Gandhi Jayanti 2021| Why Did Godse Killed Mahatma Gandhi | ಗಾಂಧಿ ಹತ್ಯೆಗೆ ನಾಥುರಾಮ್ ಗೋಡ್ಸೆ ಕೊಟ್ಟ ಪ್ರಮುಖ ಕಾರಣಗಳು

ನಾಥುರಾಮ್ ಗೋಡ್ಸೆ ಮಹಾತ್ಮಾ ಗಾಂಧಿಯನ್ನು ಯಾಕೆ ಕೊಂದರು. ?

Table of Contents

Mahatma Gandhijiಯವರ ಜನಮ ದಿನವನ್ನು ಪ್ರತಿವರ್ಷವೂ ಅಕ್ಟೋಬರ್ 2 ರಂದು Gandhi Jayanti 2021 ಎಂದು ಆಚರಿಸುತ್ತಿರುವುದು ಕೇವಲ ಭಾರತದಲ್ಲೇ ಮಾತ್ರವಲ್ಲ, ಬದಲಾಗಿ ಪ್ರಪಂಚದ ನಾನಾ ದೇಶಗಳು ಈ ದಿನವನ್ನು ಆಚರಿಸಿ ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರಿಗೆ ಗೌರವ ಸೂಚಿಸುತ್ತವೆ.

ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಚಳುವಳಿಯ ಮೂಲಕ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮಹಾತ್ಮಾ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದರು. ಸ್ವಾತಂತ್ರ್ಯ ದೊರಕಿದ ಮರುವರ್ಷ ಅಂದರೆ ಜನವರಿ 30 1948 ರಂದು Nathuram Godse ಎಂಬವನಿಂದ ಗಾಂಧೀಜಿಯವರು ಹತ್ಯೆಗೀಡಾಗುತ್ತಾರೆ (Assassination of Gandhi).

ವಿಪರ್ಯಾಸ ಎಂದರೆ ತನ್ನ ಜೀವನ ಪರ್ಯಂತ ಅಹಿಂಸೆಯ ಮಾರ್ಗದಲ್ಲೇ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಮಹಾತ್ಮಾ ಗಾಂಧಿಯವರು ಮಾತ್ರ ನಾಲ್ಕು ಗುಂಡು ತಗುಲಿ ರಕ್ತದ ಮಡುವಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳಬೇಕಾಯಿತು.

ಗಾಂಧೀಜಿಯವರ ಖಾಸಗಿ ಜೀವನದ ಬಗ್ಗೆ ಸಾಕಷ್ಟು ಉಹಾಪೋಹಗಳಿದ್ದರು ಮಹತ್ಮಾ ಗಾಂಧೀಜಿಯವರು ನಡೆದು ಬಂದ ಹೋರಾಟದ ಹಾದಿ ಮಾತ್ರ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾದದ್ದು. ಇವರ ಅಹಿಂಸಾತ್ಮಕ ಹೋರಾಟಕ್ಕೆ ಬ್ರಿಟಿಷರು ಸಹಿತ ತಲೆಬಾಗಿದ್ದರು.

Mahatma Gandhiji Biography ಕುರಿತಾದ ಹಲವು ಪುಸ್ತಕಗಳಲ್ಲಿ ಮತ್ತು ಲೇಖನಗಳಲ್ಲಿ ನಾಥುರಾಮ್ ಗೋಡ್ಸೆ ಗಾಂಧಿಯನ್ನು ಹತ್ಯೆ (Godse Killed Mahatma Gandhi) ಮಾಡಿದುದರ ಬಗ್ಗೆ ವಿವಿಧ ರೀತಿಯಲ್ಲಿ ಉಲ್ಲೇಖವಿದೆ.

ಈ ಲೇಖನದಲ್ಲಿ ನಾಥುರಾಮ್ ಗೋಡ್ಸೆಯ ಕೋರ್ಟ್ ವಿಚಾರಣೆ ವೇಳೆ ಗಾಂಧಿಯನ್ನು ಗೋಡ್ಸೆ ಯಾಕೆ ಕೊಂದರು ಎಂಬುದಕ್ಕೆ ಗೋಡ್ಸೆ ಸ್ವತಃ ಕೊಟ್ಟ ಕೆಲವೊಂದು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡುತ್ತೇವೆ.

 

Gandhi Jayanti 2021| Why Did Godse Killed Mahatma Gandhi

Gandhi Jayanti 2021| Why Did Godse Killed Mahatma Gandhi

 

 

ಮಹಾತ್ಮಾ ಗಾಂಧಿಯನ್ನು ನಾಥುರಾಮ್ ಗೋಡ್ಸೆ ಕೊಲ್ಲಲು ಕಾರಣವಾದ ಪ್ರಮುಖವಾದ ಅಂಶಗಳು(The Reason behind the Gandhi Assassination by Godse):

 

ಅಖಂಡ ಭಾರತದ ಕನಸು ಕಂಡಿದ್ದ ನಾಥುರಾಮ್ ಗೋಡ್ಸೆಗೆ ಪಾಕಿಸ್ತಾನದ ವಿಭಜನೆ ಸಹಿಸಲಾಗಲಿಲ್ಲ.

ನಾಥುರಾಮ್ ಗೋಡ್ಸೆ ಒಬ್ಬ ಅಪ್ಪಟ ದೇಶಾಭಿಮಾನಿಯಾಗಿದ್ದ. ಅಖಂಡ ಭಾರತದ ಕನಸನ್ನು ನಾಥುರಾಮ್ ಗೋಡ್ಸೆ ಕಂಡಿದ್ದ. ಆದರೆ ಭಾರತ ಮತ್ತು ಪಾಕಿಸ್ತಾನದ ವಿಭಜನೆ ನಾಥುರಾಮ್ ಗೋಡ್ಸೆಗೆ ಸಹಿಸಲಾಗಲಿಲ್ಲ. ಮಹಮ್ಮದ್ ಜಿನ್ನಾ ಜತೆಗೂಡಿ ಅಖಂಡ ಭಾರತವನ್ನು ವಿಭಜಿಸುವಲ್ಲಿ ಪರೋಕ್ಷ ಕಾರಣವಾಗಿದ್ದ ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆ ಮಾಡುವುದಕ್ಕೆ ಪ್ರಮುಖ ಕಾರಣವಾಯಿತು ಎಂದು ಗೋಡ್ಸೆ ಕೋರ್ಟ್ ವಿಚಾರಣೆ ವೇಳೆ ಹೇಳಿಕೊಳ್ಳುತ್ತಾನೆ.

 

ಆಗಷ್ಟ್ 15 1947 ರಂದು ಭಾರತದ ಸ್ವಾತಂತ್ರ್ಯದ ಜೊತೆ ದೇಶದ ಮೂರನೇ ಒಂದು ಭಾಗ ವಿದೇಶವಾಗಿ ಹೋಯಿತು

ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರೆತ ಹಿನ್ನೆಲೆಯಲ್ಲಿ ಇಡೀ ದೇಶ ಸಂತೋಷದಲ್ಲಿರುವಾಗಲೇ ಭಾರತದ ಮೂರನೇ ಒಂದು ಭಾಗ ಪಾಕಿಸ್ತಾನವಾಗಿ ಮಾರ್ಪಟ್ಟು ಭಾರತದಿಂದ ವಿಭಜನೆಯಾಗಿ ದೇಶ ಪ್ರೇಮಿಗಳಿಗೆ ದೊಡ್ಡ ಆಘಾತ ಎದುರಾಗುತ್ತದೆ.

ಮಹಮ್ಮದ್ ಜಿನ್ನಾ ನ ಕುತಂತ್ರದಿಂದ ಮತ್ತು ಮಹಾತ್ಮಾ ಗಾಂಧಿಯವರ ಸಹಕಾರದಿಂದ ಭಾರತದ ಒಂದು ಭಾಗ ಮುಸ್ಲಿಮರ ಅಧಿಪತ್ಯಕ್ಕೆ ವಹಿಸಿ ಪಾಕಿಸ್ತಾನವಾಗಿ ಮಾರ್ಪಡುವಲ್ಲಿ ಆಗಸ್ಟ್ 14 1947 ಸಾಕ್ಷಿಯಾಗುತ್ತದೆ. ಈ ಘಟನೆಯು ದೇಶಾಭಿಮಾನಿಗಳಲ್ಲಿ ಆಕ್ರೋಶ ಹುಟ್ಟುಹಾಕುತ್ತದೆ. ಗೋಡ್ಸೆ ಗಾಂಧಿಯನ್ನು ಕೊಳ್ಳುವ ಮೂಲಕ ತನ್ನ ಆಕ್ರೋಶವನ್ನು ಹೊರಹಾಕುತ್ತಾನೆ.

 

ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿರಬೇಕಾದರೆ ಪಾಕಿಸ್ತಾನಕ್ಕೆ 55 ಕೋಟಿ ಹಣ ಸಹಾಯ ನೀಡಲು ಗಾಂಧಿ ಉಪವಾಸ ಸತ್ಯಾಗ್ರಹ

1947 ಭಾರತ ಸ್ವಾತಂತ್ರ್ಯ ನಂತರ ಹೊಸ ಕಾಂಗ್ರೆಸ್ ಸರಕಾರ ದೇಶವನ್ನು ಮುನ್ನಡೆಸುತ್ತಿದ್ದು, ಆ ಹೊತ್ತಿಗೆ ಭಾರತ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಬ್ರಿಟಿಷರು ಭಾರತವನ್ನು ಅನೇಕ ವರ್ಷಗಳ ಕಾಲ ಲೂಟಿ ಮಾಡಿರುವುದರಿಂದ ಭಾರತದ ಸಂಪತ್ತು ಸಾಕಷ್ಟು ಕರಗಿ ಹೋಗಿತ್ತು. ಉತ್ಪದನಾ ವಲಯಗಳು ಅಸ್ತಿತ್ವವನ್ನು ಕಳೆದು ಕೊಂಡಿತ್ತು. ಅದಾಗಲೇ ಭಾರತದಿಂದ ಬೇರ್ಪಟ್ಟ ಪಾಕಿಸ್ತಾನ ಕ್ರಮೇಣ ಭಾರತದ ಶತ್ರು ರಾಷ್ಟ್ರವಾಗಿ ಬದಲಾಗ ತೊಡಗಿತ್ತು.

ಈ ಸಮಯದಲ್ಲಿ Pakisthanವು Muhammad Ali Jinnahರ ಕುತಂತ್ರಗಳಿಗೆ ಮಣಿದಿದ್ದ ಮಹಾತ್ಮಾ ಗಾಂಧಿ ಪಾಕಿಸ್ತಾನಕ್ಕೆ ಭಾರತ ಸಹಾಯ ಮಾಡಬೇಕೆಬುದು ಬೇಡಿಕೆ ಇಟ್ಟಿದ್ದರು. ಸುಮಾರು 55 ಕೋಟಿ ರೂಪಾಯಿಗಳನ್ನೂ ಭಾರತ ಸರಕಾರ ಪಾಕಿಸ್ತಾನಕ್ಕೆ ವಿಭಜನಾ ಪರಿಹಾರವಾಗಿ ನೀಡಬೇಕು ಎಂದು ಗಾಂಧಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದರು. ಇದು ಅಕ್ಷರಸಹ ತಪ್ಪು ನಿರ್ಧಾರ. ಇದು ಸರಿಯಲ್ಲ ಎಂದು ಗೋಡ್ಸೆ ಕೋರ್ಟ್ ನಲ್ಲಿ ಹೇಳುತ್ತಾನೆ.

 

ದೇಶ ವಿಭಜನೆಗೆ ಗಾಂಧೀಜಿಯವರ ಮುಸ್ಲಿಂ ಓಲೈಕೆಯೇ ಪ್ರಮುಖ ಕಾರಣ

ಮಹಮ್ಮದ್ ಜಿನ್ನಾ ಪಾಕಿಸ್ತಾನವನ್ನು ಸಂಪೂರ್ಣ ಮುಸ್ಲಿಮ್ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದಿಂದ ವಿಭಜನೆಯ ಸಂಧರ್ಭದಲ್ಲಿ ಪಾಕಿಸ್ತಾನದ ಭೂಭಾಗದಲ್ಲಿ ಉಳಿದ ಹಿಂದುಗಳನ್ನು ಭಾರತಕ್ಕೆ ಓಡಿಸುವ ನೀಚ ಕೃತ್ಯವನ್ನ ಮಾಡತೊಡಗುತ್ತಾನೆ. ಈ ಸಮಯದಲ್ಲಿ ಗಾಂಧೀಜಿಯವರು ಪಾಕಿಸ್ತಾನದ ಕೃತ್ಯವನ್ನು ವಿರೋಧಿಸುವ ಬದಲು ಮುಸ್ಲಿಂ ಓಲೈಕೆಗೆ ಮುಂದಾಗಿದ್ದರು.

ಮುಸ್ಲಿಮರಿಗೆ ಕೊಡುವಷ್ಟು ಮಹತ್ವ ಭಾರತದ ಹಿಂದುಗಳಿಗೆ ಮಹಾತ್ಮಾ ಗಾಂಧೀಜಿ ಕೊಡುತ್ತಿರಲಿಲ್ಲ. ದೇಶ ವಿಭಜನೆಯ ಸಮಯದಲ್ಲಿ ಗಾಂಧೀಜಿಯವರು ಮುಸ್ಲಿಮರ ಪರವಾಗಿ ಮತ್ತು ಮುಸ್ಲಿಮರಿಗೆ ವಿವಿಧ ಸವಲತ್ತನ್ನು ಒದಗಿಸುವ ಸಲುವಾಗಿ ಅನೇಕ ಹೋರಾಟ ಸತ್ಯಾಗ್ರಹಗಳನ್ನು ಮಾಡುತ್ತಾರೆ.

ಮಹಾತ್ಮಾ ಗಾಂಧಿಯವರ ಮುಸ್ಲಿಮ ಓಲೈಕೆ ಮತ್ತು Muhammad Ali Jinnah ನ ಒಡನಾಟವೇ ಭಾರತದ ವಿಭಜನೆಗೆ ಪ್ರಮುಖ ಕಾರಣವಾಯಿತು ಎಂದು ಗೋಡ್ಸೆ ಗಾಂಧಿಯನ್ನು ಯಾಕೆ ಕೊಲ್ಲುತ್ತಾನೆ ಎಂಬುದಕ್ಕೆ ತನ್ನ ವಾದ ಮಂಡಿಸುತ್ತಾನೆ.

 

You May Like This Article:

 

ದೇಶ ವಿಭಜನೆಯ ನಂತರ ಗಡಿಯಲ್ಲಿ ನಡೆದ ಹಿಂದೂಗಳ ಮಾರಣ ಹೋಮ ದ ಬಗ್ಗೆ ಗಾಂಧೀಜಿಯವರು ಮೌನ ಮಹಿಸಿದ್ದರು.

1947 ರ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ನಂತರ ಭಾರತ ಆರ್ಥಿಕ ಸಂಕಷ್ಟದ ಜೊತೆ ಕೋಮು ಸಾಮರಸ್ಯ ಹದಗೆಟ್ಟು ಹಿಂದೂ ಮುಸ್ಲಿಂ ಗಲಾಟೆಗೆ ನಾಂದಿ ಹಾಡಿತ್ತು. ಭಾರತದ ಗಡಿ ಭಾಗದಲ್ಲಿ ಭೂಭಾಗದ ಇಕ್ಕಟ್ಟಿನಲ್ಲಿ ಸಿಲುಕಿದ್ದ ಅನೇಕ ಹಿಂದೂಗಳ ಮಾರಣ ಹೋಮ ನಡೆದಿತ್ತು.

ಗಡಿಯಲ್ಲಿ ನಡೆಯುತ್ತಿರುವ ಹಿಂದೂಗಳ ಮಾರಣಹೋಮದ ಬಗ್ಗೆ ಯಾವುದೇ ಮಾತುಗಳನ್ನಾಡದ ಮಹಾತ್ಮಾ ಗಾಂಧಿಯವರು ಆದಾಗ್ಯೂ ಮುಸ್ಲಿಮರ ಓಲೈಸುವ ಸಲುವಾಗಿ ಅವರಿಗಾಗಿ ಸತ್ಯಾಗ್ರಹ ಹೋರಾಟವನ್ನು ಸಹ ಮಾಡುತ್ತಿದ್ದರು ಎಂಬ ಮಾತಿದೆ. ಆದರೆ ಭಾರತದ ಗಡಿಯಲ್ಲಿ ಸಂಕಷ್ಟ ಎದುರಿಸುತ್ತಿರುವ ಹಿಂದೂಗಳ ಬಗ್ಗೆ ಮೌನ ವಹಿಸಿದ್ದ Mahatma Gandhi ಯಾವುದೇ ಹೋರಾಟವನ್ನು ಮಾಡುವುದಿಲ್ಲ. ಗಾಂಧೀಜಿಯವರ ಈ ವರ್ತನೆ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಗೋಡ್ಸೆ ಕೋರ್ಟಿಗೆ ಕೊಟ್ಟ ಕಾರಣಗಳಲ್ಲಿ ಇದು ಸಹ ಪ್ರಮುಖ ಕಾರಣವಾಗಿತ್ತು.

 

ಹಿಂದೂ ನಿರಾಶ್ರಿತರು ತುಂಬಿದ್ದ ಮಸೀದಿಯನ್ನು ಖಾಲಿ ಮಾಡಿಸಲು ಗಾಂಧಿ ಉಪವಾಸ ಸತ್ಯಾಗ್ರಹ.

ಭಾರತ ವಿಭಜನೆಯಿಂದಾಗಿ ಕೋಮು ಸಂಘರ್ಷ ಉಂಟಾಗಿ ಅದೆಷ್ಟೋ ಹಿಂದೂಗಳು ಪಾಕಿಸ್ತಾನದಲ್ಲಿ ಅಂತಂತ್ರರಾದರೆ ಭಾರತದಲ್ಲಿ ಹಲವು ಮುಸ್ಲಿಮರು ಸಂಘರ್ಷದಲ್ಲಿ ಹತರಾದರು ಎಂಬ ಉಲ್ಲೇಖ ಇದೆ. ಪಾಕಿಸ್ತಾನದಲ್ಲಿ ಇದ್ದ ಹಿಂದೂಗಳ ಮಾರಣಹೋಮ ನಡೆದಾಗ ಅದರಿಂದ ತಪ್ಪಿಸಿಕೊಂಡು ಭಾರತಕ್ಕೆ ವಲಸೆ ಬಂದು ನೆಲೆಕಾಣದೆ ಖಾಲಿ ಇದ್ದ ಮಸೀದಿಗಳಲ್ಲಿ ಆಶ್ರಯ ಪಡೆಯುತ್ತಾರೆ.

ಇದರಿಂದ ಭಾರತದ ಮುಸ್ಲಿಮರು ತಗಾದೆ ಎತ್ತುತ್ತಾರೆ. ಗಾಂಧೀಜಿಯವರು ಮಸೀದಿಯಲ್ಲಿ ಆಶ್ರಯ ಪಡೆದ ಹಿಂದೂ ನಿರಾಶ್ರಿತರಿಗೆ ನೆಲೆ ಒದಗಿಸುವ ಬದಲು ಅವರನ್ನು ಅಲ್ಲಿಂದ ತೆರಳಲು ಮತ್ತು ಮುಸ್ಲಿಮರಿಗೆ ಜಾಗ ಕೊಡಬೇಕು ಎಂದು ಉಪವಾಸ ಸತ್ಯಾಗ್ರಹ ಮಾಡಿದರು ಎಂದು ಹೇಳಲಾಗಿದೆ. ಇದು Nathuram Godseಗೆ ಕೋಪ ತರಿಸಿತ್ತು.

 

ಮುಸ್ಲಿಮರಿಗೆ ಆಶ್ರಯ ಒದಗಿಸಲು ಗಾಂಧೀಜಿ ಹೋರಾಟ

ವಿಭಜನೆ ಸಂಭರ್ಭದಲ್ಲಿ ದೇಶದಲ್ಲೇ ಉಳಿದು ಕೊಂಡ ಹಲವು ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ಒದಗಿಸಬೇಕು ಮತ್ತು ಸರಿಯಾದ ಸವಲತ್ತು ಸರಕಾರ ಒದಗಿಯಬೇಕು ಎಂಬ ಗಾಂಧೀಜಿಯವರ ನಿಲುವನ್ನು Nathuram Godse ಪ್ರಬಲವಾಗಿ ವಿರೋಧಿಸುತ್ತಿದ್ದರು. ದೇಶದ ಹಿಂದೂಗಳ ಆಲೋಚನೆ ಮಾಡದ ಗಾಂಧೀಜಿಯವರು ಸದಾ ಮುಸ್ಲಿಮರ ಪರವಾಗಿ ಹೆಚ್ಚು ಹೆಚ್ಚು ಸತ್ಯಾಗ್ರಹವನ್ನು ಮಾಡತೊಡಗಿದರು ಎಂದು ಗೋಡ್ಸೆ ತನ್ನ ಮಾಡದಲ್ಲಿ ಹೇಳುತ್ತಾನೆ.

 

ಪಾಕಿಸ್ತಾನದಿಂದ ವಲಸೆ ಬಂದ ನಿರಾಶ್ರಿತ ಹಿಂದುಗಳ ಬಗ್ಗೆ ಮೃದು ಧೋರಣೆ

ಗಾಂಧೀಜಿಯವರು ಭಾರತದಲ್ಲಿ ವಿಭಜನೆಯ ನಂತರ ಉಳಿದುಕೊಂಡ ಮುಸ್ಲಿಮರ ಪರವಾಗಿ ತೋರುತ್ತಿದ್ದ ಒಲವು ಕಾಳಜಿ ಪಾಕಿಸ್ತಾನದಿಂದ ಜೀವ ಉಳಿಸಿಕೊಂಡು ಭಾರತಕ್ಕೆ ವಲಸೆ ಬಂದ ಹಿಂದೂ ನಿರಾಶ್ರಿತರ ಪರವಾಗಿ ಇರಲಿಲ್ಲ. ಹಿಂದೂ ನಿರಾಶ್ರಿತರಿಗೆ ಆಶ್ರಯ ಒದಗಿಸುವ ಸಲುವಾಗಿ ಗಾಂಧೀಜಿ ಯಾವುದೇ ಹೋರಾಟ ಮಾಡಲಿಲ್ಲ. ಎಂದು Nathuram Godse ಕೋರ್ಟ್ ನಲ್ಲಿ ಗಾಂಧೀಜಿ ಹತ್ಯೆಗೆ ಕಾರಣ ಹೇಳುತ್ತಾನೆ.

 

Source for Article: Wikipedia, YouTube, Google

 

FAQ:

Q: When Godse was hanged?

A: The Gandhi Killer Nathuram Godse Hanged on 15 November 1949 at Ambala Central Jail Panjab

Q: How did Nathuram Vinayak Godse die?

A: Execution by Hanging

Q: How many years of Gandhi Jayanti 2021?

A: 152nd birth anniversary

Q: When is Gandhi Jayanti Celedrating?

A: October 2

Q: When Gandhi was born?

A: October 2 1969 – Gandhi Jayanti 2021

Q: When was Gandhi Killed ?

A: January 30 1949

Q: Whose birthday is celebrated along with Mahatma Gandhi?

A: Lal bahadur Shastri

 

 

 

 

 

 

 

3 thoughts on “Gandhi Jayanti 2021| Why Did Godse Killed Mahatma Gandhi | ಗಾಂಧಿ ಹತ್ಯೆಗೆ ನಾಥುರಾಮ್ ಗೋಡ್ಸೆ ಕೊಟ್ಟ ಪ್ರಮುಖ ಕಾರಣಗಳು”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio