ಈ ಕೀಟದ ಬೆಲೆ 1 ಕೋಟಿಗೂ ಅಧಿಕ! ಐಷಾರಾಮಿ ಕಾರು ಮನೆಗಳಿಗಿಂತ ದುಬಾರಿ!
Table of Contents
Stag Beetle Cost: ಜಗತ್ತಿನಲ್ಲಿ ಅನೇಕರು ಒಡನಾಡಿಯಾಗಿ ಕೆಲವು ಸಾಕು ಪ್ರಾಣಿಗಳನ್ನು ಸಾಕುವುದು ಸರ್ವೇ ಸಾಮಾನ್ಯ. ಅದರಲ್ಲೂ ಕೆಲವರು ಆ ಸಾಕು ಪ್ರಾಣಿಗಳನ್ನು ತನ್ನ ಕುಟುಂಬದ ಸದಸ್ಯರಂತೆ ಆರೈಕೆ ಮಾಡುತ್ತಾರೆ. ಅದಕ್ಕಾಗಿ ಲಕ್ಷಾಂತರ ಖರ್ಚು ಮಾಡಲು ಸಹ ಹಿಂಜರಿಯಿಯುವುದಿಲ್ಲ. ನಿಮಗೆಲ್ಲಾ ಗೊತ್ತಿರುವ ಹಾಗೆ ವಿವಿಧ ತಳಿಯ ನಾಯಿ, ಬೆಕ್ಕು, ಹಾವು, ಅಳಿಲು, ಕೆಲವೊಂದು ದೇಶದಲ್ಲಿ ಹುಲಿ, ಚಿರತೆ, ಸಿಂಹ, ಪ್ಯೂಮಾ ಹೀಗೆ ಹಲವು ಪ್ರಾಣಿಗಳನ್ನು ತನ್ನ ಸಾಕು ಪ್ರಾಣಿಯಾಗಿ ಸಾಕುತ್ತಾರೆ. ಆದರೆ ಇದೆನ್ನೆಲ್ಲಾ ಇನ್ನು ಮುಂದೆ ನೀವು ಸೈಡಲ್ಲಿ ಇಟ್ಟು ನಾವು ಹೇಳುವ ಈ ಕೀಟವನ್ನು ನಿಮ್ಮ ಸಾಕು ಪ್ರಾಣಿಯಾಗಿ ಸಾಕಿ ಮತ್ತು ಕೋಟ್ಯಧಿಪತಿಗಳಾಗಿ.
ಹೌದು, ನೀವು ಈ ಒಂದು ಕೀಟವನ್ನು ಸಾಕುವುದರಿಂದ ವರ್ಷದೊಳಗೆ ಕೋಟ್ಯಾಧಿಪತಿ ಆಗಬಹುದು. ಈ ಕೀಟವನ್ನು ಸಾಕಲು ಹೆಚ್ಚು ಖರ್ಚು ಸಹ ಇಲ್ಲ. ದುಬಾರಿ ಆಹಾರದ ಅಗತ್ಯ ಇಲ್ಲ, ದುಬಾರಿ ಔಷಧೀಯ ಅಗತ್ಯ ಇಲ್ಲ. ಈ ಕೀಟವನ್ನು ಸಾಕುವುದರಿಂದ ನೀವು ನಿಮ್ಮ ಕನಸಿನ ಮನೆ ಕಟ್ಟಿಕೊಳ್ಳಬಹುದು, ಐಷಾರಾಮಿ ಕಾರು ಖರೀದಿಸಬಹುದು. ಅಂದ ಹಾಗೆ ಆ ಕೀಟ ಯಾವುದು ಎಂದು ಆಲೋಚಿಸುತ್ತಿದ್ದೀರಾ? ಈ ಕೀಟದ ಹೆಸರು ಸ್ಟಾಗ್ ಬೀಟಲ್(Stag Beetle).
ಈ ಕೀಟದ ಬೆಲೆ ಐಷಾರಾಮಿ ಮನೆ, ಕಾರುಗಳಿಗಿಂತ ಹೆಚ್ಚು .!
ಹೌದು ಸ್ಟಾಗ್ ಬೀಟಲ್ ಕೀಟ ಕೆಲವ ಅಂಥಿಂಥ ಕೀಟವಲ್ಲ. ಇದು ಬಹಳ ದುಬಾರಿ ಕೀಟ. ಈ ಕೀಟದ ಬೆಲೆ ಕೇವಲ ಲಕ್ಷಗಳಲ್ಲಿ ಅಲ್ಲ, ಕೋಟಿಗಳಲ್ಲಿದೆ. ಆಶ್ಚರ್ಯವಾದರೂ ಇದು ಸತ್ಯ. ನೀವು ಈ ಕೀಟವನ್ನು ಸಾಕಿ ಯಾವುದೇ ಕಷ್ಟಗಳಿಲ್ಲದೆ, ಪ್ರಯತ್ನಗಳಿಲ್ಲದೆ ನೀವು ಬಹಳ ಬೇಗನೆ ಮಿಲಿಯನೇರ್ ಆಗಬಹುದು. ಅದು ಹೇಗೆ ಇದರಿಂದ ದುಡ್ಡು ಬರುತ್ತದೆ ಎಂದು ಕುತೂಹಲದಲ್ಲಿದ್ದೀರಾ? indiatimes.comನಲ್ಲಿ ಬಿತ್ತರವಾದ ವರದಿಯ ಪ್ರಕಾರ, ಸ್ಟಾಗ್ ಬೀಟಲ್(Stag Beetle) ಕೀಟವು ವಿಶ್ವದ ಅತೀ ಅಪರೂಪದ ಜೀವಿಗಳಲ್ಲಿ ಒಂದಾಗಿದ್ದು, ಇದು ಕೇವಲ 2 ರಿಂದ 3 ಇಂಚುಗಳಷ್ಟು ಮಾತ್ರ ಬೆಳೆಯುತ್ತವೆ. ಸ್ಟ್ಯಾಗ್ ಬೀಟಲ್ ಭೂಮಿಯ ಮೇಲೆ ಇರುವ ಅತ್ಯಂತ ಚಿಕ್ಕ, ವಿಚಿತ್ರ ಮತ್ತು ಅಪರೂಪದ ಪ್ರಬೇಧಗಳಲ್ಲಿ ಒಂದಾಗಿದೆ.
ಸ್ಟಾಗ್ ಬೀಟಲ್ ನಲ್ಲಿ ಅಂಥಹಾ ವಿಶೇಷತೆ ಏನಿದೆ..?
ಪ್ರಪಂಚದಲ್ಲಿ ಇಂತಹ ವಿಚಿತ್ರ ಕೀಟಗಳನ್ನ ಸಾಕುವವರು ಬಹಳ ವಿರಳ. ಆದರೆ ಈ ಸ್ಟಾಗ್ ಬೀಟಲ್ ಬಗ್ಗೆ ಜನರು ತಿಳಿದರೆ, ಬಹುಶಃ ಯಾವ ವ್ಯಕ್ತಿಯಾದ್ರು ಸರಿ ಇದನ್ನು ಸಾಕಲು ಮುಂದಾಗುವುದಂತೂ ನಿಜ. ಯಾಕೆಂದರೆ ಒಂದು ಕೋಟಿಗೂ ಅಧಿಕ ಬೆಲೆ ಇರುವ ಈ ಕೀಟವನ್ನು ಯಾರು ತಾನೇ ಸಾಕಲು ಇಷ್ಟ ಪಡುವುದಿಲ್ಲ ಹೇಳಿ. ಸ್ಟಾಗ್ ಬೀಟಲ್ ಅಥವಾ ಸಾರಂಗ ಜೀರುಂಡೆ ಎಂದು ಕರೆಯಲ್ಪಡುವ ಈ ಕೀಟವನ್ನು ಜನಗಳು ಯಾವುದೇ ಆತಂಕ ಇಲ್ಲದೆ ಸಾಕಬಹುದು. ಇದು ಅತ್ಯಂತ ಸಾಧು ಕೀಟಗಳಲ್ಲಿ ಒಂದಾಗಿದೆ. ಈ ಕೀಟವು ಭೂಮಿಯ ಮೇಲೆ ಕಂಡುಬರುವ ದೊಡ್ಡ ಜೀರುಂಡಗಳ ಪೈಕಿ ಇಂದು ದೊಡ್ಡ ಜೀರುಂಡೆಯಾಗಿದೆ. ಇದು ಸುಮಾರು 8 ಸೆಂಟಿಮೀಟರ್’ವರೆಗೆ ಬೆಳೆಯುತ್ತದೆ. ಮುಖ್ಯವಾಗಿ ಈ ಕೀಟದಿಂದ ಹಲವು ಬಗೆಯ ಔಷಧಗಳನ್ನು ತಯಾರಿಸುವುದರಿಂದ ಈ ಕೀಟಕ್ಕೆ ಇಷ್ಟು ಬೆಲೆ ಬಂದಿದೆ. ಈ ಕೀಟವನ್ನು ಖರೀದಿಸಲು ಜನರು ಒಂದು ಕೋಟಿಯವರೆಗೂ ಹಣ ನೀಡಲು ಸಿಧ್ದರಿರುತ್ತಾರೆ. ಕೆಲವು ವರ್ಷಗಳ ಹಿಂದೆ ಒಬ್ಬ ಜಪಾನಿನ ತಳಿಗಾರರೊಬ್ಬರು ಈ ಕೀಟವನ್ನು ಸುಮಾರು 65 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದರು.
ಸಾರಂಗ ಜೀರುಂಡೆಗಳು ಎಲ್ಲಿ ಸಿಗುತ್ತವೆ?
ಇನ್ನು ನಿಮ್ಮ ಮನೆಯ ತೆಂಗಿನ ಮರದ ಪೊಟರೆಯಲ್ಲಿ, ತೆಂಗಿನ ಗರಿಯ ಸೆರೆಯಲ್ಲಿ ಅಥವಾ ಯಾವುದೊ ಮರದ ಸಿಪ್ಪೆಯ ಸೆರೆಯಲ್ಲಿ ಸಿಕ್ಕ ಯಾವುದೊ ಕಾಟು ಬೀಟಲ್ ಅನ್ನು ನೀವು ತಗೊಂಡು ಬಂದು ಮಾರಿದರೆ ನಿಮಗೆ ಒಂದು ಪೈಸೆನೂ ಸಿಗಲಿಕ್ಕಿಲ್ಲ ಮರೆ. ಈ ಕೀಟಗಳಲ್ಲಿ ಒಟ್ಟು 1200 ಪ್ರಬೇಧಗಳಿವೆ. ಅದರಲ್ಲಿ ಅತೀ ಉದ್ದವಾದ ಗರಗಸ ಹಲ್ಲಿನ ಜೀರುಂಡೆಗೆ ಮಾತ್ರ ಇಷ್ಟು ಬೆಲೆ ಇರುತ್ತದೆ. ಆ ರೀತಿಯ ಕೀಟಗಳು ಬಹಳ ಅಂದರೆ ಬಹಳ ವಿರಳ. ಬೆಲೆಬಾಳುವ ಈ ಸ್ಟಾಗ್ ಬೀಟಲ್ ಅಥವಾ ಸಾರಂಗ ಜೀರುಂಡೆಗಳಿಗೆ ಭಾರತವೇ ತವರುಮನೆ. ಈ ಸಾರಂಗ ಜೀರುಂಡೆ ಸಹ ಕೊಳೆತ ಮರವನ್ನು ತಿನ್ನುತ್ತವೆ. ಮತ್ತು ಅದರಲ್ಲೇ ವಾಸಿಸುತ್ತವೆ. ಈ ಕೀಟಗಳು ಒಂದು ಲೆಕ್ಕದಲ್ಲಿ ಪರಿಸರಕ್ಕೆ ಬಹಳ ಒಳ್ಳೆಯದು. ಕೊಳೆತ ವಸ್ತುಗಳು ಮಣ್ಣಿಗೆ ಸೇರುವುದರಿಂದ ಮಣ್ಣು ಫಲವತ್ತಾಗುತ್ತದೆ.
ಸ್ಟಾಗ್ ಬೀಟಲ್ ಜೀವಿತಾವಧಿ ಎಷ್ಟು ?
ಈ ಸ್ಟಾಗ್ ಜೀರುಂಡೆಗಳು ದೀರ್ಘವಾದ ಜೀವನ ಚಕ್ರವನ್ನ ಹೊಂದಿವೆ. ಕೆಲವು ಸ್ಟಾಗ್ ಬೀಟಲ್ ಗಳು ಸುಮಾರು 7 ವರ್ಷಗಳವರೆಗೆ ಇರುತ್ತದೆ. ಹೆಚ್ಚಿನ ಸ್ಟಾಗ್ ಬೀಟಲ್ ಅಥವಾ ಸಾರಂಗ ಜೀರುಂಡೆಗಳು ವಯಸ್ಕರಾಗಿ ಬೆಳೆದ ಕೆಲವೇ ವಾರಗಳಲ್ಲಿ ಸಾಯುತ್ತವೆ. ಚಳಿಗಾಲದಲ್ಲಿ ಈ ಕೀಟಗಳ ಸಾವು ಹೆಚ್ಚು. ಬೆಚ್ಚನೆಯ ವಲಯದಲ್ಲಿ ಇದು ಹೆಚ್ಚು ಕಾಲ ಬದುಕುತ್ತದೆ. ಹಾಗಾಗಿ ಈ ಕೀಟವನ್ನು ಸಾಕ ಬಯಸುವವರು ಆದಷ್ಟು ಬೆಚ್ಚಗೆ ಇರಿಸಿಕೊಳ್ಳಬೇಕಾಗುತ್ತದೆ.
2 thoughts on “ಈ ಕೀಟದ ಬೆಲೆ 1 ಕೋಟಿಗೂ ಅಧಿಕ! ಐಷಾರಾಮಿ ಕಾರು ಮನೆಗಳಿಗಿಂತ ದುಬಾರಿ! ”