Ruth Clare D’Silva Biography in Kannada | ಮಂಗಳೂರಿನ ಹುಡುಗಿ ರುತ್ ಕ್ಲೇರ್ ಡಿಸಿಲ್ವಾ ಸಿಎ ಪರೀಕ್ಷೆಯಲ್ಲಿ ಸಾಧನೆ

ರೂತ್ ಕ್ಲೇರ್ ಡಿ’ಸಿಲ್ವ ಸಾಧನೆ ಮತ್ತು ಜೀವನಚರಿತ್ರೆಯ ಮಾಹಿತಿ

ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಚಾರ್ಟೆಡ್ ಅಕೌಂಟ್ ಅಂತಿಮ ಪರೀಕ್ಷೆಯಲ್ಲಿ ಮಂಗಳೂರಿನ ಹುಡುಗಿ Ruth Clare D’Silva ರವರು ಮೊದಲ ರಾಂಕ್ ಗಳಿಸುವುದರ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

2021 ಸಾಲಿನ ಹಳೆಯ ಸಿಲಬಸ್ ಹೊಂದಿದ್ದ ಚಾರ್ಟೆಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯನ್ನು Institute of Chartered Accountants of India – ICAI ಜೂಲೈಯಲ್ಲಿ ಹಮ್ಮಿಕೊಂಡಿತ್ತು. ಇದರ ಫಲಿತಾಂಶ ಇಂದು ಹೊರ ಬಿದ್ದಿದ್ದು ಮಂಗಳೂರಿನ ಹುಡುಗಿ ರುತ್ ಕ್ಲೇರ್ ಡಿಸಿಲ್ವಾ ಭಾರತದಲ್ಲೇ ಪ್ರಥಮಾ ರಾಂಕ್ ಗಳಿಸಿದ್ದಾರೆ.

 

ಮಂಗಳೂರು ಬುದ್ಧಿವಂತರ ನಾಡು ಎಂಬ ಮಾತಿಗೆ ರುತ್ ರವರು ಮತ್ತೊಂದು ಸಾಕ್ಷಿಯಾಗಿ ನಿಂತಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಲೋಕಾಯುಕ್ತ ಸಂತೋಷ್ ಹೆಗಡೆ, ಟಿ ಮೋಹನದಾಸ್ ಎ ಪೈ , ದಯಾ ನಾಯಕ್, ಶಿವರಾಮ ಕಾರಂತ, ಬಿ ಆರ್ ಶೆಟ್ಟಿ, ಸುನೀಲ್ ಶೆಟ್ಟಿ ಹೀಗೆ ಅನೇಕ ಹೆಸರುವಾಸಿಯಾದ ಉದ್ಯಮಿಗಳ, ಸಾಹಿತಿಗಳ, ಸಿನಿಮಾ ಕಲಾವಿದರನ್ನು ಹುಟ್ಟು ಹಾಕಿದ ನಾಡು ಮಂಗಳೂರು.

Ruth Clare D’Silva ಬಯಾಗ್ರಫಿ ಕುರಿತು ಕೆಲವು ಮಾಹಿತಿಗಳು. Ruth Clare D’Silva ರ ತಂದೆಯ ಹೆಸರು ರೂಫರ್ಟ್ ಡಿಸಿಲ್ವಾ ಮತ್ತು ತಾಯಿ ರೋಸಿ ಮರಿಯಾ ಡಿಸಿಲ್ವಾ. Ruth Clare D’Silva ಮಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದಾರೆ.

Ruth Clare D’Silva Biography in Kannada

Ruth Clare D’Silva Biography in Kannada

 

ತನ್ನ ಪ್ರಾಥಾಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು Ruth Clare D’Silva ರವರು ಮಂಗಳೂರಿನ ಮಲ್ಲಿಕಟ್ಟೆ ಬೆಂದೂರಿನ ಸಂತ ತೆರೇಸಾ ಶಾಲೆಯಲ್ಲಿ ಮುಗಿಸುತ್ತಾರೆ. ನಂತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಪಡೆಯುತ್ತಾರೆ.

ನಂತರ ಚಾರ್ಟೆಡ್ ಅಕೌಂಟೆಂಟ್ ಶಿಕ್ಷಣ ಕಲಿಯುವತ್ತ ಆಸಕ್ತಿ ತೋರಿದ Ruth Clare D’Silva ರವರು ಚಾರ್ಟೆಡ್ ಅಕೌಂಟೆಂಟ್ ಆರ್ಟಿಕಲ್ಶಿಪನ್ನು ಸಿಎ ವಿವಿಯನ್ ಪಿಂಟೋ ನೇತೃತ್ವದಲ್ಲಿ ಮಂಗಳೂರಿನ ಬಲ್ಮಠದ ಸಿಎ ವಿವಿಯನ್ ಪಿಂಟೋ ಅಂಡ್ ಕೋ ಸಂಸ್ಥೆಯಲ್ಲಿ ಪೂರೈಸುತ್ತಾರೆ.

 

”ನಿಯೋಜನೆಗಳನ್ನು (ಅಸೈನ್ಮೆಂಟ್) ನಿರ್ವಹಣೆ ಮಾಡುವಲ್ಲಿ Ruth Clare D’Silva ಅದ್ಭುತವಾಗಿದ್ದಳು ಹಾಗೂ ಆಕೆಯ ತರಬೇತಿಯ ಸಮಯದಲ್ಲಿ ಬಹಳ ಅತ್ಯುತ್ತಮವಾಗಿದ್ದಳು. ರುತ್ ಉತ್ತಮ ವ್ಯಕ್ತಿಗತ ಮತ್ತು ಸಂವಹನ ಕೌಶಲ್ಯಗಳನ್ನು ಹೊಂದಿದ್ದಾಳೆ” ಎಂದು ಸಿಎ ವಿವಿಯನ್ ಪಿಂಟೊ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾರತಕ್ಕೆ ಪ್ರಥಮ ರಾಂಕ್ ನಲ್ಲಿ ಉತ್ತೀರ್ಣರಾದ ನಮ್ಮ ಸಂಸ್ಥೆಯ ಮೊದಲ ವಿದ್ಯಾರ್ಥಿನಿ Ruth Clare D’Silva ಎಂದು ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ (ಸಿಐಎಲ್) ನ ಸಂಚಾಲಕರು ಮತ್ತು Ruth Clare D’Silva ರವರ ಮಾರ್ಗದರ್ಶಕರು ಆದ ಎಸ್ ನಂದಗೋಪಾಲ್ ರವರು ಸಂತಸ ವ್ಯಕ್ತಪಡಿಸಿದ್ದಾರೆ.

” ಸಿಎ ಅಂತಿಮ ಪರೀಕ್ಷೆ ತುಂಬಾ ಕಷ್ಟ ಇತ್ತು ಮತ್ತು ನನ್ನ ಸಂಪೂರ್ಣ ಪ್ರಯತ್ನ ಕೊಟ್ಟಿದ್ದೇನೆ. ಆದರೆ ನಾನು ದೇಶಕ್ಕೆ ಮೊದಲ ರಾಂಕ್ ಬರುತ್ತೇನೆ ಎಂದು ಖಂಡಿತವಾಗಿ ಭಾವಿಸಿರಲಿಲ್ಲ. ಈ ವಿಷಯ ನನಗೆ ಮತ್ತು ನನ್ನ ಕುಟುಂಬಕ್ಕೆ ಇನ್ನಿಲ್ಲದ ಸಂತಸ ತಂದಿದೆ. ಜೀವನದಲ್ಲಿ ಮರೆಯಲಾಗದ ಕ್ಷಣ” ಎಂದು ರುತ್ ಕ್ಲೇರ್ ಸಂತಸ ವ್ಯಕ್ತಪಡಿಸಿದ್ದಾರೆ.

Ruth Clare D’Silva Biography in Kannada

Ruth Clare D’Silva Biography in Kannada

 

Ruth Clare D’Silva Biography in Kannada

ಹೆಸರು : ರುತ್ ಕ್ಲೇರ್ ಡಿಸಿಲ್ವಾ

ಜನ್ಮ ದಿನಾಂಕ : Unknown

ಜನ್ಮ ಸ್ಥಳ : ಮಂಗಳೂರು

ತಂದೆಯ ಹೆಸರು : ರೂಫರ್ಟ್ ಡಿಸಿಲ್ವಾ

ತಾಯಿಯ ಹೆಸರು : ರೋಸಿ ಮರಿಯಾ ಡಿಸಿಲ್ವಾ

ಒಡಹುಟ್ಟಿದವರು : Unknown

ಪ್ರಾಥಮಿಕ ಶಿಕ್ಷಣ : ಸಂತ ತೆರೇಸಾ ಶಾಲೆ ಮಲ್ಲಿಕಟ್ಟ ಬೆಂದೂರು ಮಂಗಳೂರು

ಪ್ರೌಢ ಶಿಕ್ಷಣ : ಸಂತ ತೆರೇಸಾ ಶಾಲೆ ಮಲ್ಲಿಕಟ್ಟ ಬೆಂದೂರು ಮಂಗಳೂರು

ಪದವಿ : ಮಂಗಳೂರು ವಿಶ್ವವಿದ್ಯಾನಿಲಯ ದೂರ ಶಿಕ್ಷಣ

ಸಿಎ ಆರ್ಟಿಕಲ್ಶಿಪ್ : ಸಿಎ ವಿವಿಯನ್ ಪಿಂಟೋ ಅಂಡ್ ಕೋ ಸಂಸ್ಥೆ.

ಸಿಎ ಮಾರ್ಗದರ್ಶಕರು : ಸಿಎ ವಿವಿಯನ್ ಪಿಂಟೋ ಮತ್ತು ಎಸ್ ನಂದಗೋಪಾಲ್

ದಾಖಲೆಗಳು : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಚಾರ್ಟೆಡ್ ಅಕೌಂಟ್ ಅಂತಿಮ ಪರೀಕ್ಷೆಯಲ್ಲಿ ಭಾರತದಲ್ಲೇ ಪ್ರಥಮ ರಾಂಕ್ ಗಳಿಸಿದ ಮಂಗಳೂರಿನ ಮೊದಲ ಹುಡುಗಿ, ಸಿಎ ಪರೀಕ್ಷೆಯಲ್ಲಿ ಭಾರತಕ್ಕೆ ಮೊದಲ ರಾಂಕ್ ಗಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ವಿದ್ಯಾರ್ಥಿನಿ.

ಹವ್ಯಾಸಗಳು : Unknown

ಎತ್ತರ : Unknown

ತೂಕ : Unknown

ಇಷ್ಟವಾದ ತಿಂಡಿ – ತಿನಿಸು: Unknown

ಸಿಎ ಸಂಸ್ಥೆ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ – ICAI

ಸಿಎ ಫಲಿತಂಶ ದಿನಾಂಕ : ೧೪(ಸೋಮವಾರ) ಆಗಸ್ಟ್ ೨೦೨೧

ವೈವಾಹಿಕ ಜೀವನ : ಅವಿವಾಹಿತರು

ಉದ್ಯೋಗ : Unknown

 

Read Also: Devdutt Padikkal Biography in Kannada

Read Also: Radhakrishna Serial Sumedh Mudgalkar Biography in Kannada

 

 

FAQ

Q: What is Ruth Clare DSilva Age?

A: Ruth Clare D’Silva Age Unknown

Q: Where is Ruth Clare DSilva Native Place?

A: Ruth Clare D’Silva Native place Mangalore

Q: Who is Ruth Clare DSilva Father Name?

A: Ruth Clare D’Silva father is Rufertt D’Silva

Q: Ruth Clare DSilva is famous for?

A: A Mangalorean girl Ruth Clare D’Silva secured 1st Rank in All India CA       Examination 2021

Q: What is the Instagram id of Ruth Clare D’silva

A: Unknown

Q: Marksheet of Ruth Clare Dsilva

A: Not yet revealed

Q: Linkedin id of Ruth Clare Dsilva

A: Unknown

Q: Full Form of ICAI

A: ICAI – Institute Of Charted Accountants of India

 

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio