ತಮಿಳಿನ ಖ್ಯಾತ ನಟಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯಾದಂತಹ ಜೆ ಜಯಲಲಿತಾ ಅವರ ಜೀವನ ಆಧಾರಿತ ಜೀವನ ಚರಿತ್ರೆಯ ಸಿನಿಮಾ “ತಲೈವಿ”(Thalaivii Release date) ಇದೇ ಸೆಪ್ಟೆಂಬರ್ 10 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.
ಬಾಲಿವುಡ್ ನ ಪ್ರಸಿದ್ಧ ನಟಿ ಆಕ್ಷನ್ ಕ್ವೀನ್ ಕಂಗನಾ ರಣಾವತ್ ನಾಯಕಿಯಾಗಿ ನಟಿಸಿರುವ ಬಹುಭಾಷಾ ಚಲನಚಿತ್ರವು ಈ ಮೊದಲು ೨೦೨೧ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು ಆದರೆ ದೇಶದಲ್ಲಿ ಕರೋನ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ತೀವ್ರತೆ ಹೆಚ್ಚಾದರಿಂದ ಚಿತ್ರ ಬಿಡುಗಡೆಯನ್ನು ಮುಂದೂಡಲಾಯಿತು.
ಬಾಲಿವುಡ್ ನಲ್ಲಿ ಹಲವು ಆಕ್ಷನ್ ಚಿತ್ರಗಳಲ್ಲಿ ನಟಿಸಿದ ಕಂಗನಾ ರನೌತ್ ದಕಾಡ್ ಮತ್ತು ತೇಜಸ್ ಮುಖಾಂತರ ತನ್ನ ಹಿರೋಯಿಸಂ ನ ತಾಕತ್ತು ಸಿನಿಮಾ ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದ್ದರು. ಎಲ್ಲರ ಮೆಚ್ಚುಗೆಯನ್ನು ಗಳಿಸಿ ಸೋಲೋ ಹೀರೋಯಿನ್ ಆಗಿ ಮಿಂಚಿದರು.

Zee Studios ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಚಿತ್ರದ ಪೋಸ್ಟರ್ ಅನ್ನು ಮತ್ತು ಅದರ ಹೊಸ ಬಿಡುಗಡೆ ದಿನಾಂಕದೊಂದಿಗೆ ಪೋಸ್ಟ್ ಮಾಡಿದೆ.
“ರಾಣಿಯ ವ್ಯಕ್ತಿತ್ವ ದ ಜಯಲಲಿತಾ ಅವರ ಕಥೆ ಯಾವಾಗಲೂ ದೊಡ್ಡ ಪರದೆಗಳಿಗೆ ಸೇರಿದ್ದು, 10 ನೇ ತಾರೀಖಿನಂದು(Thalaivii Release date) ನಿಮ್ಮ ಹತ್ತಿರದ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿನಿ ತಾರೆಯಾಗ ಜೀವನ ಪ್ರಾರಂಭಿಸಿ, ಅತ್ಯಂತ ಪ್ರಭಾವಶಾಲಿ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗುವವರೆಗೆ ಅವರ ಸ್ಫೂರ್ತಿದಾಯಕ ಪ್ರಯಾಣವನ್ನು ಈ ಸಿನಿಮಾ ಬಿಚ್ಚಿಡಲಿದೆ “ಎಂದು ಹೇಳಿದೆ.
Bhojpuri Actress Trisha Kar Madhu leaked a video
ಕೆವಿ ವಿಜಯೇಂದ್ರ ಪ್ರಸಾದ್ ಬರೆದಿರುವ “ತಲೈವಿ” ಚಿತ್ರವನ್ನು ವಿಜಯ್ ನಿರ್ದೇಶನ ಮಾಡಿದ್ದು ಅರವಿಂದ ಸ್ವಾಮಿ, ಮಧೂ, ಪ್ರಕಾಶ್ ರಾಜ್, ಜಿಸ್ಶು ಸೇನ್ಗುಪ್ತಾ, ಭಾಗ್ಯಶ್ರೀ ಮತ್ತು ಪೂರ್ಣ ಮತ್ತಿತರರು ನಟಿಸಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ತಮಿಳು ನಾಡಿನ ಜನತೆಯ ಪ್ರೀತಿಯ ”ಅಮ್ಮ” ಅನಿಸಿಕೊಂಡಿದ್ದ ಜಯಲಲಿತಾ ಅವರ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಲಿದೆ. ಈ ಚಿತ್ರವು ಬಹು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಎಂದು ನಿರ್ದೇಶಕರು ಸ್ಪಷ್ಟ ಪಡಿಸಿದರು.
Thalaivii Release date 10th September 2021 all over India with multilingual.
‘THALAIVII’ RELEASE DATE FINALIZED: 10 SEPT… #Thalaivii – starring #KanganaRanaut and #ArvindSwami – to release in *cinemas* on 10 Sept 2021… Directed by Vijay… Produced by Vishnu Vardhan Induri and Shaailesh R Singh. #ThalaiviiOnTheBigScreen #ThalaiviiInTheatres pic.twitter.com/tf2aCcFB9T
— taran adarsh (@taran_adarsh) August 23, 2021

Hello friend, thank you for taking an interest to read about me. I am the founder of coolinglass.com. I am a professional blogger and social media marketer. I love to write articles and suggest the best earning and learning tips to my readers. Feel free to get in touch with me through my social profiles. Love you all. Jai Hindh