Mangalore constituency: ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿಯೂ ಸಹ ಈ ಬಾರಿ ಬದಲಾವಣೆಯ ಗಾಳಿ ಬೀಸುವ ಲಕ್ಷಣಗಳು ಕಾಣುತ್ತಿವೆ. ಪ್ರಸ್ತುತ ಉಳ್ಳಾಲ ಕ್ಷೇತ್ರದ ಸ್ಟ್ರಾಂಗ್ ಕ್ಯಾಂಡಿಡೇಟ್ ಆದ ಯು ಟಿ ಖಾದರ್ ಪರ ಮತ್ತು ವಿರೋಧದ ಚರ್ಚೆಗಳು ಕೇಳಿ ಬರುತ್ತಿವೆ. ಆದರೆ ಉಳ್ಳಾಲ ಕ್ಷೇತ್ರದಲ್ಲಿ 60 ಪ್ರತಿಶತ ಕಾಂಗ್ರೆಸ್ ಮತಗಳಿದ್ದು, ಬಿಜೆಪಿ ಅಭ್ಯರ್ಥಿಯಾದ ಸತೀಶ್ ಕುಂಪಲ ರಿಗೆ ಜಯಗಳಿಸುವುದು ಒಂದು ಸವಾಲೇ ಸರಿ. ಈ ಬಾರಿ ಕ್ಷೇತ್ರದ ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಎಂದು ಕಾಡು ನೋಡಬೇಕಾಗಿದೆ.
ಬದಲಾವಣೆ ಜಗದ ನಿಯಮ ಅಂದಂತೆ ಈ ಬಾರಿ ಎಲ್ಲಾ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಬದಲಾವಣೆ ತಂದಿದ್ದರು ಸಹ ಕೆಲವು ಕ್ಷೇತ್ರಗಳು ಮಾತ್ರ ಹಳೆ ಮುಖಗಳನ್ನೇ ಕಾಣುವಂತಾಗಿದೆ. ಕಾಂಗ್ರೆಸ್ ಗೆಲ್ಲುವ ಕುದುರೆಯನ್ನು ಕೆರಳಿಸುವ ಯತ್ನಕ್ಕೆ ಹೋಗದೆ ಕ್ಷೇತ್ರದಲ್ಲಿ ಅಂತಹ ಅಭ್ಯರ್ಥಿಗಳನ್ನು ಉಳಿಸಿಕೊಂಡಿದ್ದಾರೆ. ಆದರೆ ಬಿಜೆಪಿ ಮಾತ್ರ ಯಾವ ಒತ್ತಡಕ್ಕೂ ಮಣಿಯದೆ ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟು ಬಂಡಾಯದ ಬಿಸಿ ತಟ್ಟುವಂತೆ ಮಾಡಿಕೊಂಡಿದೆ.