ಅಮಿತ್ ಶಾ ಉದ್ಘಾಟನೆ ಮಾಡಲಿರುವ Ishwaramangala Amaragiri ಮಂದಿರದ ವಿಶೇಷತೆಗಳು ಮತ್ತು ಉದ್ದೇಶಗಳು
Ishwaramangala Amaragiri Mandira: ಕೇಂದ್ರ ಗೃಹ ಸಚಿವ ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಕರಾವಳಿಯ ಕೋಟೆಯನ್ನು ಭದ್ರಪಡಿಸುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಾರ್ಯಕ್ರಮಗಳ ನೆಪದಲ್ಲಿ ಪದೇ ಪದೇ ಕರಾವಳಿಗೆ ಆಗಮಿಸುವ ಅಮಿತ್ ಶಾ ಕರಾವಳಿ ಮತಬೇಟೆ ನಡೆಸಲು ಮಾಸ್ಟರ್ ಪ್ಲಾನ್ ರೆಡಿ ಮಾಡುತ್ತಿದ್ದಾರೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲ, ಪುತ್ತೂರು, ಮಂಗಳೂರಿಗೆ ಆಗಮಿಸುವ ಚಾಣಕ್ಯ Amith Shah ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣದ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.
ಈಶ್ವರಮಂಗಲದ Hanumagiri ಯಾರಿಗೆ ಪರಿಚಯ ಇಲ್ಲ ಹೇಳಿ?, ಕರಾವಳಿಯ ಪ್ರತಿಯೊಬ್ಬರಿಗೂ ಹನುಮಗಿರಿ ಚಿರಪರಿಚಿತ. ಇದು ಏಕ ಶೀಲಾ ಹನುಮನ ಮೂರ್ತಿಗೆ ಮತ್ತು ರಾಮನ ಶಿಲಾ ಮೂರ್ತಿಗೆ ಪ್ರಸಿದ್ದಿ. ಒಮ್ಮೆ ನೀವು ಹನುಮಗಿರಿಗೆ ಪ್ರವೇಶ ಮಾಡಿದಿರಿ ಅಂದರೆ ನೀವು ಹೊರಬರುವ ಹೊತ್ತಿಗೆ ಸಂಪೂರ್ಣ ರಾಮಾಯಣವನ್ನು ನೇರವಾಗಿ ಕಂಡ ಅನುಭವ ನಿಮ್ಮದಾಗಿರುತ್ತದೆ. ಹೌದು ಹನುಮಗಿರಿಯಲ್ಲಿ ಅಲ್ಲಲ್ಲಿ ನಿಮಗೆ ರಾಮಾಯಣದ ಪ್ರತಿಯೊಂದು ಕಥೆಯ ಚಿತ್ರವನ್ನು ಏಕ ಶಿಲೆಯಲ್ಲಿ ಕೆತ್ತನೆ ಮಾಡಿ ಇಡಲಾಗಿದೆ. ಈ ಕಲಾಕೃತಿಗಳು ನಮ್ಮ ಮೈಮನ ಸೂರೆಗೊಳ್ಳುತ್ತದೆ ಮತ್ತು ನಮ್ಮನ್ನು ಒಂದು ಸಾರಿ ತ್ರೇತಾಯುಗಕ್ಕೆ ಕರೆದುಕೊಂಡು ಹೋಗುತ್ತದೆ.
ಇವತ್ತು ಇದೇ ಹನುಮಗಿರಿಯಲ್ಲಿ ‘‘ಅಮರಗಿರಿ ಮಂದಿರ (Amaragiri Mandira Ishwaramangala)”ಯನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ರವರು ಉದ್ಘಾಟನೆ ಮಾಡಲಿದ್ದಾರೆ. ಏನಿದು ಅಮರಗಿರಿ ಮಂದಿರ ಎಂದು ಎಲ್ಲರಿಗೂ ಕುತೂಹಲ ಇದೆ. ಅಮರಿಗಿರಿ ಮಂದಿರದ ವಿಶೇಷತೆಯನ್ನು ಇಲ್ಲಿ ತಿಳಿದುಕೊಳ್ಳೋಣ.
ಧರ್ಮ ಶ್ರೀ ಪ್ರತಿಷ್ಠಾನದ ವತಿಯಿಂದ ಸುಮಾರು ಎರಡು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ Ishwaramangala Amaragiri Mandira ಬದುಕು ಸಮಾಜಕ್ಕಾಗಿ ಜೀವ ದೇಶಕ್ಕಾಗಿ ಎಂಬ ಸಂದೇಶ ಸಾರುವ ದೇಶದ ಎರಡನೇ ಅದ್ಭುತ ಮಂದಿರ. ಮೊದಲನೆಯದು ಕನ್ಯಾಕುಮಾರಿಯಲ್ಲಿ ಇರುವ ಅಮರಗಿರಿ ಮಂದಿರ ಮಂದಿರ ಇಡೀ ದೇಶಾದ್ಯಂತ ಚಿರಪರಿಚಿತ ಮತ್ತು ಪ್ರಸಿದ್ಧ ಪ್ರವಾಸಿ ತಾಣವು ಹೌದು. ಅದರಂತೆ ಎರಡನೆೇ ಅಮರಗಿರಿ ಮಂದಿರ ಇಂದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೊಳ್ಳಲಿದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.
Amaragiri Mandiraವು ದೇಶದ ಸೈನಿಕರ ಬಗ್ಗೆ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ದೇಶದ ಹಿರಿಯ ಮುತ್ಸದ್ಧಿಗಳ ಬಗ್ಗೆ ಕಥೆಗಳನ್ನು ಸಾರಿ ಹೇಳುವ ಒಂದು ಅಪರೂಪದ ಮಂದಿರ ಎಂದರೆ ತಪ್ಪಾಗಲಾರದು. ಇಡೀ ದೇಶದಲ್ಲಿರುವ ಕೇವಲ ಎರಡು ಅಮರಗಿರಿ ಮಂದಿರದಲ್ಲಿ ಈಶ್ವರಮಂಗಲದ ಅಮರಗಿರಿ ಮಂದಿರ ಒಂದು ಎಂಬುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ.
ಅಮರಗಿರಿ ಮಂದಿರವು ಅಷ್ಟಭುಜಾಕೃತಿಯಲ್ಲಿದ್ದು ಮಂದಿರದ ಒಳಗೆ ಭಾರತ ಮಾತೆಯ ವಿಗ್ರಹ ಅತ್ಯಂತ ಸುಂದರವಾಗಿ ಇಡಲಾಗಿದೆ. ಈ ವಿಗ್ರಹವು ಅಮೃತ ಶಿಲೆಯಲ್ಲಿ ಮಾಡಿದ್ದು, ರಾಜಸ್ಥಾನದ ಜಯಪುರದಲ್ಲಿ ನಿರ್ಮಿಸಿ ಇಲ್ಲಿ ತರಲಾಗಿದೆ ಎಂದು ಹೇಳಲಾಗಿದೆ. ವಿಶೇಷವಾಗಿ ಭಾರತ ಮಾತೆಯ ಎಡ ಬದಿಯಲ್ಲಿ ರೈತನ ವಿಗ್ರಹ ಮತ್ತು ಬಲ ಬದಿಯಲ್ಲಿ ಸೈನಿಕನ ವಿಗ್ರಹ ಸ್ಥಾಪಿಸಲಾಗಿದ್ದು ”ಜೈ ಜವಾನ್ ಜೈ ಕಿಸಾನ್‘ ಎಂಬ ಘೋಷ ವಾಕ್ಯದ ತತ್ವವನ್ನು ಸಾರಲಾಗಿದೆ. ಇದು ಕೂಡ ಅಮೃತ ಶಿಲೆಯಲ್ಲಿ ಕೆತ್ತಲಾಗಿದೆ. ಅಮಿತ್ ಶಾ ಅವರು ಈ ಭಾರತ ಮಾತೆಯ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಮರಗಿರಿ ಮಂದಿರವನ್ನು ಉದ್ಘಾಟನೆ ಮಾಡಲಿದ್ದಾರೆ.
ಪ್ರಮುಖವಾಗಿ ಮಂದಿರದ ಒಳಗಡೆ ಸುತ್ತಲೂ ಗೋಡೆಗಳಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಅದರಲ್ಲೂ ವಿಶೇಷವಾಗಿ ಬ್ರಿಟೀಷರ ವಿರುದ್ಧ ಎದೆಯೊಡ್ಡಿ ನಿಂತು ಹೋರಾಟ ಮಾಡಿದ ವೀರ ಕಲಿಗಳ ಭಾವಚಿತ್ರವನ್ನು ರಚಿಸಲಾಗಿದೆ. ಮತ್ತೊಂದು ಭಾಗದಲ್ಲಿ ನಮ್ಮ ದೇಶದ ಮಾಜಿ ಪ್ರಧಾನ ಮಂತ್ರಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಮತ್ತು ಭಾರತದ ಪ್ರಸ್ತುತ ಪ್ರಧಾನ ಮಂತ್ರಿ, ಇಡೀ ಜಗತ್ತು ನೆಚ್ಚಿದ ನಾಯಕ ಹೆಮ್ಮೆಯ ನರೇಂದ್ರ ಮೋದಿಜಿಯವರ ಭಾವಚಿತ್ರವನ್ನು ಗೋಡೆಯಲ್ಲಿ ರಚಿಸಲಾಗಿದೆ. ಅಲ್ಲಿಯೇ ಕೆಳಗಡೆ ಒಂದು ಟೇಬಲ್, ಕುರ್ಚಿ ಮತ್ತು ಒಂದು ಪುಸ್ತಕವನ್ನು ಇಡಲಾಗಿದೆ. ಅದರಲ್ಲಿ ಅಮರಗಿರಿ ಮಂದಿರಕ್ಕೆ ಬಂದು ಹೋಗುವ ಸಂದರ್ಶಕರ, ಪ್ರವಾಸಿಗರ ಅಭಿಪ್ರಾಯ ಮತ್ತು ಸಹಿಯನ್ನು ಸಂಗ್ರಹಿಸಲಾಗುತ್ತದೆ.
ಭಾರತಮಾತೆಯ ಶಿಲೆಯ ವಿರುದ್ಧ ದಿಕ್ಕಿನಲ್ಲಿ ಭಾರತ ಅಖಂಡತೆಯನ್ನು ಸಾರುವ ಒಂದು ಪ್ರತಿಮೆ ನಿರ್ಮಾಣ ಮಾಡಿದ್ದೂ ಅದರಲ್ಲಿ ಒಂದು ಕೈ, ರಾಷ್ಟ್ರ ದ್ವಜವನ್ನು ಎತ್ತಿ ಹಿಡಿಯುವ ನೋಟ ಎಂಥವರನ್ನು ಒಂದು ಸಾರಿ ಭಾರತ್ ಮಾತಾ ಕಿ ಜೈ ಎಂದು ಹೇಳಿಸದೆ ಬಿಡದು. ಈ ಶಿಲೆಯಲ್ಲಿ ರಾಷ್ಟ್ರ ದ್ವಜದ ಅಶೋಕ ಚಕ್ರವನ್ನು, ಉರಿಯುತ್ತಿರುವ ಹಣತೆಯನ್ನು, ಮತ್ತು ಎರಡು ರೈಫಲ್ ಗಳನ್ನೂ ಜೊತೆಗೆ ಜೈ ಹಿಂದ್ ಎಂಬ ಘೋಷವಾಕ್ಯವನ್ನು ಕೆತ್ತಲಾಗಿದೆ. ಅಲ್ಲಿ ಗೋಡೆಯಲ್ಲಿ ಸುತ್ತಮುತ್ತ ಋಷಿ ಮುನಿಗಳ ಚಿತ್ರವನ್ನು ಬರೆಯಲಾಗಿದೆ. Amit Shah ಭೇಟಿ ಮಾಡಿದ ನಂತರ ಈಶ್ವರಮಂಗಲದ ಅಮರಗಿರಿ ಮಂದಿರವು ಶನಿವಾರ ಮತ್ತು ಆದಿತ್ಯವಾರ ಪ್ರವಾಸಿಗಲರಿಗೆ ಭೇಟಿ ಮಾಡಲು ಮುಕ್ತ ಅವಕಾಶ ಇರುತ್ತದೆ.
ಒಟ್ಟಿನಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ನಾಗರೀಕರಲ್ಲೂ ದೇಶ ಭಕ್ತಿಯನ್ನು ಮತ್ತು ರಾಷ್ಟ್ರ ನಿರ್ಮಾಣದ ಸಾರವನ್ನು ಸಾರಿ ಹೇಳುವ ಪ್ರಯತ್ನವನ್ನು ಅಮರಗಿರಿ ಮಂದಿರ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು. ದೇಶದ ಹಿತಕ್ಕೆ ಮತ್ತು ದೇಶದ ಚಿಂತನೆಗೆ ದಾರಿ ಮಾಡಿಕೊಡುವ ಚಿತ್ರಗಳು ಮತ್ತು ವಿಷಯಗಳು ನಾಗರಿಕರ ಮನ ತಲುಪಲಿ, ಅಮರಗಿರಿ ಮಂದಿರದ ಉದ್ದೇಶ ಸಾಕಾರಗೊಳ್ಳಲಿ ಎಂಬುದು ನಮ್ಮ ಆಶಯ.
Read Also
- ಪುತ್ತೂರಿನಲ್ಲಿ ಬರುವ ವಿಧಾನಸಭಾ ಚುನಾವಣೆಗೆ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ.
- ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ