ಜಾಗರೂಕರಾಗಿರಿ : ದರೋಡೆಕೋರರಿಂದ ಎಚ್ಚರವಿರಲು ಪೊಲೀಸರಿಂದ ಕೆಲವೊಂದು ಸೂಚನೆಗಳು : Instructions From the Police

Here are some instructions from the police to alert the burglars

ಪುತ್ತೂರು : ಇತ್ತೀಚೆಗೆ ಪುತ್ತೂರು ತಾಲೂಕಿನ ಕಟ್ಟತ್ತಾರು, ಕೆಯ್ಯೂರು, ಮಾಡಾವು ಮತ್ತಿತರ ಕಡೆಯಲ್ಲಿ ರಾತ್ರಿ ಹೊತ್ತು ಕಳ್ಳರ ಗುಂಪೊಂದು ಕೆಲವು ಮನೆಗಳಿಗೆ ನುಗ್ಗಿ ದರೋಡೆ ಮಾಡುವ ಪ್ರಯತ್ನ ಮಾಡಿತ್ತು. ಕೆಲವು ಮನೆಗಳಿಂದ ಹಣ ಆಭರಣ ದೋಚಿ ಪರಾರಿಯಾಗಿದ್ದರು. ಕಳ್ಳರನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದ್ದು, ಮಹತ್ತರ ಸುಳಿವುಗಳು ಸಿಕ್ಕಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. instructions from the police.

ಇದೇ ಕಳ್ಳರ ಗುಂಪು ಇನ್ನೂ ಮನೆಗಳಿಗೆ ನುಗ್ಗಿ ದರೋಡೆ ಮಾಡುವ ಪ್ರಯತ್ನ ಮಾಡಬಹುದು ಮತ್ತು ಇವರ ಬಂಧನ ಆಗುವ ತನಕ ಸಾರ್ವಜನಿಕರು ಇನ್ನು ಸಹ ರಾತ್ರಿ ಹೊತ್ತು ಬಹಳ ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸ್ ಇಲಾಖೆಯು ಕೆಲವೊಂದು ಸೂಚನೆಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

instructions from the police

 

ಸೂಚನೆಗಳು :

  • ಕಳ್ಳತನ ನಡೆದ ಎಲ್ಲಾ ಮನೆಗಳಲ್ಲಿ ಅಡುಗೆ ಮನೆಯ ಬಾಗಿಲನ್ನು ಮುರಿದು ದರೋಡೆ ನಡೆಸುವ ಪ್ರಯತ್ನ ಮಾಡುತ್ತಿದ್ದು, ಅಡುಗೆ ಮನೆಯ ಬಾಗಿಲನ್ನು ಆದಷ್ಟು ಭದ್ರಪಡಿಸಿಕೊಳ್ಳಬೇಕು.
  • ರಾತ್ರಿ ಹೊತ್ತು ಸುಮಾರು 2 ಗಂಟೆಯಿಂದ 4 ರ ನಡುವೆ ದರೋಡೆ ನಡೆಸುವ ಈ ಗ್ಯಾಂಗ್ ನಲ್ಲಿ ಮಾರಕಾಯುಧಗಳಿದ್ದು ಒಬ್ಬಂಟಿಯಾಗಿ ಎದುರಿಸುವ ಪ್ರಯತ್ನ ಮಾಡದಿರುವುದು ಉತ್ತಮ.
  • ರಾತ್ರಿ ಹೊತ್ತು ಯಾವುದೇ ಶಬ್ದವಾದರೆ ಬಾಗಿಲು ತೆರೆದು ನೋಡುವ ಬದಲು ಕಿಟಕಿಯಿಂದ ಇಣುಕಿ ನೋಡಬೇಕು,
    ಮನೆಯ ಹೊರಗಡೆ ಮತ್ತು ಅಡುಗೆ ಮನೆಯಲ್ಲಿ ರಾತ್ರಿ ಒಟ್ಟು ಯಾವುದೇ ಬೆಳಕನ್ನು ಆಫ್ ಮಾಡಿಕೊಳ್ಳಿ.
  • ರಾತ್ರಿ ಹೊತ್ತು ಮನೆಯ ಹೊರಗಡೆ ನೀರು ಬೀಳುವ ಶಬ್ದ ಕೇಳಿದರೆ, ಮಗು ಅಳುವ ಶಬ್ದ ಕೇಳಿದರೆ, ಅಥವಾ ಇನ್ನಿತರ ಯಾವುದೇ ಅಗೋಚರ ಶಬ್ದ ಕೇಳಿದರೆ ನಿಮ್ಮ ನೆರೆಹೊರೆಯವರಿಗೆ ಮೊದಲು ತಿಳಿಸಿ. ಮನೆಯ ಹೊರಗಡೆ ಬರಬೇಡಿ.
  • ಉಪಯುಕ್ತವಾದ ಪಾತ್ರೆಗಳು, ಬೆಲೆಬಾಳುವ ವಸ್ತುಗಳು ಆಯುಧಗಳು, ಸಲಿಕೆಗಳು, ಕೊಡಲಿಗಳು ಮತ್ತು ಏಣಿಗಳನ್ನು ದರೋಡೆಕೋರರ ಕೈಗೆಟುಕದಂತೆ ದೂರವಿಡಿ.
  • ಮನೆಯಲ್ಲಿ ಹೆಚ್ಚು ಬೆಲೆಬಾಳುವ ಆಭರಣಗಳನ್ನು ಇಡಬೇಡಿ. ಹೆಚ್ಚು ದುಡ್ಡು ಬೀರುಗಳಲ್ಲಿಡಬೇಡಿ. ಆದಷ್ಟು ಬ್ಯಾಂಕುಗಳ ಲಾಕರ್ ನಲ್ಲಿಡಿ.
  • ಹೆಚ್ಚು ಭರಣಗಳನ್ನು ಧರಿಸಬೇಡಿ.
  • ಮಕ್ಕಳಿಗೆ ಹೆಚ್ಚು ಆಭರಣಗಳನ್ನು ಹಾಕಬೇಡಿ.
  • ಪರಿಚಯವಿಲ್ಲದ ಸಂದರ್ಶಕರು, ಸಂಗ್ರಾಹಕರು, ಭಿಕ್ಷುಕರು, ಕಸ ಕಲೆಕ್ಟ್ ಮಾಡುವವರು, ಕಂಬಳಿ ಮಾರಾಟ ಮಾಡುವವರು, ಬೈಕ್ ಅಥವಾ ಕಾರುಗಳು ಮತ್ತು ಹತ್ತಿರ ಸ್ಥಳಗಳಲ್ಲಿ ಕೆಲಸ ಮಾಡುವ ಹೊರ ರಾಜ್ಯದ ಕಾರ್ಮಿಕರಿಂದ ಆದಷ್ಟು ದೂರವಿರಿ.
  • ಅಪರಿಚಿತರು ಯಾರೇ ಬಂದರೂ ಗೇಟಿನ ಹೊರಗಡೆ ವಿಚಾರಿಸಿಕೊಳ್ಳಿ.
  • ಹತ್ತಿರದ ಪೊಲೀಸು ಠಾಣೆಯ ಸಂಪರ್ಕ ಸಂಖ್ಯೆ ನಿಮ್ಮಲ್ಲಿರಲಿ
  • ಅನುಮಾನಸ್ಪದ ವ್ಯಕ್ತಿ ಯಾರೇ ಕಂಡು ಬಂದರು ಪೊಲೀಸರಿಗೆ ತಿಳಿಸಿ.

 

ಪೊಲೀಸು ಠಾಣೆಯ ದೂರವಾಣಿ ಸಂಖ್ಯೆ

 

ಪೊಲೀಸು ದೂರು ಸಂಖ್ಯೆ – 100

ಸಂಪ್ಯ ಪೊಲೀಸು ಠಾಣೆ –   082512 32102

ಪುತ್ತೂರು ನಗರ ಪೊಲೀಸು ಠಾಣೆ –   082512 30555

ಕಡಬ ಪೊಲೀಸು ಠಾಣೆ –   082512 60044

ಬೆಳ್ಳಾರೆ ಪೊಲೀಸು ಠಾಣೆ –   +91 8257271995

ಸುಳ್ಯ ಪೊಲೀಸು ಠಾಣೆ –   082572 30337

ಸುಬ್ರಹ್ಮಣ್ಯ ಪೊಲೀಸು ಠಾಣೆ –   +91 9480805366

ಮೂಡಬಿದ್ರಿ ಪೊಲೀಸ್ ಠಾಣೆ 08258 236333

ಮಂಗಳೂರು ಕಮಿಷನರ್ ಆಫೀಸ್0824 2220526 , +91 9480805322

 

ಮಂಗಳೂರು ಸಿಟಿ ಪೊಲೀಸ್ ಕಛೇರಿಯ ಅಫೀಷಿಯಲ್ ವೆಬ್ಸೈಟ್ – Mangalore City Police Contact detail

 

 

 

 

 

 

 

 

 

 

 

 

 

1 thought on “ಜಾಗರೂಕರಾಗಿರಿ : ದರೋಡೆಕೋರರಿಂದ ಎಚ್ಚರವಿರಲು ಪೊಲೀಸರಿಂದ ಕೆಲವೊಂದು ಸೂಚನೆಗಳು : Instructions From the Police”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio