ನಮ್ಮ ಘನ ಸರಕಾರದಲ್ಲಿ ಪುತ್ತೂರಿನ ನೊಂದ ರೈತನ ಒಂದು ಸವಿನಯ ವಿನಂತಿ.

ನಮ್ಮ ಘನ ಸರಕಾರದಲ್ಲಿ ಒಂದು ಸವಿನಯ ವಿನಂತಿ.

    ನಮ್ಮ ಅನೇಕ ಸರಕಾರಿ ನೌಕರರು ಸಣ್ಣ ಮಟ್ಟಿನ ಕೃಷಿಕರು. ಅವರು ಯಾರೂ ಅನುಕೂಲವಾಗಿಲ್ಲ. ಶೂನ್ಯ ಬಡ್ಡಿಯ ಕೃಷಿ ಸಾಲ ಕಡಿಮೆ ಬಡ್ಡಿಯ ಸಾಲ ನೀಡುವುದರ ಮೂಲಕ ಆಶಾಕಿರಣವಾಗಿತ್ತು. ಬದುಕಿಗೆ ಆಧಾರವಾಗಿತ್ತು. ಅದರಲ್ಲೂ ನನ್ನಂಥ ನಿವೃತ್ತ ಹಿರಿಯನಾಗರಿಕ, ಅಲ್ಪ ಸ್ವಲ್ಪ ಕೃಷಿ ಹೊಂದಿರುವವನಿಗೆ ಇದು ವರದಾನವೂ ಆಗಿತ್ತು. ಆದರೆ ಇದರ ಕುರಿತು ಸಂತಸ ಪಟ್ಟ ಬೆನ್ನಲ್ಲೇ ಪಿಂಚಿಣಿ ದಾರರಿಗೆ ಆ ಸೌಲಭ್ಯವಿಲ್ಲ ಎಂಬ ವರದಿ ಬರ ಸಿಡಿಲು ಬಡಿದಂತಾಗಿದೆ. ಈಗಾಗಲೇ ಈ ಸಾಲವನ್ನು ಪಡೆದ ನಾನು ಈಗ ಬಡ್ಡಿ ಕಟ್ಟುವ ಪ್ರಮೇಯಕ್ಕೆ ಸಿಲುಕಿ ನಲುಗುವಂತಾಗಿದೆ. ಈ ಬಾರಿಯಂತೂ ಜೀವ ಕೈಯಲ್ಲಿ ಹಿಡಿದು ಜೀವನ. ಬಡ್ಡಿ ಕಟ್ಟಲು ಆಗದ ಪರಿಸ್ಥಿತಿ. ಮಳೆ ಗಾಳಿಗೆ ಅಡಿಕೆ ತೋಟ ಶೇ80 ನಾಶವಾಗಿ ಹೋಗಿದೆ. ಅದರ ಜೊತೆ ಗಾಯದ ಮೇಲೆ ಬರೆ ಎಳೆದಂತೆ ಬೆಳೆಗೆ ಕೊಳೆ ರೋಗ ಭಾದೆ. ಇನ್ನೊಂದೆಡೆ ವೈರಸ್ ಮರ್ಮಾಘಾತ. ಇದರಿಂದೆಲ್ಲವಾಗಿ ನಾನು ಮತ್ತು ನನ್ನಂತಹ ಸಣ್ಣ ರೈತರು ತುಂಬಾನೇ ಮನನೊಂದಿದ್ದೇವೆ. ದಯ ಮಾಡಿ ಶೂನ್ಯ ಮತ್ತು ಕಡಿಮೆ ಬಡ್ಡಿಯ ಸಾಲವನ್ನು ಯಥಾಪ್ರಕಾರ ಈ ಕೂಡಲೇ ಸಕ್ರಮಗೊಳಿಸಿ. ಇದು ನೂತನ ಸರಕಾರದಲ್ಲಿ ನನ್ನ ಸವಿನಯ ಪ್ರಾರ್ಥನೆ. ನನ್ನ ನಿವೃತ್ತಿ ವೇತನ ರೂ.30ಸಾವಿರ+.ಇದರಲ್ಲಿ ಕೆಲಸದವರಿಗೆ ಕೊಡಲು ಜೀವನ ನಡೆಸಲು ಅಸಾಧ್ಯ. ಆದರೆ ಸಾಲ ಸಂದಾಯಕ್ಕೆ ಒಂದು ಪಾಲು ಖಂಡಿತ ತೆಗೆದಿರಿಸುವೆ. ಯಾಕೆಂದರೆ ಇದು ನನ್ನ ಧರ್ಮ.

ಸಾರ್ವಜನಿಕ ಹಿತದೃಷ್ಟಿಯಿಂದ ಸರಕಾರ ನನ್ನ ಮನವಿ ಮಾನ್ಯ ಮಾಡುತ್ತದೆ ಎಂಬ ಆಶಯದೊಂದಿಗೆ,
ಇತೀ ನಿಮ್ಮ ನೊಂದ ರೈತ
ನಾರಾಯಣ ರೈ ಕೆ.
ನಿವೃತ್ತ ಶಿಕ್ಷಕ ಸಣ್ಣ ರೈತ ಸಾಲಗಾರ

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ