ಅಕ್ಷಯ ಸಮೂಹ ಸಂಸ್ಥೆಯ ಮಾಲಕರಾದ ಉದ್ಯಮಿ ಜಯಂತ್ ನಡುಬೈಲು ಅವರಿಂದ ”ಧನ್ವಂತರಿ” ಕಿರುಚಿತ್ರ ಬಿಡುಗಡೆ. 

ಅಕ್ಷಯ ಸಮೂಹ ಸಂಸ್ಥೆಯ ಮಾಲಕರಾದ ಉದ್ಯಮಿ ಜಯಂತ್ ನಡುಬೈಲು ಅವರಿಂದ ”ಧನ್ವಂತರಿ” ಕಿರುಚಿತ್ರ ಬಿಡುಗಡೆ. 

ಇತ್ತೀಚಿಗೆ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಂಡು ಕೊರೊನದ ಕರಿ ಛಾಯೆಯ ನಡುವಲ್ಲೂ ಭರ್ಜರಿ ಯಶಸ್ಸು ಕಂಡು 50 ಪ್ರದರ್ಶನವನ್ನು ಕಂಡ ಗ್ರೂಫಿ ಕನ್ನಡ ಸಿನಿಮಾದ ನಾಯಕ ನಟ ಆರ್ಯನ್ ಅವರ ಮಾಲಕತ್ವದಲ್ಲಿ ಡ್ರೀಮ್ ಕ್ಯಾಚರ್ಸ್ ಅರ್ಪಿಸುವ ಮಾತೃಶ್ರೀ ಕ್ರಿಯೇಷನ್ಸ್ ರವರ  ”ಧನ್ವಂತರಿ ಮಿಸ್ಸಿಂಗ್ ” ಕನ್ನಡ  ಕಿರುಚಿತ್ರವನ್ನು ನವಂಬರ್ 13 ಪುತ್ತೂರು ರೋಟರಿ ಟ್ರಸ್ಟ್ ಹಾಲ್ ನಲ್ಲಿ ಬಿಡುಗಡೆಗೊಂಡಿದೆ.

ಅಕ್ಷಯ ವಿದ್ಯಾಸಂಸ್ಥೆಯ ಸಂಚಾಲಕರು ಹಾಗೂ ಅಕ್ಷಯ ಸಮೂಹ ಸಂಸ್ಥೆಯ ಉದ್ಯಮಿಗಳಾದ ಜಯಂತ್ ನಡುಬೈಲ್  ಅವರು ದೀಪ ಬೆಳಗಿಸುವುದರ ಮೂಲಕ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ,  ”ಧನ್ವಂತರಿ ಮಿಸ್ಸಿಂಗ್ ” ಕನ್ನಡ  ಕಿರುಚಿತ್ರವನ್ನು ಬಿಡುಗಡೆಗೊಳಿಸಿದರು.

 

ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿಗಳಾಗಿ ಉದ್ಯಮಿ ಜಯಂತ್ ನಡುಬೈಲು ಕನ್ನಡ ಚಲನಚಿತ್ರ ನಟ ಹಾಗೂ ಡ್ರೀಮ್ ಕ್ಯಾಚರ್ಸ್ ನ ಸಂಸ್ಥಾಪಕರಾದ ಆರ್ಯನ್ ಎಸ್ ಜಿ, ಖ್ಯಾತ ಹಾಸ್ಯ ಕಲಾವಿದರಾದ  ರವಿ ರಾಮ ಕುಂಜ, ಲೋಕೇಶ್ ಸಜಿಪ, ಬರಹಗಾರ್ತಿ ನವ್ಯ ಮತ್ತು “ಧನ್ವಂತರಿ missing” ಕಿರುಚಿತ್ರದ ನಟ, ನಿರ್ದೇಶಕ ಅಶ್ವಥ್ ನಾಯ್ಕ್ ಉಪಸ್ಥಿತರಿದ್ದರು.

ಚಿತ್ರದಲ್ಲಿ  ಅಶ್ವತ್ ನಾಯಕ್,  ವಿಂಧ್ಯಾ ಶ್ರೀ ರೈ , ಪೂಜಾ ಬಿ. , ವೈಷ್ಣವಿ ಉಜಿರೆ ಮುಂತಾದವರು ಅಭಿನಯಿಸಿದ್ದಾರೆ. ಈ ಕಿರುಚಿತ್ರಕ್ಕೆ ಅಶ್ವಥ್ ನಾಯ್ಕ್ ಅವರು ಕಥೆ ಮತ್ತು ಚಿತ್ರಕಥೆ ಹೆಣೆದಿದ್ದು, ಸಂಭಾಷಣೆ, ಪೋಸ್ಟರ್ ವಿನ್ಯಾಸ ಮತ್ತು ನಿರ್ದೇಶನವನ್ನೂ ಸಹ ಅಶ್ವಥ್ ನಾಯ್ಕ್ ಅವರು ಮಾಡಿದ್ದಾರೆ. ಛಾಯಾಗ್ರಹಣವು  ಅಕ್ಷಯ್ ಕೋಲ್ಚಾರ್, ಚನ್ನು ಬಿರ್ವಾ ಮತ್ತು ಸುಶಾಂತ್ ಅವರ ಕೈಚಳಕದಲ್ಲಿ ಮೂಡಿಬಂದಿದೆ. ಸಂಕಲನವನ್ನು ಮಹಾಶ್ವ ಕ್ರಿಯೇಷನ್ ಮಾಡಿದ್ದಾರೆ.

ಪುಟಾಣಿ ವೈಷ್ಣವಿಯಿಂದ ಪ್ರಾರ್ಥನೆ, ವಿಂದ್ಯಾಶ್ರೀ  ರೈ ಯಿಂದ ಸ್ವಾಗತ ಭಾಷಣ, ಕೀರ್ತಿ ಕೆ. ಯವರಿಂದ ಧನ್ಯವಾದ ಸಮರ್ಪಣೆ, ಹಾಗೂ ಭಾಗ್ಯಶ್ರೀ ರೈ ರವರಿಂದ ನಿರೂಪಣೆ ಹಾಗೂ  ಕಿರುಚಿತ್ರದ ಎಲ್ಲಾ ಕಲಾವಿದರು,ನೆರೆದಿದ್ದ ಕಲಾಭಿಮಾನಿಗಳ ಸಹಕಾರದಿಂದ  ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರಿತು. ಇದೇ ಸಂಧರ್ಭದಲ್ಲಿ ಅಶ್ವಥ್ ನಾಯ್ಕ್ ಅವರ ಹೊಸ ಕಿರುಚಿತ್ರ   “ಅಂದಗಾರ” ದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಜರುಗಿತು.

 

ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ನಡುಬೈಲು ಮತ್ತು ಖ್ಯಾತ ಹಾಸ್ಯ  ಕಲಾವಿದರಾದ  ರವಿ ರಾಮ ಕುಂಜ, ಲೋಕೇಶ್ ಸಜಿಪ ಇವರುಗಳು ಮಾತನಾಡಿ ಕಿರುಚಿತ್ರ ತಂಡಕ್ಕೆ ಶುಭ ಹಾರೈಸಿದರು.

ವಿಭಿನ್ನ ಕಥಾ ಹಂದರವುಳ್ಳ ಮತ್ತು ಕ್ಷಣ ಕ್ಷಣಕ್ಕೂ ರೋಚಕ ತಿರುವನ್ನು ಹೊಂದಿರುವ ಸುಮಾರು ಮೂವತ್ತು ನಿಮಿಷಗಳ ಈ ಕಿರುಚಿತ್ರವು ಈದೀಗ ಡ್ರೀಮ್ ಕ್ಯಾಚರ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ, ಶೇರ್ ಮಾಡಿ ಹೊಸ ಪ್ರತಿಭೆಗಳ ಈ ಪುಟ್ಟ ಪ್ರಯತ್ನವನ್ನು ಪ್ರೋತ್ಸಾಹಿಸಬೇಕಾಗಿ ಕಿರು ಚಿತ್ರದ ನಟ ನಿರ್ದೇಶಕ ಅಶ್ವಥ್ ನಾಯ್ಕ್ ಕೇಳಿ ಕೊಂಡಿದ್ದಾರೆ.

 

ಧನ್ವಂತರಿ ಕಿರುಚಿತ್ರ ಯುಟ್ಯೂಬ್ :-

Also Read: Rockstars Games | Grand Theft Auto remaster leaked

Also Read: Fiewin app is real or fake | Genuine review about Fiewin app

Also Read: Puneeth rajkumar Life Story | ಒಂದು ದಿನ ನಾನು ಸಹ ನನ್ನ ತಂದೆಯಂತೆ ತುಂಬಾ ಪ್ರಸಿದ್ಧಿಯನ್ನು ಪಡೆಯುತ್ತೇನೆ

 

 

Leave a Comment