ವೇಷಧಾರಿ ಆರ್ಯನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಗ್ರೂಫಿ ತೆರೆಗೆ ಬರಲು ದಿನಾಂಕ ಫಿಕ್ಸ್.
ಪುತ್ತೂರಿನ ಯುವ ನಟ ಹಲವು ಕಿರುಚಿತ್ರಗಳಲ್ಲಿ ನಟಿಸಿ ನಂತರ ಬೆಳ್ಳಿ ಪರದೆಯಲ್ಲೂ ನಾಯಕ ನಟನಾಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ವೇಷಧಾರಿ ಆರ್ಯನ್ ಎಸ್ ಜಿ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ವಿಭಿನ್ನ ಕಥಾ ಹಂದರವುಲ್ಲ ”ಗ್ರೂಫಿ” ಕನ್ನಡ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು ಇದೇ ಬರುವ ಆಗಸ್ಟ್ 20 ರಂದು ಕರ್ನಾಟಕಾದ್ಯಂತ ಥೀಯೇಟರ್ ನಲ್ಲಿ ಬಿಡುಗಡೆಯಾಗಲಿದೆ.

ಕೋರೋಣ ದ ಲೊಕ್ಡೌನ್ (Corona Lockdown) ನಿಂದಾಗಿ ಚಿತ್ರರಂಗವೂ ಕಂಗಾಲಾಗಿದ್ದು ಜುಲಾಯಿ 19 ರಿಂದ ಕರ್ನಾಟಕ ಸರಕಾರ ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರ ಕಾರ್ಯನಿರ್ವಹಿಸಲು ಅನುಮತಿ ನೀಡಿರುವುದರಿಂದ ನಿರ್ಮಾಪಕರು ಹಾಗು ಸಮಸ್ತ ಚಿತ್ರರಂಗ ನಿಟ್ಟುಸಿರು ಬಿಡುವಂತೆ ಆಗಿದೆ. ಹಾಗಾಗಿ ಈಗಾಗಲೇ ಚಿತ್ರೀಕರಣ ಮುಗಿಸಿರುವ ಹಲವು ಚಿತ್ರಗಳು ಬಿಡುಗಡೆಗೆ ಕಾಯುತ್ತಿವೆ.
Groufie Kannada Movie release date announced
ಕೆ ಜಿ ಸ್ವಾಮಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಗ್ರೂಫಿ ಚಿತ್ರದ ಕಥೆಯನ್ನು ಡಿ ರವಿ ಅರ್ಜುನ್ ಬರೆದಿದ್ದಾರೆ ಹಾಗೂ ನಿರ್ದೇಶನವನ್ನು ರವಿ ಅರ್ಜುನ್ ಅವರೇ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ, ಹೃದಯ ಶಿವ, ಚೇತನ್ ಕುಮಾರ್ ರವರ ಸಾಹಿತ್ಯ ಈ ಚಿತ್ರಕ್ಕಿದ್ದು ವಿಜೇತ್ ಕೃಷ್ಣಾ ರವರು ಸಂಗೀತವನ್ನು ನೀಡಿದ್ದಾರೆ. ಕ್ಯಾಮರದಲ್ಲಿ ಲಕ್ಷ್ಮಿಕಾಂತ್ ರವರ ಕೈಚಳಕವಿದ್ದು ವಿಜೇತ್ ಚಂದ್ರರವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.
AMAZON Clearance Sale Amazing Offer Out Now
ಗ್ರೂಫಿ ಚಿತ್ರತಂಡವು ವಿಭಿನ್ನ ಕಥಾ ಹಂದರವನ್ನು ಹೊಂದಿದ್ದು ಚಿತ್ರರಸಿಕರಿಗೆ ಒಂದು ಹೊಸ ಅನುಭವವನ್ನು ಮತ್ತು ಒಂದು ವಿಭಿನ್ನ ಸಿನಿಮಾವನ್ನು ನೀಡುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಚಿತ್ರತಂಡ ಅಭಿಪ್ರಾಯ ಪಟ್ಟಿದೆ. ಉಳಿದಂತೆ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸಂಧ್ಯಾ, ಪ್ರಜ್ವಲ್, ಉಮಾ ಮಯೂರಿ, ಗಗನ್ ಹಾಗೂ ಪದ್ಮಶ್ರೀ ತಮ್ಮ ತಮ್ಮ ಅಭಿನಯ ಚಾತುರ್ಯವನ್ನು ತೋರಲಿದ್ದಾರೆ.
ಚಿತ್ರ ತಂಡದ ಎಲ್ಲರಿಗೂ ಹಾಗೂ ಚಿತ್ರಕ್ಕೂ ಶುಭ ಹಾರೈಕೆಗಳು. ಚಿತ್ರವು ಯಶಸ್ವಿಯಾಗಲಿ ಮತ್ತು ಶತದಿನವನ್ನು ಆಚರಿಸಲಿ.

Hello friend, thank you for taking an interest to read about me. I am the founder of coolinglass.com. I am a professional blogger and social media marketer. I love to write articles and suggest the best earning and learning tips to my readers. Feel free to get in touch with me through my social profiles. Love you all. Jai Hindh