ಈಗ ಎಲ್ಲಾ ಪಡ್ಡೆ ಹುಡುಗರ ಹೊಸ ಕ್ರಶ್ ”ಐಶ್ವರ್ಯ”: ಎಲ್ಲರ ವಾಟ್ಸಾಪ್ ಸ್ಟೇಟಸ್ ಲಿ ಇವರದ್ದೇ ಹವಾ

ಇನ್ನು ಸಾವು ಒಂದೇ ಎಂದು ಸಾಯಲು ಹೋರಟ ಹುಡುಗನ ಜೀವನದಲ್ಲಿ ಐಶ್ವರ್ಯ ಬಂದು ಮಾಡಿದ ಕರಾಮತ್ತು ಎಲ್ಲೆಡೆ ವೈರಲ್.

ಅವಕಾಶಕ್ಕಾಗಿ ಕಾಯುವುದು ಜಾಣತನವಲ್ಲ ಅವಕಾಶ ಇರುವ ಕಡೆ ನುಗ್ಗಿಕೊಳ್ಳುವುದು ಜಾಣತನವೆಂಬುದನ್ನು ಇತ್ತೀಚಿಗೆ ಎಲ್ಲೆಡೆ ವೈರಲ್ ಆದ ”ಐಶ್ವರ್ಯ ಬಂದ್ಲು” ಅನ್ನುವ ಕಾಮಿಡಿ ವಿಡಿಯೋ ಹಿಂದಿರುವ ಮಂಗಳೂರಿನ ಹುಡುಗರು ತೋರಿಸಿಕೊಟ್ಟಿದ್ದಾರೆ. ಹೌದು ಇಂದು ಎಲ್ಲರ ಮೊಬೈಲ್ ವಾಟ್ಸಾಪ್ ಸ್ಟೇಟಸ್ ಲ್ಲಿ , ಗ್ರೂಪ್ ಗಳಲ್ಲಿ, ಟ್ರೊಲ್ ಪೇಜ್ ಗಳಲ್ಲಿ, ಫೇಸ್ಬುಕ್ ಲ್ಲಿ ಭಾರಿ ವೈರಲ್ ಆದ ಐಶ್ವರ್ಯ ವಿಡಿಯೋ ನಿಮೆಗೆಲ್ಲ ಗೊತ್ತೇ ಇದೆ.

ಎಲ್ಲರ ವಾಟ್ಸಾಪ್ ಸ್ಟೇಟಸ್ ಲಿ ಇವರದ್ದೇ ಹವಾ: (Viral Video-Trending in Youtube, Instagram, whatsap)

ಉಪೇಂದ್ರ ಅವರ ಐಶ್ವರ್ಯ ಬಂದ್ಲು ಅನ್ನುವ ಹಾಡು ಅಷ್ಟೊಂದು ಹಿಟ್ ಆಯಿತೋ ಇಲ್ಲವೋ ಗೊತ್ತಿಲ್ಲ ಆದರೆ ಈ ಹುಡುಗರು ಮಾಡಿದ ಈ ಕಾಮಿಡಿ ವಿಡಿಯೋವಂತೂ ಭಾರಿ ಸದ್ದು ಮಾಡಿದೆ.

 

ಐಶ್ವರ್ಯ ಕಾಮಿಡಿ ವಿಡಿಯೋ ದ ಹಿಂದೆ ನಮ್ಮ ತುಳುನಾಡಿನ ಪ್ರತಿಭೆಗಳಿರುವುದು ಹಾಗೂ ಅದರ ಎಲ್ಲಾ ಸೀನ್ ಗಳನ್ನೂ ಮೊಬೈಲ್ ನಲ್ಲಿಯೇ ಚಿತ್ರೀಕರಿಸಿ ಎಡಿಟ್ ಮಾಡಿ ಬಿಡಲಾಗಿದೆ ಅನ್ನುವುದು ಗಮನಾರ್ಹ. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಮಾತು ಇಲ್ಲಿ ಅಕ್ಷರಸಹ ಸಾಬೀತಾಗಿದೆ. ಯಾಕೆಂದರೆ ಈ ವಿಡಿಯೋವನ್ನು ಸಂಪೂರ್ಣವಾಗಿ ಸಣ್ಣ ಸಣ್ಣ ಮಕ್ಕಳೇ ಕೂಡಿಕೊಂಡು ಚಿತ್ರೀಕರಿಸಿದ್ದಾರೆ.

 

ಐಶ್ವರ್ಯ ಕಾಮಿಡಿ ವಿಡಿಯೋ ಭಾರಿ ವೈರಲ್. ಒಂದೇ ದಿನದಲ್ಲಿ ಮಿಂಚಿದ ಹಡುಗರು

ಇಲ್ಲಿ ಮಾಡಿರುವ ಕ್ಯಾಮೆರಾ ಕೈಚಳಕವಾಗಲಿ. ಸಂಕಲನವಾಗಲಿ, ಪ್ರಸಾದನವಾಗಲಿ, ನಟನೆಯಾಗಲಿ, ನಿರ್ದೇಶನವಾಗಲಿ ಯಾವ ದೊಡ್ಡ ಸಿನಿಮಾಗಳಿಗೂ ಕಡಿಮೆಯೇನಿಲ್ಲಾ. ಇವರ ಈ ಪ್ರತಿಭೆಯನ್ನು ನೋಡಿ ಮುಂದೆ ದೊಡ್ಡ ಸಿನಿಮಾಗಳಿಗೆ ಅಹ್ವಾನ ಮಾಡಿದರೆ ಅಚ್ಚರಿಯೇನು ಇಲ್ಲ. ಬರುವ ದಿನಗಳಲ್ಲಿ ತುಳು ಸಿನಿಮಾರಂಗಕ್ಕೆ ಅಥವಾ ಚಂದನವನಕ್ಕೆ ಇನ್ನೊಬ್ಬ ರಕ್ಷಿತ್ ಶೆಟ್ಟಿ ಅಥವಾ ಉಪೇಂದ್ರ, ರಿಷಬ್ ಶೆಟ್ಟಿ ಯಂತಹ ಕ್ರಿಯಾಶೀಲ ಪ್ರತಿಭೆ ಈ ತಂಡದಿಂದ ಬರಲಿದ್ದಾರೆ ಎಂದರೆ ತಪ್ಪಾಗಲಾರದು.

 

ಮೊದಲು ತಾವು ಮಾಡಿದ ಕಾಮಿಡಿ ವಿಡಿಯೋ ಜಾಲತಾಣದಲ್ಲಿ ಹರಿಯ ಬಿಟ್ಟ ಹುಡುಗರು ಅದು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಆ ಕಾಮಿಡಿ ವಿಡಿಯೋ ಮೇಕಿಂಗ್ ವಿಡಿಯೋವನ್ನು ಸಹ ಎರಡು ದಿನಗಳ ಬಳಿಕ ಬಿಡುತ್ತಾರೆ. ಅದು ಸಹ ಬಹಳಷ್ಟು ವೈರಲ್ ಆಗುತ್ತದೆ. ಮತ್ತು ಈ ಕಾಮಿಡಿ ವಿಡಿಯೋ ಮಾಡಲು ಹುಡುಗರು ಪಟ್ಟ ಶ್ರಮವನ್ನು ಕಂಡ ವೀಕ್ಷಕರು ಈ ಹುಡುಗರಿಗೆ ಶಹಬಾಸ್ ಗಿರಿ ಕೊಡುತ್ತಾರೆ.

 

ಇಂತಹ ಒಂದು ವಿಭಿನ್ನ ಪ್ರಯತ್ನವನ್ನು ಮಾಡುವ ಮೂಲಕ, ವಿಡಿಯೋ ನೋಡಿದ ಪ್ರತಿಯೊಬ್ಬರೂ ಬಿದ್ದು ಬಿದ್ದು ನಗುವಂತೆ ಮಾಡಿದ ಈ ಹುಡುಗರ ಪರಿಶ್ರಮಕ್ಕೊಂದು ದೊಡ್ಡ ಸಲಾಂ. ಇವರ ಪ್ರತಿಭೆ ಇನ್ನಷ್ಟು ಬೆಳಗಲಿ. ಶುಭವಾಗಲಿ.

 

ಈ ಕಾಮಿಡಿ ವಿಡಿಯೋ ದ ಹಿಂದಿರುವ ಪ್ರತಿಭಾವಂತರು :
ನಿರ್ದೇಶನ ಮಾಡಿದವರು ಮೋಕ್ಷಿತ್ ಪೂಜಾರಿ ಮತ್ತು ಉಳಿದಂತೆ ಕಿಶನ್ ಪೂಜಾರಿ (ನಾಯಕ), ಮಿ.ಕಾರ್ತಿಕ್, ನಮೃತ್ ಆಚಾರ್, ದಿವಿಜ್ ಶೆಟ್ಟಿ, ದೃಶಾನ್ ಶೆಟ್ಟಿ ಮತ್ತಿತರರು

 

 

 

1 thought on “ಈಗ ಎಲ್ಲಾ ಪಡ್ಡೆ ಹುಡುಗರ ಹೊಸ ಕ್ರಶ್ ”ಐಶ್ವರ್ಯ”: ಎಲ್ಲರ ವಾಟ್ಸಾಪ್ ಸ್ಟೇಟಸ್ ಲಿ ಇವರದ್ದೇ ಹವಾ”

Leave a Comment