ಸುಳ್ಯಕ್ಕೆ ಬಿಜೆಪಿಯಲ್ಲಿ ನಿಮ್ಮ ಆಯ್ಕೆ ಯಾರು? ಸುಳ್ಯಕ್ಕೆ ಯಾರ ಸಾರಥ್ಯ ಬೇಕು ಎಂದು ನಿಮ್ಮ ಅನಿಸಿಕೆ?
BJP Candidate for Sullia: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಲೇ ವಿವಿಧ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ನಾನಾ ಹೆಸರುಗಳು ಕೇಳಿಬರುತ್ತಿವೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಾಲಯದಲ್ಲಿ ಸಂಜೀವ ಮಠ೦ದೂರು ರವರ ಜೊತೆ ಅರುಣ್ ಕುಮಾರ್ ಪುತ್ತಿಲ ಹೆಸರು ಬಹಳ ಜೋರಾಗಿಯೇ ಕೇಳಿ ಬರುತ್ತಿದೆ. ಪುತ್ತಿಲರ ಪರವಾಗಿ ಈಗಾಗಲೇ ಟ್ವಿಟ್ಟರ್ ಟ್ರೆಂಡ್ ಸಹ ಅವರ ಅಭಿಮಾನಿಗಳು ಮುಂದುವರಿಸಿದ್ದಾರೆ. ಪುತ್ತೂರಿಗೆ ನಿಮ್ಮ ಆಯ್ಕೆ ಯಾರು ಎಂಬ ಸರ್ವೆಯಲ್ಲಿ 80 ಪ್ರತಿಶತ ಅರುಣ್ ಕುಮಾರ್ ಪುತ್ತಿಲರ ಕಡೆ ಒಲವು ಬಂದಿದೆ.
ಈಗ ಹಿಂದುತ್ವದ ಮತ್ತು ಬಿಜೆಪಿ ಯಾ ಭದ್ರ ಕೋಟೆಯಾದ ಸುಳ್ಯದಲ್ಲಿ ಯುವ ನಾಯಕತ್ವಕ್ಕೆಅವಕಾಶ ಕೊಡುವ ನಿಟ್ಟಿನಲ್ಲಿ ಹೆಸರುಗಳು ಕೇಳಿಬರುತ್ತಿವೆ. ಮತ್ತು ಚರ್ಚೆಗಳು ನಡೆಯುತ್ತಿವೆ. ಸುಳ್ಯದ ಹಾಲಿ ಶಾಸಕ ಸುಳ್ಯದ ಬಂಗಾರ ಎಂದು ಕರೆಯಲ್ಪಡುವ ಎಸ್ ಅಂಗಾರರಿಗೆ ಈ ಸಾರಿ ಟಿಕೆಟ್ ಸಿಗುವ ಚಾನ್ಸ್ ಕಡಿಮೆ ಎಂದು ಕೇಳಿಬರುತ್ತಿದೆ. ಒಟ್ಟು ಆರು ಬಾರಿ ಶಾಸಕರಾಗಿ ಆಯ್ಕೆಯಾದ ಎಸ್ ಅಂಗಾರ ಈ ಸಲ ಯುವ ನಾಯಕನಿಗೆ ಟಿಕಟ್ ಬಿಟ್ಟುಕೊಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಸುಳ್ಯಕ್ಕೆ ಬಿಜೆಪಿ ಪಾಳಯದಲ್ಲಿಯೇ ಬದಲಾವಣೆ ದ್ವನಿ ಕೇಳಿಬರುತ್ತಿದೆ. ಬಿಜೆಪಿ ಯಾ ಕಾರ್ಯಕರ್ತರೇ ಎಸ್ ಅಂಗಾರರ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದು ಕಂಡುಬರುತ್ತಿದೆ. ಸುಳ್ಯದ ಬಿಜೆಪಿ ಮತದಾರರನ್ನು ಲಘುವಾಗಿ ತೆಗೆದುಕೊಳ್ಳುತ್ತಿದ್ದರೆ ಎಂಬ ದೂರು ಕೇಳಿಬರುತ್ತಿದೆ.
ಹಾಗಾಗಿ ಈ ಸಲ ಬಿಜೆಪಿ ಯಲ್ಲಿ ಸಂಘ ಪರಿವಾರದಿಂದ ಮತ್ತು ಹಲವು ಹಿಂದೂ ಸಂಘಟನೆಯಿಂದ ಬಂದಂತಹ ಯುವ ನಾಯಕರಾದ ಲತೀಶ್ ಗುಂಡ್ಯ, ನವೀನ್ ನೆರಿಯ, ಪದ್ಮ ಕುಮಾರ್ ಗುಂಡ್ಯಡ್ಕ ಇವರಿಗೆ ಈ ಸಲ ಟಿಕೆಟ್ ನೀಡಬೇಕು ಎಂದು ಸುಳ್ಯದ ಯುವ ಮತದಾರರು ನಿರೀಕ್ಷಿಸುತ್ತಿದ್ದಾರೆ. ನೀವು ಸುಳ್ಯದ ಮತದಾರರೇ? ಹಾಗಿದ್ದಲ್ಲಿ ನೀವು ನಿಮ್ಮ ಅಭಿಪ್ರಾಯವನ್ನು ಇಲ್ಲಿ ವೋಟ್ ಮಾಡುವ ಮುಖಾಂತರ ತಿಳಿಸಿ.
Also Check
Read Also