IT Raid on Sonu Sood House: ಬಾಲಿವುಡ್ ನಟ ‘ಬಡವರ ಆಪದ್ಬಾಂಧವ’ Sonu Sood ತೆರಿಗೆ ವಂಚನೆ. ಎಷ್ಟು ಸುಳ್ಳು ಎಷ್ಟು ಸತ್ಯಾ?
Table of Contents
ಬಾಲಿವುಡ್ ನಟ, ನಿಜ ಜೀವನದ ರಿಯಲ್ ಹೀರೋ ಕೋವಿಡ್-೧೯ ಕಾಲದ ಆಪತ್ಭಾಂಧವ ಸೋನು ಸೂದ್ ಅವರ ಮನೆ ಮತ್ತು ಕಚೇರಿ ಸೇರಿದಂತೆ ಅನೇಕ ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಬಾಲಿವುಡ್ ನ ಖ್ಯಾತ ನಟರೊಬ್ಬರು ಸುಮಾರು 20 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಇಲಾಖೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ. 20 ಕೋಟಿ ರೂಪಾಯಿ ತೆರಿಗೆ ನಟ ಸೋನು ಸೂದ್ ಅವರೇ ವಂಚನೆ ಮಾಡಿದ್ದಾರಾ ಸರಕಾರಕ್ಕೆ ವಂಚಿಸಿದ್ದಾರಾ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.
ಆದಾಯ ತೆರಿಗೆ ಇಲಾಖೆ ನೀಡಿರುವ ಹೇಳಿಕೆಯಲ್ಲಿ ಏನಿದೆ?
‘’ಮುಂಬೈನಲ್ಲಿ ವಾಸವಿರುವ ಖ್ಯಾತ ನಟ ಮತ್ತು ಲಕ್ನೋ ಮೂಲದ ಗ್ರೂಪ್ ಆಫ್ ಇಂಡಸ್ಟ್ರೀಸ್‌ಗೆ ಸೇರಿದ ವಿವಿಧ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯ ನಡೆಸಿತ್ತು. ಮುಂಬಯಿ, ಲಕ್ನೋ, ದೆಹಲಿ, ಜೈಪುರ್, ಸೇರಿದಂತೆ ಒಟ್ಟು 28 ಕಡೆ ದಾಳಿ ಮಾಡಲಾಯಿತು(IT Raid on Sonu Sood House). ಶೋಧ ಕಾರ್ಯಾಚರಣೆಯಲ್ಲಿ ಸೋನು ಸೂದ್ ಮತ್ತು ಅವರ ನಿಕಟವರ್ತಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ತೆರಿಗೆ ವಂಚನೆಗೆ ಸಂಬಂಧಿಸಿದ ಸಾಕ್ಷಿಗಳು ದೊರೆತಿವೆ. 20 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ತೆರಿಗೆಯನ್ನು ಸೂದ್ ಮತ್ತು ಸಂಭಂದಿಸಿದವರು ವಂಚನೆಮಾಡಿದ್ದಾರೆ. ಎಂದು ಈವರೆಗೂ ತಿಳಿದುಬಂದಿದೆ’’ ಎಂದು Central Board of Direct Taxes ಹೇಳಿಕೆ ಬಿಡುಗಡೆ ಮಾಡಿದೆ.
Read Also: ಕಾಕಡ ಮಲ್ಲಿಗೆ ಬೆಳೆದು ಯಶಸ್ವಿ ಕಂಡ ಅಂಕೋಲಾದ ಕೃಷಿಕ । ಲಾಕ್‌ಡೌನ್ ಅವಧಿಯಲ್ಲಿ ಬದುಕು ಅರಳಿಸಿದ ಕಾಕಡ ಮಲ್ಲಿಗೆ
ಸತತ ಮೂರು ದಿನಗಳ ಕಾಲ ನಡೆದಿದೆ ಐಟಿ ದಾಳಿ
ತೆರಿಗೆ ವಂಚನೆಯ ಕುರಿತ ನಿಖರ ಸಾಕ್ಷ್ಯಗಳನ್ನು ಕಲೆಹಾಕಲು ಸತತ ಮೂರು ದಿನಗಳ ಕಾಲ ಮನೆ ಮೇಲೆ ಕಚೇರಿ ಮೇಲೆ ಮತ್ತು ಇತರ ಕಡೆ ಐಟಿ ದಾಳಿ ನಡೆಸಲಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ . ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ ಉಲ್ಲಂಘಿಸಿ ನಟ ಸೋನು ಸೂದ್ ಅವರ ನಾನ್-ಪ್ರಾಫಿಟ್ ಸಂಸ್ಥೆ ವಿದೇಶಿ ದಾನಿಗಳಿಂದ ಸುಮಾರು 2.1 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿದೆ ಎಂಬ ಆರೋಪವೂ ಕೇಳಿಬಂದಿದೆ.
16.1 ಕೋಟಿ ರೂಪಾಯಿ ಬಳಕೆಯಾಗದೆ ಇನ್ನೂ ಹಾಗೇ ಉಳಿದಿದೆ
ಕೋವಿಡ್-19 ನಿಂದಾಗಿ ಮಾಡಿದ ಲಾಕ್‌ಡೌನ್‌ನಲ್ಲಿ ಸಂಕಷ್ಟದಲ್ಲಿ ಸಿಲುಕಿದ ಹಲವರಿಗೆ ನಟ ಸೋನು ಸೂದ್ ರವರು ಮಾಡಿದ ಸಹಾಯ ಕಾರ್ಯಗಳು ಅಪಾರ ಪ್ರಶಂಸೆಗೆ ಪಾತ್ರವಾಗಿತ್ತು. ಕಳೆದ ವರ್ಷದ ೨೦೨೦ ಜುಲೈ ತಿಂಗಳಿನಲ್ಲಿ ನಟ ಸೋನು ಸೂದ್ ನೇತೃತ್ವದ ಸೂದ್ ಚಾರಿಟೇಬಲ್ ಫೌಂಡೇಶನ್ ಎಂಬ ಲಾಭರಹಿತ NGO ಸಂಸ್ಥೆ ಪ್ರಾರಂಭವಾಯಿತು. ಈ ಸಂಸ್ಥೆಯು ೨೦೨೧ ವರ್ಷದ ಏಪ್ರಿಲ್‌ವರೆಗೆ ಸುಮಾರು 18 ಕೋಟಿ ರೂಪಾಯಿಷ್ಟು ದೇಣಿಗೆ ಸಂಗ್ರಹಿಸಿದೆ. ಅದರಲ್ಲಿ ಸುಮಾರು 1.9 ಕೋಟಿ ರೂಪಾಯಿ ಹಣ ಪರಿಹಾರ ಕಾರ್ಯಕ್ಕಾಗಿ ವ್ಯಯ ಮಾಡಲಾಗಿದೆ. ಉಳಿದ 16.1 ಕೋಟಿ ರೂಪಾಯಿ ಬಳಕೆಯಾಗದೆ ಇನ್ನೂ ಹಾಗೇ ಉಳಿದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
IT Raid on Sonu Sood House
ಸುಮಾರು 65 ಕೋಟಿ ರೂಪಾಯಿ ಬ್ಲಾಕ್ ಮನಿ ಲಾಂಡರಿಂಗ್
ಆದಾಯ ತೆರಿಗೆ ಇಲಾಖೆಯಿಂದ ತಪ್ಪಿಸಿಕೊಳ್ಳಲು ಸೂದ್ ಅವರು ಹೂಡಿಕೆಗಳನ್ನು ಮಾಡಲು ಮತ್ತು ಆಸ್ತಿಗಳನ್ನು ವಶ ಪಡಿಸಿಕೊಳ್ಳಲು ನಕಲಿ ಕಂಪನಿಗಳಿಂದ ಬೋಗಸ್ ಸಾಲಗಳನ್ನು ತೋರಿಸಿದ್ದಾರೆ ಎಂದೂ ಆದಾಯ ತೆರಿಗೆ ಇಲಾಖೆಯವರು ತಿಳಿಸಿದೆ. ಲಕ್ನೋ ಮೂಲದ ಓರ್ವ ಬಿಲ್ಡರ್ ಮೇಲೂ ಐಟಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಅವರ ಮೇಲೆ ಸುಮಾರು 65 ಕೋಟಿ ರೂಪಾಯಿ ಬ್ಲಾಕ್ ಮನಿ ಲಾಂಡರಿಂಗ್ ಮಾಡಿರುವದರ ಆರೋಪವಿದೆ. ಮುಂಬಯಿ, ಲಕ್ನೋ ಸೇರಿದಂತೆ ಇನ್ನೂ ಹಲವೆಡೆ ಶೋಧ ಇನ್ನೂ ಮುಂದುವರೆದಿದೆ. ತನಿಖೆ ಪ್ರಗತಿಯಲ್ಲಿದೆ.
ಐಟಿ ದಾಳಿ ಖಂಡಿಸಿದ್ದ ವಿರೋಧ ಪಕ್ಷಗಳು
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅನೇಕರಿಗೆ ಸಹಾಯ ಹಸ್ತ ಚಾಚಿ ಆಪತ್ಬಾಂಧವ ಅನಿಸಿಕೊಂಡಿದ್ದ ನಟ ಸೋನು ಸೂದ್ ಅವರ ಕಚೇರಿ ಹಾಗೂ ಮನೆಯ ಮೇಲೆ ನಡೆದಿರುವ ಆದಾಯ ತೆರಿಗೆ ಇಲಾಖೆಯ ದಾಳಿಯನ್ನು ವಿರೋಧ ಪಕ್ಷಗಳು ಖಂಡಿಸಿವೆ.
ಇತ್ತೀಚೆಗೆಷ್ಟೇ ದೆಹಲಿಯ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ‘Desh Ki Mentor’ ಕಾರ್ಯಕ್ರಮಕ್ಕೆ ಸೋನು ಸೂದ್ ಅವರನ್ನು ರಾಯಭಾರಿಯನ್ನಾಗಿ ಮಾಡಿತ್ತು. ಇದೇ ವಿಷಯದ ಕುರಿತಾಗಿ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಸೋನು ಸೂದ್ ಭೇಟಿ ಮಾಡಿದ್ದರು. ನಟ ಸೋನು ಸೂದ್ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ ನಂತರ ಸೂದ್ ಅವರು ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ವದಂತಿ ಹುಟ್ಟಿಕೊಂಡಿತ್ತು. ಅದರಲ್ಲೂ ಸೋನು ಸೂದ್ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರಿ ಮುಂಬರುವ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಈ ಉಹಾಪೋಹಕಗಳನ್ನು ನಟ ಸೋನು ಸೂದ್ ಅಲ್ಲೆಗೆಳೆದಿದ್ದರು. ಇದರ ಬೆನ್ನಲ್ಲೇ ಸೋನುಸೂದ್ ಅವರ ಮನೆ ಮತ್ತು ಕಚೇರಿಯ ಮೇಲೆ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ನಡೆದಿದ್ದು ಕುತೂಹಲ ಉಂಟುಮಾಡಿದೆ(IT Raid on Sonu Sood House).