ಜಪಾನ್‌ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ಸ್‌ ತಲುಪಿದ ಪುರುಷರ ಭಾರತ ಹಾಕಿ ತಂಡ! Indian Mens Hockey team : Tokyo Olympics

ಹೈಲೈಟ್ಸ್‌:

  • ಜಪಾನ್‌ ವಿರುದ್ಧ 5-3 ಅಂತರದಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ಗೇರಿದ ಭಾರತ(ಪು) ಹಾಕಿ ತಂಡ(Indian Mens Hockey team).
  • ‘ಎ’ ಗುಂಪಿನಲ್ಲಿ ಆಸ್ಟ್ರೇಲಿಯಾ ಅಗ್ರ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನ ಅಲಂಕರಿಸಿದೆ.
  • ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಭಾರತ ತಂಡ.

 

Indian Mens Hockey team

 

ಟೋಕಿಯೋ : ಗೆಲುವಿನ ಲಯ ಮುಂದುವರಿಸಿರುವ ಭಾರತ ಪುರುಷರ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ ಹಾಕಿ ಸ್ಪರ್ಧೆಯಲ್ಲಿ ಕ್ವಾರ್ಟರ್‌ ಫೈನಲ್ಸ್‌ಗೆ ಪ್ರವೇಶವನ್ನು ಮಾಡಿದೆ. ಆ ಮೂಲಕ ಮಹತ್ವದ ಕ್ರೀಡಾಕೂಟದಲ್ಲಿ ಭಾರತಕ್ಕೆ ಇನ್ನೊಂದು ಪದಕವನ್ನು ಗೆಲ್ಲುವ ವಿಶ್ವಾಸವನ್ನು ಗಟ್ಟಿ ಮಾಡಿಕೊಂಡಿದೆ. Indian Mens Hockey team enters quarter final in Tokyo Olympics 2020 

ಶುಕ್ರವಾರದ ಪಂದ್ಯದಲ್ಲಿ ನೀಲಕಂಠ ಶರ್ಮಾ(Nilakanta Sharma), ಮನ್‌ಪ್ರಿತ್‌ ಸಿಂಗ್‌, ಗುಜ್ರಾಂತ್‌ ಸಿಂಗ್‌ ಹಾಗೂ ಶಂಶರ್ ಸಿಂಗ್ ಅವರ ಅಮೋಘ ಗೋಲುಗಳ ನೆರವಿನಿಂದ ಭಾರತ ತಂಡವು 5 – 3 ಅಂತರದಲ್ಲಿ ಜಪಾನ್‌ ವಿರುದ್ಧ ಗೆದ್ದು ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದೆ. ಆ ಮೂಲಕ ಭಾರತ ತಂಡವು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.

 

Best Earbuds for Business person

 

ಇಲ್ಲಿ ನಡೆದ ಪಂದ್ಯದ ಮೊದಲ ಕ್ವಾರ್ಟರ್‌ ಆರಂಭದಲ್ಲಿ ಪಂದ್ಯವು ಭಾರತ ಮತ್ತು ಜಪಾನ್‌ ನಡುವೆ ಭಾರಿ ಜಿದ್ದಾ-ಜಿದ್ದಿ ನಡೆದಿತ್ತು. ಆದರೆ, ಪಂದ್ಯದ ಹದಿಮೂರನೇ ನಿಮಿಷದಲ್ಲಿ ಅದ್ಭುತ ಕೌಶಲ ಪ್ರದರ್ಶಿಸಿದ ಮನ್‌ಪ್ರೀತ್‌ ಸಿಂಗ್, ಭಾರತಕ್ಕೆ ಗೋಲಿನ ಖಾತೆಯನ್ನು ತೆರೆದರು. ನಂತರ, ಎರಡನೇ ಕ್ವಾರ್ಟರ್‌ನ ಆರಂಭದಲ್ಲಿಯೇ ಗುಜ್ರಾಂತ್‌ ಸಿಂಗ್‌ ಭಾರತಕ್ಕೆ ಮತ್ತೊಂದು ಗೋಲು ತಂದುಕೊಟ್ಟರು. ಇದರ ಬೆನ್ನಲ್ಲೆ ಎಚ್ಚೆತ್ತುಕೊಂಡ ಜಪಾನ್ ತಂಡದ ತನಕಾ ಗೋಲು ಗಳಿಸಿ ತಮ್ಮ ತಂಡದ ಖಾತೆ ತೆರೆದರು.

 

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ