ಚಂದ್ರನ ಮಣ್ಣಲ್ಲಿ ಹೋದಲ್ಲೆಲ್ಲಾ ಭಾರತದ ಹೆಜ್ಜೆ ಗುರುತು

ಚಂದ್ರನ ಮಣ್ಣಲ್ಲಿ ಹೋದಲ್ಲೆಲ್ಲಾ ಭಾರತದ ಹೆಜ್ಜೆ ಗುರುತು

ಭಾರತದ ಕನಸು ಚಂದ್ರಯಾನ 3 ಯಶಸ್ವಿಯಾಗಿ ನಿನ್ನೆ ಅಂದರೆ ಆಗಷ್ಟ್ 23 ರಂದು ಸಂಜೆ 6.04 ಕ್ಕೆ ಚಂದ್ರನಂಗಳದ ದಕ್ಷಿಣ ಭಾಗದಲ್ಲಿ ರೋವರ್ ಹೊತ್ತ ನೌಕೆ ಪ್ರಗ್ಯಾನ್ ಲ್ಯಾಂಡಿಂಗ್ ಆಗಿ ಇಡೀ ವಿಶ್ವವೇ ಭಾರತದತ್ತ ತೆರುಗಿ ನೋಡುವಂತೆ ಇಸ್ರೋ ವಿಜ್ಞಾನಿಗಳು ಮಾಡಿದ್ದಾರೆ. ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಮಾಡಿದ ವಿಶ್ವದ 4 ನೇ ದೇಶವಾಗಿದೆ. ಮತ್ತು ಚಂದ್ರನ ದಕ್ಷಿಣ ಭಾಗದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಮಾಡಿದ ವಿಶ್ವದ ಮೊದಲ ದೇಶವಾಗಿದೆ. 

ಅಲ್ಲಿಯ ವಾತಾವರಣ ಮತ್ತು ಲಕ್ಷಣಗಳನ್ನು ಮನಗಂಡು ಪ್ರಗ್ಯಾನ್ ನಿಂದ ರೋವರ್ ಬೇರ್ಪಟ್ಟು ತನ್ನ ಕೆಲಸಕ್ಕೆ ಹೋರಡಲಿದೆ. ಮತ್ತು ಅನೇಕ ಪ್ರಯೋಗಗಳನ್ನು ಇನ್ನು ಮಾಡಲಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ. 

Click to Join Whatsapp Group

ವಿಶೇಷ ಎಂದರೆ ರೋವರ್ ಪ್ರಗ್ಯಾನ್ ನಿಂದ ಹೊರ ಬಂದು ಚಂದ್ರನ ನೆಲದಲ್ಲಿ ಸಂಚರಿಸುವಾಗ ಅದು ಹೋದಲ್ಲೆಲ್ಲಾ ಭಾರತದ ಸಿಂಹ ಲಾಂಛನ ಚಂದ್ರನ ಮಣ್ಣಲ್ಲಿ ಮೂಡಲಿದೆ. ಹೌದು ಇಸ್ರೋ ವಿಜ್ಞಾನಿಗಳು ರೋವರ್ ನ ಚಕ್ರ ಅಥವಾ ಚಲಿಸಬಲ್ಲ ಸಾಧನದ ಮೇಲೆ ಭಾರತದ ಸಿಂಹ ಲಾಂಛನದ ಗುರುತನ್ನು ಅಳವಡಿಸಿದ್ದಾರೆ. ಈಗಾಗಲೇ ಇದರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚಂದ್ರಯಾನದ ಯಶಸ್ವಿಯಿಂದ ಸಂಭ್ರಮಿತರಾದ ದೇಶ ಭಕ್ತರಿಗೆ ಇದನ್ನು ನೋಡಿ ಇನ್ನಷ್ಟು ಪುಳಕಿತರಾಗಿದ್ದಾರೆ. 

Footprint on the moon

Footprint on the moon
Footprint on the moon
Footprint on the moon

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ