷಣಿಕ ರಂಗ, ವ್ಯವಹಾರ ರಂಗ, ಬಡವರು, ಮಧ್ಯಮ ವರ್ಗದವರು ಹೀಗೆ ಬಹುತೇಕ ಎಲ್ಲಾ ವರ್ಗದವರಿಗೂ ಕೊರನಾದ ಹೊಡೆತ ಬಿದ್ದಿದ್ದೂ ಇದರಿಂದ ಇನ್ನು ಚೇತರಿಸಿಕೊಳ್ಳಲು ಇನ್ನು ವರ್ಷಗಳೇ ಬೇಕಾಗಬಹುದು. ಹೀಗಿರುವಾಗ ಈ ಕಷ್ಟದ ಹೊತ್ತಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡಲು ಮುಂದೆ ಬರುವವರು ಈ ಹೊತ್ತಿಗೆ ನಿಜವಾಗಿಯು ದೇವರಾಗಿ ಕಾಣಬಲ್ಲರು. ಏಕೆಂದರೆ ಕಷ್ಟ ಕಾಲದಲ್ಲಿ ಸಹಾಯ ಮಾಡಲು ಬಂದವನು ಆಪತ್ಭಾಂದವನೆಣಿಸಿಕೊಳ್ಳುತ್ತಾನೆ.
ಕೊರೊನೊದ ಎರಡನೇ ಅಲೆಯಿಂದ ಹೊಡೆತಕ್ಕೊಳಗಾದ ಸಿನಿಮಾ ರಂಗವಂತೂ ಇನ್ನೂ ಚೇತರಿಸಿಕೊಂಡಿಲ್ಲಾ. ಅದೆಷ್ಟೋ ಸಂಘ ಸಂಸ್ಥೆಗಳು, ಹೀರೂಗಳು ತಮ್ಮ ಕೈಲಾದ ಸಹಾಯವನ್ನು ಸಿನಿಮಾ ರಂಗದ ಪರದೆಯ ಮುಂದಿನ ಮತ್ತು ಹಿಂದಿನ ಕಲಾವಿದರಿಗೆ ತಂತ್ರಜ್ಞರಿಗೆ ಸಹಾಯ ಮಾಡುತ್ತಿದ್ದಾರೆ.
ಕೆಲವರ ಸಹಾಯ ಪ್ರಚಾರದಲ್ಲಿದ್ದರೆ ಇನ್ನು ಕೆಲವರು ತೆರೆಯ ಹಿಂದಿನಿಂದಲೇ ಸಹಾಯ ಹಸ್ತ ಚಾಚಿ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಅವರಲ್ಲಿ Rocking Star ಯಶ್ ಸಹ ಒಬ್ಬರು.
Amazing Offers on Wireless Earbuds
ಕೆ.ಜಿ.ಎಫ್ ನ ರಾಕಿ ಭಾಯಿ ರಾಕಿಂಗ್ ಸ್ಟಾರ್ ಯಶ್ ಕೊರೊನದ ಈ ಸಂಕಷ್ಟ ಕಾಲದಲ್ಲಿ ಕನ್ನಡದ ಬಹುತೇಕ ಹೆಚ್ಚಿನ ಎಲ್ಲಾ ಸಹ ಕಲಾವಿದರಿಗೆ ತಂತ್ರಜ್ಞರಿಗೆ ಸಹಾಯ ಮಾಡಿ ಆಪತ್ಭಾಂದವ ಎನಿಸಿಕೊಂಡಿದ್ದಾರೆ. ಒಂದು ಸಣ್ಣ ದೇಣಿಗೆ ಕೊಟ್ಟು ಎಲ್ಲಾ ಮಾಧ್ಯಮಗಳ ಮುಂದೆ ಪೊಸು ಕೊಡುವ ಈ ಕಾಲದಲ್ಲಿ ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೆ ತಿಳಿಯಬಾರದು ಎಂಬಂತೆ ಯಶ್ ತಾನು ತೆರೆಮರೆಯಲ್ಲಿಯೇ ಹಣದ ಸಹಾಯ ಮಾಡಿ ತನ್ನ ಮೇಲಿದ್ದ ಅಭಿಮಾನವನ್ನು ಇನ್ನೂ ಹೆಚ್ಚಾಗುವಂತೆ ಮಾಡಿದ್ದಾರೆ.
ಅಷ್ಟಕ್ಕೂ ಯಶ್ ಮಾಡಿದ ಸಹಾಯ ಎಷ್ಟು ಗೊತ್ತಾ?
ಯಶ್ 5000 ರೂ ಗಳಂತೆ ಸುಮಾರು 3000ಕ್ಕೂ ಅಧಿಕ ಸಹ ಕಲಾವಿದರಿಗೆ ತಂತ್ರಜ್ಞರಿಗೆ ನೇರವಾಗಿ ಅವರ ಎಕೌಂಟ್ ಗೆ ಕಳುಹಿಸಿದ್ದಾರೆ. ಯಶ್ ಅವರು ಸಹಾಯ ಮಾಡಿದ ಒಟ್ಟು ಮೊತ್ತ 1 ಕೋಟಿ 60 ಲಕ್ಷ. ಫಿಲಂ ಚೇಂಬರಿಂದ ನೇರವಾಗಿ ನಂಬರ್ ಪಡೆದು ಕಲಾವಿದರಿಗೆ ದುಡ್ಡು ಕಳುಹಿಸಿದ್ದಾರೆ. ಕೆಲವು ಕಲಾವಿದರು ಸಂತೊಷದಿಂದ ಮತ್ತು ಧನ್ಯತಾ ಭಾವದಿಂದ ಸ್ವ ಇಚ್ಚೆಯಿಂದ ಸಹಾಯದ ಕುರಿತಾದ ಸೆಲ್ಫಿ ವೀಡಿಯೋ ಮಾಡಿ ಯೂಟ್ಯೂಬಲ್ಲಿ ಹಾಕಿ ತುಂಬು ಹೃದಯದಿಂದ ಯಶ್ ರವರನ್ನು ಹರಸಿದ್ದಾರೆ. ಈ ಸತ್ಕಾರ್ಯದಿಂದ ರಾಕಿಂಗ್ ಸ್ಟಾರ್ ಯಶ್ ಹೆಸರಿನಲ್ಲಿದ್ದ ಹಾಗೆ ಅಭಿಮಾನಿಗಳ ಪಾಲಿಗೆ ಕಿಂಗ್ ಎನಿಸಿಕೊಂಡಿದ್ದಾರೆ.
ಮರ ಬೆಳೆದು ಹೆಮ್ಮರವಾದಷ್ಟು ಹೆಚ್ಚು ಹೆಚ್ಚು ಜನರಿಗೆ ನೆರಳಾಗಿ ಪಕ್ಷಿ ಸಂಕುಲಗಳಿಗೆ ಆಸರೆಯಾಗಿ ನಿಲ್ಲಬಲ್ಲದು ಮತ್ತು ನಿಲ್ಲಬೇಕು. ಇದರಿಂದ ಆ ಮರದ ಮೇಲೆ ಪೂಜನೀಯ ಭಾವ ಹೆಚ್ಚುತ್ತದೆಯೇ ಹೊರತು ಅಡ್ಡಿ ಅಥವಾ ವ್ಯರ್ಥ ಎಣಿಸಲ್ಲ. ಹೀಗೆಯೇ ಮನುಷ್ಯನೂ ಅಷ್ಟೇ ತಾನು ಬೆಳೆದಷ್ಟೂ ತನ್ನವರಿಗೂ ಉಳಿದವರಿಗೂ ಆಸರೆಯಾದರೆ ಆತ ಶ್ರೇಷ್ಠನೆಂದೆಣಿಸಿಕೊಳ್ಳುತ್ತಾನೆ.

Hello friend, thank you for taking an interest to read about me. I am the founder of coolinglass.com. I am a professional blogger and social media marketer. I love to write articles and suggest the best earning and learning tips to my readers. Feel free to get in touch with me through my social profiles. Love you all. Jai Hindh