ಚಿಟ್ ಫಂಡ್ ನ ಬಗ್ಗೆ ನೀವು ತಿಳಿದಿರಬೇಕಾದ ಒಂದಷ್ಟು ವಿಚಾರಗಳು

 

 

 ಸತೀಶ್ ನಾೖಕ್   ಮಾಡಾವು    

 

        ನಮಸ್ತೆ ಗೆಳೆಯರೇ, ಎಲ್ಲರೂ ಈಗ ಕೊರೋನ ಧೀರ್ಘ ಸಂಕಷ್ಟದಿಂದ ಒಂಚೂರು ಹೊರಗೆ ಬಂದಿದ್ದೀರಿ ಅಂದಿಕೊಂದಿದ್ದೆನೆಆದರೂ ನಮ್ಮ  ಸುರಕ್ಷತೆ ನಮ್ಮಲ್ಲಿ ಇರಲಿ , ಆದಷ್ಟು ಬೇಗ ಮಹಾಮಾರಿ ದೂರವಾಗಿ ಹೋಗಲಿ ಅನ್ನುವ ಮಾತಿನೊಂದಿಗೆಮಿತ್ರರೇ  ಹಣಕಾಸು ಹೂಡಿಕೆಗಳಲ್ಲಿ   ವಿವಿಧ ಬಗೆಯ  ಅವಕಾಶಗಳು ನಮ್ಮ ಮುಂದಿದೆಯಾವಾಗಲು ನಾವು ಅದರ ಲಾಭ ನಷ್ಟ ಗಳ ಮಾನದಂಡ ಗಳ  ಮೂಲಕ ಮುಂದುವರಿಯುವುದು ಸರ್ವೆ ಸಾಮಾನ್ಯ. ಇಂತಹುಗಳಲ್ಲಿ ಉಳಿತಾಯ ಮಾರ್ಗಗಳಲ್ಲಿ ಚಿಟ್ ಫಂಡ್ ಕೂಡ ಒಂದು  ಎಂದು ತಕ್ಷಣ  ಹೇಳಿದರೆ ಒಪ್ಪುವ  ಲಕ್ಷಣಗಳು  ತುಂಬ ಕಡಿಮೆ. ಆದ್ದರಿಂದ ಲೇಖನ ಚಿಟ್ ಫಂಡ್ ಬಗೆಗಿನ ಕೆಲವು ಮಿಥ್ಯೆಗಳು ಹಾಗೂ  ವಾಸ್ತವದ ಬಗ್ಗೆ ತೆರೆದಿಡಲಾಗಿದೆ. ಈಗ ನಮ್ಮಲ್ಲಿ ಕೆಲವೊಂದು ಮಿಥ್ಯೆಗಳು ಏನೆಂಬುದನ್ನು ತಿಳಿದುಕೊಳ್ಳೋಣ

 

1. ಆರ್ಥಿಕ ಹೂಡಿಕೆಯೆಂದು ಚಿಟ್ ಫಂಡ್ ಅನ್ನು ಪರಿಗಣಿಸುವಷ್ಟು ರಿಟರ್ನ್ಸ್ ಸಿಗಲ್ಲ:

        ದೀರ್ಘಾವಧಿಯ ಮತ್ತು ಹೆಚ್ಚಿನ ಮೊತ್ತದ ಚಿಟ್ ಫಂಡ್ ಯಾವಾಗಲೂ ಹೂಡಿಕೆದಾರರಿಗೆ ಲಾಭದಾಯಕ. ಅದರಲ್ಲೂ ಅಲ್ಪಾವಧಿ, ಮಧ್ಯಮಾವಧಿಯ ಬ್ಯಾಂಕ್ ಉಳಿತಾಯ, ಎಫ್.ಡಿ., ಆರ್.ಡಿ. ಇತರ ಹೂಡಿಕೆಗಳಿಗೆ ಹೋಲಿಸಿದರೆ ಚಿಟ್ ಫಂಡ್ ರಿಟರ್ನ್ಸ್ ಹೆಚ್ಚಾಗಿರುತ್ತದೆ. ಚಿಟ್ ಫಂಡ್ ಅತಿ ದೊಡ್ಡ ಲಾಭ ಏನೆಂದರೆ, ಒಂದೇ ಸಲಕ್ಕೆ ದೊಡ್ಡ ಮೊತ್ತವು ಹೂಡಿಕೆದಾರರಿಗೆ ದೊರೆಯುತ್ತದೆ. ಅಲ್ಪಾವಧಿಯ ಹಣಕಾಸು ಗುರಿಗಳನ್ನು ತಲುಪಲು ಇದರಿಂದ ನೆರವಾಗುತ್ತದೆ. ಬೇರೆಡೆ ಸಾಲ ತೆಗೆದುಕೊಂಡು, ಅದಕ್ಕೆ ಬಡ್ಡಿ ಪಾವತಿಸುವುದಕ್ಕಿಂತ ಆಯ್ಕೆ ಉತ್ತಮವಾಗಿರುತ್ತದೆ. ಪರ್ಸನಲ್ ಲೋನ್ ಗೆ ಚಿಟ್ ಫಂಡ್ ಅತ್ಯುತ್ತಮ ಪರ್ಯಾಯ. ತಿಂಗಳ ಸಮಾನ ಕಂತಿನ ಜತೆಗೆ ಪ್ರತಿ ತಿಂಗಳು ಲಾಭಾಂಶವೂ ದೊರೆಯುತ್ತದೆ.
ಚಿಟ್ ಫಂಡ್ ಗಳಿಗೆ ಯಾವುದೇ ಮಾರ್ಕೆಟ್ ರಿಸ್ಕ್ ಇಲ್ಲ. ಮ್ಯೂಚುವಲ್ ಫಂಡ್ ಗಳು ಅಥವಾ ಷೇರುಗಳು ಆಯಾ ಕಂಪೆನಿಯ ಪರ್ಫಾರ್ಮೆನ್ಸ್ ಮೇಲೆ ಅವಲಂಬಿತವಾಗಿರುತ್ತದೆ.

2. ಚಿಟ್ ಫಂಡ್ ಗಳು ಸರ್ಕಾರದಿಂದ ಮಾನ್ಯತೆ ಪಡೆದಿಲ್ಲ:

        ಸತ್ಯ ಏನೆಂದರೆ, ಚಿಟ್ ಫಂಡ್ಸ್ ಕಾಯ್ದೆ 1982 ಅಡಿಯಲ್ಲಿ ನಡೆಯುತ್ತಿರುವಾಗ ಚಿಟ್ ಫಂಡ್ ಬಹಳ ಸುರಕ್ಷಿತ. ಭಾರತದಾದ್ಯಂತ ಸರ್ಕಾರಗಳು ಕಾನೂನು ಜಾರಿಗೊಳಿಸಿದೆ. ಚಿಟ್ ಫಂಡ್ ನಡೆಸುವ ಸಂಸ್ಥೆಗಳು ಮತ್ತು ಗ್ರಾಹಕರ ಸುರಕ್ಷತೆಗಾಗಿಯೇ ಕಾಯ್ದೆ ಅಡಿಯಲ್ಲಿ ಹಲವು ನಿಯಮಗಳು ಇವೆ.

 

3. ಚಿಟ್ ಫಂಡ್ ರಿಟರ್ನ್ಸ್ ಗೆ ತೆರಿಗೆ ಬೀಳುತ್ತದೆ:

        ಚಿಟ್ ಫಂಡ್ ರಿಟರ್ನ್ಸ್ ಅನ್ನು ಲಾಭಾಂಶ ಎಂದು ಕರೆಯಲಾಗುತ್ತದೆ. ಅದು ತೆರಿಗೆಯಿಂದ ಮುಕ್ತವಾಗಿದೆ. ಯಾವುದೇ ಟಿಡಿಎಸ್ ಕಡಿತ ಆಗುವುದಿಲ್ಲ. ಸೆಕ್ಷನ್ 194A ಅಡಿಯಲ್ಲಿ ಲಾಭಾಂಶವನ್ನು ಬಡ್ಡಿ ಎಂದು ವರ್ಗೀಕರಿಸುವುದಿಲ್ಲ. ಚಿಟ್ ಫಂಡ್ ನಲ್ಲಿ ಬರುವ ಲಾಭಾಂಶ ಅಥವಾ ಬಹುಮಾನಕ್ಕೆ ತೆರಿಗೆ ಬೀಳುವುದಿಲ್ಲ. ಚಿಟ್ ಫಂಡ್ ಅನ್ನು ವ್ಯಾಪಾರದ ಹೂಡಿಕೆ ಎಂದು ತೋರಿಸಿದ್ದಲ್ಲಿ ಒಟ್ಟಾರೆ ಲಾಭ ಅಥವಾ ನಷ್ಟವನ್ನು ವ್ಯಾಪಾರದಲ್ಲಿ ಆದ ಲಾಭ ಅಥವಾ ನಷ್ಟ ಎಂದು ಲೆಕ್ಕ ದಾಖಲಿಸಬಹುದು. ಆದರೆ ಚಿಟ್ ಗ್ರೂಪ್ ನಿಂದ ಬರುವ ಆದಾಯವನ್ನು ಯಾವುದಾದರೂ ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿ ಅಥವಾ ಆಸ್ತಿ ಮೇಲೆ ಹೂಡಿಕೆ ಮಾಡಿದಲ್ಲಿ, ಅದರ ಮೂಲಕ ಬಡ್ಡಿಯೋ ಲಾಭವೋ ಬಂದರೆ ಆಗ ಅದಕ್ಕೆ ನಿಯಮಾನುಸಾರ ತೆರಿಗೆ ಕಟ್ಟಬೇಕಾಗುತ್ತದೆ



4. ಚಿಟ್ ಫಂಡ್ ಗಳು ಕೆಳವರ್ಗದವರಿಗೆ, ಸಣ್ಣ ಪಟ್ಟಣಹಳ್ಳಿಗಳಿಗೆ:

        ಚಿಟ್ ಫಂಡ್ ಗಳನ್ನೇ ತಮ್ಮ ಪ್ರಾಥಮಿಕವಾದ ಹಣ ಉಳಿತಾಯ ಮೂಲ ಮಾಡಿಕೊಂಡವರು ಬಹಳ ಮಂದಿ ಸಿಗುತ್ತಾರೆ. ಮಾರ್ಕೆಟ್ ನಲ್ಲಿ ಇರುವ ತುಂಬ ವಿಶಿಷ್ಟವಾದ ಹಣಕಾಸು ಉಳಿತಾಯ ಸಾಧನ ಚಿಟ್ ಫಂಡ್ ಗಳು. ಗೃಹಿಣಿಯರು, ವಿದ್ಯಾರ್ಥಿಗಳು, ಯುವ ವೃತ್ತಿಪರರು ಹೊರತುಪಡಿಸಿ ಇತರರು ಕೂಡ ಚಿಟ್ ಫಂಡ್ ಗಳನ್ನು ತಮ್ಮ ಹಣಕಾಸು ಉಳಿತಾಯದ ಮೂಲವಾಗಿ ಬಳಸಿಕೊಳ್ಳುತ್ತಾರೆ.

 

5. ಇನ್ನು ಚಿಟ್ ಫಂಡ್ ನಲ್ಲಿ ಜೂಡಿಕೆ ಹೇಗೆ?:

        ಮುಖ್ಯವಾಗಿ,ಚಿಟ್ ಫಂಡ್ ಕಾಯ್ದೆ 1982ಅಡಿಯಲ್ಲಿ ನಡೆಯುತ್ತಿರುವಾಗ ಚಿಟ್ ಫಂಡ್ ಕಂಪನಿಗಳಲ್ಲಿ   ನಿಮ್ಮ ಅಗತ್ಯತೆಗನುಸಾರವಾಗಿ    ಹೂಡಿಕೆ ಮಾಡಬಹುದು. ಕಂಪನಿಗಳು ಇಂತಿಷ್ಟು ತಿಂಗಳುಗಳ ಯೋಜನೆಯನ್ನು ರೂಪಿಸಿ ಸರಿ ಸುಮಾರು 50,000 ಗಳಿಂದ 10000000 ಗಳ ವರೆಗಿನ  ಫಂಡ್ ಗಳನ್ನುಇಡಲಾಗುತ್ತದೆ.. ಪ್ರತೀ ತಿಂಗಳು  ಹರಾಜು(auction) ಪ್ರಕ್ರಿಯೆ ನಡೆಸಿ ನಿರ್ದಿಷ್ಟ ಬಿಡ್ ದಾರ ಒಬ್ಬರಿಗೆ  ಭದ್ರತೆ (sureties) ಪಡೆದುಕೊಂಡು ನೀಡಲಾಗುವುದು.ಒಮ್ಮೆ ಪಡೆದ ಬಿಡ್ ದಾರ ಮುಂದೆ ತಿಂಗಳ ಪಾವತಿ  ಮಾಡತಕ್ಕದ್ದು. ಹಾಗೆಯೇ ತಿಂಗಳ ಬಿಡ್ ಮಾಡಿ ಬಿಟ್ಟ ಹಣದ ಬಾಕಿ ಮೊತ್ತದಲ್ಲಿ ಕಂಪನಿ  commission  ಕಳೆದು ಉಳಿದ ಮೊತ್ತವನ್ನು dividend ರೂಪದಲ್ಲಿ ಎಲ್ಲಾ ಸದಸ್ಯರಿಗೆ ಹಂಚಲಾಗುತ್ತದೆ.


        ಒಟ್ಟಾರೆ ಹೇಳಬೇಕೆಂದರೆ, ಚಿಟ್ ಫಂಡ್ ಗಳ ಪ್ರಮುಖ ಲಾಭಾಂಶ ಬ್ಯಾಂಕ್ ಬಡ್ಡಿ ದರಗಳಿಗಿಂತ ತುಂಬಾ ಅಗ್ಗದ  ಸಾಲ ಯೋಜನೆ. ಸಾಮಾನ್ಯ ಜನರು ಅರ್ಥೈಸಿಕೊಂಡು ಹೂಡಿಕೆ ಮಾಡಿದರೆ  ಲಾಭಾಂಶ ಖಂಡಿತ ಪಡೆಯಬಹುದುಸರಿಯಾದ ಮಾಹಿತಿ ಪಡೆದು, ಹೂಡಿಕೆ ಮಾಡಿದರೆ ವಿಷಾದ ಪಡುವಂತೆ ಆಗುವುದಿಲ್ಲ.



ಭಾರತದ ಕೆಲವೊಂದು ಉನ್ನತ ಮಟ್ಟದಲ್ಲಿರುವ ಚಿಟ್ ಫಂಡ್ ಸಂಸ್ಥೆಗಳು 

1. ಶ್ರೀರಾಮ್ ಚಿಟ್ಸ್ 

2. ಎಮ್ ಎಸ್ ಐ ಲ್ 

3. ಮಾರ್ಗದರ್ಶಿ ಚಿಟ್ಸ್ ಫಂಡ್ 

4. ಕಪಿಲ್ ಚಿಟ್ ಫಂಡ್

5. ಗುರು ನಾನಕ್  ಚಿಟ್ ಫಂಡ್

6. ಪಿ ಎಸ್ ಎಸ್ ಏನ್ ಎಲ್ 

7. ಗವರ್ನಮೆಂಟ್ ಆಫ್ ಕೇರಳ ಬ್ಯಾಕ್ಡ್ ಚಿಟ್ಟಿ 

8. ಗೈಲ್ಲೇ ಇನ್ವೆಸ್ಟ್ಮೆಂಟ್ ಲಿಮಿಟೆಡ್ 

9. ಅಮೃತಧಾರಾ ಚಿಟ್ಸ್ ಅಂಡ್ ಫೈನಾನ್ಸ್ ಲಿಮಿಟೆಡ್ 

10. ಲೂಯಿಸ್  ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ 

 

Thank you

 

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio