Angel Broking DEMAT ಮತ್ತು DRA ಉಚಿತ ಖಾತೆ ತೆರೆಯುವುದು ಹೇಗೆ? ನಿಮಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Angel Broking demat account

Angel Broking DRA partner Program. Lifetime earning Opportunity through the angel broking dra program. You can earn brokerage commission for a lifetime from the angel broking partner program. In this article, you will find how to open an angel broking Demat account step by step along with live screenshots.  Along with this, you will get clarified with all the doubts regarding Demat account opening charges and partner program. All details are given in kannada. Angel broking account hege open maduvudu. full information.

Step By Step Information about angel broking dra program and angel broking dra benefits 

      ಭಾರತದ ನಂ.1 ಸ್ಟಾಕ್ ಬ್ರೋಕರೇಜ್ ಕಂಪನಿಯಾದಂತಹ 22 ವರ್ಷಗಳ ಸುಧೀರ್ಘ ಅನುಭವವಿರುವ ಏಂಜಲ್ ಬ್ರೋಕಿಂಗ್ ನಲ್ಲಿ ಇನ್ನು ನೀವು ಸಹ ಉಚಿತವಾಗಿ ಖಾತೆಯನ್ನು ತೆರೆಯಬಹುದು. ಇದರಲ್ಲಿ ಡಿಮ್ಯಾಟ್ ಖಾತೆಯನ್ನು ತೆರೆಯುವುದರ ಮುಖಾಂತರ ನೀವು ಸಹ ಷೇರು ಮಾರುಕಟ್ಟೆಯಲ್ಲಿ ದುಡ್ಡು ಗಳಿಸಬಹುದು. ನಿಮ್ಮ ಡಿಮ್ಯಾಟ್ ಖಾತೆಯನ್ನು ತೆರೆಯಲು ನೀವು ಇಲ್ಲಿ ಯಾವುದೇ ಶುಲ್ಕವನ್ನು ನೀಡುವ ಅಗತ್ಯವಿಲ್ಲ. ಷೇರು ಮಾರುಕಟ್ಟೆಯಲ್ಲಿ ಅದೆಷ್ಟೋ ಮಂದಿ ಹೂಡಿಕೆ ಮಾಡಿ ಸಾಕಷ್ಟು ಗಳಿಕೆಯನ್ನು ಮಾಡಿದ್ದಾರೆ. ಕೋಟಿಯಾಧಿಪತಿಗಳಾಗಿದ್ದಾರೆ. ಅದೆಷ್ಟೋ ಮಂದಿ ಮಿಲಿಯನೇರ್ ಗಳಾಗಿದ್ದಾರೆ.  ಷೇರು ಮಾರುಕಟ್ಟೆಯಲ್ಲಿ ಮಿಲಿಯನೇರ್ ಆದವರ ಲಿಸ್ಟ್ ನಮಗೆ ಬೇಕಾದಷ್ಟು ಸಿಗುತ್ತದೆ. 

    ಷೇರು ಮಾರುಕಟ್ಟೆಯಲ್ಲಿ ದುಡ್ಡು ಮಾಡಬೇಕೆಂದರೆ ಹಲವು ವಿಚಾರಗಳನ್ನ ಸರಿಯಾಗಿ ತಿಳಿದುಕೊಳ್ಳಬೇಕಾಗುತ್ತದೆ ಮತ್ತು ಅದರ ಬಗ್ಗೆ ಸರಿಯಾದ ಜ್ಞಾನ ಇದ್ದರೆ ಮಾತ್ರ ಷೇರು ಮಾರುಕಟ್ಟೆಯಲ್ಲಿ ಅಂದುಕೊಂಡ ಹಾಗೆ ಲಾಭವನ್ನು ಗಳಿಸಬಹುದು. ಹಾಗಂತ ಜ್ಞಾನ ಇಲ್ಲದಿರುವವರು  ಇದರಲ್ಲಿ ಹೂಡಿಕೆ ಮಾಡಬಾರದು ಅಂತೇನಿಲ್ಲ. ಸರಿಯಾದ ಜ್ಞಾನ ಇಲ್ಲದೆ ಹೂಡಿಕೆ ಮಾಡಿದರೆ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಜಾಸ್ತಿ ಇರುತ್ತದೆ. ಷೇರು ಮಾರುಕಟ್ಟೆಯ ಬಗ್ಗೆ ಅಲ್ಪ ಸ್ವಲ್ಪವಾದರೂ ವಿಷಯ ತಿಳಿದುಕೊಂಡು ಹೂಡಿಕೆ ಮಾಡಲು ಹೋದರೆ ಉತ್ತಮ.

    ಏಂಜಲ್ ಬ್ರೋಕಿಂಗ್ ಸಂಸ್ಥೆ ಯು ತನ್ನ ಗ್ರಾಹಕರಿಗೆ ಕೇವಲ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಮಾತ್ರವಲ್ಲದೆ ತನ್ನ ಸಂಸ್ಥೆಯಲ್ಲಿ ಡಿಮ್ಯಾಟ್ ಖಾತೆಯನ್ನು ಮಾಡಿಕೊಂಡವರಿಗೆ Digital Referral Associate (DRA) ಅನ್ನುವ ಹೊಸ ಸೌಲಭ್ಯವನ್ನು ಒದಗಿಸಿದೆ. ಇದರಿಂದ ಡಿಮ್ಯಾಟ್ ಖಾತೆದಾರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡದೇ, ಸಂಸ್ಥೆ ಒದಗಿಸಿರುವ ಒಂದು ರೆಫರಲ್ ಲಿಂಕ್ ನ ಮುಖಾಂತರ ಆದಷ್ಟು ಹೊಸ ಖಾತೆಗಳನ್ನ ತೆರೆಯುವಂತೆ ಗ್ರಾಹಕರನ್ನು ಪ್ರೋತ್ಸಾಹಿಸಬೇಕು. ಇದರಿಂದ ಸಂಸ್ಥೆ  ಪ್ರತೀ ಹೊಸ ಖಾತೆಗೆ ಇಂತಿಷ್ಟು ಅಂತ ಕಮಿಷನ್ ಅನ್ನು  DRA ಖಾತೆದಾರರಿಗೆ  ಕೊಡುತ್ತದೆ. DRA ಖಾತೆದಾರರು ಇದರಿಂದಲೂ ಸಾಕಷ್ಟು ಆದಾಯವನ್ನು ಮಾಡಬಹುದು. ಆದರೆ  ಈ ಸೌಲಭ್ಯವನ್ನು ಉಪಯೋಗಿಸಬೇಕಾದರೆ ಡಿಮ್ಯಾಟ್ ಖಾತೆದಾರರಲ್ಲಿ ಯಾವುದಾದರೂ ಸಾಮಾಜಿಕ ಜಾಲತಾಣ ಅಂದರೆ ಅವರೇ ಅಡ್ಮಿನ್ ಆಗಿರುವಂತಹ  ಯೌಟ್ಯೂಬ್ ಚಾನೆಲ್ ಅಥವಾ ಫೇಸ್ಬುಕ್ ಗ್ರೂಪ್ ಅಥವಾ ಪೇಜ್ ಹೊಂದಿರಬೇಕು. ಮತ್ತು ಅದರಲ್ಲಿ ಸಾಕಷ್ಟು ಫಾಲೊವರ್ಸ್ ಇರಬೇಕು. ಹಾಗಿದ್ದಲ್ಲಿ ಮಾತ್ರ DRA ಖಾತೆ ಮಾಡಿಸಿಕೊಳ್ಳಲು ಅರ್ಹರಾಗಿರುತ್ತಾರೆ.

 

ಏಂಜಲ್ ಬ್ರೋಕಿಂಗ್ ನಲ್ಲಿ ಖಾತೆ ತೆರೆಯಲು ಬೇಕಾಗಿರುವ ಸೂಕ್ತ ದಾಖಲೆಗಳು ಮತ್ತು ಹಂತಗಳು:

 

ಬೇಕಾಗಿರುವ ದಾಖಲೆಗಳು 

 

    1. ಆಧಾರ್ ಕಾರ್ಡ್ (Front and Back Photo)
    2. ಪಾನ್ ಕಾರ್ಡ್ (Pan card Front Photo)
    3. ಬಿಳಿ ಹಾಳೆಯಲ್ಲಿ ನಿಮ್ಮ ಹಸ್ತಾಕ್ಷರ (Signature Photo)
    4. ಕ್ಯಾನ್ಸಲ್ ಮಾಡಿದ ಚೆಕ್ ನ ಪ್ರತಿ (Cancelled Check) ಅಥವಾ ಬ್ಯಾಂಕ್ ಪಾಸ್ ಪುಸ್ತಕದ ಮೊದಲನೇ ಪುಟದ ಫೋಟೋ.
    5. ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟ್ ಅಥವಾ ಸೆಲ್ಫಿ
    6. 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ (ಐಚ್ಛಿಕ/Optional)
    7. ಬ್ಯಾಂಕ್ ಖಾತೆಯ ವಿವರ(Account no, IFSC code, Bank Name

 

Zero Fee to open account – ಏಂಜೆಲ್ ಬ್ರೋಕಿಂಗ್ ಖಾತೆ ತೆರೆಯಲು ಶುಲ್ಕ zero:

    ಏಂಜೆಲ್ ಬ್ರೋಕಿಂಗ್ ನಲ್ಲಿ ಖಾತೆ ತೆರೆಯಲು ಯಾವುದೇ ಶುಲ್ಕವಿರುವುದಿಲ್ಲ. ಸಂಪೂರ್ಣ ಉಚಿತವಾಗಿ ಡಿಮ್ಯಾಟ್ ಖಾತೆ ತೆರೆಯಬಹುದು. ಮತ್ತು ಟ್ರೇಡಿಂಗ್ ಅಕೌಂಟ್ ಓಪನಿಂಗ್ ಶುಲ್ಕ ವೂ ಸಹ ಇರುವುದಿಲ್ಲ. ಕೆಳಗೆ ಕೊಟ್ಟಿರುವ ಲಿಂಕ್ ಮುಖಾಂತರ ಉಚಿತವಾಗಿ ನೀವು ಖಾತೆಯನ್ನು ತೆರೆಯಬಹುದು.

Click To Open Free Demat Account

 

Annual Fees (AMC) –  ಏಂಜೆಲ್ ಬ್ರೋಕಿಂಗ್ ವಾರ್ಷಿಕ ನಿರ್ವಹಣಾ ಶುಲ್ಕ:

    ಏಂಜೆಲ್ ಬ್ರೋಕಿಂಗ್ ಸಂಸ್ಥೆಯು ಡಿಮ್ಯಾಟ್ ಖಾತೆದಾರರಿಗೆ ವಾರ್ಷಿಕ ನಿರ್ವಹಣಾ ಶುಲ್ಕವನ್ನು ವಿಧಿಸುತ್ತದೆ. ಅದು ಕೇವಲ ರೂ 450 ಮಾತ್ರ  ಆಗಿರುತ್ತದೆ. ಉಳಿದಂತೆ ಎಲ್ಲ ಸೌಲಭ್ಯಗಳು ಉಚಿತವಾಗಿರುತ್ತದೆ.  ಆದರೆ ಸಂಸ್ಥೆಯ ಆಫರ್ ಪ್ರಕಾರ ನೀವು ಖಾತೆ ತೆರೆದ ವರ್ಷ ಯಾವುದೇ ವಾರ್ಷಿಕ ನಿರ್ವಹಣಾ ಶುಲ್ಕವಿರುವುದಿಲ್ಲ. ಒಂದು ವರ್ಷ ಸಂಪೂರ್ಣ ಉಚಿತವಾಗಿರುತ್ತದೆ.

 

How to open demat accountin angel broking –  ಏಂಜೆಲ್ ಬ್ರೋಕಿಂಗ್ ನಲ್ಲಿ ಹೇಗೆ ಖಾತೆ ತೆರೆಯುವುದು?

 

ಸಂಪೂರ್ಣ ವಿವರ (Step By Step Information):

 

1 . ಆಕೌಂಟ್ ಓಪನಿಂಗ್ ಲಿಂಕ್ ಗೆ ಕ್ಲಿಕ್ ಕೊಡಿ. 

     ಏಂಜಲ್ ಬ್ರೋಕಿಂಗ್ ನಲ್ಲಿ ಉಚಿತವಾಗಿ ತಮ್ಮ ಖಾತೆ ತೆರೆಯಲು ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಕೊಡಿ.

                                      Open Free Demat Account

2. ಸಾಮಾನ್ಯ ದಾಖಲೆ ಭರ್ತಿ ಮಾಡಿ

    ಇಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ನಮ್ಮ ಸಿಟಿ ಮತ್ತು ನಿಮ್ಮ ಮೊಬೈಲ್ ಗೆ ಬಂದಂತಹ OTP ಯನ್ನು ಭರ್ತಿ ಮಾಡಿ. ನೀವು ಮೊಬೈಲ್ ನಂಬರ್ ಹಾಕಿದ ತಕ್ಷಣ ನಿಮ್ಮ ಅದೇ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನೇ ಈ OTP ಕಾಲಂ ನಲ್ಲಿ ನಮೂದಿಸಬೇಕು

 

 
3. ನಿಮ್ಮ ಹುಟ್ಟಿದ ದಿನಾಂಕ, ನಿಮ್ಮ ಪಾನ್ ಕಾರ್ಡ್ ನಂಬರ್ ಮತ್ತು ನಿಮ್ಮ ಇಮೇಲ್ ವಿಳಾಸವನ್ನು ಈ ಹಂತದಲ್ಲಿ ತುಂಬಿಸಬೇಕಾಗುತ್ತದೆ. 

        ಈ ಹಂತದಲ್ಲಿ ನಿಮ್ಮ ಚಾಲ್ತಿಯಲ್ಲಿರುವ ಅಥವಾ ಆಕ್ಟಿವ್ ಇರುವ ಇಮೇಲ್ ವಿಳಾಸವನ್ನು ನೀಡಬೇಕು. ಖಾತೆಗೆ ಸಂಭಂದಿಸಿದ ಖಾಸಗಿ ಮಾಹಿತಿಗಳು ಅಂದರೆ ಲಾಗಿನ್ ಐಡಿ ಮತ್ತು ಫಾಸ್ವರ್ಡ್ ಕುರಿತಾದ ಮಾಹಿತಿಗಳು ನಿಮ್ಮ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಡಮ್ಮಿ ಅಥವಾ ಚಾಲ್ತಿಯಲ್ಲಿಲ್ಲದ ಇಮೇಲ್ ವಿಳಾಸ ನೀಡಬೇಡಿ. ಪಾನ್ ಕಾರ್ಡ್ ನಂಬರ್ ಸಹ ಸರಿಯಾಗಿರಲಿ. ಎರಡು ಸಾರಿ ಪರಿಶೀಲಿಸಿಕೊಳ್ಳಿ. ನಂತರ ಮುಂದುವರಿಯಿರಿ.

4. Manual ಅಥವಾ DigiLocker

    ನಿಮ್ಮ ಸಾಮಾನ್ಯ ಮಾಹಿತಿ ಅಂದರೆ ನಿಮ್ಮ ವರ್ಷದ ಆದಾಯ, ನಿಮ್ಮ ವೃತ್ತಿ ಮತ್ತು  ತಂದೆಯ ಹೆಸರನ್ನು ಸರಿಯಾಗಿ ನಮೂದಿಸಿ (ಆಧಾರ್ ಕಾರ್ಡ್ ಲ್ಲಿ ಇರುವಂತೆ).  ನಂತರ ನಿಮ್ಮ ಪರ್ಸನಲ್ ವಿವರ ನಮೂದಿಸಲು ಮುಂದುವರಿಯುವಾಗ ಈ ಕೆಳಗಿನ ಸ್ಕ್ರೀನ್ ನಿಮ್ಮ ಮುಂದೆ ಬರಬಹುದು. ಅವಾಗ ನೀವು ಅಲ್ಲಿ  Manual ಅನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೆ ಸುಲಭವಾಗಿ ಮುಂದುವರಿಯಬಹುದು. ಯಾಕೆಂದರೆ ಬಹಳ ಕಡಿಮೆ ಮಂದಿ ಜನ ತಮ್ಮ ಅಗತ್ಯ ದಾಖಲೆಗಳನ್ನು DigiLocker ಲ್ಲಿ ಇಟ್ಟುಕೊಂಡಿರುವುದು.  ಹಾಗಾಗಿ ಇಲ್ಲಿ  ನೀವು Manual ಅನ್ನುವುದನ್ನೇ ಆಯ್ಕೆ ಮಾಡಿದರೆ ಉತ್ತಮ.

 

5. ನಿಮ್ಮ ಹಸ್ತಾಕ್ಷರ ದ  ಫೋಟೋ  ಮತ್ತು ನಿಮ್ಮ ಕ್ಯಾನ್ಸಲ್ಲ್ಡ್ ಚೆಕ್ ಪ್ರತಿ ಅಥವಾ ಬ್ಯಾಂಕ್ ಪಾಸ್ ಪುಸ್ತಕದ
ಮೊದಲನೇ ಪುಟದ ಫೋಟೋ ಅಪ್ಲೋಡ್ ಮಾಡಿ. 
 
 
6. ನಿಮ್ಮ ಪಾನ್ ಕಾರ್ಡ್ ಫೋಟೋ ಮತ್ತು  ಆಧಾರ್ ಕಾರ್ಡ್ ನ ಮುಂಬದಿ ಮತ್ತು ಹಿಂಬದಿ ಎರಡೂ ಅಪ್ಲೋಡ್ ಮಾಡಿ.
7. ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಅಥವಾ ಸೆಲ್ಫಿ ಅಪ್ಲೋಡ್ ಮಾಡಿ. ಇಲ್ಲಿ ಬ್ಯಾಂಕ್ ಸ್ಟೇಟ್ಮೆಂಟ್ ಅಗತ್ಯವಿರುವುದಿಲ್ಲ. ನೀವು Commodity ಹೋಗುವುದಾದರೆ ಮಾತ್ರ ಇದು ಅಗತ್ಯ. 
 
7.  ಆಧಾರ್ ಕಾರ್ಡ್ ಅಥೆಂಟಿಕೇಷನ್ :
 
    ಈ ಹಂತದಲ್ಲಿ ನಿಮ್ಮ ಆಧಾರ್ ಕಾರ್ಡಿನ ಸಂಖ್ಯೆಯನ್ನು ನಮೂದಿಸಿ ಮತ್ತು ಅಲ್ಲಿಯೇ ಮೇಲೆ ಇರುವ ಟಿಕ್ ಮಾರ್ಕನ್ನು ಸೆಲೆಕ್ಟ್ ಮಾಡಲು ಮರೆಯದಿರಿ. ನಂತರ ಸೆಂಡ್  OTP ಗೆ ಕ್ಲಿಕ್ ಕೊಡಿ. ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ನಂಬರ್ ಗೆ OTP ಬರುತ್ತದೆ. OTPಯನ್ನು ಪುನಃ ಅದೇ ಪೇಜ್ ಗೆ ಬಂದು ನಮೂದಿಸಿ. ನಿಮ್ಮ ಆಧಾರ್ verify ಮಾಡಿಕೊಳ್ಳಿ
8. IPV(In-Person Verification)
    ಕೊನೆಯದಾಗಿ ನಿಮ್ಮ ಫ್ರಂಟ್ ಕ್ಯಾಮೆರಾ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಮುಖವನ್ನು 10 ಸೆಕೆಂಡ್ ಗಳ ಕಾಲ ರೆಕಾರ್ಡ್ ಮಾಡುತ್ತದೆ. ಇದನ್ನು IPV(In-Person Verification) ಎನ್ನುತ್ತಾರೆ.
    ಇಲ್ಲಿ ನಿಮ್ಮ ಖಾತೆ ತೆರೆಯುವ ಎಲ್ಲಾ ಹಂತಗಳು ಪೂರ್ಣಗೊಳ್ಳುತ್ತದೆ. ಮತ್ತು ನಿಮ್ಮ ಡಿಮ್ಯಾಟ್  ಖಾತೆ ತೆರೆಯುವಿಕೆ ಯಶಸ್ವಿಯಾಗುತ್ತದೆ.  ಇನ್ನು ನಿಮ್ಮ ವಾಟ್ಸಾಪ್ ಗೆ ಮತ್ತು ನಿಮ್ಮ ಇಮೇಲ್ ವಿಳಾಸಕ್ಕೆ ಲಾಗಿನ್ ಗೆ ಸಂಭಂದಿಸಿದ ಮಾಹಿತಿಗಳು ಬರುತ್ತದೆ. ಅದನ್ನ ಬಳಸಿಕೊಂಡು ನಿಮ್ಮ ಡಿಮ್ಯಾಟ್ ಖಾತೆಯನ್ನು ಲಾಗಿನ್ ಆಗಬಹುದು. ಅದರಲ್ಲಿ ಇನ್ನು ನೀವು ಹೂಡಿಕೆ ಮಾಡಬಹುದಾಗಿದೆ.
So, let’s Open a Free DEMAT AccountClick Here To Open Your Account
ಇದನ್ನು ಓದಿ:- Earn Unlimited from Angel broking DRA Program. 
 
 
 
 
 
 
Angel Broking DRA Account
It is an opportunity to earn a lifetime through the angel broking dra program. What is Angel Broking DRA Program? It is a digital referral partner program where you can earn a nice passive income by referring to new accounts and from their brokerage commission.
    ಈಗಾಗಲೇ ಪ್ರಾರಂಭದಲ್ಲಿ ವಿವರಿಸಿದಂತೆ ಡಿಮ್ಯಾಟ್ ಖಾತೆ ಮಾಡಿದ ನಂತರ ನೀವು ಏಂಜಲ್ ಬ್ರೋಕಿಂಗ್ ನಲ್ಲಿ  ಪ್ರಮೋಷನ್ ಪಾರ್ಟ್ನರ್ ಆಗಲು ಬಯಸುವವರು ಏಂಜಲ್ ಬ್ರೋಕಿಂಗ್ ನ DRA  ಖಾತೆಯನ್ನು ಉಚಿತವಾಗಿ ಸೇರಬಹುದು. DRA ಅಂದರೆ Digital Referral Associate ಎಂದಾಗುತ್ತದೆ.  ಈ ಪ್ರೋಗ್ರಮ್ ನ್ನು ಸೇರುವ ಮುಖಾಂತರ ನೀವು ಏಂಜಲ್ ಬ್ರೋಕಿಂಗ್ ನ ವಿವಿಧ ಸೇವೆಗಳನ್ನು ಜನರಿಗೆ ಪರಿಚಯಿಸುವ ಮುಖಾಂತರ ಹೊಸ ಹೊಸ ಖಾತೆಯನ್ನು ತೆರೆಯಲು ಸಹಕಾರ ಮಾಡಬಹುದು. ಇದರಿಂದ ನೀವು ಪ್ರತಿ ಹೊಸ ಖಾತೆ ತೆರೆಯುವಿಕೆಗೆ ಇಂತಿಷ್ಟು ಅಂತ ಕಮಿಷನ್ನನ್ನು ಪಡೆಯಬಹುದು. ಅದಲ್ಲದೆ ಹೊಸ ಗ್ರಾಹಕರು ಮಾಡುವ ಷೇರು ವಹಿವಾಟಿನಿಂದ ಬ್ರೊಕೆರಜ್ ಸಂಸ್ಥೆ ಪಡೆಯುವ ಬ್ರೋಕರೇಜ್ ಶುಲ್ಕದಿಂದ ಒಂದಷ್ಟು ಪ್ರತಿಶತ DRA  ಖಾತೆದಾರನಿಗೂ ಸಿಗುತ್ತದೆ. ಇದರಿಂದ ಯಾವುದೇ ಟ್ರೇಡ್ ವಹಿವಾಟು ಮಾಡದೇ DRA  ಖಾತೆದಾರ ಒಳ್ಳೆಯ ಆದಾಯ ಏಂಜಲ್ ಬ್ರೋಕಿಂಗ್ ನಿಂದ ಮಾಡಬಹುದು. ನೀವು ಸಹ  DRA ಆಗ ಬಯಸುವಿರಾದರೆ ಈ ಕೆಳಗಿನ ದಾಖಲೆಗಳನ್ನು ನಿಮನ್ನು refer ಮಾಡಿದವರಿಗೆ ಒದಗಿಸಿ. ಅಥವಾ ನೀವು ಇಲ್ಲಿಂದ ಲಾಗಿನ್ ಆಗಿದ್ದೀರಿ ಎಂದಾದರೆ ಕೆಳಗೆ ಕೊಟ್ಟಿರುವ ವಾಟ್ಸಾಪ್ ನಂಬರ್ ಗೆ ನಿಮ್ಮ ದಾಖಲೆಗಳನ್ನು ಕಳುಹಿಸಬಹುದು.
Angel Broking ನಲ್ಲಿ  DRA ಗೆ ಖಾತೆ ತೆರೆಯಲು ಬೇಕಾಗುವಂತಹ ದಾಖಲೆಗಳು ಕೆಳಗಿನಂತಿವೆ. 
 
    1. ನಿಮ್ಮ ಹೆಸರು
    2. ನಿಮ್ಮ ಕ್ಲೈಂಟ್ ಐಡಿ (ಡಿಮ್ಯಾಟ್ ಖಾತೆ ಮಾಡಿದ ನಂತರ ನಿಮ್ಮ ಇಮೇಲ್ ಗೆ ಅಥವಾ ವಾಟ್ಸಾಪ್ ಗೆ ನಿಮ್ಮ User ID ಬಂದಿರುತ್ತದೆ. ಅದೇ ಕ್ಲೈಂಟ್ ಐಡಿ ಆಗಿರುತ್ತದೆ.)
    3. ನಿಮ್ಮ ಇಮೇಲ್ ವಿಳಾಸ
    4. ನಿಮ್ಮ  ಯೌಟ್ಯೂಬ್ ಚಾನೆಲ್ / ಫೇಸ್ಬುಕ್ ಗ್ರೂಪ್ ನ ಹೆಸರು
    5. ನಿಮ್ಮ ಯೌಟ್ಯೂಬ್ ಚಾನೆಲ್ / ಫೇಸ್ಬುಕ್ ಗ್ರೂಪ್ ನ ಲಿಂಕ್
    6. ನಿಮ್ಮ ಯೌಟ್ಯೂಬ್ ಚಾನೆಲ್ / ಫೇಸ್ಬುಕ್ ಗ್ರೂಪ್ ನ Subscriber Count
ಇಷ್ಟು ಮಾಹಿತಿಯೊಂದಿಗೆ ನೀವು ಕೆಳಗೆ ಕೊಟ್ಟಿರುವ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬಹುದು. ನಿಮ್ಮ Angel Broking DRA ಖಾತೆ ಮಾಡಿಕೊಡಲಾಗುವುದು ಮತ್ತು ನಿಮಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು.
Frequently Asked Question
ಷೇರು ಮಾರುಕಟ್ಟೆಯಲ್ಲಿ ಹೇಗೆ ಹೂಡಿಕೆ ಮಾಡಬೇಕು, ಯಾವ ಷೇರನ್ನು ಯಾವಾಗ ಖರೀದಿಸಬೇಕು ಅನ್ನುವ ಮಾಹಿತಿಯನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು.  
 

 

6 thoughts on “Angel Broking DEMAT ಮತ್ತು DRA ಉಚಿತ ಖಾತೆ ತೆರೆಯುವುದು ಹೇಗೆ? ನಿಮಗೆ ಸಂಪೂರ್ಣ ಮಾಹಿತಿ ಇಲ್ಲಿದೆ.”

Leave a Comment