YouTube ನಲ್ಲಿ ಹವಾ ಮಾಡುತ್ತಿರುವ ಕಾಸರಗೋಡಿನ ಪಾಕ ಪ್ರವೀಣರೆನಿಸಿಕೊಂಡಿರುವ Bhat’n’Bhat Channel ನ ಭಟ್ ಸಹೋದರರ ಸಾಧನೆಯ ಹಾದಿ.

ತನ್ನ ಸಿಂಪ್ಲಿಸಿಟಿ ಹಾಗೂ ವಿವಿಧ ರೀತಿಯ ಅಡುಗೆಗಳಿಂದ ಎಲ್ಲರ ಮನೆಮಾತಾಗಿರುವ ಭಟ್ ಎನ್ ಭಟ್ (Bhat’n’Bhat Channel) ಯೂಟ್ಯೂಬ್ ಚಾನಲ್ ನ ರುವಾರಿಗಳ ಮನೆಯ ಮಾತು.

Bhat'n'Bhat Channel

ಬದುಕು ಯಾವತ್ತೂ ತನ್ನಷ್ಟಕ್ಕೆ ತಾನೇ ಸುಂದರವಾಗಿ ಇರುವುದಿಲ್ಲ. ಬದಲಾಗಿ ನಾವು ಅದನ್ನು ಸುಂದರನ್ನಾಗಿಸಲು ಇನ್ನಿಲ್ಲದ ಪ್ರಯತ್ನ ಮಾಡಬೇಕಾಗುತ್ತದೆ. ಒಂದು ಒರಟಾದ ಕಲ್ಲಿಗೆ ಉಳಿಪೆಟ್ಟು ಕೊಟ್ಟು ಕೆತ್ತಿ ಅದನ್ನು ಸುಂದರ ಶಿಲ್ಪವನ್ನಾಗಿ ಮಾಡುವ ಹಾಗೆ ಬದುಕನ್ನು ಸುಂದರವಾಗಿಸಲು ಅಂಥಹ ಸಾವಿರಾರು ಉಳಿಪೆಟ್ಟುಗಳನ್ನು ಸಹಿಸಬೇಕಾಗುತ್ತದೆ. ಹಾಗಿದ್ದಲ್ಲಿ ಮಾತ್ರ ಬದುಕು ಒಂದು ಸುಂದರ ಶಿಲ್ಪದಂತೆ ಮೂಡಿ ಬರುತ್ತದೆ. ಈ ಮಾತುಗಳನ್ನು ಯಾಕೆ ಹೇಳಿದೆನಂದರೆ ಅದೆಷ್ಟೋ ಮಂದಿ ತನ್ನ ಜೀವನದಲ್ಲಿ ಯಶಸ್ಸು ಕಾಣಲು ಪಟ್ಟ ಬಯಕೆಗಳನ್ನ ಈಡೇರಿಸಿಕೊಳ್ಳಲು ಬೆಟ್ಟದಷ್ಟು ಕನಸು ಕಾಣುತ್ತಾರೆಯೇ ಹೊರತು ಅದಕ್ಕಾಗಿ ಪ್ರಯತ್ನ ಪಡುವುದಿಲ್ಲ. ಕೇವಲ ಕನಸು ಕಂಡರೆ ಸಾಲದು. ಆ ಕನಸನ್ನು ನನಸು ಮಾಡುವತ್ತ ಹೆಜ್ಜೆ ಹಾಕಬೇಕು. ಅದಕ್ಕಾಗಿ ಶ್ರಮ ಪಟ್ಟು ದುಡಿಯಬೇಕು. Bhat’n’Bhat Channel

ದೇಹದಲ್ಲಿ ಜೀವ ಇರುವ ತನಕ ನಮ್ಮ ಅಸ್ಥಿತ್ವಕ್ಕೊಂದು ಹೆಸರು ಗುರುತು ಇರುತ್ತದೆ. ಆದರೆ ಜೀವ ಹೋದ ನಂತರವೂ ನಮ್ಮ ಹೆಸರು ಮತ್ತು ಅಸ್ಥಿತ್ವ ಉಳಿಯಬೇಕಾದರೆ ನಾವು ಜೀವ ಇರುವಾಗಲೇ ಏನಾದರೊಂದು ಸಾಧನೆ ಮಾಡಿರಬೇಕು. ಹೌದು ಸಾಧನೆಯಿಂದ ಕೇವಲ ಹೆಸರು ಮಾತ್ರ ಅಲ್ಲ ನಮ್ಮ ಅಸ್ಥಿತ್ವವನ್ನೂ ಸಹ ಬಹಳ ಕಾಲದವರೆಗೂ ಉಳಿಸಿಕೊಳ್ಳಬಹುದು. ಆದರೆ ಇವತ್ತಿನ ಈ ಕಾಲಘಟ್ಟದಲ್ಲಿ ಸಾಧನೆಯಿಂದ ಹೆಸರಿನ ಸಂಪಾದನೆಯ ಜೊತೆ ಹಣದ ಸಂಪಾದನೆಯನ್ನೂ ಮಾಡಬಹುದು. ಯಾಕೆಂದರೆ ಇದು ಆಧುನಿಕ ತಂತ್ರಜ್ಞಾನದ ಯುಗ.

 

ಸ್ನೇಹಿತರೇ ಇವತ್ತು ಹೆಚ್ಚಿನ ಸಾಮಾಜಿಕ ತಾಣದ ಬಳಕೆದಾರರಿಗೆ, ವಿಶೇಷವಾಗಿ ವೀಡಿಯೋ ಜಗತ್ತಿನ ದಿಗ್ಗಜ ಯೂಟ್ಯೂಬ್ ನ ಬಳಕೆದಾರರಿಗೆ Bhat’N’Bhat ಯೂಟ್ಯೂಬ್ ಚಾನಲ್ ಚಿರಪರಿಚಿತ. ಅದೇ ಭಟ್ ಆ್ಯಂಡ್ ಭಟ್ ಯೂಟ್ಯೂಬ್ ಚಾನಲ್ ನ ರುವಾರಿಗಳಾದಂತಹ ಸುದರ್ಶನ್ ಭಟ್ ಮತ್ತು ಮನೋಹರ ಭಟ್ ರವರು ಅವಳಿ ಸೋದರರು. ಇವರು ಶ್ರೀ ವೆಂಕಟರಮಣ ಭಟ್ ಮತ್ತು ಶ್ರೀಮತಿ ಸುಲೋಚನ ಇವರ ಪುತ್ರರಾಗಿ ಇಬ್ಬರು ಅಕ್ಕಂದಿರ ಮುದ್ದಿನ ತಮ್ಮಂದಿರಾಗಿ 24/3/1998 ರಂದು ಕಾಸರಗೋಡಿನ ಬೆದ್ರಾಡಿಯಲ್ಲಿ ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸುತ್ತಾರೆ.

ಮನೊಹರ್ ಮತ್ತು ಸುದರ್ಶನ್ ರವರ ಪ್ರಾಥಮಿಕ ವಿದ್ಯಾಭ್ಯಾಸ ಕನ್ಯಾನದ ಭರತ ಸೇವಾಶ್ರಮದಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ದೈಗೊಳಿಯಲ್ಲಿ ಪೂರೈಸುತ್ತಾರೆ. ಪದವಿ ಪೂರ್ವ ಶಿಕ್ಷಣವನ್ನು ಕುಂಬ್ಳೆಯ ಪ್ರಣವ ಕಾಲೇಜಿನಲ್ಲಿ ಮಾಡಿ ನಂತರ ಪದವಿಯನ್ನು ಪುತ್ತೂರಿನ ವಿವೇಕಾನಂದ ಲಾ ಕಾಲೇಜಿನಲ್ಲಿ ಪಡೆಯುತ್ತಾರೆ. ಕಾನೂನು ಪದವಿ ಮುಗಿಸಿದ ಇವರು ಇವತ್ತು ವಕೀಲ ವೃತ್ತಿ ಮೂಲಕ ಕಾನೂನಿನ ಸೇವೆಗೆ ಮುಂದಾಗಿದ್ದಾರೆ.

ಓದಿನಲ್ಲೂ ಚುರುಕಾಗಿದ್ದ ಭಟ್ ಸಹೋದರರು ಶಾಲಾ ಕ್ರೀಡೆಗಳಲ್ಲೂ ಸಕ್ರೀಯರಾಗಿದ್ದು ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಗಳಾಗಿದ್ದರು. ಮನೋಹರ್ ರವರಿಗೆ ಚಿಕ್ಕಂದಿನಿಂದಲೂ ಫೊಟೋಗ್ರಫಿ ಮತ್ತು ವೀಡಿಯೋಗ್ರಫಿಯಲ್ಲಿ ಬಹಳ ಆಸಕ್ತಿ ಇದ್ದರೆ ಅಣ್ಣ ಸುದರ್ಶನ್ ಅವರಿಗೆ ಅಡುಗೆಯಲ್ಲಿ ಆಸಕ್ತಿ ಇತ್ತು.

ಕೊರೊನ ಕಾರಣದಿಂದ ಕಳೆದ ವರ್ಷ ಮಾರ್ಚ್ ನಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದು ಎಲ್ಲರಿಗೂ ಗೊತ್ತಿರುವಂತಹ ವಿಚಾರ. ಈ ವರ್ಷವೂ ಅದೇ ರೀತಿ ಸಂಕಷ್ಠ ಎದುರಿಸುವಂತಾಗಿದ್ದು ನಮ್ಮ ದುರಾದೃಷ್ಟ ಅನ್ನಲೇಬೇಕು. ಕಳೆದ ವರುಷ ಘೋಷಣೆಯಾದ ಸಂಪೂರ್ಣ ಲಾಕ್ಡೌನ್ ಕೊರೊನದಿಂದ ಜನಗಳನ್ನು ಕಾಪಾಡಿದ್ದು ಎಷ್ಟು ಸತ್ಯವೋ ಹಲವರು ತಮ್ಮ ಕೆಲಸ ಕಳೆದುಕೊಂಡು ಪರದಾಡಿದ್ದೂ ಅಷ್ಟೇ ಸತ್ಯ.

ಆದರೆ ಲಾಕ್ಡೌನ್ ಸಮಯವನ್ನು ಈ ಅವಳಿ ಸಹೋದರರು ಸದುಪಯೋಗಪಡಿಸಿಕೊಂಡು ಯೂಟ್ಯೂಬ್ ಜಗತ್ತಿನಲ್ಲಿ ಒಂದು ಇತಿಹಾಸವನ್ನೇ ಬರೆಯುತ್ತಾರೆ. ಹೌದು ಈ ಲಾಕ್ಡೌನ್ ಸಮಯದಲ್ಲಿ ಭಟ್ ಸಹೋದರರು ಸಹ ಮನೆಯಲ್ಲಿ ಉಳಿಯಬೇಕಾದ ಪರಿಸ್ಥಿತಿ ಬರುತ್ತದೆ. ತನ್ನ ಪದವಿ ಮುಗಿಸಿಕೊಂಡು ಇನ್ನೇನು ಹೊಸ ಕೆಲಸಕ್ಕೆ ಸೇರಿಕೊಂಡು ತಮ್ಮದೇ ಆದ ನಾಲ್ಕು ಕಾಸು ಸಂಪಾದನೆ ಮಾಡಿಕೊಂಡು ತಮ್ಮ ಮನೆಗೆ ಆಸರೆಯಾಗಿ ನಿಲ್ಲಬೇಕು ಮತ್ತು ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂಬ ಮಹದಾಸೆಯಲ್ಲಿರುವಾಗಲೇ ಈ ಮಹಾಮಾರಿ ಕೊರೊನ ನೊಡನೊಡುತ್ತಲೇ ನಮ್ಮ ದೇಶಕ್ಕೂ ವಕ್ಕರಿಸಿ ಲಾಕ್ಡೌನ್ ಬಿದ್ದು ಮನೆಯಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಎದುರಾಗುತ್ತದೆ.

Bhat'n'Bhat Channel

 

ಆದರೆ ಇದರಿಂದ ಧೃತಿಗೆಡದ ಇವರು ಈ ಹೊತ್ತನ್ನು ಸದುಪಯೋಗಪಡಿಸಿಕೊಳ್ಳಬೇಕು, ಸುಮ್ಮನೆ ಈ ಅಮೂಲ್ಯ ಸಮಯವನ್ನು ಹಾಳು ಮಾಡಬಾರದೆಂಬ ಯೋಚನೆಯಿಂದ ಏನಾದರೊಂದು ಸಾಧನೆ ಮಾಡಬೇಕೆಂಬ ಹಂಬಲದಲ್ಲಿ ದಾರಿ ಹುಡುಕುತ್ತಾರೆ. ಇದೇ ಹೊತ್ತಿಗೆ ಇವರಿಗೆ ಹೊಳೆದ ಉಪಾಯ ವೀಡಿಯೋ ಮಾಡುವುದು.

 

ವೀಡಿಯೋಗ್ರಫಿ ಮತ್ತು ಫೊಟೋಗ್ರಫಿಯಲ್ಲಿ ಆಸಕ್ತಿಯನ್ನು ಇಟ್ಟುಕೊಂಡಿದ್ದ ಮನೋಹರ್ ಇದನ್ನೇ ಬಂಡವಾಳ ಮಾಡಿಕೊಂಡು ಅಣ್ಣ ಸುದರ್ಶನ್ ಜೊತೆ ಏನಾದರೊಂದು ಹಳ್ಳಿ ಸೊಗಡಿನ ವೀಡಿಯೋ ಮಾಡಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡುವ ಬಗ್ಗೆ ಆಲೋಚಿಸುತ್ತಾರೆ. ಮೊದಲೆರಡು ವೀಡಿಯೋಗಳ ಮುಖಾಂತರ ಪ್ರಯತ್ನವನ್ನೂ ಮಾಡುತ್ತಾರೆ.

ಕಾಲೇಜು ಹೋಗುತ್ತಿದ್ದ ಸಮಯದಲ್ಲಿ ಬಿಡುವಿನ ವೇಳೆಯಲ್ಲಿ ಅಡುಗೆ ಸಹಾಯಕರಾಗಿ ಬೇರೆ ಬೇರೆ ಕಡೆ ಬೇರೆ ಬೇರೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದ ಭಟ್ ಸಹೋದರರು ಅಡುಗೆ ವಿಚಾರದಲ್ಲೂ ಜಾಣರಾಗಿದ್ದರು. ಅದರಲ್ಲೂ ಸುದರ್ಶನ್ ಭಟ್ ರಿಗೆ ವಿವಿಧ ರೀತಿಯ ಅಡುಗೆ ಮಾಡುವುದರಲ್ಲಿ ಬಹಳಷ್ಟು ಒಲವು ಹೊಂದಿದ್ದು ಸಹೋದರರು ಇದನ್ನೇ ತಮ್ಮ ವೀಡಿಯೋದ ವಿಷಯ ಮಾಡಿ ಯೂಟ್ಯೂಬ್ ಗೆ ಹಾಕುವ ಆಲೋಚನೆ ಮಾಡುತ್ತಾರೆ. ಮತ್ತು ಈ ಆಲೋಚನೆಯಿಂದ ಜನಿಸಿದ ಕೂಸೆ Bhat’N’Bhat ಯೂಟ್ಯೂಬ್ ಚಾನಲ್.

ಈ ಚಾನಲ್ ಕ್ರಿಯೇಟ್ ಮಾಡಿದ ನಂತರ ದಿನಂಪ್ರತಿ ಹಳ್ಳಿ ಸೊಗಡಿನ ವಿವಿಧ ಬಗೆಯ ಖಾದ್ಯಗಳನ್ನು ಸಿಹಿ ತಿಂಡಿಗಳನ್ನು ಮಾಡುವ ಬಗೆಯನ್ನು ವೀಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ. ದಿನ ಕಳೆದಂತೆ ಯೂಟ್ಯೂಬಲ್ಲಿ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ವೀಡಿಯೋಗಳು ವೈರಲ್ ಆಗ ತೊಡಗಿತು. ವೀಡಿಯೋಗಳು ಎಷ್ಟು ವೈರಲ್ ಆಯಿತೆಂದರೆ ಒಂದೊಂದು ವೀಡಿಯೋಗಳಿಗೂ ಮಿಲಿಯನ್ ಗಟ್ಟಲೆ ವೀಕ್ಷಣೆ ಬರತೊಡಗಿತು. ಇವರ ವೀಡಿಯೋಗಳಿಗೆ ಊರ ಪರವೂರ ಪರ ದೇಶಗಳಿಂದಲೂ ವೀಕ್ಷಣೆಗಳು ಕಾಮೆಂಟ್ ಗಳು ಹೊಗಳಿಕೆಗಳ ಮಹಾಪೂರವೇ ಹರಿದು ಬರುತ್ತಿದೆ. ನೋಡ ನೋಡುತ್ತಲೇ ಇವರ ಚಾನಲ್ ಗೆ ಒಂದು ಲಕ್ಷ ಸಬ್ಸ್-ಕ್ರೈಬರ್ ದಾಟಿ ಯೂಟ್ಯೂಬ್ ನವರು ಕೊಡಮಾಡುವ ಸಿಲ್ವರ್ ಪ್ಲೇ ಬಟನ್ ಅವಾರ್ಡನ್ನು ಬಾಚಿಕೊಂಡು ಈಗ ಈ ಕುಟುಂಬ 4 ಲಕ್ಷಕ್ಕಿಂತಲೂ ಅಧಿಕ ಸದಸ್ಯರನ್ನು ಒಳಗೊಂಡ ತುಂಬು ಸಂಸಾರವಾಗಿ ನಿಂತಿದೆ. ಇನ್ನೇನು ಕೆಲವೇ ತಿಂಗಳಲ್ಲಿ 10 ಲಕ್ಷ ದಾಟಿ ಗೋಲ್ಡನ್ ಪ್ಲೇ ಬಟನ್ ಬಾಚುವುದರಲ್ಲಿ ಯಾವುದೇ ಸಂಶಯವಿಲ್ಲ. ಇವರನ್ನು ಗುರುತಿಸಿ ಈಗಾಗಲೇ ಕೆಲವು ಸಂಘ ಸಂಸ್ಥೆಗಳು ಸನ್ಮಾನಿಸಿದ್ದು, ಇನ್ನೂ ಹಲವು ಸಂಘಸಂಸ್ಥೆಗಳು ಮುಂದೆ ಬರುತ್ತಿದೆ. Bhat’n’Bhat Channel

ಮರಗೆಣಸಿನ ಹಪ್ಪಲ, ಬಾಳೆಹಣ್ಣಿನ ಹಲ್ವಾ, ಮೈಸೂರ್ ಪಾಕ್, ಬ್ರಾಹ್ಮಣರ ಮನೆ ಶೈಲಿಯ ಸಾಂಬಾರು, ಪಲಾವು, ಅಮೃತ ಫಲ, ಮಂಗ್ಳೂರು ಬನ್ಸ್, ಕಾಯಿ ಹೋಲಿಗೆ, ಗೋದಿ ಹಾಲುಬಾಯಿ, ತಿಳಿ ಸಾರು, ಹಲಸಿನ ಹಣ್ಣಿನ ಹಪ್ಪಲ, ಕಾಶಿ ಹಲ್ವಾ, ಬನ್ನಂಗಾಯಿ ದೋಸೆ, ಚಟ್ಟಂಬಡೆ, ಹಲಸಿನ ಕಾಯಿ ಚಿಪ್ಸ್ , ನೀರ್ದೋಸೆ, ಚಿತ್ರಾನ್ನ, ಬಾಳೆಕಾಯಿ ಚಿಪ್ಸ್, ಮಾವಿನಕಾಯಿ ತೊಕ್ಕು, ಕಾಯಿ ಹುಳಿ, ಬಟಾಟೆ ಬಟಾಣಿ ಗಸಿ, ಕಡ್ಲೆ ಬೇಳೆ ಹೋಳಿಗೆ, ತೋವೆ ಸಾರು, ಮೂಡೆ, ಕೊಟ್ಟಿಗೆ, ಪುನರ್ಪುಳಿ ಸಿರಪ್, ಅವಲಕ್ಕಿ ಚಟ್ನಿ, ಆಲೂ ಬೊಂಡ, ನೀರುಳಿ ಬಜೆ, ಪುಟ್ಟು, ಮಿಕ್ಷರ್, ಕಾಯಿ ಸೂಳೆ ರೊಟ್ಟಿ, ಮಾಂಬಲ ಹೀಗೆ ನೂರಕ್ಕೂ ಅಧಿಕ ಬಗೆಯ ಖಾದ್ಯದಳನ್ನು ಸಾಂಪ್ರದಾಯಿಕ ರೀತಿಯಲ್ಲಿಯೇ ತಯಾರಿಸಿ ನೋಡುಗರ ಬಾಯಲ್ಲಿ ನೀರೂರಿಸುವಂತೆ ಮಾಡಿದ್ದಾರೆ ಭಟ್ ಸಹೋದರರು.

 

*ಓದುಗರೇ ನೀವು ಅತೀ ಹೆಚ್ಚು ಇಷ್ಟಪಟ್ಟ ಅಡುಗೆ ಯಾವುದು ಎಂಬುದನ್ನು ಕೆಳಗೆ ಕಾಮೆಂಟ್ ಮಾಡಿ*

 

ಅಷ್ಟಕ್ಕೂ ಕೇವಲ ಒಂದು ಅಡುಗೆ ಮಾಡುವ ವೀಡಿಯೋಗಳು ಜನಗಳಿಗೆ ಅಷ್ಟೂ ಇಷ್ಟವಾಗಲು ಹೇಗೆ ಸಾಧ್ಯ ಎಂಬ ಸಾಮಾನ್ಯ ಪ್ರಶ್ನೆ ಈಗ ಓದುಗರಲ್ಲೂ ಮೂಡಿರಬಹುದು. ಅದಕ್ಕೆ ಉತ್ತರ ಇದೆ. ಭಟ್ ನ್ ಭಟ್ ಚಾನಲ್ ನ ವೀಡಿಯೋ ಎಲ್ಲರಿಗೂ ಇಷ್ಟವಾಗಲೂ ನಿಜವಾದ ಕಾರಣ ಸುದರ್ಶನ್ ರವರ ಹಳ್ಳಿ ಶೈಲಿಯ ಕನ್ನಡ ಭಾಷೆ, ಯಾವುದೇ ರೀತಿಯಲ್ಲಿ ವೈಭವೀಕರಿಸದೆ ವಿಷಯವನ್ನು ಪ್ರಸ್ತುತ ಪಡಿಸುವ ಶೈಲಿ ಮತ್ತು ವೀಡಿಯೋದ ಹಿಂದಿರುವ ಮನೋಹರ್ ರವರು ಸುತ್ತಲ ಹಸಿರಿನ ಪರಿಸರವನ್ನು ಒಳಗೊಂಡಂತೆ ಸುದರ್ಶನ್ ರವರು ಮಾಡುವ ಅಡುಗೆಯನ್ನು ಸಹ ನೈಜ ರೀತಿಯಲ್ಲಿ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಆ ಕೈಚಲಕ.

 

ವೃತ್ತಿಯಲ್ಲಿ ಈಗ ವಕೀಲರಾಗಿದ್ದು ಪ್ರವೃತ್ತಿಯಲ್ಲಿ ವಿವಿಧ ಬಗೆಯ ಅಡುಗೆಯನ್ನು ಮಾಡ ಬಯಸುವ ಈ ಭಟ್ ಸಹೋದರರು ಯೂಟ್ಯೂಬ್ ಮುಖಾಂತರ ತಮ್ಮ ಹಳ್ಳಿ ಶೈಲಿಯ ಮತ್ತು ಪುರಾತನ ಶೈಲಿಯ ವಿವಿಧ ಖಾದ್ಯಗಳನ್ನು ಇನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶವನ್ನು ಹೊಂದಿದ್ದಾರೆ. ಈಗಾಗಲೇ ಜಗದಗಲ ಪ್ರಖ್ಯಾತಿ ಪಡೆಯುತ್ತಿರುವ ಇವರಿಗೆ ಒಬ್ಬ ಸಿನಿಮಾ ನಟನಿಗ ಇದ್ದಷ್ಟು ಅಭಿಮಾನಿಗಳು ಇದ್ದಾರೆ ಮತ್ತು ಹೋದಲ್ಲೆಲ್ಲಾ ಇವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಬರುತ್ತಾರೆ.

“ಯೂಟ್ಯೂಬ್ ನಿಂದ ತಮ್ಮ ಜೀವನವನ್ನು ನಡೆಸಲು ಸಾಕಾಗುವಷ್ಟು ಆದಾಯ ಬರುತ್ತಿದೆ ಮತ್ತು ಜೀವನವು ಬಹಳ ಸುಂದರವಾಗಿ ನಡೆಯುತ್ತಿದೆ. ಇದೆಲ್ಲಾ ಜನಗಳ ಪ್ರೀತಿ ಮತ್ತು ಆಶಿರ್ವಾದದ ಫಲ. ವೀಕ್ಷಕರಿಗೆ ನಾವು ಸದಾ ಚಿರಋಣಿ” ಎಂದು ಹೇಳುವ ಸಹೋದರರು ತಾವು ಮಾಡುವ ಈ ಕೆಲಸಕ್ಕೆ ನಮಗೆ ಬೆನ್ನೆಲುಬಾಗಿ ನಿಂತ ಅಪ್ಪ ಅಮ್ಮ ಮತ್ತು ಸದಾ ಪ್ರೋತ್ಸಾಹಿಸುವ ಅಕ್ಕ ಭಾವ ಮತ್ತು ತಮ್ಮ ಸಂಬಂಧಿಕರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲು ಬಯಸುತ್ತಾರೆ. Bhat’n’Bhat Channel

ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಊರು ತುಂಬಾ ಅಲೆದಾಡಿದರಂತೆ. ಈ ಗಾದೆ ಎಲ್ಲರಿಗೂ ಚೆನ್ನಾಗಿ ಗೊತ್ತಿರಬಹುದು. ನಾವು ಯಾವತ್ತೂ ಏನಾದರೊಂದು ಸಾಧಿಸಬೇಕು ಎಂಬ ಹಂಬಲದಿಂದ ಊರು ತುಂಬಾ ಅಲೆಯುತ್ತೇವೆ. ಸಾವಿರ ದಾರಿ ಹುಡುಕುತ್ತೇವೆ. ಕೊನೆಗೆ ಯಾವುದೇ ಅವಕಾಶ ಕಾಣದೆ ಸುಮ್ಮನಾಗುತ್ತೇವೆ. ಇದು ಸಾಮಾನ್ಯವಾಗಿ ನಡೆಯುವಂತಹದ್ದು. ನಾವು ಯಾವುದೇ ಸಾಧನೆ ಮಾಡಬೇಕಾದರೆ ಮೊದಲು ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕು. ಆ ಪ್ರತಿಭೆಯನ್ನು ಅಥವಾ ಆ ಕಲೆಯನ್ನು ಕಾರ್ಯಗತಗೊಳಿಸುವಲ್ಲಿ ಮೊದಲು ಪ್ರಯತ್ನ ಪಡಬೇಕು ಆವಾಗ ನಾವು ಶತ ಪ್ರತಿ ಶತ ಯಶಸ್ಸು ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ. 

ತಮ್ಮಲ್ಲಿರುವ ಕಲೆಗೆ ಒಂದು ರೂಪ ಕೊಟ್ಟು ಅದನ್ನು ಕಾರ್ಯಗತಗೊಳಿಸಿ ಇಂದು ಭಟ್ ಸಹೋದರು ಯಶಸ್ಸಿನತ್ತ ಸಾಗುತ್ತಿದ್ದಾರೆ. ಸುದರ್ಶನ್ ಮತ್ತು ಮನೋಹರ್ ರವರ ಭಟ್ ನ್ ಭಟ್ ಚಾನಲ್ ಇನ್ನಷ್ಟು ಎತ್ತರ ಬೆಳೆಯಲಿ. ಇವರು ಮಾಡುವ ಅಡಿಗೆ ರುಚಿ ಜಗದಗಲ ಪಸರಿಸಲಿ ಮತ್ತು ಭಾರತದ ಟಾಪ್ ಯೂಟ್ಯೂಬರ್ ಗಳಾದ ಕ್ಯಾರಿ ಮಿನಾಟಿ, ಆಶಿಷ್ ಚಂಚಲಾನಿ, ಟೆಕ್ನಿಕಲ್ ಗುರೂಜಿ, ಅಮಿತ್ ಬಂಧನಾ, ಬಿಬಿಕೆ ವೈನ್ಸ್ ರಂಥವವರನ್ನೂ ಮೀರಿಸುವ ಯೂಟ್ಯೂಬ್ ಚಾನಲ್ ಎಂಬ ಕೀರ್ತಿ ನಿಮ್ಮದಾಗಲಿ ಎಂದು ಶುಭಹಾರೈಸುತ್ತೇವೆ.

 

ಇವರ ಬಗ್ಗೆ ಮತ್ತು ಲೇಖನದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

 

ಕಷ್ಟಪಡದಿರೆ ಹೆಜ್ಜೆಯೊಳು
ಸಾಧನೆ ಬಲು ದೂರವು..!!
ಇಷ್ಟಪಟ್ಟರೆ ಕೆಲಸದೊಳು
ಜಯದ ಮಹಾಪೂರವು..!!

 

ಲೇಖನ – ಪ್ರಮೀತ್ ರಾಜ್ ಕಟ್ಟತ್ತಾರು

 

ಇದನ್ನು ಓದಿ : ತುಳುನಾಡಿನ ಯುವ ಕಲಾವಿದ, ಕಿರುತೆರೆಯ ಸ್ಟಾರ್ ನಟ “ಮುದ್ದು ಲಕ್ಷ್ಮೀ ಯ ಡಾ.ಧ್ರುವಂತ್ ” ರ ಸಾಧನೆಯ ಹಾದಿ

ಇದನ್ನು ಓದಿ : ಕರಾವಳಿ ಕಡಲ ಕಿನಾರೆಯ ಮುದ್ದು ಮೊಗದ ಪುಟ್ಟ ಹುಡುಗಿ ”ತುಳುವ ಸಿರಿ” ‘ಎಂ. ಅಧ್ವಿಕಾ ಶೆಟ್ಟಿ” ಯವರ ಸಾಧನೆಯ ಹಾದಿ.

ಇದನ್ನು ಓದಿ : ತುಳು ಚಿತ್ರರಂಗದ ‘ಅಭಿನವ ವಜ್ರಮುನಿ’ ರಮೇಶ್ ರೈ ಕುಕ್ಕುವಳ್ಳಿ ಸಾಧನೆಯ ಹಾದಿ

 

[totalpoll id=”2383″]

 

 

 

7 thoughts on “YouTube ನಲ್ಲಿ ಹವಾ ಮಾಡುತ್ತಿರುವ ಕಾಸರಗೋಡಿನ ಪಾಕ ಪ್ರವೀಣರೆನಿಸಿಕೊಂಡಿರುವ Bhat’n’Bhat Channel ನ ಭಟ್ ಸಹೋದರರ ಸಾಧನೆಯ ಹಾದಿ.”

  1. Most powerful channel.. no words to say…. I am also from Karnataka…bt now residing at Kerala….always remembering my brother when see u…ur explanation is also good…

    Reply
  2. ನಗುನಗುತ್ತಾ ಯಾವುದೇ ಆಡಂಭರ ಇಲ್ಲದೇ ಸರಳವಾಗಿ ಅಡುಗೆಗೆ ಸಂಬಂಧಿಸಿದ ವಿಷಯಗಳನ್ನು ನಿರೂಪಣೆ ಮಾಡುವ ಮತ್ತು ಅವರ ಮುಗ್ಧತೆ ನನಗೆ ತುಂಬಾ ಇಷ್ಟ. ಅ
    ವರ ಚ್ಯಾನಲ್ ಉತ್ತುಂಗಕ್ಕೆ ಏರಿ ಜಗತ್ಪ್ರಸಿದ್ಧ ಆಗಲಿ. ಅವರನ್ನು ದೇವರು ಚೆನ್ನಾಗಿಟ್ಟರಲಿ.

    Reply
  3. ತುಂಬಾ ಚೆನ್ನಾಗಿ ವಿವರಿಸುವುದರೊಂದಿಗೆ ನಮ್ಮ ಭಾಷಾಭಿಮಾನವನ್ನು ಪ್ರಚುರಪಡಿಸುವ ಇವರು.ಹಳ್ಳಿಯ ಸುಂದರ ಮನೋಹರ ಭೂರಮೆಯ ಮಡಿಲಿನಲ್ಲಿ ಸರಳ ಸ್ವಚ್ಚ ವಾತಾವರಣದಲ್ಲಿ ಸವಿಸವಿಯಾದ ರುಚಿರುಚಿಯಾದ ನಮ್ಮ ಕೈಗೆಟುಕುವ ಸಾಮಾಗ್ರಿಗಳನ್ನು ಬಳಸಿ ಅಡಿಗೆ ಮಾಡುವ ಪರಿ ಇದೆಯಲ್ಲಾ ವರ್ಣಿಸಲಸಾಧ್ಯ…ಅದರೊಂದಿಗೆ ಮಾತುಕತೆ ..ಪುಟಾಣಿ ಮಕ್ಕಳು ,ಹಿರಿಯರು ಕಿರಿಯರು ಎಲ್ಲಾ ಸೇರಿ ಅಡಿಗೆ ಮಾಡಲು ಸಹಕರಿಸುವುದಂತೂ ಬಲು ಸೊಗಸು ..ಉಜ್ವಲ ಭವಿಷ್ಯ ಇವರದಾಗಲಿ ಎಂದು ಹಾರೈಸುತ್ತೇನೆ ..ನನಗೆ ಇವರು ಮಾಡುವ ಎಲ್ಲಾ ಅಡಿಗೆಗಳು ಇಷ್ಟ 👍💐💐

    Reply
  4. Your hardwork and achievements in the cooking field are really worthy to be praised. Be famous in the judicial field also.My best wishes are always for you.I liked ur preparation of Mysorepak.

    Reply
  5. Very good. I follow them in Facebook and feel excellent as they do it very systematically. Wish you all the best

    Reply
  6. Preparations are in traditional way, when people forgotten village way of life. Also requesting producers to patent the recipe. We are thankful to Bhat and Bhat channel for reminding our traditional way of cooking, which is healthy as scientifically proven.
    Thanks

    Reply

Leave a Comment