ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಬಿಡುಗಡೆ ಮಾಡಲಿರುವ ”ಗ್ರೂಫಿ” ಸಿನಿಮಾದ ಧ್ವನಿ ಸುರುಳಿ


ಸಾಮಾಜಿಕ ಜಾಲತಾಣದಲ್ಲಿ ತನ್ನ ಪೋಸ್ಟರ್ ಗಳ ಮೂಲಕವೇ ಸಂಚಲನವನ್ನೇ ಮೂಡಿಸುತ್ತಿರುವ ಆಗಸ್ಟ್ 20ರಂದು ತೆರೆಗೆ ಬರಲು ಸಿದ್ಧವಾಗಿರುವ ಕನ್ನಡ ಚಲನಚಿತ್ರ ”ಗ್ರೂಫಿ”ಯ ಧ್ವನಿ ಸುರುಳಿ ನಾಳೆ (5 ರಂದು) ಸಂಜೆ ಲಹರಿ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಅಗಲಿದೆ. ವಿಜೇತ ಕೃಷ್ಣ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಗ್ರೂಫಿ ಚಿತ್ರದ ಹಾಡುಗಳನ್ನು ಚಂದನವನದ ಮ್ಯಾಜಿಕಲ್ ಕಂಪೋಸರ್ ಎಂದೇ ಪ್ರಸಿದ್ಧರಾಗಿರುವ ಅರ್ಜುನ್ ಜನ್ಯ ರವರು ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರದ ಹಾಡುಗಳಿಗೆ ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಹೃದಯ ಶಿವ ಸಾಹಿತ್ಯವನ್ನು ಬರೆದಿದ್ದಾರೆ.

ಈ ಚಿತ್ರದಲ್ಲಿ ಪುತ್ತೂರಿನ ಆರ್ಯನ್ ನಾಯಕ ನಟನಾಗಿ ನಟಿಸಿದರೆ, ನಾಯಕಿಯಾಗಿ ಪದ್ಮಶ್ರೀ ಜೈನ್ ನಟಿಸಿದ್ದಾರೆ. ಉಳಿದಂತೆ ಗಗನ್, ಪ್ರಜ್ವಲ್, ಉಮಾ ಮಯೂರಿ, ಸಂಧ್ಯಾ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆಗಸ್ಟ್ 20ರಂದು `ಗ್ರೂಫಿ’ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಸದ್ಯದಲ್ಲೇ ಚಿತ್ರದ ಟೀಸರ್ ಮತ್ತು ಟ್ರೇಲರ್ ಅನ್ನು ಬಿಡುಗಡೆ ಮಾಡಲಿದೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರರಂಗದ ಹಿರಿಯ ಕಲಾವಿದರಾದ ಹನುಮಂತೇ ಗೌಡ್ರು, ಸಂಗೀತ, ಶ್ರೀಧರ್, ರಘು ಪಾಂಡೇಶ್ವರ್ ಮುಂತಾದವರು ತಾರಗಣದಲ್ಲಿದ್ದಾರೆ.

 

ಪುತ್ತೂರಿನ ಆರ್ಯನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ‘ಗ್ರೂಫಿ’ ತೆರೆಗೆ ಬರಲು ದಿನಾಂಕ ಫಿಕ್ಸ್

ಚಿತ್ರೀಕರಣದ ವೇಳೆ ಜೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ರಿಗೆ ಅಪಘಾತ: ಆಸ್ಪತ್ರೆಗೆ ದಾಖಲು

 

 

 

ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಗ್ರೂಫಿ ಚಿತ್ರವನ್ನು ಕೆ. ಜಿ ಸ್ವಾಮಿಯವರು ನಿರ್ಮಾಣ ಮಾಡಿದ್ದು, ಡಿ.ರವಿ ಅರ್ಜುನ್ ರವರು ಕಥೆಯನ್ನು ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಲಕ್ಷೀಕಾಂತ್ ಅವರ ಕ್ಯಾಮೆರಾ ಕೈಚಳಕವಿದೆ. ವೀಕ್ಷಕರನ್ನು ಕೊನೆಯ ತನಕ ಹಿಡಿದಿಟ್ಟುಕೊಳ್ಳುವಂತಹ ಕಥೆಯನ್ನು ಪೋಣಿಸಿದ್ದ ಕಥೆಗಾರರು ಕ್ಷಣ ಕ್ಷಣವೂ ಚಿತ್ರ ರಸಿಕರಿಗೆ ಥ್ರಿಲ್ ನೀಡುವುದರ ಜೊತೆಗೆ ಮನರಂಜೆಯನ್ನು ಕೊಡುತ್ತದೆ ಎಂದು ಚಿತ್ರತಂಡ ಹೇಳಿದೆ.

 


2 thoughts on “ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಬಿಡುಗಡೆ ಮಾಡಲಿರುವ ”ಗ್ರೂಫಿ” ಸಿನಿಮಾದ ಧ್ವನಿ ಸುರುಳಿ

Leave a Reply

Your email address will not be published. Required fields are marked *

x
error

Enjoy this blog? Please spread the word :)